Thought for the day

One of the toughest things in life is to make things simple:

25 Sep 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 


       ದಿನಾಂಕ 24.09.2019 ರಂದು ರಾತ್ರಿ 9.15 ಗಂಟೆಯ ಸುಮಾರಿಗೆ ರಾಂಪೂರ ಗ್ರಾಮದ ಶ್ರೀ ಮಾರೆಮ್ಮ ದೇವಸ್ಥಾನದ ಹತ್ತಿರ ಮೃತ್ಯೂಜ್ ಖಾದ್ರಿ ತಂದೆ ಮಹ್ಮದ್ ಹುಸೇನ್, ವಯಸ್ಸು: 30 ವರ್ಷ, ಜಾತಿ: ಮುಸ್ಲಿಂ, ಉ: ಆಟೋ ಚಾಲಕ, ಸಾ: ಮಾರೇಮ್ಮ ಗುಡಿಯ ಹತ್ತಿರ, ರಾಂಪೂರ ಗ್ರಾಮ ತಾ:ಜಿ: ರಾಯಚೂರು, ಫಿರ್ಯಾದಿ ಮನೆಯ ಮುಂದೆ  ಖಲಂದರ ತಂದೆ ಮಹೆಬುಬ ಸಾಬ್, ವಯಸ್ಸು: 20 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ, ಸಾ: ರಾಂಪೂರ 2 ] ಮಹೆಬೂಬ ಸಾಬ್, ತಂದೆ     3] ಗುಲಾಮ ಸಾಬ್, ವಯಸ್ಸು: 40 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ, 4] ಮೀರು ತಂದೆ ಗುಲಾಮ ಹುಸೇನ್, ವಯಸ್ಸು: 35 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ, 5] ಶಾಲಂ ತಂದೆ ಗುಲಾಮ ಹುಸೇನ್, ವಯಸ್ಸು: 30 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ, ಮಹೆಮೂದ ತಂದೆ ಗುಲಾಮ್ ಹುಸೇನ್, ವಯಸ್ಸು: 45 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ, ಸಾ: ಎಲ್ಲಾರೂ ರಾಂಪೂರ ಗ್ರಾಮ ತಾ:ಜಿ: ರಾಯಚೂರು ಫಿರ್ಯಾದಿ ಮತ್ತು ಆರೋಪಿತರು ಅಣ್ಣ-ತಮ್ಮಂದಿರ ಮಕ್ಕಳಿದ್ದು, ಹೊಲದ ವಿಷಯದಲ್ಲಿ ಹಳೇ ವೈಷಮ್ಯವಿದ್ದು, ಆಗಾಗ ಜಗಳ ಮಾಡಿಕೊಳ್ಳುತ್ತಿದ್ದು, ಮೇಲ್ಕಂಡ ದಿನಾಂಕ ಮತ್ತು ಸಮಯದಂದು ಫಿರ್ಯಾದಿಯು ಆರೋಪಿ ಖಲಂದರ ಈತನಿಗೆ ತಮ್ಮ ಆಟೋದ ವೈಫರ್ ಮುರಿದು, ಟಾಪ್ ಹರಿದು, ಗ್ಲಾಸ್ ನ್ನು ಏಕೇ ಹೊಡೆದಿರುವೀ ಅಂತಾ ಕೇಳಿದ್ದಕ್ಕೆ ಆರೋಪಿ ಮಹೆಬೂಬ ಸಾಬ ಈತನು ಏನಲೇ ಸೂಳೇ ಮಗನೇ ನಮ್ಮ ಮೇಲೆ ಅಪವಾದ ಮಾಡುತ್ತಿಯೇನಲ್ಲೇ ಅಂದವನೇ ತನ್ನ ಕೈಯಲ್ಲಿದ್ದ ಕಬ್ಬಿಣ್ಣದ ಸ್ಟಿಕನಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಆಗ ಬಿಡಿಸಲು ಬಂದ ಫಿರ್ಯಾದಿಯ ತಂದೆ ತಾಯಿಗೆ ಮತ್ತು ಫಿರ್ಯಾದಿಗೆ ಉಳಿದ ಆರೋಪಿತರೆಲ್ಲರೂ ಕೈಯಿಂದ ಹೊಡೆಬಡೆ ಮಾಡಿ, ಕಾಲಿನಿಂದ ಒದ್ದು, ಆವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ರಾಯಚೂರು ಪಶ್ಚಿಮ ಪೊಲಿಸ್ ಠಾಣಾ ಗುನ್ನೆ ನಂ: 96/2019 ಕಲಂ: : 143, 147, 148, 323, 324, 504, 506  ಸಹಿತ 149 ಐಪಿಸಿ. ಪ್ರಕಾರ ಪ್ರರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ: 24.09.2019 ರಂದು ಬೆಳಿಗ್ಗೆ 6.30 ಗಂಟೆಯ ಸುಮಾರಿಗೆ ಗಣೇಶ ತಂ: ಬುಡ್ಡಪ್ಪ ವಯ: 39 ವರ್ಷ, ಜಾ: ಚಲುವಾದಿ, ಉ: ಬೇಲ್ದಾರ್ ಕೆಲಸ, ಸಾ: ಕುರ್ಡಿ ತಾ: ಮಾನ್ವಿ ಜಿ: ರಾಯಚೂರು ಆರೋಪಿತನು ಶಾಖವಾದಿ - ಕೂಡ್ಲೂರು ರಸ್ತೆಯ ಬದಿಗೆ ಎಸ್.ಸಿ. ನರಸಿಂಗಪ್ಪ ರವರ ಹೊಲದ ಹತ್ತಿರ ಮಾರೆಮ್ಮ ದೇವಸ್ಥಾನದಲ್ಲಿನ ದೇವಿಯ ಮೂರ್ತಿಯನ್ನು ಹೊರಗೆ ತಂದು ಬಿಸಾಡಿ ತಮ್ಮ ಗ್ರಾಮದಲ್ಲಿಯ ಜನರಿಗೆ ಅಪಮಾನಗೊಳಿಸಿ, ಅವರ ಧಾರ್ಮಿಕ ಭಾವನೆಗೆ ಗಾಸಿಯುಂಟುಮಾಡುವ ಉದ್ದೇಶದಿಂದ ಮಾರೆಮ್ಮ ದೇವಸ್ಥಾನದ ಪೂಜಾ ಮೂರ್ತಿಯನ್ನು ಅಪವಿತ್ರ ಗೊಳಿಸುವ ಉದ್ದೇಶದಿಂದ, ಪವಿತ್ರವಾದ ಮಾರೆಮ್ಮ ದೇವಿಯ ಕಲ್ಲಿನ ವಿಗ್ರಹವನ್ನು ತೆಗೆದು, ಗರ್ಭಗುಡಿಯಿಂದ ಹೊರಗೆ ತಂದು ಬಿಸಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುತ್ತಾನೆ,  ಅದೇ ವೇಳೆಗೆ ಅಲ್ಲಿಗೆ ಬಂದು ಇದನ್ನು ಪ್ರಶ್ನಿಸಿದ ಜನರಿಗೆ “ಇದು ನನ್ನಿಷ್ಟ ನಾನು ಏನು ಬೇಕಾದ್ರೂ ಮಾಡ್ತೀನಿ, ಗುಡಿಯ ತಂಟೆಗೆ ನನ್ನ ಕೆಲಸಕ್ಕೆ ಯಾರಾದ್ರೂ ಅಡ್ಡ ಬಂದ್ರೆ ಅವರನ್ನ ಜೀವ ಸಹಿತ ಬಿಡೋದಿಲ್ಲ ಸೂಳೆ ಮಕ್ಕಳೇ ಯಾರು ಬರ್ತೀರೋ ಬನ್ನಿರಲೇ”  ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ.   ನಂತರ ತನ್ನ ಹೆಸರು ಗಣೇಶ ತಂ: ಬುಡ್ಡಪ್ಪ ವಯ: 39 ವರ್ಷ, ಜಾ: ಚಲುವಾದಿ, ಉ: ಬೇಲ್ದಾರ್ ಕೆಲಸ, ಸಾ: ಕುರ್ಡಿ ತಾ: ಮಾನ್ವಿ ಜಿ: ರಾಯಚೂರು ಅಂತಾ ತಿಳಿಸಿ ಯಾವ ಸೂಳೆ ಮಕ್ಕಳಿಗೆ ನನ್ನ ಬಗ್ಗೆ ಹೇಳುತ್ತೀರೋ ಹೇಳಿರಿ ಅಂತಾ ಮುಂತಾಗಿ ತಿಳಿಸಿದ್ದಾನೆ ಅಂತಾ ಮುಂತಾಗಿ ಕನ್ನಡದಲ್ಲಿ ಗಣಕೀಕರಿಸಿದ ರಾಮನಗೌಡ ತಂ: ತಿಮ್ಮನಗೌಡ ವಯ: 55 ವರ್ಷ, ಜಾ: ಈಡಿಗ, ಉ: ಒಕ್ಕಲುತನ, ಸಾ: ಕೂಡ್ಲೂರು ತಾ:ಜಿ: ರಾಯಚೂರು ಫಿರ್ಯಾದುವಿನ ಸಾರಾಂಶದ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA  133/2019 PÀ®A: 295, 504, 506 IPC ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ


   ದಿನಾಂಕ: 24.09.2019 ರಂದು ಮಧ್ಯಾಹ್ನ 12.30 ಗಂಟೆಗೆ ಶ್ರೀಮತಿ ಸರೋಜಾ ಗಂಡ ವೀರಬಧ್ರಪ್ಪ ವಯಸ್ಸು: 40 ವರ್ಷ, ಜಾತಿ: ಲಿಂಗಾಯತ, ಉ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಾಲೂಕಾ ಆರೋಗ್ಯ ಅಧಿಕಾರಿಗಳು, ಸಾ: ಮನೆ ನಂ. 1-11-127, ನಿಜಲಿಂಗಪ್ಪ ಕಾಲೋನಿ, ರಾಯಚೂರು,  ಫಿರ್ಯಾದಿದಾರರು ಠಾಣೆಗೆ ಹಾಜರಾಗಿ, ಒಂದು ಲಿಖಿತ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ , 1] ಶ್ರೀದೇವಿ ಗಂಡ ನಾಗೇಂದ್ರ, ವಯಸ್ಸು: 35 ವರ್ಷ, ಜಾತಿ: ಲಿಂಗಾಯತ, ಸಾ: ಲೋಹರವಾಡಿ ಗಾಂಧಿ ಸರ್ಕಲ್ ಹತ್ತಿರ ರಾಯಚೂರು, 2] ಮಹಾದೇವಮ್ಮ ವಯಸ್ಸು: 58 ವರ್ಷ, ಲಿಂಗಾಯತ, ಸಾ: ಲೋಹರವಾಡಿ ಗಾಂಧಿ ಸರ್ಕಲ್ ಹತ್ತಿರ ರಾಯಚೂರು,  ] ಪ್ರವೀಣ ಕುಮಾರ ವಯಸ್ಸು: 25 ವರ್ಷ, ಲಿಂಗಾಯತ, ಉ: ಶಿಶ್ರುಷಕರು       ಸಾ: ಲೋಹರವಾಡಿ ಗಾಂಧಿ ಸರ್ಕಲ್ ಹತ್ತಿರ ರಾಯಚೂರು,  ಆರೋಪಿ ಸಂಖ್ಯೆ: 01 ರಿಂದ 03 ರವರು ಹತ್ತಿರದ ಸಂಬಂಧಿಗಳಾಗಿದ್ದು, ಅದರಂತೆ ಆರೋಪಿ ಸಂಖ್ಯೆ: 01 ರವರು ಆಗಾಗ್ಗೆ ತನ್ನ ಗಂಡನ ಜೊತೆ ಜಗಳವಾಡುತ್ತಿದ್ದು, ಅದನ್ನು ಬಗೆಹರಿಸಲು ಫಿರ್ಯಾದಿದಾರಳ ಗಂಡನು ಎರಡು ಮೂರು ಸಲ ಹೋಗಿದ್ದು, ಆರೋಪಿ ಸಂಖ್ಯೆ: 01 ರವರು ಸಲಹೆ ಪಡೆದು ಫಿರ್ಯಾದಿದಾರಳ ಗಂಡನಿಗೆ ನೀನು ಇನ್ನೊಮ್ಮೆ ನಮ್ಮ ಮನೆಗೆ ನ್ಯಾಯ ಹೇಳಲು ಬಂದರೆ, ನೀನ್ನೆ ನನ್ನ ಗಂಡ ಎಂದು ಎಲ್ಲಾರಿಗೂ ಸುಳ್ಳು ಹೇಳಿ, ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾನಸಿಕ ನೆಮ್ಮದಿ ಇರಲಾರದಂಗ ಮಾಡುತ್ತೇನೆ ಅಂತಾ ಹೇಳುತ್ತಾ ಬಂದಿದ್ದು, ದಿನಾಂಕ: 22.09.2019 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳ ಮನೆಗೆ ಆರೋಪಿ ಸಂಖ್ಯೆ: 01 ರವರು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರಳ ಗಂಡನು ಹೊರಗಡೆ ಬರುತ್ತಿರುವಾಗ ಆರೋಪಿ ಸಂಖ್ಯೆ: 01 ಇವರು ಎದೆಯ ಮೇಲೆ ಅಂಗಿ ಹಿಡಿದು ತಡೆದು ನಿಲ್ಲಿಸಿ, ನನ್ನನ್ನು ಮದುವೆಯಾಗು ಅಂತಾ ಬಾಯಿಗೆ ಬಂದಂತೆ ಕೆಟ್ಟ ಶಬ್ದಗಳನ್ನು ಬೈಯುತ್ತಾ, ಫಿರ್ಯಾದಿದಾರಳ ಗಂಡನಿಗೆ ಕೈಯಿಂದ ಕಪಾಳಕ್ಕೆ ಹೊಡೆದು, ಬಿಡಿಸಲು ಹೋದ ಫಿರ್ಯಾದಿದಾರರಿಗೂ ಕೂಡ ಕೈಯಿಂದ ಕಪಾಲಕ್ಕೆ ಹೊಡೆದಿದ್ದಲ್ಲದೇ ಜೀವದ ಬೇದರಿಕೆ ಹಾಕಿದ್ದುಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ  ರಾಯಚೂರು ಪಶ್ಚಿಮ    ಗುನ್ನೆ ನಂ. 93/2019 ಕಲಂ: 448, 341, 323, 504, 506, 109 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.