Thought for the day

One of the toughest things in life is to make things simple:

22 Nov 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿನಾಂಕ:20-11-2020 ರಂದು ರಾತ್ರಿ10-45 ಗಂಟೆಗೆ ಸಿರವಾರ ಪಟ್ಟಣದ  ಚುಕ್ಕಿ ಸೂಗಪ್ಪರವರ  ಕಲ್ಯಾಣ ಮಂಟಪದ  ಮುಂದಿರುವ ಪೆಟ್ರೊಂಲ್ ಬಂಕ್ ಹತ್ತಿರ ಬಯಲು ಜಾಗೆಯಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿ ಯವರ ಸಹಾಯದಿಂದ ದಾಳಿ ಮಾಡಿದಾಗ ಗಂಗಾಧರ ತಂದೆ ವೀರಭದ್ರಪ್ಪ,ವಯ-27ವರ್ಷ, ಜಾತಿ:ಹಡಪದ ,ಉ:ಕುಲಕಸುಬು ಸಾ: ಸಿರವಾರ 5 ಜನರು ಸಿಕ್ಕುಬಿದ್ದಿದ್ದು,ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.2,410/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್.ಐ. ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 164/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಮಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆ ಪ್ರರಕಣದ ಮಾಹಿತಿ.

                ದಿನಾಂಕ: 21.11.2020 ರಂದು 12-30 ಗಂಟೆಗೆ ರಿಯಾಜಪಾಷಾ ತಂದೆ ಅಬ್ದುಲ್ ಮಜೀದ್  ಸಾ: ಹಳೇ ಆಶ್ರಯಕಾಲೋನಿ, ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ತನ್ನ ತಂಗಿಯಾದ ಸಫಿಯಾಬೇಗಂ ಇವಳು ದಿನಾಂಕ:17-11-2020 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ತಾನು ಓದುತ್ತಿರುವ ಸರ್ಕಾರಿ ಮಹಿಳಾ ಪ್ರ.ದ.ಕಾಲೇಜಿಗೆ ಹೋಗಿಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲಾ ನಂತರ ತಾವು ತಮ್ಮ ತಂಗಿಯ ಮೊ.ನಂ.9380038795 ನೇದ್ದಕ್ಕೆ ಕರೆಮಾಡಲಾಗಿ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ತಮ್ಮ ತಂಗಿಯನ್ನು ಅವಳ ಸ್ನೇಹಿತರ ಮನೆಗಳಲ್ಲಿ ಹುಡುಕಿ ಹಾಗು ತಮ್ಮ ಮನೆಯ ಅಕ್ಕ ಪಕ್ಕದವರನ್ನು ವಿಚಾರಿಸಿದೆವು ಎಲ್ಲೂ ಕಾಣಲಿಲ್ಲ. ತಮ್ಮ ಸಂಬಂಧಿಕರು ಮನೆಗೆ ಹೊಗಿರಬಹುದೆಂದು ಪೋನ್ ಮಾಡಿ ಕೇಳಿದೆವು ಎಲ್ಲೂ ತಮ್ಮ ತಂಗಿಯ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಲ್ಲದೆ ಬೇರೆ ಊರುಗಳಲ್ಲಿ ವಾಸವಾಗಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ನೋಡಲಾಗಿ ತಮ್ಮ ತಂಗಿ  ಪತ್ತೆ ಆಗಿರುವುದಿಲ್ಲ. ಕಾರಣ ತನ್ನ ತಂಗಿಯನ್ನು ಕಾಣೆಯಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ-ಇಲ್ಲಿ ಹುಡುಕಾಡಿ ಸಿಗದೆ ಇದ್ದುದರಿಂದ ಇಂದು ದಿನಾಂಕ:21-11-2020 ರಂದು ಠಾಣೆಗೆ ಬಂದು ಈ ದೂರನ್ನು ಸಲ್ಲಿದ್ದು, ಕಾಣೆಯಾದ ತಮ್ಮ ತಂಗಿ ಸಾಫಿಯಾ ಬೇಗಂ ತಂದೆ ಅಬ್ದುಲ್ ಈಕೆಯನ್ನು  ಪತ್ತೆ ಮಾಡಿ ಕೊಡಲು ವಿನಂತಿ..ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.139/2020  ಕಲಂ.ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.