Thought for the day

One of the toughest things in life is to make things simple:

18 Nov 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

                ದಿ.16-11-2020 At 11-55 PM ಕ್ಕೆ ಸಿಪಿಐ ಸಿಂಧನೂರುರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ 21-ಜನ ಆರೋಪಿತರು, ಜಪ್ತಿ ಪಡಿಸಿಕೊಂಡ ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ:-16-11-2020 ರಂದು ರಾತ್ರಿ 10-30 ಗಂಟೆಗೆ ಶ್ರೀಪುರಂ ಜಂಕ್ಷನದಲ್ಲಿ ಶ್ರೀದೇವಿ ಡಾಭಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ, ನಾನು ಪಿ.ಎಸ್. ಗ್ರಾಮೀಣ ಠಾಣೆ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಅಲ್ಲಿ ಆರೋಪಿತರು ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಹಾರ್ ‘’ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ, ಹಿಡಿದುಕೊಂಡು ಆರೋಪಿ ರಾಮಕೃಷ್ಣ ತಂದೆ ವೆಂಕಟರತ್ನಂ ಬಲ್ಲೀನ 44 ವರ್ಷ, ಜಾ:-ಕಮ್ಮಾ,:-ಒಕ್ಕಲುತನ,ಸಾ:-ಮಲ್ಕಾಪೂರು ಕ್ಯಾಂಪ್ ಹಾಗೂ ಇತರೆ 20 ಜನರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 1,08,530/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳು, ಒಂದು ಪ್ಲಾಸ್ಟಿಕ್ ಬರಕವನ್ನು ಜಪ್ತಿ ಮಾಡಿಕೊಂಡು, ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಎನ್.ಸಿ.ನಂ.53/2020 ಅಡಿಯಲ್ಲಿ ನಮೂಧಿಸಿಕೊಂಡು ಆರೋಫಿತರ ವಿರುದ್ದ ಕಲಂ.87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳುವ ಕುರಿತು ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಬೆಳಿಗ್ಗೆ 8-10 ಗಂಟೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 190/2020. ಕಲಂ. 87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ದಿ.17-11-2020 At 03-30 AM ಕ್ಕೆ ಪಿ.ಎಸ್. ಸಾಹೇಬರು ಸಿಂಧನೂರು ಗ್ರಾಮೀಣ ಠಾಣೆರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ 06-ಜನ ಆರೋಪಿತರು, ಜಪ್ತಿ ಪಡಿಸಿಕೊಂಡ ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ:-17-11-2020 ರಂದು 01-45 AM ಗಂಟೆಯಲ್ಲಿ ಆರೋಪಿತರು ಬಂಗಾರಿ ಕ್ಯಾಂಪಿನಲ್ಲಿ ಅನುಪಮ ಅಗ್ರೋ ಗೋಬ್ಬರ ಅಂಗಡಿ ಮುಂದೆ ಗೋರೆಬಾಳ-ರೌಡಕುಂದ ರಸ್ತೆಯ ಪಕ್ಕ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ, ನಾನು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಅಲ್ಲಿ ಆರೋಪಿತರು ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಹಾರ್ ‘’ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವುದ ಕಂಡುಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ, ಹಿಡಿದುಕೊಂಡು ಆರೋಪಿ ಬಾಷಾ ತಂದೆ ನಬಿಸಾಬ 30 ವರ್ಷ, ಜಾ:-ಮುಸ್ಲಿಂ.:-ಚಾಲಕ ಕೆಲಸ.ಸಾ:-ಸಾಲಗುಂದಾ ಗ್ರಾಮ ಹಾಗೂ ಇತತೆ 5 ಜನರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 12,100/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಎನ್.ಸಿ.ನಂ.54/2020 ಅಡಿಯಲ್ಲಿ ನಮೂಧಿಸಿಕೊಂಡು ಆರೋಫಿತರ ವಿರುದ್ದ ಕಲಂ.87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳುವ ಕುರಿತು ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಬೆಳಿಗ್ಗೆ 8-30 ಗಂಟೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 191/2020. ಕಲಂ. 87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ದಿನಾಂಕ:- 16-11-2020 ರಂದು ರಾತ್ರಿ 23-30 ಗಂಟೆಗೆ ಪಿ.ಎಸ್.ಐ ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 17 ಜನ ಆರೋಪಿ ಚಂದ್ರಗುಪ್ತ ತಂದೆ ಶಿವಶಂಕರ ತಿಪ್ಪಣ್ಣನವರ್ 28 ವರ್ಷ ಜಾ-ನಾಯಕ ಸಾ-ವಲ್ಕಂದಿನ್ನಿ ಹಾಗೂ ಇರೆ 16 ಜನರನ್ನು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ- 16-11-2020 ರಂದು ರಾತ್ರಿ 20-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ವಲ್ಕಂದಿನ್ನಿ ಗ್ರಾಮದ ಆಂಜನೇಯ್ಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ನೇದ್ದರಲ್ಲಿ ಕುಳಿತುಕೊಂಡು ವಲ್ಕಂದಿನ್ನಿ ಗ್ರಾಮದ ಆಂಜನೇಯ್ಯ ಗುಡಿಯ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಆಂಜನೇಯ್ಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 17 ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಮತ್ತು ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 5640/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-17-11-2020 ರಂದು ಮಧ್ಯಾಹ್ನ  15.40 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್  ಠಾಣಾ ಗುನ್ನೆ ನಂ- 96/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ರತಾರೆ.

            ದಿನಾಂಕ:- 16-11-2020 ರಂದು ಸಾಯಂಕಾಲ 18-30 ಗಂಟೆಗೆ ಪಿ.ಎಸ್.ಐ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-16-11-2020 ರಂದು ಸಾಯಂಕಾಲ 16-00 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ದುರ್ಗಾಕ್ಯಾಂಪಿನ ದುರುಗಮ್ಮ ಗುಡಿಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ರಲ್ಲಿ ಕುಳಿತುಕೊಂಡು ದುರ್ಗಾಕ್ಯಾಂಪಿನ ಕಾಲುವೆ ದಂಡೆಯ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಇಳಿದು ಸ್ವಲ್ಪ ದೂರ ನಡೆದುಕೊಂಡು ಹೋಗಿ  ನಿಂತು ನೋಡಲಾಗಿ ದುರ್ಗಕ್ಯಾಂಪಿನ ದುರುಗಮ್ಮ ಗುಡಿಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಶಿವಾಜಿ ತಂದೆ ರಾಮರಾವ 35 ವರ್ಷ ಜಾ:-ಕಮ್ಮ ಸಾ:-ದುರ್ಗಾಕ್ಯಾಂಪ ಹಾಗೂ ಇತರೆ 12 ಜನರು  ಸಿಕ್ಕಿಬಿದ್ದಿದ್ದು ಇರುತ್ತದೆ. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  69000/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-17-11-2020  ರಂದು ಮಧ್ಯಾಹ್ನ 15.10 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಬಳಗಾನೂರು ಪೊಲೀಸ್  ಠಾಣಾ ಗುನ್ನೆ ನಂ- 95/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ರತಾರೆ.

            ದಿ.17-11-2020 ರಂದು ರಾತ್ರಿ 02-30 ಗಂಟೆಗೆ ಆರೋಪಿತರು ಕೆ.ಗುಡದಿನ್ನಿಗ್ರಾಮದಲ್ಲಿ ದುರುಗ ಮ್ಮನ  ದೇವಸ್ಥಾನದ ಗುಡಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದಾಗ 5ಜನರು ಸಿಕ್ಕುಬಿದ್ದಿದ್ದು ಒಬ್ಬನು ಓಡಿಹೊಗಿದ್ದು ಸಿಕ್ಕುಬಿದ್ದ ಆರೋಪಿತರಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.1,530/- ಮತ್ತು 52 ಇಸ್ಪೇಟ್ ಎಲೆಗಳು ದೊರೆತಿದ್ದು ಅವುಗಳನ್ನು ಪಂಚನಾಮೆ ಮೂಲಕ ಜಪ್ತಿಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರ..ವರದಿ ಜಾರಿ ಮಾಡಿ¹gÀªÁgÀ ¥Éưøï oÁuÉಯಲ್ಲಿ 156/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:

            ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ದಿನಾಂಕ 17.11.2020 ರಂದು ಮಧ್ಯಾಹ್ನ 2.20 ಗಂಟೆಯ ಸಮಯದಲ್ಲಿ ಕಾನೂನು ಬಾಹಿರವಾಗಿ ವಿಷ ಪೂರಿತ ಸಿ.ಹೆಚ್.ಪೌಡರದಿಂದ ಮಾಡಿದ ಕಲಬೆರಕೆ ಹೆಂಡವನ್ನು ಕುಡಿದರೆ ಮಾನವ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರು ಸಹ ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಸಲುವಾಗಿ ಆರೋಪಿತನು ರಾಮನಗೌಡ ತಂದೆ ಗಿರಿಯಪ್ಪ, ವಯಾ: 21 ವರ್ಷ, ಜಾತಿ: ಈಳಿಗೇರ, ಉ: ಒಕ್ಕಲುತನ, ಸಾ: ಯರಗುಂಟಾ ಯರಗುಂಟಾ ಗ್ರಾಮದಲ್ಲಿ ಕೊರವಿಹಾಳ ಗ್ರಾಮದ ರಸ್ತೆಯ ಕಡೆಯಿಂದ ತರುತ್ತಿರುವದಾಗಿ ಖಚಿತವಾದ ಭಾತ್ಮಿ ಬಂದ ಮೇರೆಗೆ ಯರಗುಂಟಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ರಸ್ತೆಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನ ವಶದಿಂದ 5 PÉf 112 UÁæªÀiï ¹.ºÉZï ¥ËqÀgÀ C.Q gÀÆ 5100/- gÀÆ ಬೆಲೆ ಬಾಳುವ ಮುದ್ದೆ ಮಾಲನ್ನು  ಜಪ್ತಿ ಮಾಡಿಕೊಂಡು ಆರೋಪಿತನನ್ನು ತಾಬಾಕ್ಕೆ ತೆಗೆದುಕೊಂಡು AiÀiÁ¥À®¢¤ß ¥ÉưøÀ oÁuÉಯಲ್ಲಿ  ಗುನ್ನೆ 73/2020 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.