Thought for the day

One of the toughest things in life is to make things simple:

21 Dec 2018

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ªÀÄmÁÌzÁ½ ¥ÀæPÀgÀtzÀ ªÀiÁ»w.
ದಿನಾಂಕ 19/12/18 ರಂದು ರಾತ್ರಿ 9.30  ಗಂಟೆಗೆ ಶ್ರೀ ರಂಗಪ್ಪ ಹೆಚ್. ದೊಡ್ಡಮನಿ ಪಿ.ಎಸ್.ಐ ಮಾನವಿ ಠಾಣೆ ರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು  ದಾಳಿ ಪಂಚನಾಮೆ, ಹಾಗೂ ಒಬ್ಬ ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು . ಸದರಿ ಪಂಚನಾಮೆಯಲ್ಲಿ ದಿನಾಂಕ 19/12/18  ರಂದು ಚಿಕ್ಕಕೊಟ್ನೆಕಲ್ ಗ್ರಾಮದ ಮಾರೆಮ್ಮನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ  ರಾತ್ರಿ 8.00 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಮೇಶ ತಂದೆ ಭೀಮಯ್ಯ, ನಾಯಕ, 25 ವರ್ಷ, ಒಕ್ಕಲುತನ ಸಾ: ಚಿಕ್ಕ ಕೊಟ್ನೆಕಲ್  ಈತನ ಮೇಲೆ ದಾಳಿಮಾಡಿ ಸದರಿಯವನಿಂದ 1] ಮಟಕಾ ಜೂಜಾಟದ ನಗದು ಹಣ ರೂ  5870/-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು ಇವುಗಳನ್ನು ಜಪ್ತು ಮಾಡಿಕೊಂಡು ನಂತರ ಸದರಿಯನಿಗೆ ಮಟಕಾಪಟ್ಟಿಯನ್ನುಯಾರಿಗೆ ಕೊಡುತ್ತಿ ಅಂತಾ ಸದರಿಯವನಿಗೆ ವಿಚಾರಿಸಿದಾಗ ಅಮರೇಶ ತಂದೆ ಹನುಮನಾಯಕ,  31 ವರ್ಷ, ನಾಯಕ, ಒಕ್ಕಲುತನ ಸಾ: ಚಿಕ್ಕ ಕೊಟ್ನೆಕಲ್  ಈತನಿಗೆ ಕೊಡುವದಾಗಿ  ತಿಳಿಸಿದ್ದು ಇರುತ್ತದೆ. ಕಾರಣ ಪಿ.ಎಸ್. ರವರು ರಾತ್ರಿ 8.00 ಗಂಟೆಯಿಂದ 9.00 ಗಂಟೆಯವರೆಗೆ  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ. . ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 22.00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 354/18 ಕಲಂ  ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂರುತ್ತಾರೆ.

ದಿನಾಂಕ 19-12-2018 ರಂದು ಸಂಜೆ 6-15 ಗಂಟೆಗೆ ಪಿ.ಎಸ್.ಐ ಮಾನವಿ ಠಾಣೆ ರವರು ಮಟ್ಕಾ  ದಾಳಿಯಿಂದ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ, ಜಪ್ತಿ ಮಾಡಿಕೊಂಡ ಮುದ್ದೆಮಾಲು ಮತ್ತು ಒಬ್ಬ ಆರೋಪಿತನನ್ನು ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ  ಸಂಜೆ 6-30 ಗಂಟೆಗೆ ಸೂಚಿಸಿದ್ದು  ಸದರಿ ಪಂಚನಾಮೆಯ ಸಾರಾಂಶವೆನೆಂದರೆ ಹಿರೇಕೊಟ್ನೆಕಲ್ - ಬೋಗವತಿ ಗ್ರಾಮದ ಬಸ್ ಸ್ಟಾಂಡ್ ಹತ್ತಿರ  ರಸ್ತೆಯಲ್ಲಿ ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ  ಬಂದ ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಸಂಜೆ 4-45 ಗಂಟೆಗೆ ದಾಳಿ ಮಾಡಿದಾಗ ಅವನು ಸಿಕ್ಕಿಬಿದ್ದಿದ್ದು ಸದರಿಯವನನ್ನು ವಿಚಾರಿಸಲಾಗಿ ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಸೂಗಪ್ಪ ಮುದುಗಲ್ ವಯಾಃ 38 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ಬೋಗಾವತಿ ತಾಃ ಮಾನವಿ  ಅಂತಾ ತಿಳಿಸಿದ್ದು  ಸದರಿಯವನಿಂದ 1] ನಗದು ಹಣ ರೂ 2370/-  2] ಒಂದು ಬಾಲ್ ಪೆನ್ನು 3] ಮಟಕಾ ನಂಬರ್ ಬರೆದ 1 ಚೀಟಿ  ಸಿಕ್ಕಿದ್ದು ನಂತರ  ಸದ್ರಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು ತಾನು ಮಟಕಾ ಪಟ್ಟಿಯನ್ನು ಬರೆದು ಯಾರಿಗೆ ಕೊಡುವುದಾಗಿ ಅಂತಾ ವಿಚಾರಿಸಲು ಅವನು ತಾನು ಬರೆದ ಮಟಕಾ ಪಟ್ಟಿಯನ್ನು ದೇವರಾಜ ಸಾಃ ಬಲ್ಲಟಗಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ   353/2018 ಕಲಂ 78 (3) ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ  14/12/18 ರಂದು  13.30 ಗಂಟೆಗೆ ಫಿರ್ಯಾದಿ ಜಿ. ಲಕ್ಷ್ಮಿ ನಾರಾಯಣ ತಂದೆ ಈರಯ್ಯ, 44 ವರ್ಷ, ವಿಜಯಲಕ್ಷ್ಮಿಮೆಡಿಕಲ್ ಸ್ಟೋರ್ ಮಾಲಿಕರು, ನೇಕಾರ್ ಸಾ: ಎನ್.ಎಸ್. ಭೋಸರಾಜು ಅಪಾರ್ಟಮೆಂಟ್ ಇಂದಿರಾನಗರ ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ , ದಿನಾಂಕ 11/12/18 ರಂದು ಫಿರ್ಯಾದಿಯು  ತನ್ನ  ಖಾಸಗಿ ಕೆಲಸದ ನಿಮಿತ್ಯ  ಮೋಟಾರ್ ಸೈಕಲ್ ತೆಗೆದುಕೊಂಡು ರಾಯಚೂರಿಗೆ  ಹೊಗಿ ಕೆಲಸ ಮನುಗಿಸಿಕೊಂಡು ವಾಪಾಸ ಮಾನವಿಗೆ ಬರುವಾಗ ರಾತ್ರಿ 7-50 ಗಂಟೆಯಿಂದ 8.00 ಗಂಟೆಯ ಮಧ್ಯ  ಅವಧಿಯಲ್ಲಿ ಕಪಗಲ್ ಮಂತ್ರಾಲಯ ಕ್ರಾಸ್ ಹತ್ತಿರ ಯಾರೋ  ಅಪರಿಚಿತರು ಹಿಂದಿನಿಂದ ಬಂದು ತನಗೆ ಹಿಂದಿ ಭಾಷೆಯಲ್ಲಿ ನಿಂದಿಸಿ ಚಾಕುವಿನಿಂದ ಹಲ್ಲೆ ಮಾಡಿ (ಸಣ್ಣ  ಪ್ರಮಾಣದಲ್ಲಿ ರಕ್ತ  ಬರುವ ಹಾಗೆ)ದ್ದು ಸಮಯದಲ್ಲಿಮಾನವಿ ಕಡೆಯಿಂದ ವಾಹನಗಳನ್ನು ಬರುವದನ್ನು ನೋಡಿ ಓಡಿ ಹೋಗಿರುತ್ತಾರೆ,  ಅಂತಾ ಮುಂತಾಗಿ  ಇದ್ದ ದೂರಿನ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 352/2018 ಕಲಂ 504,324 ಸಹಿತ 34  .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಿರುಕಳ ಪ್ರಕರಣದ ಮಾಹಿತಿ.
ಫಿರ್ಯಾದಿ ಶ್ರೀಮತಿ ನಿರ್ಮಲಮ್ಮ ಗಂಡ ಸುಧಾಕರಬಾಬು, ವಯ:26, ಜಾ:ಮಾದಿಗ, :ಕೂಲಿಕೆಲಸ, ಸಾ:ಸಾಸಲಮರಿಕ್ಯಾಂಪ್, ತಾ:ಸಿಂಧನೂರು ಈಕೆಯನ್ನು ಐದಾರು ವರ್ಷಗಳ ಹಿಂದೆ ಆರೋಪಿ 01 ಸುಧಾಕರಬಾಬು ತಂದೆ ಸತ್ಯಪ್ಪ  ನೇದ್ದವನಿಗೆ ಕೊಟ್ಟು ಲಗ್ನ ಮಾಡಿದ್ದು, ಗಂಡು ಮಗುವಾಗಿದ್ದು, ಮದುವೆಯಾದ ನಂತರ ಎರಡು ವರ್ಷಗಳವರೆಗೆ ಗಂಡ ಹೆಂಡತಿ ಚೆನ್ನಾಗಿದ್ದು, ನಂತರದಿಂದ ಆರೋಪಿ 01 ನೇದ್ದವನು ಫಿರ್ಯಾದಿದಾರಳಿಗೆ ಸಂಶಯ ಮಾಡಿ ಹೊಡೆಬಡೆ ಮಾಡಿ ತೊಂದರೆ ಕೊಟ್ಟು ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ರಾಡಿನಿಂದ ಎಡಗಾಲು ತೊಡೆಗೆ ನಡೆಯಲು ಬಾರದಂತೆ ಹೊಡೆಬಡೆ ಮಾಡಿದ್ದು, ಅಲ್ಲದೇ ದಿನಾಂಕ: 11-09-2018 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಸಾಸಲಮರಿ ಕ್ಯಾಂಪಿನಲ್ಲಿ ಫಿರ್ಯಾದಿದಾರಳು ತಮ್ಮ ಮನೆಯಲ್ಲಿದ್ದಾಗ ಆರೋಪಿ 01 ಮತ್ತು ಆತನ ತಂದೆ ತಾಯಿ ಹಾಗೂ ಸಂಬಂಧಿಕರಾದ ಆರೋಪಿ ನಂ.02 ರಿಂದ 06 ರವರು ಬಂದು ಫಿರ್ಯಾದಿದಾರಳಿಗೆ ಎಲೇ ಸೂಳೆ ನೀನು ನಿನ್ನ ಗಂಡನ ಹಿಂದೆ ಹೋಗದೇ ಯಾರಿಂದ ಹೋಗುತ್ತಿಯೆಲೆ ಎಂದು ಮುಂತಾಗಿ ಬೈದು ಆರೋಪಿ 01 &  02 ರವರು ಫಿರ್ಯಾದಿದಾರಳನ್ನು ಹಿಡಿದುಕೊಂಡು ಹೊಡೆಬಡೆ ಮಾಡಿದ್ದು, ಉಳಿದ ಆರೋಪಿತರು ಸದರಿಯವರಿಗೆ ಅವಳನ್ನೇನು ಕೇಳುತ್ತೀರಿ ಅವಳಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿರಿ ಎಂದು ಪ್ರಚೋದನೆ ಕೊಟ್ಟಿದ್ದು ಇರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.282/2018, ಕಲಂ. 143, 147, 498(), 504, 323, 324, 114 ಸಹಿತ 149 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:-19/12/2018 ರಂದು ಸಾಯಂಕಾಲ  19-00 ಗಂಟೆ ಸುಮಾರಿಗೆ ಪಿರ್ಯಾದಿ ರುದ್ರಮ್ಮ ಗಂಡ ಮಹಾಂತೇಶ 40 ವರ್ಷ ಲಿಂಗಾಯತ ಮನೆಗೆಲಸ  ಸಾ-ದೀನಸಮುದ್ರ.ಹಾ. ಹಸ್ಮಕಲ್ ರವರು, ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರುಪಡಿಸಿದ್ದು. ಸಾರಾಂಶವೆನೆಂದರೆ ಪಿರ್ಯಾಧಿದಾರಳಿಗೆ ಆರೋಪಿ ನಂಬರ 1 ಮಹಾಂತೇಶ ತಂದೆ ಶರಣಪ್ಪ ಹಿಂದಲಮನಿ 45 ವರ್ಷ, ಇತನ ಸಂಗಡ ಸನ್ 1996 ರಲ್ಲಿ ಮದುವೆಯಾಗಿದ್ದು.ಮದುವೆಯಾದ 10 ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡಿದ್ದು.ನಂತರದ ದಿನಗಳಲ್ಲಿ ಪಿರ್ಯಾಧಿದಾರಳಿಗೆ ಮಕ್ಕಳಾಗಲ್ಲಿಲ್ಲವೆಂದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ನೀನು ಬಂಜೆಯಿದ್ದಿ. ನೀನು ಮನೆ ಬಟ್ಟು ಹೋಗು ಅಂತಾ ಕಿರುಕಳ ನೀಡುತ್ತಾ ಬಂದಿದ್ದು.ಆರೋಪಿ ನಂಬರ 1 ಇತನು ಆರೋಪಿ ನಂಬರ 2 ಸರೋಜಮ್ಮ ಗಂಡ ಮಹಾಂತೇಶ 33 ವರ್ಷ ಈಕೆಯನ್ನು ಮದುವೆಮಾಡಿಕೊಂಡರು ಸಹ ಪಿರ್ಯಾಧಿದಾರಳು ಸಹಿಸಿಕೊಂಡಿದ್ದು. ನಂತರ ಪುನಹ ಪಿರ್ಯಾಧಿದಾರಳಿಗೆ ಹೋಡೆ ಬಡೆಮಾಡಿ ಮನೆಯಿಂದ ಹೋರಗೆ ಹಾಕಿದ್ದಾಗ ತವರು ಮನೆಗೆ ಬಂದು ವಾಸವಾಗಿದ್ದು. ನಂತರ ಪಿರ್ಯಾಧಿದಾರಳು ಉಪಜೀವನಕ್ಕಾಗಿ ಸಿಂಧನೂರು ನ್ಯಾಯಾಲಯದಲ್ಲಿ ಜೀವನಾಶಕ್ಕೆ ಅರ್ಜಿಸಲ್ಲಿಸಿದ್ದು ಇರುತ್ತದೆ. ದಿನಾಂಕ-14/12/2018 ರಂದು ಬೆಳಗ್ಗೆ 11.00 ಗಂಟೆಗೆ ಪಿರ್ಯಾಧಿದಾರಳು ತವರು ಮನೆಯ ಮುಂದೆ ಕುಳಿತುಕೊಂಡಿರುವಾಗ ಆರೋಪಿತರೆಲ್ಲರು ಏಕುದ್ದೇಶದಿಂದ ಮನೆಗೆ ಬಂದು ಪಿರ್ಯಾಧಿದಾರಳಿಗೆ ಎನಲೇ ಸೂಳೆ ಕೊರ್ಟ್ ನಲ್ಲಿ ಕೇಸು ಹಾಕಿತ್ತೀಯಾ ನೀನಗೆ ಎಷ್ಟು ಧೈರ್ಯಾ ಅಂತಾ ಕೈಯಿಂದ ಕಪಾಳಕ್ಕೆ ಹೋಡೆದಿದ್ದು. ಅಲ್ಲದೆ ಈಕೆಯನ್ನು ಇಲ್ಲಿಯೇ ಮುಗಿಸಿಬಿಡೋಣ ಅಂತಾ ಬೆನ್ನಿಗೆ ಹೋಡೆದು. ಕೇಸು ವಾಪಸ್ ಪಡೆಯದಿದ್ದರೆ ನಿನನ್ನು ಜೀವಸಹಿತಿ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲಿಸ್ ಠಾಣಾ ಗುನ್ನೆ ನಂ-156/2018 ಕಲಂ-498(ಎ) 143,147,323,504,506 ಸಹಿತಿ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ;-19/12/2018 ರಂದು ಮದ್ಯಾಹ್ನ 14.00 ಗಂಟೆಗೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ಗಣಿಕಿಕೃತ ದೂರು ಹಾಜರು ಪಡಿಸಿದ್ದು. ಸಾರಂಶವೇನೆಂದರೇ, ಕಾಣೆಯಾದ ಗುಂಡುರಾವ್ ಇತನು ಪಿರ್ಯಾಧಿ ಮಾವನಿದ್ದು.2 ವರ್ಷ ದಿಂದ ಮಾನಸಿಕ ಅಸ್ವಸ್ಥ ಇದ್ದುದ್ದರಿಂದ. ಶಿವಮೊಗ್ಗ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು. ಮಾನಸಿ ಕಾಯಿಲೆ ಕಡಿಮೆ ಆಗಿರಲಿಲ್ಲ. ದಿನಾಂಕ-18/12/2018 ರಂದು ಬೆಳಗ್ಗೆ 06.30 ಗಂಟೆಗೆ ಗುಂಡುರಾವ್ ಇತನು ಮನೆಯಲ್ಲಿ ಯಾರಿಗೂತಿಳಿಯದಂತೆ ಮನೆಯಿಂದ ಹೋರಗಡೆ ಹೋಗಿ ಮನೆಗೆ ಬಾರದೆ ಕಾಣೆಯಾಗಿದ್ದು. ಇಲ್ಲಿಯವರೆಗೂ ಹುಡುಕಾಡಲು ಪತ್ತೆಯಾಗದೆ ಇದ್ದುದ್ದರಿಂದ ಈ ದಿವಸ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಇದ್ದ  ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 155/2018 .ಕಲಂ'' ಮನುಷ್ಯ  ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.


ಕಾಣೆಯಾದ ವ್ಯಕ್ತಿಯ ಚಹರೆ

ಎತ್ತರ 5.5, ದುಂಡು ಮುಖ, ಗೋಧಿ ಮೈಬಣ್ಣ ,ತಲೆಯಲ್ಲಿ  ಬಿಳಿ ಕೂದಲು ಮೈಮೇಲೆ ಬಿಳಿ ಬಣ್ಣದ ಅಂಗಿ ಬಿಳಿಯ ಲುಂಗಿ  ಧರಿಸಿದ್ದು ಎಡಗೈಮೇಲೆ ಗುಂಡುರಾವ್ ಉದ್ಬಾಳ ಮೋ.9449337910 ಅಂತಾ ಅಚ್ಚೆ ಇರುತ್ತದೆ. ಮತ್ತು ಕನ್ನಡ ಭಾಷೆ ಬಲ್ಲವನಿರುತ್ತಾನೆ.