Thought for the day

One of the toughest things in life is to make things simple:

2 Nov 2018


ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:01-11-2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಅಲ್ಕೂರು ಗ್ರಾಮದ ಹತ್ತಿರ ತಾಯಪ್ಪ ಈತನ ಬಣವೆ ದೊಡ್ಡಿ ಹತ್ತಿರ ದಾರಿಯಲ್ಲಿ ಮೃತ 06 ವರ್ಷದ ಮಲ್ಲೇಶ ಈತನು ನಿಂತಿದ್ದಾಗ ಆರೋಪಿ vÁAiÀÄ¥Àà vÀAzÉ ªÀÄ®èAiÀÄå £ÁAiÀÄPï, ¸Á: C®ÆÌgÀÄ vÁ:f:gÁAiÀÄZÀÆgÀÄ ತನ್ನ ಎತ್ತಿನ ಬಂಡಿಯನ್ನು ತನ್ನ ಬಣವೆ ದೊಡ್ಡಿ ಕಡೆಯಿಂದ ಊರು ಕಡೆಗೆ ನಿರ್ಲಕ್ಷತನದಿಂದ ಬಂಡಿಯನ್ನು ಹೊಡೆದುಕೊಂಡು ಊರು ಕಡೆಗೆ ತಿರುಗಿಸಿದಾಗ ಎತ್ತಿನ ಬಂಡಿಯ ಹಿಂದಿನ ಆಡಿಗೆ (ಪಲಗಡ) ಮಲ್ಲೇಶನ ತಲೆಗೆ ಮತ್ತು ಹೊಟ್ಟೆಗೆ, ಎದೆಗೆ ಬಡಿದು ಕೆಳಗೆ ಬಿದ್ದಾಗ ಬಾಯಲ್ಲಿ ರಕ್ತ ಬಂದು ಉಪಚಾರ ಕುರಿತು ನವೋದಯ ಆಸ್ಪತ್ರೆಗೆ ತಂದಾಗ ಆವರಣದಲ್ಲಿ ಮಧ್ಯಾಹ್ನ 12-30 ಗಂಟೆಗೆ ಮಲ್ಲೇಶನು ಮೃತಪಟ್ಟಿದ್ದು ಸದರಿ ಘಟನೆಯು ತಾಯಪ್ಪ ಈತನ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ:184/2018 ಕಲಂ:304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ 01-11-2018 ರಂದು 11-30 .ಎಂ.ಕ್ಕೆ ಕೆ.ಹೊಸಳ್ಳಿ ಸೀಮಾದಲ್ಲಿ ಸರ್ವೆ ನಂ. 106 ರಲ್ಲಿ ರಾಯಪ್ಪ ತಂದೆ ಪಂಪಣ್ಣ ಜುಂಗಿ  ಇವರ ಭತ್ತದ ಹೊಲದ ಕೆರೆದಡದಲ್ಲಿ ಗಾಂಜಾ ಗಿಡಗಳು ಬೆಳೆಸಿದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪತ್ರಾಂಕಿತ ಅಧಿಕಾರಿಗಳಾದ ಶ್ರೀ.ಚಿದಾನಂದ ಗುರುವಿನ್, ತುರುವಿಹಾಳ ರವರ ನೇತೃತ್ವದಲ್ಲಿ ಸಿಪಿಐ ಸಿಂಧನೂರು. ಹಾಗೂ ಸಿಬ್ಬಂದಿಗಳಾದ ಪಿಸಿ-679, 454, 637, 324, 99, ಎಪಿಸಿ-162 ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ 2-00 ಪಿ.ಎಂ.ಕ್ಕೆ ದಾಳಿ ಮಾಡಿ ಹೊಲದಲ್ಲಿ ಆರೋಪಿ gÁAiÀÄ¥Àà vÀAzÉ ¥ÀA¥ÀtÚ dÄAV, ªÀAiÀÄ-55, eÁ:£ÁAiÀÄPÀ, G: MPÀÌ®ÄvÀ£À, ¸Á: PÉ.ºÉƸÀ½î, ºÁ.ªÀ: £ÁUÀ°AUÉñÀégÀ PÁåA¥ï vÁ:¹AzsÀ£ÀÆgÀÄ. ಈತನು ಬೆಳೆಸಿದ್ದ 86 ಹಸಿ ಸಣ್ಣ ಮತ್ತು ದೊಡ್ಡ ಗಾಂಜಾ ಗಿಡಗಳು ಸುಮಾರು 23.6 ಕೆ.ಜಿ. .ಕಿ.ರೂ. 10,300/- ನೇದ್ದನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕುರಿತು ದಾಳಿ ಪಂಚನಾಮೆ ಮತ್ತು ಮುದ್ದೆಮಾಲು, ಆರೋಪಿಯೊಂದಿಗೆ ವರದಿ ನೀಡಿದ್ದರಿಂದ ಸದರಿ ವರದಿ ಸಾರಾಂಶದ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣಾ ಗುನ್ನೆ ನಂ. 259/2018 ಕಲಂ 20() ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.
ಪಿರ್ಯಾದಿ ಶ್ರೀಮತಿ ಸನಾ ಗಂಡ ಖಲೀಲ್  ವಯ:20 ವರ್ಷ, ಜಾತಿ:ಮುಸ್ಲಿಂ, ಈಕೆಯು, ಆರೋಪಿ ಖಲೀಲ್ ತಂದೆ ಮಹೆಬೂಬು, ಜಾತಿ:ಮುಸ್ಲಿಂ, ಸಾ:ಕಲ್ಲೂರು ರವರ ಹೆಂಡತಿ ಇರುತ್ತಾಳೆ ಆರೋಪಿತನು ಮದುವೆಯಾದ ನಂತರ ತನ್ನ ಹೆಂಡತಿಯನ್ನು [ಪಿರ್ಯಾದಿದಾರಳನ್ನು] ಸರಿಯಾಗಿ  ನೋಡಿಕೊಳ್ಳದೆ ಕಲ್ಲೂರು ಗ್ರಾಮದ ತನ್ನ ಮನೆಯಲ್ಲಿ ಕೈಗಳಿಂದ ಹೊಡೆಬಡೆ ಮಾಡುತ್ತ ನೀನು ಮನೆಬಿಟ್ಟು ಹೋಗು ನಾನು ಇನ್ನೊಬ್ಬಳನ್ನು ಮದುವೆಯಾಗುತ್ತೇನೆ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತ ಬಂದಿದ್ದು ಅಲ್ಲದೆ ಆರೋಪಿ ನಂ.2 ಶ್ರೀಮತಿ ಹಬೀಬಾ ಗಂಡ ಸಲ್ಮಾನ್ ಜಾತಿ:ಮುಸ್ಲಿಂ, ಸಾ:ಕಲ್ಲೂರು ರವರೊಂದಿಗೆ ಕೂಡಿಕೊಂಡು ಮದುವೆಯಾಗಿರುವ ದಾಗಿ ತಿಳಿದು ಬಂದಿರುತ್ತದೆ ಅಲ್ಲದೆ ಪಿರ್ಯಾದಿದಾರಳಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಮನೆಬಿಟ್ಟು ಹೋಗದಿದ್ದರೆ ಕೊಲೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಾರಾಂಶವಿರುತ್ತದೆ ಪಿರ್ಯಾದಿದಾರಳು ಈ ದಿವಸ ಠಾಣೆಗೆ ಬಂದು ಲಿಖಿತ ದೂರು ಕೊಟ್ಟಿದ್ದು ಅದರಲ್ಲಿಯ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 226/2018 PÀ®A:498(J),494,323,504,506 ¸À»vÀ 34 L.¦.¹.ಅಡಿಯಲ್ಲಿ ಪ್ರಕರಣದ ದಾಕಲು ಮಾಡಿಕೊಂಡು ತನಿಖೆ ಕೈಗೊಮಡಿರುತ್ತಾರೆ.