Thought for the day

One of the toughest things in life is to make things simple:

17 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೊಲೆ ಪ್ರಕರಣದ ಮಾಹಿತಿ.
ದಿನಾಂಕ:16-02-2019 ರಂದು 23-10 ಗಂಟೆಗೆ ಫಿರ್ಯಾದಿ ಸಿದ್ದಲಿಂಗ ತಂದೆ ಯಂಕೋಬ 26 ವರ್ಷ ಜಾ-ಉಪ್ಪಾರ ಉ-ಒಕ್ಕಲುತನ ಸಾ-ಸಂತೆಕೂಡ್ಲೂರು ತಾ-ಆಧೋನಿ ಜಿಲ್ಲಾ-ಕರ್ನೂಲ್  ರವರು ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಜಯಮ್ಮ ಈಕೆಯನ್ನು ಕಳೆದ 2 ವರ್ಷದ ಹಿಂದೆ ಸಾಗರ ಕ್ಯಾಂಪಿನ ರಮೇಶ ಉಪ್ಪಾರ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಂತರದ ದಿನಗಳಲ್ಲಿ ತನ್ನ ಆರೋಪಿತರೆಲ್ಲರೂ ಜಯಮ್ಮಳಿಗೆ  ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದು ಆಗ ಜಯಮ್ಮಳನ್ನು  ತಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ನಂತರ ಕೆಲವು ದಿನಗಳ ಹಿಂದೆ ರಮೇಶನು ಇನ್ನು ಮುಂದೆ ಹೆಂಡತಿಯೊಂದಿಗೆ ಜಗಳಮಾಡುವುದಿಲ್ಲ. ಅಂತಾ ಹೇಳಿ ಜಯಮ್ಮ ಈಕೆಯನ್ನು ದಿನಾಂಕ:13-02-19 ರಂದು ಸಾಗರ ಕ್ಯಾಂಪಿಗೆ ಕರೆದುಕೊಂಡು ಬಂದಿರುತ್ತಾನೆ.  ಅದೇ ದಿನ ರಾತ್ರಿ 8 ಗಂಟೆ ಸುಮಾರಿಗೆ ಆರೋಪಿತರು ಜಯಮ್ಮಳಿಗೆ ದೈಹಿಕ ಮತ್ತು ಮಾನಸಿಕ ನೀಡಿ ಹೊಡೆದಿರುವ ಬಗ್ಗೆ ಮತ್ತು ಅವಾಚ್ಯವಾಗಿ ಬೈದು ನಿನ್ನನ್ನು ಮುಗಿಸುತ್ತೇವೆ. ಅಂದಿದ್ದು ಅಲ್ಲದೇ  ನಾದಿನಿಯರು ಉಳಿದವರಿಗೆ ನನ್ನನ್ನು ಮುಗಿಸಲು ಪ್ರಚೋದನೆ ನೀಡಿದ ಬಗ್ಗೆ ನಮಗೆ ಫೋನ್ ಮಾಡಿ ಅಳುತ್ತಾ ಹೇಳಿದ್ದಳು. ಅಲ್ಲದೇ ದಿನಾಂಕ-14/02/2019 ರಂದು ದೇವಣ್ಣ ಈತನು ನನ್ನ ಪೋನಿಗೆ ಕರೆ ಮಾಡಿ ನಿಮ್ಮ ತಂಗಿ ಇಂದು ಬೆಳಿಗ್ಗೆ  4-00 ಗಂಟೆಗೆ ಮನೆಯಿಂದ ಎದ್ದು ಹೋಗಿದ್ದಾಳೆ ಎಲ್ಲಿಗೆ ಹೋಗಿದ್ದಾಳೆಂದು ಗೋತ್ತಾಗುತ್ತಿಲ್ಲಾ ಎಂದು ಹೇಳಿದನು. ಆಗ ನಾವು ಸಾಗರಕ್ಯಾಂಪ್
ಗೆ ಬಂದು ರಮೇಶನಿಗೆ ವಿಚಾರಿಸಲು ಎಲ್ಲಿಗೆ ಹೋಗಿದ್ದಾಳೆಂದು ಕೇಳಲಾಗಿ ಗೊತ್ತಿಲ್ಲ ಅಂತಾ ಹೇಳಿದನು. ನಂತರ ನಾವು ಕ್ಯಾಂಪ್ ನಲ್ಲಿ ಹುಡುಕಾಡಲು ನನ್ನ ತಂಗಿ ಪತ್ತೆಯಾಗದ ಕಾರಣ ನಾವು ದಿನಾಂಕ:15-02-19 ರಂದು ಬಳಗಾನೂರು ಠಾಣೆಯಲ್ಲಿ ಮಹಿಳಾಕಾಣೆ ಪ್ರಕರಣ ದಾಖಲಿಸಿದೆವು. ನಂತರ ದಿನಾಂಕ:16-02-2019 ರಂದು ಬೆಳಿಗ್ಗೆ 11-30 ಗಂಟೆಗೆ ಪುನಃ ನಾವು ಸಾಗರಕ್ಯಾಂಪ್ ಗೆ ಹೋಗಿ ಹುಡುಕಾಡುತ್ತಾ ರಮೇಶನ ಜಮೀನಿನಲ್ಲಿ ಹೋದಾಗ ಕೆರೆಯಲ್ಲಿ ಶವ ತೇಲಾಡುತ್ತಿರುವುದನ್ನು ನೋಡಿ ಶವದ ಮೇಲಿರುವ ಬಟ್ಟೆಗಳನ್ನು ನೋಡಿ ಜಯಮ್ಮಳದೇ ಎಂದು ಗುರುತಿಸಿದೆವು. ದಿನಾಂಕ:13-02-2019 ರಂದು ರಾತ್ರಿ ಜಯಮ್ಮಳಿಗೆ ಆರೋಪಿತರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಹೊಡೆದು ಕೊಲೆ ಮಾಡಿ ಯಾರಿಗೂ ಗೊತ್ತಾಗಬಾರದೆಂದು ಕೊಲೆ ಮಾಡಿದ್ದನ್ನು ಮರೆಮಾಚಲು ಜಯಮ್ಮಳ ಶವವನ್ನು ತಮ್ಮ ಹೊಲದಲ್ಲಿನ ಕೆರೆಯ ನೀರಿನಲ್ಲಿ ಹಾಕಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನುರು ಪೊಲೀಸ್ ಠಾಣಾ ಗುನ್ನೆ ನಂ: 17/2019 ಕಲಂ.143,147,148, 498(),504,506,109,302,201 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 16.02.2019 ರಂದು ಬೆಳಿಗ್ಗೆ 8.00 ಗಂಟೆಗೆ ಸುಮಾರಿಗೆ ರಾಯಚೂರು-ಶಕ್ತಿನಗರ ರೋಡಿನ ಮೇಲೆ ಯರಮರಸ್ ಕ್ಯಾಂಪ್ ಕ್ರಾಸ್ ಹತ್ತಿರ ಇರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮುಂದೆ ಆರೋಪಿ ಮಂಜುನಾಥ ಇವನು ಶಕ್ತಿನಗರ ಕಡೆಯಿಂದ ರಾಯಚೂರು ಕಡೆಗೆ ತನ್ನ ಮೋಟಾರ ಸೈಕಲ್ ನಂ KA-36/EB-6120 ನೇದ್ದನ್ನು ಮತ್ತು ಆರೋಪಿ ಖಲೀಲ್ ಮಿಯಾ ಇವನು ತನ್ನ ಟಿ.ವಿ.ಎಸ್. ಮೊಪೆಡ್ ನಂ KA-36/EN-0610 ನೇದ್ದನ್ನು ನಾಗರಾ ಬಾಬುಲಾಲ ಕಾಟನ ಮಿಲ್ಲಿನಿಂದ ಯರಮರಸ್ ಕ್ಯಾಂಪಿನ ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷ್ಯತನ ದಿಂದ ನಡೆಯಿಸಿಕೊಂಡು ಒಬ್ಬರಿಗೊಬ್ಬರು ಎದರುಬದರು ಟಕ್ಕರ ಕೊಟ್ಟಿದ್ದರಿಂದ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡಿದ್ದಾಗಿ ಫಿರ್ಯಾದಿದಾರರು ದೂರು ಕೊಟ್ಟಿದ್ದರ ಸಾರಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ 26/2019 PÀ®A. 279, 337, 338 IPC ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.