Thought for the day

One of the toughest things in life is to make things simple:

16 Dec 2018

Prees Note


-:: ಪತ್ರಿಕಾ ಪ್ರಕಟಣೆ ::-
-:: ಕುಖ್ಯಾತ  ಅಂತರ್ ರಾಜ್ಯ ಕಳ್ಳರ ಬಂಧನ ::-
     ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ವೃತ್ತದ ಹದ್ದಿಯ ಯರಮರಸ್ ಕ್ಯಾಂಪ್, ಚಿಕ್ಕಸೂಗೂರು, ಮನ್ಸಲಾಪೂರು ಸೀಮಾಂತರಗಳಲ್ಲಿ ಮತ್ತು ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಠಾಣಾ ಹದ್ದಿಯ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚಿಗೆ ಜರುಗಿದ ಳ್ಳತನಗಳ ಪತ್ತೆಗಾಗಿ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು  ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ನಾಗಪ್ಪ ಸಿ.ಹೆಚ್.ಸಿ.74, ರವಿರಾಜ ಸಿ.ಹೆಚ್.ಸಿ.320, ಗೋಪಾಲ ಹೆಚ್.ಸಿ.135, ಡಾಕಪ್ಪ ಸಿಪಿಸಿ 391  ಹಾಗೂ ವಿಜಯೇಂದ್ರ ರೆಡ್ಡಿ ಸಿಪಿಸಿ 494 ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ಈ ತಂಡವು ಹಗಲಿರಳು ಶ್ರಮಿಸಿ ಈ ಕೆಳಕಂಡ ಇಬ್ಬರು ಕುಖ್ಯಾತ  ಅಂತರ್ ರಾಜ್ಯ ಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಅವರಿಂದ 64 ಗ್ರಾಮ್ ಬಂಗಾರದ ಆಭರಗಳು .ಕಿ.ರೂ.1,92,000/-, 250 ಗ್ರಾಮ್ ಬೆಳ್ಳಿ ಆಭರಣಗಳು .ಕಿ.ರೂ.15000/- ಮತ್ತು ನಗದು ಹಣ ರೂ.1,70,000/- ಹೀಗೆ ಎಲ್ಲಾ ಸೇರಿ ಒಟ್ಟು 3,77,000/- ಬೆಲೆ ಬಾಳುವ

ವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

1] ಬಾಲು ದೇವಿದಾಸ್ ಕಾಳೆ ತಂದೆ ದೇವಿದಾಸ್ ಕಾಳೆ ||38ವರ್ಷ, ಜಾ||ಹಿಂದು ಪಾರ್ಧಿ, ||ತೂಫಾನ್ ಕ್ರೂಜರ್ ಚಾಲಕ ಕೆಲಸ ಸಾ||ತಳೆ ಹಿಪ್ಪರಗ, ತಾ||ಉತ್ತರ ಸೋಲಾಪೂರು, ಜಿ||ಸೋಲಾಪೂರು ಫೋನ್ ನಂ:8862016175

2] ಸಾಗರ ಭಾರತ್ ಪವಾರ್ ತಂದೆ ಭಾರತ್ ಪವಾರ್ ||24ವರ್ಷ, ಜಾ||ಹಿಂದು ಪಾರ್ಧಿ, ||ಸಫಾಯಿ ಕರ್ಮಚಾರಿ ಸಾ||ಮಾಹಿ ನಗರ, ತಾ||ಮಾಳೀಸಿರಸ್, ಜಿ||ಸೋಲಾಪೂರು ರಾಜ್ಯ||ಮಹಾರಾಷ್ಟ್ರ, ಫೋನ್ ನಂ: 8600907765

     ಇವರು ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯರಮರಸ್ ಕ್ಯಾಂಪ್ ಮನೆಗಳ,  ಚಿಕ್ಕಸೂಗೂರು, ಮನ್ಸಲಾಪೂರು ಸೀಮಾಂತರಗಳಲ್ಲಿಯ ಫ್ಯಾಕ್ಟರಿಗಳ ಹಾಗೂ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಠಾಣಾ ಹದ್ದಿಯ ಕೈಗಾರಿಕಾ ಪ್ರದೇಶದಲ್ಲಿಯ ಕಾರ್ ಶೋ ರೂಮ್, ಗ್ರಾನೈಟ್ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ್ದು ಒಟ್ಟು 13 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಎಸ್.ಪಿ. ಮತ್ತು ಹೆಚ್ಚುವರಿ ಎಸ್.ಪಿ. ರಾಯಚೂರು ರವರು  ಶ್ಲಾಘಿಸಿದ್ದಾರೆ.

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ªÀÄmÁÌ dÆeÁl zÁ½ ¥ÀæPÀgÀtzÀ ªÀiÁ»w.
ದಿನಾಂಕ 14-12-2018  ರಂದು 16.50  ಗಂಟೆ ಸುಮಾರು ಮಸ್ಕಿ ಬಳಗಾನೂರು ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ತಮ್ಮ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಒಬ್ಬನು ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಮತ್ತೊಬ್ಬನು ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿಗಳು ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಡಿ.ಎಸ್.ಪಿ ಲಿಂಗಸೂಗುರು ರವರ ಮಾರ್ಗದರ್ಶನದಂತೆ ಪಿರ್ಯಾದಿದಾರರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿಲಾಗಿ ಆರೋಪಿತರಾದ 1. ಶೇಖಸಾಬ ತಂದೆ ರಾಜಾಸಾಬ ಮುಸ್ಲಿಂ, 30 ವರ್ಷ, ಚಿಕ್ಕನ ಅಂಗಡಿ, ಸಾ:ಉದ್ದಾಳ(ಹುಲ್ಲೂರು), 2. ಶಂಕ್ರಪ್ಪ ತಂದೆ ಹನುಮಪ್ಪ ಕೊಡ್ಲಿ, 60 ವರ್ಷ, ಕುರುಬರು, ಸಾ:ಮಸ್ಕಿ ಕಂಬಳಿ ಮಠದ ಹತ್ತಿರ ಇವರುಗಳು ಸಿಕ್ಕಿದ್ದು,  ಮಟಕಾ ನಂಬರ್ ಬರೆದ ಎರಡು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 1780/- ರೂ ದೊರೆತಿದ್ದು, ಸಿಕ್ಕಿಬಿದ್ದ ಆರೋಪಿತರು ತಾವು ಬರೆದ ಮಟ್ಕಾ ಚೀಟಿಯನ್ನು ಆರೋಪಿ ನಂ 03. ಮೌನೇಶ ಇತನಿಗೆ ಕೊಡುವದಾಗಿ ಹೇಳಿದ್ದು ಇರುತ್ತದೆ,  ಸಿಕ್ಕಿಬಿದ್ದ ಆರೋಪಿತರಿಂದ ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 177/2018 ಕಲಂ 78 (111)  ಕೆ,ಪಿ ಕಾಯ್ದೆ, ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.