Thought for the day

One of the toughest things in life is to make things simple:

25 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇತೆರೆ .ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ : 24.07.2020 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿದಾರನಾದ ಶ್ರೀ ಜೋಶುವಾ ತಂದೆ ರಾಜರತ್ನಂ, ವಯಾ: 50 ವರ್ಷ, ಕ್ರಿಶ್ಚಿಯನ್, L.E.F. ಚರ್ಚ್ ಫಾದರ್, ಸಾ:ಇಂದಿರಾನಗರ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಇಂಗ್ಲೀಷ್ ನಲ್ಲಿ ಬರೆದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೆನೆಂದರೆ, ಇಂದಿರಾನಗರದ ಗುಡ್ಡದ ಮೇಲೆ  L.E.F. ಚರ್ಚ್ ಇದ್ದು, ಸದರಿ ಚರ್ಚಿನ ಫಾದರ್ ಆಗಿ ನೋಡಿಕೊಳ್ಳುತ್ತಿದ್ದು ಆರೋಪಿತರಾದ 1}. ಯೇಸುದಾಸ, 2}. ವಿನೋದ, 3}. ರಾಜು 4}. ಸಂದೀಪ, 5}. ಅವಿನಾಶ 6}. ವಿಜ್ಜಮ್ಮಾ 7}. ಬಿ.ರಮೇಶ ನಗರಸಭೆ ಸದಸ್ಯರು 8}  ಬೇಬಿ ಹಾಗೂ ಇತರೆ 03 ಜನರು 9}. ಆರ್.ಅಶೋಕ. ಚರ್ಚ್ ಜಾಗೆಯಲ್ಲಿ ಕಂಪೌಂಡನ್ನು ಕಟ್ಟಲು ಪ್ರಾರಂಭಿಸಿದ್ದು ಆಗ ಫಿರ್ಯಾದಿದಾರನು “ಇದು ಚರ್ಚ್ ಜಾಗ ಇರುತ್ತದೆ, ಕಂಪೌಂಡ ಗೋಡೆಯನ್ನು ಕಟ್ಟಲು ಬಿಡುವುದಿಲ್ಲಾ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲಾರೂ ಸಮಾನ ಉದ್ದೇಶದಿಂದ ಫಿರ್ಯಾದಿದಾರನೊಂದಿಗೆ ಮತ್ತು ಆತನ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಮತ್ತು ಸದರಿ ಘಟನೆಗೆ ಆರೋಪಿ ನಂ 08 ಮತ್ತು 09 ರವರು ಪ್ರಚೋದನೆ ಇರುತ್ತದೆ ಅಂತಾ ಮುಂತಾಗಿದ್ದ ದೂರನ್ನು ಹಾಜರು ಪಡಿಸಿದ್ದರಿಂದ, ಸದರಿ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲಿಸ್ ಠಾಣೆಯಲ್ಲಿ ಗುನ್ನೆ ನಂ 84/2020, ಕಲಂ 143, 147, 323, 109, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯುಡಿಆರ್ ಪ್ರಕರಣ :
ದಿನಾಂಕ 23.07.2020 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಫಿರ್ಯಾದಿದಾರಳಾದ ರೇಣುಕಾ ಗಂಡ ಕೃಷ್ಣ ಬೊಮ್ಮನಳ್ಳಿ, ವಯಾ: 24 ವರ್ಷ, ನಾಯಕ, ಕೂಲಿ, ಸಾ: ಮೂಡಲಗುಂಡಾ, ತಾ: ದೇವದುರ್ಗಾ ಈಕೆಯ ಗಂಡ, ಮಗ ಹಾಗೂ ಊರಿನ ಇಬ್ಬರು ತಮ್ಮೂರಿನಿಂದ ಗುರಗುಂಟಾದ ಗುಂಡಲಬಂಡಾ ಜಲಪಾತ ನೋಡುವದಕ್ಕೆ ಬಂದಿದ್ದು, ಜಲಪಾತ ನೋಡಲು ಮದ್ಯಾಹ್ನ 1.30 ಗಂಟೆಗೆ ನಾಲ್ಕು ಜನ ಜಲಪಾತದ ಮದ್ಯದಲ್ಲಿ ಹೋದಾಗ ಒಮ್ಮೆಲೆ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಮಹಾಂತೇಶ ಮತ್ತು ಸಿದ್ದಣ್ಣ ಇಬ್ಬರು ದಡ ಸೇರಿದ್ದು, ಫಿರ್ಯಾದಿಯ ಗಂಡ ಮತ್ತು ಮಗ ಇಬ್ಬರು ನೀರಿನಲ್ಲಿ ಮುಳುಗಿ ಹರಿದುಕೊಂಡು ಹೋಗಿ ಕಾಣೆಯಾಗಿದ್ದರ ಬಗ್ಗೆ ಫಿರ್ಯಾದಿಯನ್ನು ನೀಡಿದ್ದು ಇರುತ್ತದೆ, ಆದರೆ ದಿನಾಂಕ : 24.07.2020 ರಂದು ಬೆಳಿಗ್ಗೆ 8 ಮತ್ತು 10 ಗಂಟೆಗೆ ಫೋನ್ ಮೂಲಕ ತನ್ನ ಗಂಡನ ಮತ್ತು ತನ್ನ ಮಗನ ಶವಗಳು ದೊರೆಕಿದ ಬಗ್ಗೆ ಮಾಹಿತಿ ತಿಳಿದು ಪಿರ್ಯಾದಿಯು ಕೂಡಲೇ ಘಟನಾ ಸ್ಥಳಕ್ಕೆ ಬಂದು ನೋಡಿ ಹೇಳಿಕೆಯನ್ನು ನೀಡಿದ್ದನ್ನು ಪಡೆದುಕೊಂಡು ಹಟ್ಟಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂ. 13/2020 ಕಲಂ. 174 ಸಿಆರ್ ಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.