Thought for the day

One of the toughest things in life is to make things simple:

19 Jan 2021

Press Note

 ಪತ್ರಿಕಾ ಪ್ರಕಟಣೆ

** *** **

        ದಿನಾಂಕ:19-12-2020 ರಂದು ರಾತ್ರಿ 11-00 ಗಂಟೆಯ ನಂತರದಿಂದ ದಿನಾಂಕ: 20-12-2020 ರಂದು ನಸುಕಿನ 05-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಸಿಂಧನೂರು (RH3) ಸೀಮಾದಲ್ಲಿರುವ ಬೀಜನ್ ಮಂಡಲ್ ಇವರ ಹೊಲ ಸರ್ವೆ ನಂ.531/530 ರಲ್ಲಿ ಶೆಡ್ ದಲ್ಲಯ ಬೀಜನ್ ಮಂಡಲ್ ರವರ ಒಟ್ಟು ಅ.ಕಿ.ರೂ.4,52,000/- ಬೆಲೆ ಬಾಳುವ 60 ಹಂದಿಗಳನ್ನು ಯಾರೋ ಕಳ್ಳರು ಎರಡು ಪಿಕ್ ಅಪ್ ವಾಹನಗಳಲ್ಲಿ ಬಂದು ಕಳುವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸದರಿ ಬೀಜನ್ ಮಂಡಲ್ ತಂದೆ ಗೋಪಲ ಮಂಡಲ್ ಸಾ:ಆರ್.ಹೆಚ್.ಕ್ಯಾಂಪ್ ನಂ:03, ತಾ:ಸಿಂಧನೂರು ಇವರು ಕೊಟ್ಟ ದೂರಿನ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

           ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಪೊಲೀಸ್ ಉಪಾಧೀಕ್ಷಕರು ಸಿಂಧನೂರು ಹಾಗೂ ಶ್ರೀ ಜಿ.ಚಂದ್ರಶೇಖರ ಪೊಲೀಸ್ ವೃತ್ತ ನಿರೀಕ್ಷಕರು ಸಿಂಧನೂರು ರವರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರಾದ           ಶ್ರೀ ಜಿ.ಎಸ್ ರಾಘವೇಂದ್ರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಯವರಾದ ಯಮನಪ್ಪ-ASI, ರಾಘವೇಂದ್ರ HC-03, ದ್ಯಾಮಣ್ಣ PC-396, ಶರಣಪ್ಪ PC-272, ದೇವರೆಡ್ಡಿ PC-671, ರಾಘವೇಂದ್ರ PC-166, ಝಾಕೀರ್ PC-304 ಹಾಗೂ ಶರಣಬಸವ PC-238 ರವರನ್ನೊಳಗೊಂಡ ತಂಡವನ್ನು  ರಚಿಸಲಾಗಿತ್ತು.

           ಸದರಿ ತಂಡದವರು ಇಂದು ದಿನಾಂಕ:18-01-2021 ರಂದು ಶ್ರೀಪುರಂಜಂಕ್ಷನದಲ್ಲಿ ಆರೋಪಿತರಾದ 1). ಅಂಬಣ್ಣ @ ಚರಣ ತಂದೆ ರಾಮಪ್ಪ ಮೋಡಿಕಾರ್, ಸಾ:ರವುಡಕುಂದಾ, ತಾ:ಸಿಂಧನೂರು, 2).ಮಂಜ ತಂದೆ ದುರುಗಪ್ಪ ಮೋಡಿಕಾರ್,

ಸಾ:ಹಿರೇಕೆರೂರು, ತಾ:ಹಾವೇರಿ, ಹಾ.ವ:ನಾಗನಕಲ್, ತಾ:ಕಾರಟಗಿ, 3).ಯಲ್ಲಪ್ಪ ತಂದೆ ವೆಂಕರಮಣ ಕೊರವರು,   ಸಾ:ಸಾಲಗುಂದಾ, ತಾ:ಸಿಂಧನೂರು, 4).ಹನುಮಂತ ತಂದೆ ಯಲ್ಲಪ್ಪ, ಕುಂಚಕೊರವರು, ಸಾ:ನಜೀರ್ ಕಾಲೋನಿ ಕಾರಟಗಿ.

5).ಹನುಮೇಶ ತಂದೆ ದುರುಗಪ್ಪ ಕೊರವರು,  ಸಾ:ತುರ್ವಿಹಾಳ್ , ತಾ:ಸಿಂಧನೂರು ಇವರುಗಳನ್ನು ಬುಲೆರೋ ಪಿಕ್ ಅಪ್ ವಾಹನ ಸಮೇತ ಹಿಡಿದುಕೊಂಡು ನಂತರ ಕಳುವು ಮಾಲು ಸ್ವೀಕೃತಿ ಮಾಡಿದ 6).ದುರುಗಪ್ಪ ತಂದೆ ಗಂಗಪ್ಪ ಗೋಡಗಿ, ಕುಂಚಕೊರವರು, ಸಾ:ನೀಲಕಂಠೇಶ್ವರ ಗುಡಿ ಹತ್ತಿರ ಗಂಗಾವತಿ & 7).ವೆಂಕಟೇಶ ತಂದೆ ದುರುಗಪ್ಪ ಗೋಡಗಿ, ಕುಂಚಕೊರವರು, ಸಾ:ನೀಲಕಂಠೇಶ್ವರ ಗುಡಿ ಹತ್ತಿರ ಗಂಗಾವತಿ ಇವರುಗಳನ್ನು ಹಿಡಿದುಕೊಂಡಿದ್ದು, ಆರೋಪಿತರಿಂದ ಒಟ್ಟು ಅ.ಕಿ.ರೂ.4,52,000/- ಬೆಲೆ ಬಾಳುವ 60 ಹಂದಿಗಳನ್ನು, ಒಂದು ಬೊಲೆರೋ ಪಿಕ್ ಅಪ್ ವಾಹನ ನಂ:KA-37 B-2596 ಅ.ಕಿ.ರೂ.10,00,000=00 ನೇದ್ದನ್ನು ಮತ್ತು ಹಂದಿ ಹಿಡಿಯುವ ಬಲೆಗಳು,  ಟಾರ್ಚ್ ಹಾಗೂ ಬಡಿಗೆಗಳನ್ನು ಹೀಗೆ ಒಟ್ಟು 14,52,000=00 ರೂ ಬೆಲೆಬಾಳುವ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. 

        ಸದರಿ ತಂಡದ ಕಾರ್ಯವನ್ನು ಶ್ರೀ ನಿಕಮ್ ಪ್ರಕಾಶ್ ಅಮ್ರಿತ್ IPS  ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶ್ರೀಹರಿಬಾಬು KSPS ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶ್ಲಾಘಿಸಿರುತ್ತಾರೆ.