Thought for the day

One of the toughest things in life is to make things simple:

8 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ಜೂಜಾಟ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 07-07-2019 ರಂದು 5-10 ಪಿ.ಎಮ್ ಸಮಯದಲ್ಲಿ ಆರೋಪಿ 01 ಹಸೇನಸಾಬ್ ತಂದೆ ಮಾಸೂಮಸಾಬ್ ವಿರುಪಾಪುರ, ಸಾ:ಧಡೇಸ್ಗೂರು ಹಾಗೂ ಇತರೆ 12 ಜನರು ಧಡೇಸ್ಗೂರು ಹಳೆ ಊರಿನ ಗುಂಡಳ್ಳಿ ಅಮರಪ್ಪ ಸಾಹುಕಾರ್ ಇವರ ಹೊಲದ ಹತ್ತಿರ ತುಂಗಭದ್ರ ನದಿ ದಂಡೆಯಲ್ಲಿ ಸಾರ್ವಜನಿಕ  ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂದು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.13000/- ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ 8.00 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಹಾಜರು ಪಡಿಸಿದ್ದು, ದಾಳಿ ಪಂಚನಾಮೆ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು 9-00 ಪಿ.ಎಮ್ ಕ್ಕೆ ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಠಾಣಾ ಸಿಂಧನೂರು ಗ್ರಾಮೀಣ ಪೊಲೀಸ್ ಗುನ್ನೆ ನಂ.105/2019, ಕಲಂ.87 ಕ.ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕಣದ ಮಾಹಿತಿ.
ದಿನಾಂಕ-07/07/2019 ರಾತ್ರಿ 21-30 ಗಂಟೆಗೆ ಪಿರ್ಯಾಧಿದಾರಳು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಹಾಜರುಪಡಿಸಿದ್ದು ಸಾರಂಶವೇನೆಂದರೆ, ಪಿರ್ಯಾಧಿ ನೀಲಮ್ಮ ಗಂಡ ಮೌನೇಶ 38 ವರ್ಷ ಚಲುವಾದಿ ಮನೆ ಕೆಲಸ ಸಾ-ಬೆಳ್ಳಿಗಾನೂರು ರವರಿಗೆ ಮತ್ತು ಆರೋಪಿ ಮರಿದೇವ ತಂದೆ ಹುಲುಗಪ್ಪ 45 ವರ್ಷ ನಾಯಕ ಒಕ್ಕಲುತನ ಸಾ-ಬೆಳ್ಳಿಗಾನೂರು ಹಾಗೂ ಇತರೆ 2 ಜನರೊಂದಿಗೆ, ಮನೆಯ ಮುಂದಿನ ಜಾಗದ ವಿಷಯದಲ್ಲಿ ವೈಶ್ಯಮ್ಯ ಇರುತ್ತದೆ. ದಿನಾಂಕ-06/07/2019 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾಧಿ ಮಗ ಬಸವರಾಜ ಮತ್ತು ಆರೋಪಿ ಮಗ ವಸಂತ ಇವರಿಬ್ಬರೂ ಕ್ರಿಕೇಟ್ ಬಾಲ್ ವಿಷಯದಲ್ಲಿ ಬಾಯಿಮಾಡಿಕೊಳ್ಳುತ್ತಿರುವಾಗ ಪಿರ್ಯಾಧಿ ಮೈಧುನ ಅಲ್ಲಿಗೆ ಹೋಗಿ ಯಾಕೇ ಬಾಯಿಮಾಡಕೊಳ್ಳುತ್ತಿರಿ ಸುಮ್ಮನೆ ಮನೆಗೆ ಹೋಗಿರಿ ಅಂತಾ ಹೇಳುತ್ತಿರುವಾಗ ಆರೋಪಿತರೆಲ್ಲೂರು ಕೂಡಿಕೊಂಡು ಬಂದವರೆ ಎಲೇ ಸೂಳೇ ಮಗನೆ ನಮ್ಮ ಹುಡಗನಿಗೆ ಬಡಿಯುತ್ತಿ ಏನಲೇ ಅಂತಾ ಜಗಳ ತೆಗೆದು ಬಸವರಾಜ ಈತನಿಗೆ ಮೂಗಿನ ಮೇಲೆ ಗುದ್ದಿದ್ದರಿಂದ ಮೂಗಿನಿಂದ ರಕ್ತ ಬಂದಿದ್ದು. ವಿಜಯಲಕ್ಷ್ಮೀ ಈಕೆಯು ತನ್ನ ಗಂಡನಿಗೆ ಯಾಕೇ ಹೊಡೆಯುತ್ತಿ ಅಂತಾ ಕೇಳುತ್ತಿರುವಾಗ ಉದಯಕುಮಾರ ಈತನು ಸೀರೆ ಸೇರಗು ಹಿಡಿದು ಎಳೆದಾಡಿದ್ದು ಪಿರ್ಯಾಧಿದಾರಳು ಜಗಳ ಬಿಡಿಸುತ್ತಿರುವಾಗ ಮರಿದೇವ ಈತನು ಕಲ್ಲಿನಿಂದ ಹೆಬ್ಬೆರಳಿಗೆ ಹೋಡೆದಿದ್ದರಿಂದ ರಕ್ತಗಾಯವಾಗಿದ್ದು ನಂತರ ಆರೋಪಿತರೆಲ್ಲೂರು ಈ ದಿವಸ ಉಳಿದುಕೊಂಡಿದ್ದಿರಿ ಇನ್ನೊಮ್ಮೆ ಸಿಕ್ಕರೆ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ನಂತರ ಪಿರ್ಯಾಧಿದಾರಳು ಮತ್ತು ಮೈಧುನ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ತೊರಿಸಿಕೊಂಡು ಮನೆಯಲ್ಲಿ ವಿಚಾರಿಸಿ ಈ ದಿವಸ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ಗಣೀಕೃತ  ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-45/2019 ಕಲಂ-323,324,354,504,506, sಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.