Thought for the day

One of the toughest things in life is to make things simple:

14 Dec 2018

Reported Crimes



   
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ: 12-12-2018 ರಂದು 07-45 ಪಿ.ಎಮ್ ಸಮಯದಲ್ಲಿ ಆರೋಪಿ ಆನಂದ ತಂದೆ ಯಲ್ಲಪ್ಪ, ಅಂಬಿಗೇರ, ವಯಾ: 30 ವರ್ಷ, ಜಾ: ಅಂಬಿಗೇರ, : ಕೆಎ-29/-4836 ನೇದ್ದರ ಚಾಲಕ , ಸಾ: 6 ನೇ ಕ್ರಾಸ್, ಗಣಪತಿ ಗುಡಿ ಹತ್ತಿರ, ರಣದಮ್ಮ ಕಾಲೋನಿ, ನೇಕಾರ ನಗರ, ಹಳೇ ಹುಬ್ಬಳ್ಳಿ. ಈತನು ಟಾಟಾ ಲಾರಿ ನಂ KA-29/-4836 ನೇದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದಲ್ಲಿ ಸಾಗಿಸುವಾಗ ಫಿರ್ಯಾದಿದಾರರು, ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮ ಸಿಂಧನೂರು ನಗರದ ಬಳ್ಳಾರಿ ರಸ್ತೆಯಲ್ಲಿ ಬರುವ ಸಹಾನ ಕಾಂಪ್ಲೆಕ್ಸ್ ಹತ್ತಿರ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಮತ್ತು ಆರೋಪಿ 02 ಲಾರಿ ನಂ ಕೆಎ-29/-4836 ನೇದ್ದರ ಮಾಲೀಕ ಈತನು ಮರಳನ್ನು ಸಾಗಿಸಲು ಸದರಿ ಲಾರಿಯನ್ನು ಕೊಟ್ಟಿದ್ದು ಇರುತ್ತದೆ. ಸದರಿ ಲಾರಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ.146/2018, ಕಲಂ: 379 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 12-12-2018 ರಂದು 09-50 ಪಿ.ಎಮ್ ಸಮಯದಲ್ಲಿ ಆರೋಪಿ ನಂ 01 ಟಾಟಾ ಲಾರಿ ನಂ ಕೆ -22/ಬಿ-5897 ನೇದ್ದರ ಚಾಲಕ ಈತನು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಟಾಟಾ ಲಾರಿ ನಂ ಕೆಎ-22/ಬಿ-5897 ನೇದ್ದರಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದಲ್ಲಿ ಸಾಗಿಸುವಾಗ ಫಿರ್ಯಾದಿದಾರರು, ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿ ಬರುವ ಡಿಗ್ರಿ ಕಾಲೇಜು ಹತ್ತಿರ ಫಿರ್ಯಾದಿದಾರರು, ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ನಿಲ್ಲಿಸಲು ಕೈ ಮಾಡಿದಾಗ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು, ಮತ್ತು ಆರೋಪಿ 02 ಟಾಟಾ ಲಾರಿ ನಂ ಕೆ -22/ಬಿ-5897 ನೇದ್ದರ ಮಾಲೀಕ ಈತನು ಮರಳನ್ನು ಸಾಗಿಸಲು ಸದರಿ ಲಾರಿಯನ್ನು ಕೊಟ್ಟಿದ್ದು ಇರುತ್ತದೆ. ಸದರಿ ಲಾರಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಪೊಲೀಸ್ ಗುನ್ನೆ ನಂ.147/2018, ಕಲಂ: 379 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
     ದಿನಾಂಕ;-11-12-2018 ರಂದು 2230  ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ MLC ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಅಲ್ಲಿಯೇ ಇದ್ದ ಪಿರ್ಯಾಧಿ ಕೆ. ನವೀನ್ ಕುಮಾರ್ ತಂದೆ ಭೀಮಯ್ಯ, ವಯ 19 ವರ್ಷ, ಮಾದಿಗ, ಬೇಲ್ದಾರ್ ಕೆಲಸ, ಸಾ|| ಹರಿಜನವಾಡ ರಾಯಚೂರು ರವರಿಗೆ ವಿಚಾರಿಸಿ ಲಿಖಿತ ದೂರು ಪಡೆದುಕೊಂಡು 2345 ಗಂಟೆಗೆ ಬಂದಿದ್ದು ದೂರಿನ ಸಾರಾಂಶವೆನೆಂದರೆ  ದಿನಾಂಕ:11.12.2018 ರಂದು ಪಿರ್ಯಾದಿದಾರರು ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ.KA36EK7400  ನೇದ್ದರ ಹಿಂದೆ ಸವಾರಪ್ಪನನ್ನು ಕೂಡಿಸಿಕೊಂಡು ರಾಯಚೂರು ಗದ್ವಾಲ್ ರಸ್ತೆಯ ವಾಸವಿ ರೈಸ್ ಮಿಲ್ ಹತ್ತಿರ ಇರುವ ಮಹಿಬೂಬ್ ಸುಭಾನಿ ದರ್ಗಾದ ಮುಂದಿನ ರಸ್ತೆಯಲ್ಲಿ ಪಿರ್ಯಾಧಿ ಮೋಟಾರ್ ಸೈಕಲ್ ನ್ನು ದೇವಿನಗರದಿಂದ ಹರಿಜನವಾಡದ ಕಡೆಗೆ ನಿಧಾನವಾಗಿ ಚಲಾಯಿಸಿಕೊಂಡು ರಸ್ತೆಯ ಎಡಗಡೆ ಹೋಗುತ್ತಿದ್ದಾಗ, ರಾಯಚೂರು ಕಡೆಯಿಂದ ಗದ್ವಾಲ್ ಕಡೆಗೆ ಹೋಗುವಾಗ ಆರೋಪಿತನು ಹೋಂಡಾ ಯಾಕ್ಟಿವಾ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಅತನು ಹೋಗುವ ಎಡಗಡೆ ರಸ್ತೆಯು ತೆಗ್ಗು ಇದ್ದುದ್ದರಿಂದ ಮೋಟಾರ್ ಸೈಕಲ್ ನ್ನು ಆತನ ಬಲಕ್ಕೆ ತೆಗೆದುಕೊಂಡು ರಸ್ತೆಯ ಎಡಗಡೆ ಹೊರಟಿದ್ದ ಪಿರ್ಯಾಧಿದಾರರ ಮೋಟಾರ್ ಸೈಕಲ್ ಹಿಂದೆ ಕುಳಿತು ಸವಾರಪ್ಪನು ತಲೆ ಬಲಕ್ಕೆ ಭಾಗಿಸಿದ್ದರಿಂದ ಹೋಂಡಾ ಯಾಕ್ಟಿವಾ ಮೋಟಾರ್ ಸೈಕಲ್ ಸವಾರನು  ಸವಾರಪ್ಪನ ತಲೆಗೆ ಟಕ್ಕರ್ ಕೊಟ್ಟನು ಇದರಿಂದಾಗಿ ಪಿರ್ಯಾಧಿ ನಡೆಸುತ್ತಿದ್ದ ಮೋಟಾರ್ ಸೈಕಲ್ ಮುಂದೆ ಹೋಗಿ ಕೆಳಗಡೆ ಬಿದ್ದಿದ್ದರಿಂದ  ಸವಾರಪ್ಪನಿಗೆ ತಲೆಗೆ ಭಾರೀ ರಕ್ತಗಾಯ, ಗದ್ದ ಹತ್ತಿರ ರಕ್ತಗಾಯ ಎರೆಡು ಮುಂಗೈಗಳ ಹತ್ತಿರ ತರಚಿದ ಗಾಯಗಳಾಗಿದ್ದು ಆರೋಪಿತನು ಅಪಘಾತವಾದ ನಂತರ  ಮೋಟರ್ ಸೈಕಲನ್ನು ನಿಲ್ಲಿಸದೆ ಹಾಗೆಯೇ ಹೋಗಿದ್ದು ಇರುತ್ತದೆ  ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಠಾಣೆ ಗುನ್ನೆ ನಂ. 100/2018 ಕಲಂ: 279, 338 IPC &187 IMV ACT  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 12-12-2018 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿ ಮಂಜುನಾಥ ತಂದೆ ಅಮರಪ್ಪ ವಯಾಃ 22 ವರ್ಷ ಜಾತಿಃ ಕುರುಬರು ಉಃ ಒಕ್ಕಲುತನ/ ಮೋಟರ್ ಸೈಕಲ್ ನಂ ಕೆ, 36ವಿ-2572 ನೇದ್ದರ ಚಾಲಕ  ಸಾಃ ಡೊಣಮರಡಿ ಗ್ರಾಮ ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ - ದಿನಾಂಕ 06-12-2018 ರಂದು ಫಿರ್ಯಾದಿ ಮತ್ತು ಫಿರ್ಯಾದಿ ತಾಯಿ ಗಾಯಾಳು ಕರಿಯಮ್ಮ ಇಬ್ಬರು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಡೊಣಮರಡಿ ಗ್ರಾಮದಿಂದ ಕಿರಾಣಿ ಮಾಲು ತೆಗೆದುಕೊಂಡು ಬರಲು ಅಂತಾ  ಫಿರ್ಯಾದಿಯು ತನ್ನ ಮೋಟರ್ ಸೈಕಲ್ ನಂ ಕೆ, 36ವಿ-2572 ನೇದ್ದರಲ್ಲಿ ತನ್ನ ತಾಯಿಯನ್ನು ಕೂಡಿಸಿಕೊಂಡು ಮಾನವಿ ಪಟ್ಟಣಕ್ಕೆ ಬಂದು ಮಾನವಿ ಪಟ್ಟಣದಲ್ಲಿ ಕಿರಾಣಿ ಮಾಲು ತೆಗೆದುಕೊಂಡು ವಾಪಸ್ ತನ್ನ ಊರಾದ ಡೊಣಮರಡಿಗೆ ಹೋಗಬೇಕೆಂದು ಮಾನವಿ- ಸಿಂದನೂರು ರಸ್ತೆ ಹಿಡಿದು ಫಿರ್ಯಾದಿಯನ್ನು ತನ್ನ ತಾಯಿಯನ್ನು ಕೂಡಿಸಿಕೊಂಡು ದಿನಾಂಕ 06-12-2018 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಮಾನವಿ ಪಟ್ಟಣದ .ಪಿ.ಎಂ.ಸಿ ಮೂರನೇ ಗೇಟ್ ಹತ್ತಿರ ರಸ್ತೆಯಲ್ಲಿ ಹೊರಟಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಸಿಂದನೂರು ಕಡೆಗೆ ಮಹೇಂದ್ರ ಬುಲೆರೋ ಪಿಕಾಪ್ ವಾಹನ ನಂ ಕೆ, 36 -4350 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನ ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ್ ಮಾಡಿದ್ದು ಟಕ್ಕರ್ ಮಾಡಿದ ಪರಿಣಾಮ ಫಿರ್ಯಾದಿ ಮತ್ತು ಆತನ ತಾಯಿ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಫೀರ್ಯಾದಿದರಾನ ತಾಯಿಗೆ ಎಡ ಬೆನ್ನಿಗೆ, ಮತ್ತು ಪಕ್ಕೆಲುಬುಗಳಿಗೆ, ಹಾಗೂ ಬೆನ್ನಿನ ಹಿಂಬಾಗ ಭಾರಿ ಒಳಪಟ್ಟಾಗಿ ಕಂದುಗಟ್ಟಿನ ಗಾಯಗಳಾಗಿದ್ದು ಫಿರ್ಯಾದಿದಾರನಿಗೆ ಎಡ ಗೈ  ಕಿರುಬೆರಳಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು  ಟಕ್ಕರ್ ಮಾಡಿದ ನಂತರ ಆರೋಪಿತನು ತನ್ನ ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಫಿರ್ಯಾದಿಯು  ತನ್ನ ತಾಯಿಗೆ ಚಿಕಿತ್ಸೆ ಕೊಡಿಸಿ ಇಂದು ತಡವಾಗಿ ಠಾಣೆಗೆ ಬಂದು ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 349/2018. ಕಲಂ 279. 337.338 .ಪಿ.ಸಿ ಮತ್ತು  187 .ಎಂ.ವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.