Thought for the day

One of the toughest things in life is to make things simple:

5 Apr 2019

Reported Crimes


  
ಚುನಾವಣೆಗೆ ಸಂಬಂಧಿಸಿದಿ ಪ್ರಕರಣದ ಮಾಹಿತಿ.
ದಿನಾಂಕ: 04.04.2019 ರಂದು ಬೆಳಿಗ್ಗೆ ಫಿರ್ಯಾದಿ ಸಂಜಯಕುಮಾರ ತಂ: ಸತ್ಯನಾರಾಯಣ ವಯ: 26 ವರ್ಷ, ಜಾ: ವೈಶ್ಯರು, ಉ: ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಇಲಾಖೆ, ಸಧ್ಯ ಸ್ಟ್ಯಾಟಿಕ್ ಸರ್ವಲೈನ್ಸ ಟೀಂ 53 ರಾಯಚೂರು ಗ್ರಾಮೀಣ ಲೋಕಸಭಾ ಕ್ಷೇತ್ರ, ಸಾ: ರಾಮನಗರ, ಗುರುಮಿಟಕಲ್, ಹಾ// ಎಸ್.ಟಿ.ಬಿ.ಟಿ. ಕಾಲೋನಿ, ಯರಮರಸ್, ರಾಯಚೂರು ರವರು 7ನೇ ಮೈಲ್ ಕ್ರಾಸ್ ಹತ್ತಿರದ ಚೆಕ್ ಪೋಸ್ಟ್ ಹತ್ತಿರ ಲೋಕಸಭಾ ಚುನಾವಣೆಯ ಅಂಗವಾಗಿ ವಾಹನಗಳ ತಪಾಸಣೆ ಕರ್ತವ್ಯದಲ್ಲಿದ್ದಾಗ್ಗೆ, ಮದ್ಯಾಹ್ನ 14.15 ಗಂಟೆಗೆ ರಾಯಚೂರು ಕಡೆಯಿಂದ ಆರೋಪಿ ಅಮರೇಶ ತಂ: ಮಾನಪ್ಪ ವಯ: 19ವರ್ಷ, ಜಾ: ನಾಯಕ್, : ಕ್ರುಷರ್ ಜೀಪ್ ಚಾಲಕ, ಸಾ: ನಿಂಗದಳ್ಳಿ ಎಸ್.ಕೆ. ತಾ:ಸುರಪೂರ, ಜಿ: ಯಾದಗಿರಿ ಈತನು ತನ್ನ ಕ್ರುಷರ್ ಜೀಪ್ ನಂ: AP21X5929 ನೇದ್ದರ ಮುಂಬದಿಗೆ ಎದ್ದುಕಾಣುವಂತೆ BJP ಪಕ್ಷದ ಬಾವುಟ [ಜಂಡಾ] ಕಟ್ಟಿಕೊಂಡು ಬಂದಿದ್ದು ತಪಾಸಣೆಯ ಕರ್ತವ್ಯದಲ್ಲಿದ್ದ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರೊಂದಿಗೆ ಜೀಪನ್ನು ತಪಾಸಣೆ ಮಾಡಲಾಗಿ, ಜೀಪಿನ ಮುಂಬದಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯದೇ, ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಬಿದಿರಿನ ಕಟ್ಟಿಗೆಗೆ ಬಟ್ಟೆಯ BJP ಪಕ್ಷದ ಬಾವುಟ ಕಟ್ಟಿಕೊಂಡು ಹೊರಟಿದ್ದು ಕಂಡು ಬಂದಿದ್ದು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲು ಫಿರ್ಯಾದು ಇದ್ದ ಮೇರೆಗೆ ರಾಯಚೂರು ಗ್ರಾಮಿಣ ಪೊಲೀಸ್ ಠಾಣೆ ಗುನ್ನೆ ನಂಬರ 46/2019 PÀ®A. 171[ºÉZï], 188 L¦¹. ಅಡಿಯಲಲ್ಲಿ   ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 04-04-2019 ರಂದು 2030 ಗಂಟೆಗೆ ಫಿರ್ಯಾದಿದಾರರಾದ ನಾಗೇಂದ್ರ ಪಿ.ಡಿ..ಗ್ರಾ.ಪಂ.ಜೇಗರಕಲ್ [ಪ್ಲೈಯಿಂಗ್ ಸ್ಕ್ವಾಡ್-2] ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 04-04-2019 ರಂದು ಸಂಜೆ 5.00 ಗಂಟೆ ಸುಮಾರಿಗೆ ತಾವು ದಿನಾಂಕ 04-04-2019 ರಂದು ಬೆಳಿಗ್ಗೆ 11-00 ಬಿಜೆಪಿ ಅಭ್ಯರ್ಥಿಯ ರಾಲಿಯಲ್ಲಿ ಮಾಡಿದ ವಿಡಿಯೋವನ್ನು ವೀಕ್ಷಿಸುತ್ತಿದ್ದಾಗ ಅದರಲ್ಲಿ ಗಂಜ ಕಲ್ಯಾಣ ಮಂಟಪದ ದುರುಗಡೆ 11-30 ಗಂಟೆಯ ಸುಮಾರಿಗೆ 1) ಡಿಸ್ಕವರಿ ಮೊಟಾರ ಸೈಕಲ ನಂ ಕೆ.36 ಆರ್ 5934 2) ಸ್ಪೇಂಡರ್ ಮೋಟಾರ ಸೈಕಲ ನಂ ಕೆ.36 ಆರ್ 2043 ನೇದ್ದವುಗಳಿಗೆ ಬಿ.ಜೆ.ಪಿ ಪಕ್ಷದ ಜೆಂಡಾವನ್ನು ಕಟ್ಟಿದ್ದು ಕಂಡು ಬಂದಿದ್ದು ಇರುತ್ತದೆ. ಆದ್ದರಿಂದ ಶ್ರೀ ಶರಣಪ್ಪಗೌಡ ಜಾಡಲದಿನ್ನಿ ಅಧ್ಯಕ್ಷರು ಜಿಲ್ಲಾ ಬಿ.ಜೆ.ಪಿ ಸಮಿತಿ ರಾಯಚೂರು ಇವರು ಯಾವುದೇ ಅನುಮತಿ ಪಡೆಯದೆ ಸದರಿ ಮೋಟಾರ ಸೈಕಲಗಳಿಗೆ ಬಿ.ಜೆ.ಪಿ ಪಕ್ಷದ ಜಂಡಾವನ್ನು ಕಟ್ಟಿಸಿ ಪ್ರಚಾರಕ್ಕೆ ಬಳಸಿಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಲಂ 171(ಹೆಚ್) ಐಪಿಸಿ ರೀತ್ಯ ಕ್ರಮ ಜರುಗಿಸಲು ಕೋರಿದೆ. ಅಂತಾ ಮುಂತಾಗಿ ಇರುವ ಸಾರಾಂಶದ  ಮೇಲಿಂದ ಠಾಣಾ ಎನ್.ಸಿ.ನಂ.07/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿಪಡೆದು 2100 ಗಂಟೆಗೆ  ಮಾರ್ಕೇಟ್ ಯಾರ್ಡ್ ಪೊಲಸ್ ಠಾಣಾಗುನ್ನೆ ನಂ.21/2019 ಕಲಂ 171[ಹೆಚ್] ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.