Thought for the day

One of the toughest things in life is to make things simple:

20 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀægÀPÀtzÀ ªÀiÁ»w.
ದಿನಾಂಕ:18.11.2018 ರಂದು 2345 ಗಂಟೆಗೆ ಪಿಎಸ್ಐ ರವರು ಠಾಣೆಗೆ ಬಂದು ಪಿರ್ಯಾಧಿ ನೀಡಿದ ಸಾರಾಂಶವೆನೇಂದರೆ ದಿನಾಂಕ:18.11.2018 ರಂದು ರಾತ್ರಿ 09.30 ಗಂಟೆಗೆ  ಪಶ್ಚಿಮ ಪೊಲೀಸ್ ಠಾಣಾ ಹದ್ದಿಯ ಮೆಥೋಡಿಸ್ಟ್ ಚರ್ಚ ಹತ್ತಿರ  ಕೆಲ ಯುವಕರು ಗುಂಪುಗಳಾಗಿ  ಸೇರಿಕೊಂಡು ಗಲಾಟೆ-ಜಗಳ  ಮಾಡುವ ಸಂಭವ ಇದೆ ಅಂತಾ  ಮಾಹಿತಿ ಬಂದ ಮೇರೆಗೆ  ಪಿಎಸ್ಐ ರವರು ಮತ್ತು ತಮ್ಮ ಜೊತೆ ರಂಗಣ್ಣ ಹೆಚ್.ಸಿ 342 ಮತ್ತು ಬಸವರಾಜ ಹೆಚ್.ಸಿ .337 ಇವರೊಂದಿಗೆ ಸರಕಾರಿ ಜೀಪ್ ನಂ KA 36/G-460 ರಲ್ಲಿ ಮೆಥೋಡಿಸ್ಟ್ ಚರ್ಚ  ಹತ್ತಿರ ಹೋದಾಗ, ಸುಮಾರು 100-150 ಯುವಕರು ಸೇರಿದ್ದು ಪಿಎಸ್ಐ ರವರು  ಅವರಿಗೆ ವಿಚಾರಿಸಲು ಈ ದಿನ ಸಂಜೆ 6.00 ಗಂಟೆಯ ಸುಮಾರಿಗೆ ರಾಂಪೂರು ಗ್ರಾಮದ ಶಂಕರ್ ಎನ್ನುವವನು ಮೋಟರ್ ಸೈಕಲ್ ಮೇಲೆ ಮೇಥೋಡಿಸ್ಟ್ ಚರ್ಚ ಹತ್ತಿರ ಹೋಗುವಾಗ ಯಾರೋ ಒಬ್ಬನಿಗೆ  ಸ್ವಲ್ಪ ಗಾಡಿ ಟಚ್ ಆಗಿದ್ದು ಈ ವಿಷಯವಾಗಿ ತಕರಾರು ಆಗಿ ರಾಂಪೂರು ಗ್ರಾಮದ ಸೂರಜ್@ ಕುನಾಲ್, ಹಾಗೂ ಇನ್ನಿತರರು ಮೆಥೋಡಿಸ್ಟ್ ಚರ್ಚ ಹತ್ತಿರ ಬಂದಾಗ ಆರೋಪಿತರೆಲ್ಲರೂ ಸೇರಿ ಜೋರಾಗಿ ವಾದವಿವಾದ-ಜಗಳ ಮಾಡುತ್ತಿದ್ದಾಗ ಪಿಎಸ್ಐ ರವರು  ಆರೋಪಿತರಿಗೆ  ಗದರಿಸಿ  ಎಚ್ಚರಿಕೆ ನೀಡಿ ಯಾವುದೇ ಗಲಾಟೆ  ಮಾಡದಂತೆ ಆರೋಪಿತರಿಗೆ  ತಮ್ಮ ಮನೆಗಳಿಗೆ ಹೋಗುವಂತೆ ಮತ್ತು ರಾಂಪೂರುದಿಂದ ಬಂದಿದ್ದ ಸೂರಜ್ ಮತ್ತು ಅವರ ಸಂಗಡಿಗರಿಗೆ ರಾಂಪುರು ಕಡೆ ಕಳುಹಿಸಿಕೊಟ್ಟು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು, ಮುಂದೆ ಯಾವುದೇ ಘಟನೆ ಜರುಗದಂತೆ ಸಿಬ್ಬಂದಿಯವರನ್ನು ಸ್ಥಳದಲ್ಲಿ ನೇಮಕ ಮಾಡಿ ಪಿಎಸ್ಐ  ರವರು ಪುನಃ ರಾಂಪುರು ಕಡೆಗೆ ಪೆಟ್ರೋಲಿಂಗ್ ಗೆ ಹೋಗಿ ರಾಂಪೂರು ಗ್ರಾಮದ ಅಂಬೇಡ್ಕರ್ ಸರ್ಕಲ್  ಹತ್ತಿರ ಇದ್ದಾಗ ರಾತ್ರಿ 2245 ಗಂಟೆಗೆ  ಅರೋಪಿತರು ರಾಂಪೂರು ಮುಖ್ಯ ರಸ್ತೆಯಿಂದ  ರಾಂಪೂರು ಅಂಬೇಡ್ಕರ್ ಸರ್ಕಲ್ ಹತ್ತಿರ ಸುಮಾರು ಎಂಟು-ಒಂಬತ್ತು  ಮೋಟರ್ ಸೈಕಲ್ ಗಳಲ್ಲಿ ಬಂದು ತಮ್ಮ ಕೈಗಳಲ್ಲಿ ಕಬ್ಬಿಣದ ರಾಡ್ ಗಳು, ಕಬ್ಬಿಣದ ಪೈಪಗಳು, ಮಚ್ಚುಗಳು, ಮತ್ತು ಚೂರಿಗಳು ಹಿಡಿದುಕೊಂಡು ಈ ದಿನ ಕುನಾಲ್ ನನ್ನು ಮುಗಿಸಿ ಬಿಡೋಣ ಅಂತಾ ಜೋರಾಗಿ ಕೂಗುತ್ತಾ ರಾಂಪೂರು ಗ್ರಾಮದ  ಕುನಾಲ್ ಮನೆಯ ಕಡೆಗೆ ಮೊಟರ್ ಸೈಕಲ್ ಗಳನ್ನು ಜೋರಾಗಿ ರೇಸ್ ಮಾಡುತ್ತಾ ನುಗ್ಗಲು ಪ್ರಯತ್ನಿಸಿದಾಗ ಇವರೆಲ್ಲಾ ಸೇರಿ ಕುನಾಲ್ ಗೆ ಹೊಡೆದು ಸಾಯಿಸಿ ಬಿಡುತ್ತಾರೆ ಅಂತಾ ಪಿಎಸ್ಐ ಮತ್ತು ಸಿಬ್ಬಂದಿಯವರು ರಸ್ತೆಗೆ ಅಡ್ಡ ನಿಂತು ಅವರನ್ನು ಅಡ್ಡಗಟ್ಟಿದಾಗ, ಆರೋಪಿತರು ಪೊಲೀಸರ ಮೇಲೆ ಒಮ್ಮೆಲೆ ಮೋಟರ್ ಸೈಕಲ್ ಗಳನ್ನು ಮೈಮೇಲೆ ಜೋರಾಗಿ ತಂದರು. ನೀವು ಅಡ್ಡ ಬಂದರೆ ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ತಮ್ಮಲ್ಲಿದ್ದ ಮಚ್ಚು ,ರಾಡ್ ಗಳಿಂದ ಒಮ್ಮೆಲೆ ಪೊಲೀಸರಿಗೆ ಹೊಡೆಯಲು ಬಂದಾಗ ಪಿಎಸ್ಐ ಮತ್ತು ಸಿಬ್ಬಂದಿಯವರು ಸ್ವಲ್ಪ ಪಕ್ಕಕ್ಕೆ ಸರಿಯದಿದ್ದರೆ ಭಾರಿ ಮರಣಾಂತಿಕ ಹಲ್ಲೆ  ಆಗುತ್ತಿತ್ತು. ಆದರೂ ಅವರನ್ನು ಮುಂದೆ ರಾಂಪುರು ಗ್ರಾಮದ ಒಳಗೆ ನುಗ್ಗದಂತೆ  ಅಡ್ಡ ನಿಂತು ಆರೋಪಿತರಿಗೆ  ಜೋರಾಗಿ, ನೀವು  ಈ ರೀತಿ ಮಾಡುವುದು ಸರಿಯಲ್ಲಾ, ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ  ಅನಾಹುತ ಆಗುವುದಕ್ಕೆ ಅವಕಾಶ ಮಾಡಬೇಡಿ ಅಂತಾ ಕೈಗಳನ್ನು ಅಡ್ಡ ಹಾಕಿ ಅವರನ್ನು ಊರೊಳಗೆ  ನುಗ್ಗದಂತೆ ಮಾಡಲು ತುಂಬಾ ಪ್ರಯತ್ನಸಿದಾಗ ಅವರೆಲ್ಲಾ ಒಮ್ಮೆಲೆ ಪಿಎಸ್ಐ ಮತ್ತು ಸಿಬ್ಬಂದಿಯವರಿಗೆ ನೀವು ಅಡ್ಡ ಬಂದರೆ ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಒಮ್ಮೆಲೆ ಬಂದು ತಳ್ಳಾಡಿದರು. ಆರೋಪಿತರಿಗೆ ಹೀಗೆಯೇ ಬಿಟ್ಟರೇ  ತಮಗೆ ಭಾರಿ ಗಾಯ ಮಾಡುತ್ತಾರೆ ಅಥವಾ ಸಾಯಿಸಿ ಬಿಡುತ್ತಾರೆ ಅಂತಾ ಖಾತ್ರಿಯಾಗಿದ್ದರಿಂದ ಪಿಎಸ್ಐ ಮತ್ತು ಸಿಬ್ಬಂದಿಯವರು ಜೋರಾಗಿ ಕೂಗುತ್ತಾ ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಅಂತಾ ಎಚ್ಚರಿಕೆ ನೀಡಿದರೂ ಸಹ ಆರೋಪಿತರು ಮಾರಾಕಾಸ್ತ್ರಗಳಿಂದ ಪೊಲೀಸರ ಕಡೆ ನುಗ್ಗತೊಡಗಿದಾಗ ಪಿಎಸ್ಐ ರವರು ತಮ್ಮಲ್ಲಿದ್ದ ಪಿಸ್ತೂಲ್ ನ್ನು ಹೊರ ತೆಗೆದು ತಮ್ಮ ಮತ್ತು ತಮ್ಮ ಜೊತೆಗೆ ಇದ್ದ ಪೊಲೀಸರ ಆತ್ಮ ರಕ್ಷಣೆಗಾಗಿ ಪಿಸ್ತೂಲ್ ನ್ನು ಆಕಾಶಕ್ಕೆ ಮುಖಮಾಡಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರಿಂದ ಆರೋಪಿತರು ಸ್ವಲ್ಪ ವಿಚಲಿತರಾಗಿ ಹಿಂದೆ ಸರಿದರು. ಪಿಎಸ್ಐ ಮತ್ತು ಹೆಚ್.ಸಿ. ರವರುಗಳು  ಸೇರಿ ಆರೋಪಿತರಲ್ಲಿ ಸನ್ನಿ ಮತ್ತು ಅವನ ಮೋಟರ್ ಸೈಕಲನ್ನು ಮತ್ತು ಬಬುಲು ಮತ್ತು ಅವನ ಮೋಟರ್ ಸೈಕಲ್ ನ್ನು ಹಿಡಿದುಕೊಂಡಾಗ ಉಳಿದ ಆರೋಪಿತರು ಓಡಿ ಹೋದರು. ಆರೋಪಿ ಬಬುಲು ಇವನನ್ನು  ಚೆಕ್ ಮಾಡಲಾಗಿ ಅವನ ಹತ್ತಿರ ಒಂದು ಕಬ್ಬಿಣದ ಪೈಪ್,  ಒಂದು ಮಚ್ಚು ಮತ್ತು ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್  ಮೋಟರ್ ಸೈಕಲ್ ನಂ ಕೆಎ-36 ಹೆಚ್-8187  ಸಿಕ್ಕಿದ್ದು, ಸನ್ನಿ ಇವನನ್ನು ಹಿಡಿದುಕೊಂಡು ಚೆಕ್ ಮಾಡಲಾಗಿ ಅವನ ಹತ್ತಿರ  ಒಂದು ಕಬ್ಬಿಣದ ಪೈಪ್ , ಒಂದು ಚೂರಿ(ಡ್ರ್ಯಾಗರ್ ) ಮತ್ತು ರಾಯಲ್ ಎನ್ ಫಿಲ್ಡ್ ಬುಲೆಟ್ ನಂಬರ್ ಇಲ್ಲದ ಗಾಡಿ ಸಿಕ್ಕಿದ್ದು ಇರುತ್ತದೆ.  ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ. 145/2018 ಕಲಂ. 143,146,147,148,279,307,353 R/W149 IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 17-11-2018 ರಂದು  ರಾತ್ರಿ ಕೆ.ಹಂಚಿನಾಳ ಗ್ರಾಮದ ಲಿಂಗಣ್ಣ ತಾತನ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಬೀಟ್ ಹೆಚ್.ಸಿ 233 ರವರಿಂದ ಪಿರ್ಯಾದಿಯು ಖಚಿತ ಭಾತ್ಮಿ ಸಂಗ್ರಹಿಸಿ ಮಾನ್ಯ ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ ಎ.ಎಸ್.ಐ (ಹೆಚ್) ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 233, 346, ಪಿಸಿ-679, 681, 18 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ದಿ:18-11-2018 ರಂದು 12-15 ಎ.ಎಂ ಕ್ಕೆ ದಾಳಿ ಮಾಡಿ ದೊಡ್ಡಪ್ಪ ತಂದೆ ಬಂಡೆ್ಪ್ಪ ಹೂನೂರು, -45, ಜಾ:ಲಿಂಗಾಯತ, :ಒಕ್ಕಲುತನ, ಸಾ: ಕೆ.ಹಂಚಿನಾಳ ಹಾಗೂ ಇತರೆ 7  ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.30,900 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 36/2018 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು, 1-00 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.265/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 18-11-2018 ರಂದು 17.00 ಗಂಟೆಗೆ ಸಂತೆಕ್ಲೂರು ಸಿಮಾಂತರದಲ್ಲಿನ ಈದ್ಗಾ ಮಸೀದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ  ಪಿರ್ಯಾದಿದಾರರು ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಆರೋಪಿ ನಂ 01 ಬಸವರಾಜ ತಂದೆ ಹನ್ಮಂತಪ್ಪ ಹೂಗಾರ, 38 ವರ್ಷ, ಒಕ್ಕಲತನ, ಲಿಂಗಾಯತ ಸಾ:ಮಾರಲದಿನ್ನಿ  ಹಾಗೂ ಇತರೆ 6 ಜನರು ಸಿಕ್ಕಿಬಿದ್ದಿದ್ದು, ಆರೋಪಿ ನಂ 08 ರಿಂದ 12 ನೇದ್ದವರು ಓಡಿ ಹೋಗಿದ್ದು, ಸಿಕ್ಕಿ ಬಿದ್ದ ಆರೋಪಿ ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-3460/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 162/2018 ಕಲಂ 87 ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.