Thought for the day

One of the toughest things in life is to make things simple:

1 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:

            ದಿನಾಂಕ: 31.08.2020 ರಂದು 19.00 ಗಂಟೆಗೆ ಯರಗುಂಟಾ ಗ್ರಾಮದಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ-01 ಖಾಜನಗೌಡ ತಂದೆ ದೇವೆಂದ್ರ, ವಯಾ: 20ವರ್ಷ, ಜಾತಿ: ಈಳಿಗೇರ, :ಕಿರಾಣಿ ವ್ಯಾಪಾರ, ಸಾ: ಯರಗುಂಟಾ  ಮತ್ತು 02 ವಿನೋದ ತಂದೆ ತಾರಣಗೌಡ, ವಯಾ: 23ವರ್ಷ, ಜಾತಿ: ಈಳಿಗೇರ, : ಕೂಲಿಕೆಲಸ, ಸಾ: ಯರಗುಂಟಾ ನೇದ್ದವರು ಸಿಕ್ಕಿದ್ದು ಅವರನ್ನು ವಿಚಾರಿಸಲು ಸದರಿಯವರ ಕಿರಾಣಿ ಅಂಗಡಿಗೆ ಆರೋಪಿ-03ನೇದ್ದವನ್ನು ತಮ್ಮ ವೈನ್ ಶಾಪನಿಂದ ಮದ್ಯವನ್ನು ತಂದು ಹಾಕುತ್ತಾನೆ ಅಂತಾ ತಿಳಿಸಿದ್ದು  ಹಾಗು ಸದರಿ ಮದ್ಯವನ್ನು ಮಾರಟ ಮಾಡಲು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆದಿರುವದಿಲ್ಲಾ ಅಂತಾ ತಿಳಿದು ಇರುತ್ತದೆ, ಆರೋಪಿತರ ವಶದಲ್ಲಿದ್ದ 1] ಕಿಂಗ್ ಫಿಶರ್ ಸ್ಟ್ರಾಂಗ್ ಬೀಯರ 650 ಎಂ.ಎಲ್.ನ. 04 ಬಾಟಲಿಗಳು .ಕಿ 600/-, 2] ಸ್ಟ್ರೋಮ್ ಕಿಂಗಫಿಷರ್ ಬೀಯರ 650 .ಎಲ್ 03 ಬಾಟಲಿ .ಕಿ 450/- 3] ಟಿನ್ ಕಿಂಗಫಿಷರ್ ಬೀಯರ 500 ಎಂ.ಎಲ್ 03 ಟಿನ್ ಗಳು .ಕಿ 360/- 4] ಟಿನ್ ಕಿಂಗಫಿಷರ್ ಬೀಯರ 330 ಎಂ.ಎಲ್ 11 ಟಿನ್ ಗಳು .ಕಿ 935/- 5] .ಸಿ ವಿಸ್ಕಿ 90 ಎಂ.ಎಲ್ 13 ಪೌಚಗಳು .ಕಿ 455/- 6] ಎಮ್.ಸಿ ರಮ್ 90ಎಂ.ಎಲ್ 05 ಪೌಚಗಳು .ಕಿ 265/-ರೂ, ಹೀಗೆ ಒಟ್ಟು 3065/-ರೂ ಬೆಲೆಬಾಳುವ ಮದ್ಯದ ಪೌಚ್, ಟಿನ್ ಹಾಗು ಬಾಟಲಿಗಳುನ್ನು ಜಪ್ತಿ ಮಾಡಿಕೊಂಡು ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಆರೋಪಿತರನ್ನು ಹಾಜರುಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದೆ.  ಅಂತಾ ಮುಂತಾಗಿ ಇರುವ ವರದಿ ಸಾರಾಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಠಾಣಾ ಗು.ನಂ.59/2020 ಕಲಂ: 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.