Thought for the day

One of the toughest things in life is to make things simple:

16 Mar 2019

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟ ಪ್ರರಕಣದ ಮಾಹಿತಿ
ದಿನಾಂಕ.15-03-2019 ರಾತ್ರಿ 8-30 ಗಂಟೆಗೆ ಶ್ರೀ ಕೆ.ಜಯಪ್ರಕಾಶ ಪಿ.ಎಸ್.. ಜಾಲಹಳ್ಳಿ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನಿಡಿದ ಸಾರಾಂಶವೇನೆಂದರೆ, ದಿನಾಂಕ 15-03-2019 ರಂದು ಸಂಜೆ 6-45 ಗಂಟೆಯ ಸುಮಾರಿಗೆ ಜಾಲಹಳ್ಳಿ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ಆರೋಪಿ ಶಿವಪ್ಪನನ್ನು ಹಿಡಿದು ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 2830 /-ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರು ಪಡಿಸಿ ಹಾಗೂ ಮಟಕಾ ಬುಕ್ಕಿ ಕೆರಿಲಿಂಗಪ್ಪನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು, ಸದರಿ ದೂರಿನ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದರಿಂದ ಇದನ್ನು ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಎನ್ ಸಿ ನಂ 03/2019 ನೇದ್ದರಲ್ಲಿ ಪಿಸಿ-41 ರವರೊಂದಿಗೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಂಡು ಬಂದು ಇಂದು ದಿನಾಂಕ 16-03-2019 ರಂದು 11-00 ಗಂಟೆಗೆ ತಂದು ಹಾಜರಪಡಿಸಿದ್ದು ಫಿರ್ಯಾದಿದಾರರು ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 36/2019 PÀ®A.78(3) PÉ ¦ PÁ¬ÄzÉ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.ಕಾಣೆಯಾದ ಪ್ರಕರಣಗಳ ಮಾಹಿತಿ.
ದಿ.15.03.2019 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರಳಾದ ಹುಲಿಗೆಮ್ಮ ಗದ್ದೆ  ಸಾ:-4-ನೇ ಮೈಲ್ ಕ್ಯಾಂಪ್ ತಾ;-ಸಿಂಧನೂರು. ಈಕೆಯು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತನ್ನ ಮಗಳು ಭವಾನಿ ವಯಾ 21 ವರ್ಷ, ಈಕೆಯು ಸಿಂಧನೂರು ನಗರದಲ್ಲಿ ದುದ್ದುಪುಡಿ ಖಾಸಗಿ ಕಾಲೇಜಿನಲ್ಲಿ  BSc IIIrd ರಲ್ಲಿ ವ್ಯಾಸಾಂಗ್ ಮಾಡಿಕೊಂಡಿದ್ದು. ದಿ.13.03.2019 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನಮ್ಮ ತಾಯಿ ಜಯಲಕ್ಷ್ಮಿ ಕೂಡಿ ಕಂಪ್ಲಿಯಲ್ಲಿ ನಮ್ಮ ತಾತನ ಶವಸಂಸ್ಕಾರ ಕುರಿತು ಹೋಗಿದ್ದಾಗ, ಮನೆಯಲ್ಲಿ ಯಾರೂ ಇಲ್ಲದಿರುವಾಗ ಮನೆಯಲ್ಲಿ ಒಬ್ಬಳೆ ಇದ್ದ ಭವಾನಿಯು ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ ಕಾಣೆಯಾಗಿರುತ್ತಾಳೆ. ಭವಾನಿಯು ಕಾಣೆಯಾದ ದಿನದಿಂದ ಇಲ್ಲಿಯವರೆಗೆ ನಮ್ಮ ಬಂದು ಬಳಗ, ಸಂಬಂಧಿಕರು ಹಾಗು ಸ್ನೇಹಿತರಲ್ಲಿ ಹೋಗಿ ಹುಡುಕಾಡಿ ವಿಚಾರಿಸಿದ್ದು ಭವಾನಿಯು ಪತ್ತೆಯಾಗದೆ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ.ಕಾಣೆಯಾದ ನನ್ನ ಮಗಳು ಭವಾನಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.37/2019. ಕಲಂ. ’’ಹುಡುಗಿ ಕಾಣೆ’’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ಕಾಣೆಯಾದವಳ ಚಹರೆ ಪಟ್ಟಿ
ಕೆಂಪು ಮೈಬಣ್ಣ, ದುಂಡು ಮುಖ, ಎತ್ತರ 5 ಫೀಟ್, ಸದೃಡ ಮೈಕಟ್ಟು  ಹೊಂದಿರುತ್ತಾಳೆ