Thought for the day

One of the toughest things in life is to make things simple:

20 Nov 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:

       ದಿನಾಂಕ: 19/11/2020 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದುದಾರಳು ಠಾಣೆಗೆ ಹಾಜರಾಗಿ ಲಿಖಿತವಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಫಿರ್ಯಾದಿದಾರಳ ಗಂಡನಾದ ವೆಂಕಟೇಶ ಇತನು ದಿನಾಂಕ:17.11.2020 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಬಜಾರಕ್ಕೆ ಹೋಗಿ ಚಿಕನ್ ತಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಮದ್ಯಾಹ್ನ ಆದರೂ ಮನೆಗೆ ಬರದೇ ಇರುವುದರಿಂದ ಫಿರ್ಯಾದಿದಾರಳು ತನ್ನ ಗಂಡನಿಗೆ ಪೋನ ಮಾಡಿದಾಗ ಮಸ್ಕಿಯಲ್ಲಿ ಇರುತ್ತೇನೆ ಅಂತಾ ಹೇಳಿದ್ದು ನಂತರ ಅದೇ ದಿನ ಸಂಜೆ ಆತನ ಗೆಳೆಯರಿಗೆ ಕೇಳಿದಾಗ ಕವಿತಾಳದಲ್ಲಿ ನೋಡಿದ್ದು ಇರುತ್ತದೆ ಎಂದು ಹೇಳಿದ್ದು ಹಾಗೂ ಫಿರ್ಯಾದಿದಾರಳು ತನ್ನ ಗಂಡನ ಬಗ್ಗೆ ತಮ್ಮ ಸಂಬಂದಿಕರಲ್ಲಿ ಪೋನ ಮಾಡಿ ಕೇಳಲಾಗಿ ಅಲ್ಲಿಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಮತ್ತು ಇಲ್ಲಿಯವರೆಗೆ ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಫಿರ್ಯಾದಿದಾರಳ ಗಂಡ ವೆಂಕಟೇಶನು ಚಿಕನ್ ತರಲು ಬಜಾರಕ್ಕೆ ಹೋಗಿ ವಾಪಸ ಮನೆಗೆ ಬರದೇ ಕಾಣೆಯಾಗಿದ್ದು ಇರುತ್ತದೆ. ಕಾರಣ ತನ್ನ ಗಂಡನನ್ನು ಹುಡುಕಿ ಕೊಡಲು ವಿನಂತಿ ಹಾಗೂ ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ PÀ«vÁ¼À ಠಾಣಾ ಗುನ್ನೆ ನಂ. 85/2020 ಕಲಂ, ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿgÀÄvÁÛgÉ.

 

 


ವಾಹನದ ಪರವಾನಿಗೆ ವಿರುದ್ದ ದಾಖಲಾದ ಪ್ರಕರಣದ ಮಾಹಿತಿ.

            1)ದಿನಾಂಕ:19.11.2020 ರಂದು ಬೆಳಿಗ್ಗೆ 08.40 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ 298 & ಪಿ.ಸಿ-421 ರವರೊಂದಿಗೆ  ಕವಿತಾಳ ಪಟ್ಟಣದ ರಾಯಚೂರು ರಸ್ತೆಯ ಮಲ್ಲದಗುಡ್ಡ ಕ್ರಾಸ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಆರೋಪಿ ಯಂಕಪ್ಪ ಇತನು ತನ್ನ ಮಹೇಂದ್ರ ಬುಲೋರಾ ಪೀಕಪ್ ವಾಹನ ನಂ. ಕೆ.ಎ-36/ಬಿ-9713 ನೇದ್ದರಲ್ಲಿ ಜನರನ್ನು ಹತ್ತಿಸಿಕೊಂಡು ಅತೀವೇಗವಾಗಿ  & ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ  ನಡೆಸಿಕೊಂಡು ಬಂದ್ದಿದ್ದರಿಂದ ಸದರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಹಾಗೂ ಚಾಲಕನನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ಪಂಚನಾಮೆ ಸಾರಾಂಶದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ. 84/2020 ಕಲಂ, 279, 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

            2) ದಿನಾಂಕ:19.11.2020 ರಂದು ರಾತ್ರಿ 7.50 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ- 104, 500 ರವರೊಂದಿಗೆ  ಕವಿತಾಳ ಪಟ್ಟಣದ ರಾಯಚೂರು ರಸ್ತೆಯ ಮಲ್ಲದಗುಡ್ಡ ಕ್ರಾಸ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಆರೋಪಿ ಕರಿಯಪ್ಪ ಇತನು ತನ್ನ ಮಹೇಂದ್ರ ಬುಲೋರಾ ಪೀಕಪ್ ವಾಹನ ನಂ. ಕೆ.-36/ಬಿ-0896 ನೇದ್ದರಲ್ಲಿ ಜನರನ್ನು ಹತ್ತಿಸಿಕೊಂಡು ಅತೀವೇಗವಾಗಿ & ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ  ನಡೆಸಿಕೊಂಡು ಬಂದ್ದಿದ್ದರಿಂದ ಸದರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಹಾಗೂ ಚಾಲಕನನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ಪಂಚನಾಮೆ ಸಾರಾಂಶದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ. 87/2020 ಕಲಂ, 279, 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಹಿಳೆ ಕಾಣೆ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

            ಫಿರ್ಯಾದಿದಾರರು ಹನುಮಂತಿ ಗಂ: ನಾಗಪ್ಪ ವಯಸ್ಸು 40 ವರ್ಷ ಜಾ: ಮಾದಿಗ, ಉದ್ಯೋಗ ಕೂಲಿಕೆಲಸ ಸಾ: ಜೇಗರಕಲ್ ಮಲ್ಲಾಪೂರ್ ತಾ: ರಾಯಚೂರು. ಫೋ:8861164637 ಇಂದು ದಿನಾಂಕ: 19.11.2020 ರಂದು ಸಂಜೆ 6.00 ಗಂಟೆಗೆ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದು ನೀಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರರ ಮಗಳಾದ ಅನಿತಾ 18 ವರ್ಷ ಈಕೆಯು ತನ್ನ ಮಗನಾದ ನರಸಿಂಹ 12 ವರ್ಷ ಈತನೊಂದಿಗೆ ದಿನಾಂಕ: 16.11.2020 ರಂದು ಮದ್ಯಾಹ್ನ 3.00 ಮಲ್ಲಾಪೂರ ಗ್ರಾಮದಲ್ಲಿ ಮಲ್ಲಯ್ಯನ ಜಾತ್ರೆಗೆ ಹೋದವರು ನಂತರ ಅದೇ ದಿನ ರಾತ್ರಿ 8.00 ಗಂಟೆಯ ಸುಮಾರಿಗೆ ನ್ನ ಮಗ ನರಸಿಂಹನು ಅಳುತ್ತಾ ಮನೆಗೆ ವಾಪಸ್ ಬಂದನು ಆಗ ತಾವು ಅವನಿಗೆ ವಿಚಾರಿಸಲು ಅವನು ಮಗೆ ಅಳುತ್ತಾ ತಿಳಿಸಿದ್ದೇನೆಂದರೆ ಜಾತ್ರೆಯಲ್ಲಿ ಅನಿತಕ್ಕ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಅಂತಾ ತಿಳಿಸಿದ್ದು, ನಂತರ ತಾವು ಗಾಭರಿಗೊಂಡು ಜಾತ್ರೆಯಲ್ಲಿ ಹಾಗೂ ಜೇಗರಕಲ್ ಮತ್ತು ಮಲ್ಲಾಪೂರ ಗ್ರಾಮಗಳಲ್ಲಿ ಮತ್ತು ತಮ್ಮ ಬಂಧು-ಬಳಗ ರವರಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೂ ಸಿಕ್ಕಿರುವದಿಲ್ಲ ಇದ್ದರಿಂದ ಈಗ ತಡವಾಗಿ ಬಂದು ದೂರು ನೀಡಿದ್ದು ತನ್ನ ಮಗಳು ಅನಿತಾಳನ್ನು ಹುಡುಕಿಸಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

    ದಿನಾಂಕ 18/11/2020 ರಂದು ಮುರಾನಪೂರ ತಾಂಡಾ (ಕ್ಯಾಂಪ್) ದಲ್ಲಿ ಆಂಜಿನೇಯ ಗುಡಿಯ ಸಾರ್ವಜನಿಕ ಸ್ಥಳದಲ್ಲಿ  ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾನ್ಯ ಸಿ.ಪಿ.ಐ. ಮಾನವಿ ರವರು  ಸಿಬ್ಬಂದಿಯವರನ್ನು ಹಾಗೂ  ಪಂಚರನ್ನು ಕರೆದುಕೊಂಡು ಹೋಗಿ ಇಂದು ದಿನಾಂಕ 18/11/2020 ರಂದು ಮದ್ಯಾಹ್ನ 3.30 ಗಂಟೆಗೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿದಾಗ ಮೇಲ್ಕಂಡ ಆರೋಪಿತರ ಪೈಕಿ  1 ರಿಂದ 8   ರವರುಗಳು ಸಿಕ್ಕಿ ಬಿದ್ದಿದ್ದು  ಮತ್ತು ಕೆಲವರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿಬಿದ್ದವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  22,550/- ರೂ ಗಳು 2]  52 ಇಸ್ಪಿಟ್ ಎಲೆಗಳನ್ನು  ಜಪ್ತು ಮಾಡಿಕೊಂಡು ಸೆರೆಸಿಕ್ಕವರಿಗೆ  ಓಡಿ ಹೋದವರ ಹೆಸರನ್ನು ಕೇಳಲಾಗಿ  ಅವರು  ಓಡಿ ಹೋದವರ ಪೈಕಿ  ನಮ್ಮ ತಾಂಡಾದ  ನಮ್ಮ ಜನಾಂಗದ ಸುರೇಶ ತಂದೆ ಬೋಜ್ಯಾ ನಾಯ್ಕ, , ಹೊನ್ನಪ್ಪ ತಂದೆ ಡೂಂಗ್ರ್ಯಾ, ವೆಂಕಟೇಶ ತಂದೆ ಧರ್ಮ್ಯಾ  (ಆರೋಪಿ ನಂ 9 ರಿಂದ 11)  ರವರುಗಳು ಇದ್ದರು  ಅಂತಾ ತಿಳಿಸಿ ಇನ್ನುಳಿದವರ ಹೆಸರು  ವಿಳಾಸ ತಮಗೆ ಸರಿಯಾಗಿ ತಿಳಿದಿರುವದಿಲ್ಲ ಅಂತಾ ಹೇಳಿದ್ದು ಇರುತ್ತದೆ.  ಅಲ್ಲದೇ  ಓಡಿ ಹೋದವರು ಇಸ್ಪಿಟ್ ಆಟ  ಆಡಲು ತೆಗೆದುಕೊಂಡು ಬಂದಿದ್ದ 7  ಮೋಟಾರ್ ಸೈಕಲ್ ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು  ಸದರಿ 7 ಮೋಟಾರ್ ಸೈಕಲ್ ಗಳ  ಅಂದಾಜು ಕಿಮ್ಮತ್ತು 1,65,000/- ರೂ ಗಳು ಆಗುತ್ತಿದ್ದು ಅವುಗಳನ್ನು ಸಹ ಕೇಸಿನ ಪುರಾವೆ ಕುರಿತು ಜಪ್ತು ಮಾಡಿಕೊಂಡು ಇಂದು ಮದ್ಯಾಹ್ನ 3.30 ಗಂಟೆಯಿಂದ ಸಾಯಂಕಾಲ 4.30 ಗಂಟೆಯವರೆಗೆ  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು  ಸೆರೆಸಿಕ್ಕ 8  ಜನ ಆರೋಪಿತರು. ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ವಾಪಾಸ  ಸಾಯಂಕಾಲ 5.30 ಗಂಟೆಗೆ  ಠಾಣೆಗೆ ಬಂದು ತಮ್ಮ ವರದಿಯನ್ನು ತಯಾರಿಸಿ ಸಾಯಂಕಾಲ 6.00 ಗಂಟೆಗೆ ಮುಂದಿನ ಕ್ರಮ ಜರುಗಿಸುವಂತೆ  ಸೂಚಿಸಿ ಮೂಲ ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ 8 ಜನ ಆರೋಪಿತರಿಗೆ  ವಶಕ್ಕೆ ನೀಡಿದ್ದು ಇರುತ್ತದೆ. ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ  50/2020 ರಲ್ಲಿ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 18/11/2020 ರಂದು ರಾತ್ರಿ 9.30 ಗಂಟೆಗೆ  ಮಾನವಿ ಠಾಣೆ ಗುನ್ನೆ ನಂ 192/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.