Thought for the day

One of the toughest things in life is to make things simple:

10 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕೊಲೆ ಪ್ರಯತ್ನ ಪ್ರಕರಣದ ಮಾಹಿತಿ.
ದಿನಾಂಕ: 09-06-2019 ರಂದು 2150 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತಗೊಂಡಿದ್ದು ಆಸ್ಪತ್ರೆಗೆ ಬೇಟಿನೀಡಿ ಫಿರ್ಯಾಧಿದಾರರಾದ ಗಾಯಾಳುವಿನ ಅಣ್ಣ ಮಹ್ಮದ್ ಫಯಾಜ್ ತಂದೆ ಮಹ್ಮದ್ ಶಾಲಂ, ಇವರ ಲಿಖಿತ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ತಮ್ಮನಾದ ಮಹ್ಮದ್ ಅಯಾಜ್ ಈತನು ದಿನಾಂಕ:09-06-2019 ರಂದು 21000 ಗಂಟೆಯ ಸುಮಾರಿಗೆ ಹಬೀಬಿಯಾ ಮಸೀದಿ ಹತ್ತಿರ ಇರುವ ಮುನ್ನಾ ಮಟನ್ ಶಾಪಗೆ ಹೋಗಿ ಅಲ್ಲಿ ತಾನು ಪ್ರೀತಿಸುವ ಹುಡುಗಿಗೆ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್ ಈತನು ಎಸ್.ಎಮ್. ಎಸ್. ಮಾಡುತ್ತಿರುಬಗ್ಗೆ ಶಂಸಯಬಂದು ಕೇಳಲು ಹೋದಾಗ ಗುಲಾಂ ಮಹ್ಮದ್ ಈತನು ತನ್ನ ತಮ್ಮನಿಗೆ ಅವಾಚ್ಯ ವಾಗಿ ಬೈದು ಕೊಲೆ ಮಾಡುವ ಉದ್ದೇಶ ದಿಂದ ಮಟನ್ ಕಡಿಯುವ ಕತ್ತಿಯಿಂದ ಹೊಟ್ಟಯ ಎಡಭಾಗಕ್ಕೆ ಇರಿದು ರಕ್ತಗಾಯ ಗೊಳಿಸಿ ಕೊಲೆಮಾಡಲು ಪ್ರಯತ್ನಿಸಿದ್ದು ಈ ವಿಷಯವು ಮಹಮ್ಮದ್ ಸಾದಿಕ ಪಾಷಾ ಇವರಿಂದ ತಿಳಿದುಕೊಂಡಿದ್ದು ತನಗೆ ಸರಿಯಾಗಿ ಬರೆಯಲು ಬಾರದಿರುವುದರಿಂದ ತನ್ನ ಪರಿಚಯದವರಾದ ರವಿ ತಂದೆ ಹನುಮಂತಪ್ಪ ಇವರಿಂದ  ದೂರನ್ನು ಬರೆಯಿಸಿಕೊಟ್ಟಿದ್ದು ಕಾರಣ ತನ್ನ ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್, ವಯಾ:20 ವರ್ಷ, ಮುಸ್ಲೀಂ, ಚಿಕನ್ ವ್ಯಾಪಾರ, ಸಾ:ಎಲ್.ಬಿ.ಎಸ್.ನಗರ ರಾಯಚೂರು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿಯನ್ನು ಪಡೆದುಕೊಂಡು 2330 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿಯ  ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.38/2019, ಕಲಂ.307,504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 09.06.2019 ರಂದು 3.30 ಗಂಟೆಗೆ ಆರೋಪಿ ಎಚ್.ಎ. ರವಿಶಂಕರ ತಂ: ಎಚ್. ಆಂದಾನಪ್ಪ ವಯ: 55 ವರ್ಷ, ಜಾ: ಲಿಂಗಾಯತ್, ಉ: ವಕೀಲವೃತ್ತಿ, ಸಾ: ಮನೆ ನಂ: 17ಎ, 1ನೇ ಕ್ರಾಸ್, ರಾಜೇಂದ್ರನಗರ, ಶಿವಮೊಗ್ಗ ಈತನ್ನ ಮಾರುತಿ ಸುಜುಕಿ ರಿಟ್ಸ್ ಕಾರ್ ನಂ: KA20 Z 7428 ನೇದ್ದನ್ನು ಶಕ್ತಿನಗರ ಕಡೆಯಿಂದಾ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ತನ್ನ ಸಂಪೂರ್ಣ ಬಲಬದಿಗೆ ಬಂದು ರಸ್ತೆಯ ಎಡಬದಿಗೆ ಹೊರಟಿದ್ದ ಫಿರ್ಯಾದಿ ನರಸಿಂಹಲು ತಂ: ತಾಯಪ್ಪ ವಯ: 24 ವರ್ಷ, ಜಾ: ಕುರುಬರ್, ಉ: ಅಪಿ ಆಟೋ ಚಾಲಕ ಸಾ: ರಾಮನಗರ, ಯರಮರಸ್, ತಾ: ರಾಯಚೂರು ರವರ ಅಪಿ ಗೂಡ್ಸ ಆಟೋ ನಂ: KA36A7411 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಅಪಿ ಗೂಡ್ಸ ಆಟೋ ಹಾಗೂ  ಮಾರುತಿ ರಿಟ್ಸ್ ಕಾರಿನಲ್ಲಿದ್ದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 80/2019 PÀ®A. 279, 337, 338 ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ :09-06-2019 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿ ಈರಣ್ಣ ತಂದೆ ಸಣ್ಣ ಹನುಮಂತ ವಯಾ 36 ವರ್ಷ ಜಾ;ಮಾದಿಗ ಉ;ಪೆಟ್ರೋಲ್ ಟ್ಯಾಂಕರ್ ಲಾರಿ ಮಾಲಿಕ ಸಾ;ಜನತಾ ಕಾಲೋನಿ ಆಶಾಪೂರು ರೋಡ್ ರಾಯಚೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;07-06-2019 ರಂದು ಬೆಳಗಿನ ಜಾವ 01;30 .ಎಂ.ಕ್ಕೆ ಇಂಡಿಯನ್ ಪೆಟ್ರೋಲ್ ಮತ್ತು ಡಿಸೆಲ್ ಲೋಡ್ ಪೆಟ್ರೋಲ್ ಟ್ಯಾಂಕರ್ ಲಾರಿ ನಂ-ಎಪಿ-02/ಡಬ್ಲೂ-7743 ನ್ನೇದ್ದು ರಾಯಚೂರದಿಂದ ಶ್ರೀರಾಮ ನಗರ ಕ್ಯಾಂಪಿಗೆ ಹೋಗುವಾಗ ರಾಯಚೂರು-ಸಿಂಧನೂರು ಮುಖ್ಯ ರಸ್ತೆಯ ಸಿಂಧನೂರು ಮುಚ್ಚಳ ಕ್ಯಾಂಪಿನ ಭಗವಾನ್ ಮಹಾವೀರ ಗೋಶಾಲ ಮುಂದಿನ ರಸ್ತೆಯ ಹತ್ತಿರ ಸಿಂಧನೂರು ಕಡೆಯಿಂದ ವಾಹನವು ತನ್ನ ಮುಂದಿನ ವಾಹನಕ್ಕೆ ಓವರ್ ಟೇಕ್ ಮಾಡಿ ಬಂದಿದ್ದರಿಂದ ಎದುರುಬರುವ ವಾಹನಕ್ಕೆ ಟಕ್ಕರ್ ಆಗುತ್ತದೆ ಅಂತಾ ನಮ್ಮ ವಾಹನವನ್ನು ರಸ್ತೆಯ ಎಡಗಡೆ ತೆಗೆದುಕೊಂಡಿದ್ದರಿಂದ ನಮ್ಮ ವಾಹನ ಪೂಲ್ ಗೆ ಟಕ್ಕರಕೊಟ್ಟು ಎಡಗಡೆ ನಾಲೆಯಲ್ಲಿ ಓರೆಯಾಗಿ ಬಿದ್ದಿದ್ದರಿಂದ ಆರೋಪಿ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ. ಕ್ಲೀನರ್ ಭೀಮಣ್ಣನಿಗೆ ಬಲಗಡೆ ಹಣೆಗೆ ರಕ್ತಗಾಯ, ಬಲಗಾಲು ಮೊಣಕಾಲಿಗೆ ಒಳಪೆಟ್ಟಾಗಿರುತ್ತದೆ. ಲಾರಿಯ ಮುಂದಿನ ಕ್ಯಾಬೀನ್ ಜಖಂಗೊಂಡು,ಚೆಸ್ಸಿ ಬೆಂಡಾಗಿದ್ದು,ಇಂಜನ್ ಡ್ಯಾಮೇಜಾಗಿ,ಟ್ಯಾಂಕರ್ ಲಾರಿಯ ಎಡಭಾಗ  ಬೆಂಡಾಗಿ ಟ್ಯಾಂಕರ್ ನಿಂದ ಪೆಟ್ರೋಲ್,ಡಿಜೇಲ್ ಸೋರುತ್ತಿತ್ತು ಲಾರಿ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಈ ಘಟನೆ ಜರುಗಿದ್ದು ನಮ್ಮ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ: 43/2019 ಕಲಂ:279,337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿಇರುತ್ತಾರೆ.