Thought for the day

One of the toughest things in life is to make things simple:

25 Aug 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಬಕಾರಿ ಪ್ರಕರಣ ಮಾಹಿತಿ.
ದಿನಾಂಕ 24.08.2019 ರಂದು 19-30 ಗಂಟೆಗೆ ಎ.ಎಸ್.ಐ ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತಳನ್ನು ಹಾಜರುಪಡಿಸಿ ಜ್ಞಾನ ಪತ್ರ ನೀಡಿದ್ದು ಸಾರಾಂವೇನೆಂದರೆ, ತಾವು ದಿನಾಂಕ: 24.8.2019 ರಂದು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಜಲಾಲ ನಗರದಲ್ಲಿ ಯಾರೋ ಒಬ್ಬ ಹೆಣ್ಣು ಮಗಳು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2]ಶ್ರೀನಿವಾಸ ಹಾಗು ಸಿಬ್ಬಂದಿಯವರಾದ  ಅಹ್ಮದ್, ಹೆಚ್.ಸಿ.77, ಹನುಮಂತ ನಾಯಕ ಹೆಚ್.ಸಿ. 360, ಭೀಮಾರತಿ ಮಪಿಸಿ 1050, ಮತ್ತು ಜೀಪಚಾಲಕ ಮೊಹಮ್ಮದ್ ಜಮೀರುದ್ದೀನ ಹೆಚ್.ಸಿ. 126 ರವರೊಂದಿಗೆ ಜಲಾಲನಗರದ ನೀರಿನ ಟ್ಯಾಂಕಿನ ಹತ್ತಿರ ಹೋಗಿ ಪಂಚರು ಮತ್ತು ಸಿಬ್ಬಂದಿಯರೊಂದಿಗೆ 6-30 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟ ಮಾಡುವ ಹೆಣ್ಣು ಮಗಳನ್ನು  ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಪದ್ಮಾ ಗಂಡ ಈರೇಶ, 35 ವರ್ಷ, ಜಾ. ನಾಯಕ, ಉ. ಬೇಲ್ದಾರ ಕೆಲಸ, ಸಾ. ಜಲಾಲ ನಗರ, ರಾಯಚೂರು. ಅಂತಾ ಹೇಳಿ ತಾನು ಸದರಿ ಸೇಂದಿಯನ್ನು ಆಂದ್ರದ ನಂದಿನಿಯಿಂದ ತೆಗೆದುಕೊಂಡು ಬಂದು ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು. ಘಟನಾ ಸ್ಥಳದಲ್ಲಿ 1 ಪ್ಲಾಸ್ಟಿಕ್ ಕೊಡದಲ್ಲಿದ್ದ 15 ಲೀ ಸೇಂದಿ ಅ.ಕಿ.ರೂ.150/- ಇದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸೇಂದಿ ತೆಗೆದು 180 ಎಂಎಲ್ ನ ಬಾಟಲಿಯಲ್ಲಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ  ಒಙಕಖಖಅಖ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಪೊಲೀಸರು ತಮ್ಮ ತಾಬಾಕ್ಕೆ ತೆಗೆದುಕೊಂಡರು. ಮತ್ತು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶಪಡಿಸಲಾಯಿತು. ಸಾಯಂಕಾಲ 6-30 ಗಂಟೆಯಿಂದ 7-15 ಗಂಟೆವರೆಗೆ ಸ್ಥಳದಲ್ಲಿಯೆ ಕುಳಿತು ಲ್ಯಾಪಟಾಪನಲ್ಲಿ ಬೆರಳಚ್ಚು ಮಾಡಿ ಪೂರೈಸಿ 7-30 ಗಂಟೆಗೆ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆಯೊಂದಿಗೆ ಆರೋಪಿತಳನ್ನು ಮುದ್ದೆಮಾಲನ್ನು ತಂದು ಮುಂದಿನ ಕ್ರಮಕುರಿತು ಹಾಜರುಪಡಿಸಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ಸಾರಾಂಸದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.61/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ತಪ್ಪು ಸು¢Ý ಪ್ರಕರಣದ ಮಾಹಿತಿ.
ದಿನಾಂಕ 24.08.2019 ರಂದು ರಾತ್ರಿ 8-15 ಗಂಟೆಗೆ ನಾನು ಎಸ್.ಹೆಚ್.ಓ ಕರ್ತವ್ಯದಲ್ಲಿದ್ದಾಗ ಪಿಎಸ್ಐ ರವರಾದ ಶ್ರೀ ದಾದಾವಲಿ.ಕೆ.ಹೆಚ್ ಪಿಎಸ್ಐ (ಕಾ.ಸು) ರವರು ಠಾಣೆಯಲ್ಲಿ ಹಾಜರಾಗಿ ನನಗೆ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿದ್ದ ದೂರನ್ನು ನೀಡಿದ ಸಂಕ್ಷಿಪ್ತ ಸಾರಾಂಶ ಏನೆಂದರೆ, ಈಗ್ಗೆ ಮೂರು-ನಾಲ್ಕು ದಿನಗಳ ಹಿಂದೆ ವಿಶ್ವಕರ್ಮ ಸಮುದಾಯದ ಮಾರುತಿ ಬಡಿಗೇರ್ ವಾಟ್ಸ್ ಆಪ್ ನಲ್ಲಿ ಒಂದು ವಿಡಿಯೋ ಮೂಲಕ ವಿಶ್ವಕರ್ಮ ಸಮುದಾಯದವರಿಗೆ ತಿಳಿಸಿದ್ದೆನೆಂದರೆ ನವೋದಯ ಪ್ಯಾರಾ ಮೆಡಿಕಲ್ ನಲ್ಲಿ ಓದುತ್ತಿದ್ದು  ರಾಯಚೂರು ತಾಲೂಕಿನ ಗಣಮೂರು ಗ್ರಾಮದ ಕು.ಮಮತಾ ಈಕೆಯು ತುಂಗಭದ್ರ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಕರ್ನೂಲ್ ನಲ್ಲಿ ಆಕೆಯ ಶವವು ಬೆಳಿಗ್ಗೆ 10-30 ಗಂಟೆಗೆ ಪತ್ತೆಯಾಗಿದ್ದು ಇದು ಮಧುಪತ್ತರ್ ಕೇಸಿನಂತೆ ಅಂತೆ ಇದ್ದು ಇದು ಆತ್ಮಹತ್ಯೆವೋ ಕೊಲೆವೋ ಅಂತಾ ಅರ್ಥವಾಗುತ್ತಿಲ್ಲ ಆದಕಾರಣ ಮುಂದಿನ ಸೆಪ್ಟಂಬರ್ ತಿಂಗಳ 17 ನೇ ತಾರೀಕದಂದು ನಡೆಯುವ  ನಮ್ಮ ವಿಶ್ವಕರ್ಮ ಜಯಂತಿಯ ಆಚರಣೆಯ ಕಾಲಕ್ಕೆ ಸಮುದಾಯದವರು ಯಾರು ಇರಬಾರದು ಸರ್ಕಾರದವರು ಮಾತ್ರ ಜಯಂತಿ ಆಚರಣೆ ಮಾಡಲಿ ಸುಮಾರು 4 ತಿಂಗಳಗಳಲ್ಲಿ ಇಬ್ಬರು ಹುಡುಗಿಯರು ಆತ್ಮಹತ್ಯೆ ಮಾಡಿದ್ದರಿಂದ ನಮ್ಮ ಸಮುದಾಯದವರು ಜಯಂತಿಗೆ ಹಾಜರಾಗಬಾರದು ಅಂತಾ ವಾಟ್ಸ್ ಆಪ್ ಮೂಲಕ ಸಾರ್ವಜನಿಕರಿಗೆ ತಾನೇ ವಿಡಿಯೋದಲ್ಲಿ ಮಾತನಾಡಿ ಭಿತ್ತರಗೊಳಿಸಿದ್ದು ಕು.ಮಮತಾ ತಂದೆ ಈರಣ್ಣ :17, ನವೋದಯ ಪ್ಯಾರಾ ಮೆಡಿಕಲ್ ಇವರ ಬಗ್ಗೆ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ 108/2019 ಕಲಂ 376, 302 ಐಪಿಸಿ ಮತ್ತು ಕಲಂ 3, 4 ಪೊಕ್ಸೋ ಪ್ರಕರಣದಲ್ಲಿ ದಾಖಲಾಗಿದ್ದು ಸದರಿ ಪೋಕ್ಸೋ ಪ್ರಕರಣದಲ್ಲಿದ್ದ ಹುಡುಗಿಯರ ಹೆಸರನ್ನು ಕಾನೂನು ರೀತಿಯಲ್ಲಿ ಬಹಿರಂಗ ಪಡಿಸಬಾರದು ಮತ್ತು ದಿನಾಂಕ 17.09.2019 ರಂದು ನಡೆಯುವ ವಿಶ್ವಕರ್ಮ ಜಯಂತಿಗೆ ತಮ್ಮ ಸಮುದಾಯದ ಭಾಂದವರು ಹಾಜರಾಗಬಾರದೆಂದು ಸಾರ್ವಜನಿಕರಲ್ಲಿ ತಪ್ಪು ಸಂದೇಶ ವನ್ನು ವಾಟ್ಸ್ ಆಪ್ ಮೂಲಕ ವಿಡಿಯೋ ಭಿತ್ತರಿಸಿದ್ದ ಬಗ್ಗೆ ದೂರಿನ ಸಾರಾಂಶ ಇದ್ದು ದೂರಿನ ಸಾರಾಂಶ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 87/2019 ಕಲಂ 228(ಎ) IPC ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.