Thought for the day

One of the toughest things in life is to make things simple:

14 Sept 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

J¸ï.¹/J¸ï.n. ¥ÀæPÀgÀtUÀ¼À ªÀiÁ»w.
ದಿನಾಂಕ: 13-09-2019 ರಂದು  5-30 P.M  ಗಂಟೆಗೆ ಪಿರ್ಯಾದಿ ಶ್ರೀಮತಿ. ಗಂಗಮ್ಮ ಗಂಡ ಹನುಮಂತಪ್ಪ ಬೆನ್ನೂರು, ವಯ-45, ಜಾ: ನಾಯಕ, ಉ: ಒಕ್ಕಲುತನ, ಸಾ: ರತ್ನಾಪುರ ಹಟ್ಟಿ , ತಾ: ಮಸ್ಕಿ ಈಕೆಯು ಠಾಣೆಗೆ ಹಾಜರಾಗಿ ಗಣಕೀಕೃತ ಟೈಪ್ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿಯ ಮಗ ಮಾರುತಿ ವಯ-18 ವರ್ಷ ಈತನು ಇಂದು ಬೆಳಿಗ್ಗೆ 10-00 ಗಂಟೆ ಸುಮಾರು ದನಗಳನ್ನು ಮೇಯಿಸಲು ಊರಿನ ರಸ್ತೆಯಲ್ಲಿ  ಹೊಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ನಂ.1 ಈತನು ತನ್ನ ಮೋಟಾರ ಸೈಕಲ ಮೇಲೆ ವೇಗವಾಗಿ ಬಂದು ಜೋರಾಗಿ ಹಾರ್ನ  ಹೊಡೆದು ಲೇ ಬ್ಯಾಡರ ಸೂಳೇ ಮಗನೇ ದಾರಿ ಬಿಟ್ಟು ದನಗಳನ್ನು ಹೊಡೆದುಕೊಂಡು ಹೋಗು ಅಂತಾ ಬೈದಾಗ ಮಾರುತಿಯು ಆತನಿಗೆ ನನಗೆ ಅವಾಚ್ಯವಾಗಿ ಬೈಯಬೇಡ ದಾರಿ ಸೈಡ ಮಾಡಿಕೊಡುತ್ತೇನೆ ಅಂತಾ ಹೇಳಿದ್ದಕ್ಕೆ  ಆರೋಪಿತನು ಸದರಿಯವನಿಗೆ ಲೇ ಸೂಳೇ ಎದುರು ಮಾತಾಡ್ತಿಯಾ ಅಂತಾ ಕೈಯಿಂದ ಕಪಾಳಕ್ಕೆ ಹೊಡೆದು ಹೋದನು.

ನಂತರ ಗಾಯಾಳು ತನ್ನ ಮನೆಯ ಮುಂದೆ ದನಗಳನ್ನು ಮೇಯಿಸುತ್ತಿರುವಾಗ ಆರೋಪಿತರು ತನ್ನ ಮನೆಯ ಕಡೆಗೆ ಬರುವುದನ್ನು ನೋಡಿ, ಗಾಯಾಳು ಹೆದರಿಕೊಂಡು ಮನೆಯೊಳಗೆ ಹೋಗಿದ್ದು, ಆರೋಪಿತರೆಲ್ಲರೂ ಏಕೋದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪಿರ್ಯಾದಿಯ ಮನೆಯೊಳಗೆ ಅತಿಕ್ರಮ ಪ್ರವೇಶಿಸಿ -2 & -3 ರವರು ಸೂಳೇ ಮಗ  ಇಲ್ಲಿಯೇ ಕೂತಿದಾನೆ ಬನ್ರೀ ಅಂತಾ ಗಾಯಾಳು ಮಾರುತಿಯ ಅಂಗಿ ಹಿಡಿದು ಅವನಿಗೆ ಹೊರಗೆ ಎಳೆತಂದಾಗ ಬಿಡಿಸಲು ಹೋದ ಪಿರ್ಯಾದಿಗೆ ತಡೆದು ನಿಲ್ಲಿಸಿ, -6 ನೇದ್ದವನು ಬ್ಯಾಡ್ರದು ಬಹಳ ಆಗ್ಯದ ಊರಗ 10 ಮನಿ ಇಲ್ಲ, ಧೀಮಾಕ ತೋರಸ್ಥರ, ಇವರನ್ನು ಊರಿಂದ ಹೊರಗ ಹಾಕಬೇಕು ಇವನನ್ನ ಇಲ್ಲಿಯೇ ಸಾಯಿಸಿಬಿಡಿ ಅಂತಾ ಉಳಿದ ಆರೋಪಿತರಿಗೆ ಪ್ರಚೋದನೆ ನೀಡಿದ್ದರಿಂದ ಉಳಿದ ಆರೋಪಿತರೆಲ್ಲರೂ ಗಾಯಾಳು ಮಾರುತಿಯ ಹೊಟ್ಟೆಗೆ, ಬೆನ್ನಿಗೆ ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದ್ದು , ಜಗಳ ಬಿಡಿಸಲು ಹೋದ ಪಿರ್ಯಾದಿಗೆ -1 ವಿದ್ಯಾರಾಜ ತಂದೆ ಯಂಕಪ್ಪ  ಸೂಜಿ ನೇದ್ದವನು ತಡೆದು ಆಕೆಗೆ ಹೊಡೆಬಡೆ ಮಾಡಿ, ಕೈ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವಮಾನಗೊಳಿಸಿದ್ದು, ನಂತರ -3 ಸಣ್ಣ ಹನುಮಂತ ತಂದೆ ಯಂಕಪ್ಪ ಸೂಜಿ , -5 ನರಿಯಪ್ಪ ತಂದ ಸಣ್ಣ ಹನುಮಂತ ನರಿಯರು , -6  ರವರು ಕಟ್ಟಿಗೆ, ಕೊಡಲಿ, ರಾಡನಿಂದ ಮಾರುತಿಯ ತಲೆಯ ಬಲಭಾಗದ ಹಿಂಬದಿಗೆ ಮತ್ತು ಬಲಭಾಗಕ್ಕೆ ಜೋರಾಗಿ ಹೊಡೆದಿದ್ದರಿಂದ ಆತನ ತಲೆಗೆ ಭಾರೀ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ, -6 ಯಂಕಪ್ಪ @  ಮುದಿಯ ತಂದೆ ಸಣ್ಣ ಹನುಮಂತ ರವರು ಬ್ಯಾಡ್ರು ಸೂಳೇ ಮಕ್ಕಳ ನಮ್ಮನ್ನು ತಡವಿದರೆ ಏನಾಗುತ್ತೋ, ಗೋತ್ತಾಯ್ತಲ್ಲ, ಪೊಲೀಸು ಗೀಲಿಸು ಎಂದು ಹೋದರೇ ಬಾಕಿ ಇರೋ ನಿಮ್ಮನ್ನು ಸಾಯಿಸಿಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ಪಿರ್ಯಾದಿಯು ಸ್ಥಳೀಯ ಖಾಸಗಿ ವಾಹನದಲ್ಲಿ ಗಾಯಾಳು ಮಾರುತಿಯನ್ನು ಹಾಕಿಕೊಂಡು ತುರುವಿಹಾಳ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಸಂಜೆ ಠಾಣೆಗೆ ಬಂದು ಆರೋಪಿತರ ವಿರುದ್ದ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 163/2019 U/s 143, 147, 148, 448, 504, 323, 324, 326, 341, 354, 506 R/w 149 IPC &  3 (1)(r)(s), 3 (2)(va) The SC & ST (Prevention of Atrocities) Amendment Act- 2015 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡೇನು.

ಮಟಕಾದಾಳಿ ಪ್ರಕರಣದ ಮಾಹಿತಿ
ದಿನಾಂಕ:13/09/2019 ರಂದು 14-00 ಗಂಟೆಯಿಂದ 15-00 ಗಂಟೆಯ ಗಂಟೆಯ ಅವಧಿಯಲ್ಲಿ ಆರೋಪಿಯಾದ ಪಂಪಣ್ಣ ತಂದೆ ಆದಪ್ಪ @ ಅದಣ್ಣ  ಕುರ್ಡಿನು ಬಾಗಲವಾಡ ಗ್ರಾಮದ ಹಿರೇ ಹಣಗಿ- ಬಾಗಲವಾಡ ಮುಖ್ಯ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಎಎಸ್‌‌ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ಬರೆದ ಪಟ್ಟಿ .ಕಿ ಇಲ್ಲ  2) ನಗದು ಹಣ.810/- ರೂ 3)ಒಂದು ಬಾಲ್ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-13/09/2019 ರಂದು 20-00 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 83/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.