Thought for the day

One of the toughest things in life is to make things simple:

22 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿ.20-05-2019 ರಂದು ರಾತ್ರಿ 7-30 ಗಂಟೆಗೆ ಸಿರವಾರ ಪಟ್ಟಣದಲ್ಲಿಮಾನವಿ ಕ್ರಾಸಿನಲ್ಲಿ ಆರೋಪಿ ನಂ.1 ಮಲ್ಲಯ್ಯ ತಂದೆ ಹನುಮಂತ ಜಾತಿ-ಮಾದಿಗ,ವಯ-33ವರ್ಷ,-ಪಾನಶಾಪ ವ್ಯಾಪಾರ,ಸಾ:ಸಿರವಾರ ವಿದ್ಯಾನಗರ. ತನ್ನ ಪಾನಶಾಪ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು ಕೊಂಡು ಓ.ಸಿ.ಮಟಕಾ ಚೀಟಿ ಯನ್ನು ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ದಾಗ ಆರೋಪಿತನು [1] ಮಟಕಾ ಜೂಜಾಟದ ಹಣ ರೂ.1,800/-[2]ಒಂದು ಓ.ಸಿ ನಂಬರ ಬರೆದ ಪಟ್ಟಿ [3]ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದು ಪಂಚನಾಮೆ ಸಮೇತವಾಗಿ ಜಪ್ತಿ ಮಾಡಿಕೊಂಡು ದಾಳಿಪಂಚನಾಮೆಯೊಂದಿಗೆ ಸಿಕ್ಕುಬಿದ್ದಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿಯನ್ನು ನೀಡಿದ್ದರ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 68/2019   ಕಲಂ: 78[iii] .ಪೋ.ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರರಕಣದ ಮಾಹಿತಿ.
ತಾರೀಕು 21/05/2019 ರಂದು ಬೆಳಿಗ್ಗೆ 10-00 ಗಂಟೆಗೆ ಬಾಗಲಕೋಟೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ನಾನು £ÁUÀ¥Àà ºÉZï.¹ 246 ಮತ್ತು ಪಿಸಿ 49 ರವರನ್ನು ಕರೆದುಕೊಂಡು ಬಾಗಲಕೋಟೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿ ಪ್ರಶಾಂತನ ಹೇಳಿಕೆ ಪಡೆದುಕೊಂಡಿದ್ದು ಆತನು ಹೇಳಿದ್ದೆನೆಂದರೆ ತಾನು ಮತ್ತು ತನ್ನ ಗೆಳೆಯ ವಿರೇಶ ಕೂಡಿ ಮೋಟಾರ ಸೈಕಲ ನಂ ಕೆಎ 36 ಇಎನ್ 0208 ನೇದ್ದರ ತೆಗೆದುಕೊಂಡು ಪೆಟ್ರೋಲ ಹಾಕಿಸಲು ರುದ್ರಗೌಡ ಪೆಟ್ರೋಲ್ ಬಂಕ್ ಗೆ ಹೊರಟೆವು, ಮೋಟಾರ ಸೈಕಲನ್ನು ನಾನೇ ನಡೆಸುತ್ತಿದ್ದು, ದಿನಾಂಕ 20/05/2019 ರಂದು ರಾತ್ರಿ 8-45 ಗಂಟೆಗೆ ಬಸವ ಸಾಗರ ಸರ್ಕಲದಿಂದ ಯಲಗಲ್ ದಿನ್ನಿಗೆ ಹೋಗುವಾಗ ಎದುರುಗಡೆಯಿಂದ ಒಬ್ಬ ಲಾರಿ ನಂ ಕೆಎ 31/7604 ನೇದ್ದನ್ನು   ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದೆ ಹೊರಟ ಮೋಟಾರ ಸೈಕಲ ಕೆಎ 36 ಕ್ಯೂ 7263 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಅದರ ಮೇಲೆ ಪ್ರಯಾಣಿಸುತ್ತಿದ್ದ ಈರಪ್ಪ @ ವೀರಪ್ಪ ತಂದೆ ಪಿಡ್ಡಪ್ಪ ಸಾ: ಯಲಗಲದಿನ್ನಿ ಈತನು ಕೆಳಗೆ ಬಿದ್ದು ಮುಂದಿನ ಹಣೆಗೆ ರಕ್ತಗಾಯ, ಹಿಂದಿನ ತಲೆಗೆ ರಕ್ತಗಾಯ, ಎಡಗಣ್ಣಿನ ಕೆಳಗೆ ರಕ್ತಗಾಯ, ಮೇಲಿನ ತುಟಿ,ಎಡಗಡೆ ಬುಜಕ್ಕೆ ರಕ್ತಗಾಯವಾಗಿದ್ದು, ನನಗೂ ಸಹ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ನನಗೆ ಮುಂದಿನ ಹಣೇಗೆ ,ಗದ್ದಕ್ಕೆ, ಎಡಗಣ್ಣಿನ ಹತ್ತಿರ, ರಕ್ತಗಾಯವಾಗಿ, ಎಡ ಗೈ ಮೊಣಕೈ ಕೆಳಗೆ ಒಳಪೆಟ್ಟು, ತನ್ನ ಮೋಟಾರ ಸೈಕಲ ಹಿಂದೆ ಕುಳಿತ ವಿರೇಶನಿಗೆ ಮುಂದಿನ ತಲೆಗೆ ಭಾರಿ ರಕ್ತಗಾಯ, ಎಡ ದವಡೆಗೆ ರಕ್ತಗಾಯ, ಎರಡು ಕಾಲುಗಳಿಗೆ ತೆರಚಿದ ಗಾಯವಾಗಿದ್ದು, ಟಕ್ಕರ ಕೊಟ್ಟ ನಂತರ ಚಾಲಕನು ತನ್ನ ಲಾರಿ ಬಿಟ್ಟ ಓಡಿ ಹೋಗಿದ್ದು, ಪುನಃ ನೋಡಿದರೆ ಗುರುತಿಸುತ್ತೇನೆ ಅಂತಾ ವೈಗೈರೆ ಹೇಳಿದ್ದು ಸದರಿ ಹೇಳಿಕೆ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 124/2019 PÀ®A. 279,337,338 L.¦.¹ & 187 LJªÀiï« DPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.