Thought for the day

One of the toughest things in life is to make things simple:

16 Jun 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
  ದಿನಾಂಕ: 13/06/2019 ರಂದು ಬೆಳಗಿನ ಜಾವ 02-30 .ಎಮ್ ದ ಸುಮಾರಿಗೆ ಸಿಂಧನೂರ-ಮಸ್ಕಿ ರಸ್ತೆಯ ಬೂತಲದಿನ್ನಿ ಕ್ಯಾಂಪಿನ ಹಳ್ಳದ ಹತ್ತಿರ ಇರುವ ಕಾರಟಗಿ ಪಂಪಾಪತಿ ಇವರ ಹೊಲದ ಮುಂದಿನ ರಸ್ತೆಯಲ್ಲಿ ಬಾಲಜಿ ಹಂಚಿನಾಳೆ ತಂದೆ ಮಾಧವರಾವ್ ಹಂಚಿನಾಳೆ ವ: 36 ವರ್ಷ ಜಾ: ಲಿಂಗಾಯತ ಉ: ಚಾಲಕ ಸಾ: ರಾಣಿ ಅಂಕೋಲಗಾ ತಾ:ಶಿರೂರು ಆನಂತಪಾಲ ಜಿ:ಲಾತೋರ (ಮಹಾರಾಷ್ಟ್ರ) ಫಿರ್ಯಾದಿದಾರನು ತಾನು ನಡೆಸುತ್ತಿದ್ದ EICHER 1059 XP ಮಿನಿ ಲಾರಿ ನಂ MH-10-BR-3787 ನೇದ್ದರಲ್ಲಿ ಕೋತ್ತಂಬರಿ ಲೋಡ್ ಮಾಡಿಕೊಂಡು ಸಿಂಧನೂರಿಗೆ ಬರುತ್ತಿರುವಾಗ , ಸಿಕಂದರ್ ತಂದೆ ಲಾಲ ಅಹ್ಮದ ಯಾದಗಿರ :39 ವರ್ಷ ಜಾ: ಮುಸ್ಲಿಂ :ಚಾಲಕ ಸಾ:ಪಂಚಶೀಲನಗರ ಹಳೇ ಜೇವರ್ಗಿ ಗುಲ್ಬಾರ್ಗ ಆರೋಪಿತನು ತನ್ನ ಖಾಸಗಿ ಬಸ್ ನಂ KA-34-B-7033 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನು ನಡೆಸುತ್ತಿದ್ದ ವಾಹನಕ್ಕೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ EICHER 1059 XP ಮಿನಿ ಲಾರಿಯು ರಸ್ತೆಯ ಪಕ್ಕದಲ್ಲಿ ಇರುವ  ತಗ್ಗಿನಲ್ಲಿ ಪಲ್ಟಿಯಾಗಿದ್ದರಿಂದ ಫಿರ್ಯಾದಿದಾರನಿಗೆ ತಲೆಯ ಹಿಂದೆ.ಸೊಂಟಕ್ಕೆ ಒಳಪೆಟ್ಟಾಗಿದ್ದು.ಬಲಗಾಲು ಮೊಣಕಾಲಿಗೆ ತೆರಚಿದ ಗಾಯವಾಗಿದ್ದು. ಆರೋಪಿ ಸಿಕಂದರನಿಗೆ ಎಡಗಡೆ ಎದೆಗೆ ಒಳಪೆಟ್ಟಾಗಿದ್ದು. ಎರಡು ವಾಹನಗಳು ಜಖಂಗೊಂಡಿರುತ್ತದೆ. ಅಂತಾ ಇಂದು ತಡವಾಗಿ ಠಾಣೆಗೆ ಬಂದು ಗಣಕಿಕೃತದಲ್ಲಿ ಅಳವಡಿಸಿದ ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಠಾಣೆ   ಗುನ್ನೆ ನಂ 44/2019 ಕಲಂ 279.337.ಐಪಿಸಿ  ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.