Thought for the day

One of the toughest things in life is to make things simple:

12 Feb 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.

ದಿನಾಂಕ-11/02/2019 ರಂದು 20-50 ಗಂಟೆಯಿಂದ 21-50 ಗಂಟೆಯ ಅವಧಿಯಲ್ಲಿ ಆರೋಪಿಯಾದ ಹುಲಿಗಪ್ಪನು ಕವಿತಾಳ ಪಟ್ಟಣದ ತನ್ನ ಮನೆಯ ಮುಂದಿನ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀ ಅಮರೇಶ ಜಿ.ಕೆ ಪಿಎಸ್‌‌ ಕವಿತಾಳ ಪೊಲೀಸ್‌‌ ಠಾಣೆ  ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಪಿ ಹುಲಿಗಪ್ಪನ ವಶದಿಂದ 1] ನಗದು ಹಣ 1660- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು .ನಂ 02 ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 12/02/2019 ರಂದು 10-30 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 11-45 ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:16/2019 ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 12-02-2019 ರಂದು1030 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ MLC ಸ್ವೀಕೃತಗೊಂಡ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಅಲ್ಲಿಯೇ ಇದ್ದ ಪಿರ್ಯಾಧಿ ವೆಂಕಟೇಶ್ ತಂದೆ ಆಶಣ್ಣ, ವಯ 36 ವರ್ಷ, ಬೇಸ್ತರ್ , ಕ್ಯಾಂಟಿನ ಮಾಲೀಕ, ಸಾ|| ಯರಮರಸ್ ದಂಡ್ ಇವರಿಗೆ ವಿಚಾರಿಸಿ ಲಿಖಿತವಾಗಿ ಬರೆದುಕೊಟ್ಟ   ದೂರನ್ನು  ಪಡೆದುಕೊಂಡು 1130 ಗಂಟೆಗೆ ಠಾಣೆಗೆ ಬಂದಿದ್ದು ದೂರಿನ ಸಾರಾಂಶವೆನೆಂದರೆ,, ದಿನಾಂಕ;-12-02-2019 ರಂದು 0830 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ರಾಯಚೂರು-ಮಂತ್ರಾಲಯ ರಸ್ತೆಯ ಎಸ್.ಎಸ್.ಆರ್.ಜಿ ಕಾಲೇಜು ಮುಂದಿನ ರಸ್ತೆಯಲ್ಲಿ ಕ್ಯಾಂಟಿನಗೆ ಹಾಲು ತರುವ ಕುರಿತು ರಸ್ತೆ ದಾಟುತ್ತಿದ್ದಾಗ, ಆರೋಪಿತನು ಅಂಬೇಡ್ಕರ್ ವೃತ್ತದ ಕಡೆಯಿಂದ ಜೆ. ಜೆ. ವೃತ್ತದ ಕಡೆಗೆ ಹೋಗುವಾಗ HONDA  ACTIVA M/C  NO. KA36EA 0810 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು ಕೆಳಗಡೆ ಬೀಳಲು ಬಲಗಾಲಿನ ಪಾದದ ಕಳಗಡೆ ಎಲುಬು ಮುರಿದು ಭಾರೀ ಗಾಯವಾಗಿದ್ದು, ಸೊಂಟದ ಎಡಗಡೆ ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ ಆರೋಪಿ ಪುನೀತ್ ಕುಮಾರ ತಂದೆ ಶಾಂತಪ್ಪ,ಲಂಬಾಣಿ,ಸಾ: ಲಂಬಾಣಿ ಕಾಲೋನಿ,ರಾಘಮಾನ ಗಡ್ಡ ರಾಯಚೂರು ತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ  ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 13/2019 ಕಲಂ: 279, 338  IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:12/02/2019 ರಂದು 13-45 ಗಂಟೆಗೆ ಠಾಣೆಗೆ ಬಂದ ಪಿರ್ಯಾಧಿ ಶಂಕ್ರಪ್ಪ ತಂದೆ ಹನುಮಂತ್ರಾಯ 30 ವರ್ಷ ಜಾ:ಮರಾಠ :ಒಕ್ಕಲತನ  ಸಾ: ಬಾಗಲವಾಡ ತಾ: ಮಾನವಿ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾಧಿಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿ//ಬೆನಕಪ್ಪ ಸಾ:ಬಾಗಲವಾಡ ಇವರ ಜಾಗೆಯನ್ನು ಖರೀದಿ ಮಾಡಿ ಅಲ್ಲಿಯೇ ಮನೆಯನ್ನು ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಇರುತ್ತಾರೆ. ದಿನಾಂಕ 11/02/2019 ರಂದು ಸಂಜೆ 17-30 ಗಂಟೆಗೆ  ಅಪಾದಿತರೇಲ್ಲರೂ ಸೇರಿಕೊಂಡು  ಜೆಸಿಬಿ ( JCB ) ನಂಬರು KA 29 M: 6794 ದೊಂದಿಗೆ ಬಂದು ಪಿರ್ಯಾದಿಯ ಮನೆಯ ಮುಂದೆ ಇರುವ ಹುಲ್ಲಿನ ಬಣವಿ ದೊಡ್ಡಿಯ ಸುತ್ತಲು ಕಲ್ಲಿನ ಕಂಪೌಂಡ್ ಒಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಕಲ್ಲಿನ ಕಂಪೌಂಡ್ ಹಾಗೂ ಹುಲ್ಲಿನ ಬಣವೆಯನ್ನು ಕಿತ್ತಿ ಹಾಕಿದ್ದನ್ನು ವಿಚಾರಣೆ ಮಾಡಲು ಹೋದ ಪಿರ್ಯಾದಿಗೆ, ಬಸವರಾಜ ತಂದೆ ಅಮರಪ್ಪ  50 ವರ್ಷ ಹಾಗೂ ಇತರೆ 3 ಜನ ಆಪಾದಿತರು ಜಾಗೆಯು ನಮ್ಮದು ಸೂಳೆ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಪಿರ್ಯಾದಿಯ ಮೈಕೈ   ಹೊಡೆದು ಹಲ್ಲೆಯನ್ನು ಮಾಡಿ ಜೀವದ ಬೇದರಿಕೆಯನ್ನು  ಹಾಕಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 17/2019 ಕಲಂ:447.427.323.504.506 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ