Thought for the day

One of the toughest things in life is to make things simple:

27 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀgÀ¢AiÀiÁzÀ ¥ÀæPÀgÀtzÀ ªÀiÁ»w:-
    ದಿನಾಂಕ 26-08-2018 ರಂದು  ಬೆಳಿಗ್ಗೆ 11-00 ಗಂಟೆಗೆ  ನಾಗಮ್ಮ ಗಂಡ ದಿಃ ಈರಣ್ಣ ಪೀಸ್ ವಯಾಃ 65 ವರ್ಷ ಜಾತಿಃ ಕುರುಬರು ಉಃ ಹೊಲಮನೆ ಕೆಲಸ ಸಾಃ ರಾಜಲಬಂಡ ತಾಃ ಮಾನವಿ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರು ನೀಡಿದ್ದರ  ಸಾರಂಶವೆನೆಂದರೆ ಫಿರ್ಯಾದಿದಾರಳಿಗೆ ಇಬ್ಬರು ಗಂಡು ಮಕ್ಕಳಿದ್ದು  ಮಕ್ಕಳು ಫಿತ್ರಾರ್ಜಿಯ ಆಸ್ತಿಯನ್ನು ಭಾಗ ಮಾಡಿಕೊಂಡಿದ್ದು ಫೀರ್ಯಾದಿಯ ಉಪಜೀವನಕ್ಕೆಂದು 2 ಎಕರೆ 18 ಗಂಟೆ  ಜಮೀನು ಬಿಟ್ಟುಕೊಟ್ಟಿದ್ದು  ಸದರಿ ಜಮೀನಿನಲ್ಲಿ ತಮಗೆ ಭಾಗ ಕೊಡಬೇಕು ಅಂತಾ ಹೇಳಿ  ಫಿರ್ಯಾದಿಯು ದಿನಾಂಕ 24-08-2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ತಮ್ಮೂರಿನ ಸಣ್ಣಬಸವನಾಯಕ ಇವರ ಅಂಗಡಿಯ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋರಟಿರುವಾಗ 1) ಜಂಬಣ್ಣ ತಂದೆ ಈರಣ್ಣ ಪೀಸ್ ಕುರುಬರು 2) ಯಲ್ಲಮ್ಮ ಗಂಡ ಜಂಬಣ್ಣ ಪೀಸ್ ಕುರುಬರು ಸಾಃ ಇಬ್ಬರು ರಾಜಲಬಂಡ ಆರೋತರು ತಡೆದು ನಿಲ್ಲಿಸಿ ಕೈಗಳಿಂದ, ಕಲ್ಲಿನಿಂದ, ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಮನೆಯಲ್ಲಿ ತನ್ನ ಹಿರಿಯ ಮಗನೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಹೇಳಿಕೆಯ ಫಿರ್ಯಾಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 263/2018 ಕಲಂ 341,324,323,504,506, ಸಹಿತ 34 .ಪಿ.ಸಿ ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


¥Éưøï zÁ½ ¥ÀæPÀgÀtzÀ ªÀiÁ»w-
     ದಿನಾಂಕ:-  26/08/18 ರಂದು ಬೆಳಿಗ್ಗೆ  ಮಾನವಿ ಠಾಣೆಯ ಹದ್ದಿಯ ರಾಜಲದಿನ್ನಿ ಗ್ರಾಮದ  ಹಳ್ಳದಲ್ಲಿಂದ   ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಯರಮಲದೊಡ್ಡಿ ಗ್ರಾಮದ ಮುಖಾಂತರ ಮಾನವಿ ಕಡೆಗೆ ತರುತ್ತಾರೆ ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಾನು ಪಂಛರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಮಾನವಿ ಪಟ್ಟಣದ ಡಿಗ್ರಿ ಕಾಲೇಜ್ ಎದುರಿಗೆ ಇರುವ ಯರಮಲದೊಡ್ಡಿ ಕ್ರಾಸ್ ಹತ್ತಿರ ಹೋಗಿ  ಕಾಯುತ್ತಾ  ನಿಂತಾಗ ಆಗ ಯರಮಲದೊಡ್ಡಿ ಗ್ರಾಮದ ಕಡೆಯಿಂದ ಮಾನವಿ ಕಡೆಗೆ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್  ಬರುತ್ತಿದ್ದು ಅದನ್ನು ಕಂಡು ನಾನು ಮತ್ತು  ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ  ಯರಮಲದೊಡ್ಡಿ ಕ್ರಾಸ್ ರಸ್ತೆಗೆ ಅಡ್ಡವಾಗಿ ಬಂದು ಕೈ ಮಾಡಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋಗಿದ್ದು ನಂತರ  ಪಂಚರ  ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರನ್ನು  ಪರಿಶೀಲಿಸಿದ್ದು,  ಅದು  ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಇದ್ದು ಅದರ  ನಂಬರ್ ನೋಡಲು ಅದಕ್ಕೆ ನಂಬರ್ ಇರಲಿಲ್ಲ. ಕಾರಣ ಅದರ   CHASSIS  & ENGINE NO ನಂಬರ್ ನೋಡಲು  DLB2010 ಅಂತಾ ಇದ್ದು ಅದರ  ಅಂ.ಕಿ. 2,50,000/ ರೂ.ಗಳು ಮತ್ತು ಅದಕ್ಕೆ ಜೋಡಣೆ ಮಾಡಿದ ಟ್ರಾಲಿಯನ್ನು ನೋಡಲು ಅದಕ್ಕೆ  ನಂಬರ್ ಇರಲಿಲ್ಲ. ಅದರ ಅಂ ಕಿ. 50,000 /- ರೂ. ಗಳಾಗಬಹುದು. ಹಾಗೂ ಟ್ರ್ಯಾಕ್ಟರನ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ್ ಮರಳು ಇದ್ದು ಅದರ  ಅಂ.ಕಿ-1400/- ರೂ. ಗಳಾಗಬಹುದು.  ಕಾರಣ ಪಿ.ಎಸ್. ರವರು ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು ಮದ್ಯಾಹ್ನ 12.30 ಗಂಟೆಗೆ ವಾಪಾಸ ಠಾಣೆಗೆ ಬಂದು ಮಾನವಿ ಠಾಣಾ ಗುನ್ನೆ ನಂ. 264/18  ಕಲಂ  379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

PÀ¼ÀÄ«£À ¥ÀæPÀgÀtzÀ ªÀiÁ»w:-
   ದಿ.26.08.2018 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿ ಡಿ.ಕೆ.ಶ್ರೀನಾಥ ಜೆಇ ಜೆಸ್ಕಾಂ ಸೇಕ್ಷನ್ ಆಫೀಸರ್ ಅಲಬನೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ,ದಿ.18.08.2018 ರಂದು ಮದ್ಯಾಹ್ನ ತಮ್ಮ ಕೆಂಪು ಬಣ್ಣದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.ಕೆ..34-ಇಜೆ-1713 ನೇದ್ದನ್ನು ತೆಗೆದುಕೊಂಡು ಅಲಬನೂರು ಸೇಕ್ಷನ ವ್ಯಾಪ್ತಿಯಲ್ಲಿ ಬರುವ ಗಿಣಿವಾರ ಗ್ರಾಮದ 33/11 ಕೆವಿ ಸ್ಟೇಷನಿಗೆ ಬೇಟಿ ಕುರಿತು ಅಳಿಯ ವಾಸು ಈತನನ್ನು ಕರೆದುಕೊಂಡು ಮೋಟಾರ್ ಸೈಕಲ್ ತೆಗೆದುಕೊಂಡು ಹೋಗಿ ಮೋಟಾರ್ ಸೈಕಲನ್ನು ಮದ್ಯಾಹ್ನ 12 ಗಂಟೆ ಸುಮಾರಿಗೆ 33/11 ಕೆವಿ ಸ್ಟೇಷನ್ ಹತ್ತಿರ ನಿಲ್ಲಿಸಿ ಮರಳಿ ಮದ್ಯಾಹ್ನ 12-30 ಗಂಟೆಗೆ ಬಂದು ನೋಡಲು ಮೋಟಾರ್ ಸೈಕಲ್ ಕಾಣಲಿಲ್ಲಾ.ಯಾರೋ ಕಳ್ಳರು ನಮ್ಮ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ನಾನು ಗಿಣಿವಾರ ಗ್ರಾಮದಲ್ಲಿ, ಸಿಂಧನೂರು ನಗರದಲ್ಲಿ ಬಂದು ಬಳಗದವರಲ್ಲಿ ವಿಚಾರಿಸಿ ಹುಡುಕಾಡಿದ್ದು ಪತ್ತೆಯಾಗದೆ ಇದ್ದುದ್ದರಿಂದ ದಿನ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆ. ಕಳುವಾದ ನಮ್ಮ ಮೋಟಾರ್ ಸೈಕಲ್ ಅಂ.ಕಿ.30000/-ಬೆಲೆಬಾಳುವು ಇದ್ದು ಕಳ್ಳತನ ಮಾಡಿದ ಆರೋಪಿತರ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ    ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಗುನ್ನೆ ನಂಬರ್ 198/2018. ಕಲಂ. 379 ಐಪಿಸಿ  CrAiÀÄ°è ಪ್ರಕರಣ ದಾಖಲಿಸಿಕೊಂಡಿದೆ.

  AiÀÄÄ.r.Dgï. ¥ÀæPÀgÀtzÀ ªÀiÁ»w
     ದಿನಾಂಕ 26-08-2018 ರಂದು ರಾತ್ರಿ 8.15 ಗಂಟೆಗೆ ಬೆಂಗಳೂರು ನಿಮಾನ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು ಅದರಲ್ಲಿ ಈರಣ್ಣ ತಂದೆ ಪಕೀರಪ್ಪ ವಯಾಃ 26 ವರ್ಷ, ಈತನು ತಲೆಗೆ ಗಾಯವಾಗಿ ಗುಣಮುಖವಾಗದೇ ಮೃತಪಟ್ಟಿರುತ್ತಾನೆ ಅಂತಾ ಎಂ.ಎಲ್.ಸಿ ವಸೂಲಾಗಿದ್ದರ ಮೇಲಿಂದ ಮತ್ತು ಫಿರ್ಯಾದಿದಾರರಾದ ನಾಗರಾಜ ತಂದೆ ಅಂಬಪ್ಪ ಸಾ|| ಜಿ.ಡಿ ತೋಟ ಈತನು ಇಂದು ದಿನಾಂಕ 26-08-2018 ರಂದು ರಾತ್ರಿ 9.00 ಗಂಟೆಗೆ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ 25-07-2018 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಕುಡಿದು ಮನೆಗೆ ಬಂದು ಊಟ ಮಾಡಿ ತಿಮ್ಮಾಪೂರುಪೇಟೆ ಸರಕಾರಿ ಶಾಲೆಯ ಮೇಲೆ ಮಲಗಿದ್ದು ರಾತ್ರಿ ವೇಳೆಯಲ್ಲಿ ನಿದ್ರಾವಸ್ಥೆಯಲ್ಲಿ ಶಾಲೆಯ ಮೇಲಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಯ ಹಿಂಬದಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಇಲಾಜ್ ಕುರಿತು ಬೆಂಗಳೂರು ನಿಮಾನ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇಲಾಜ್ ಜಾರಿಯಲ್ಲಿದ್ದು ಸದರಿ ಈರಣ್ಣನು ತನಗಾದ ಗಾಯದಿಂದ ಗುಣ ಮುಖನಾಗದೇ ದಿನಾಂಕ 26-08-2018 ರಂದು ಮಧ್ಯಾಹ್ನ 3.15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಸದರಿ ಈರಣ್ಣ ಈತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ. ಈರಣ್ಣ ಈತನು ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿಯ ಮೇಲಿಂದ  £ÉÃvÁf£ÀUÀgÀ ¥Éưøï ಠಾಣಾ ಯು,ಡಿ,ಆರ್ ನಂ 04/2018 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ 26-08-2018 ರಂದು ಸಾಯಾಂಕಾಲ 17-15 ಗಂಟೆಗೆ ರೀಮ್ಸ್ ಭೋಧಕ ಆಸ್ಪತ್ರೆ ರಾಯಚೂರು ದಿಂದ ಹೆಚ್.ಸಿ 265 ರವರು ವಾಪಸ್ ಠಾಣೆಗೆ ಬಂದು ಆಸ್ಪತ್ರೆಯಲ್ಲಿ  ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಹತ್ತಿರ ಇದ್ದ ಫಾತೀಮಾ ಗಂಡ ಮೌಲಾಲಿ :35 ವರ್ಷ ಜಾತಿ:ಮುಸ್ಲಿಂ :ಕೂಲಿಕೆಲಸ ಸಾ: ವಲ್ಕಂದಿನ್ನಿಇವರ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರಳು ಇಂದು ದಿನಾಂಕ 26-08-2018 ರಂದು ಬೆಳಗ್ಗೆ 09.30 ಗಂಟೆಗೆ ತಾನು ಕೂಲಿಕೆಲಸಕ್ಕೆಂದು ವಲ್ಕಂದಿನ್ನಿ ಕ್ರಾಸದಿಂದ ಜೂಕೂರು ರಸ್ತೆಯ ಮೇಲೆ ತನ್ನ ಮಗಳಾದ ರಜಬೀ 7 ವರ್ಷ ಈಕೆಯನ್ನು ತನ್ನ ಸಂಗಡ ಕರೆದುಕೊಂಡು ಮನಷರಳ್ಳದ ಹತ್ತಿರ ಹೊರಟಾಗ ಅದೇ ವೇಳೆ ರಾಜೋಳಿ ಕಡೆಯಿಂದ ಜೂಕೂರು ಕಡೆಗೆ ಮನಿಷ್ ತಂದೆ ಮಲ್ಲಿನಾಥ ಪಾಟೀಲ್ ಸಾ:ಬೆಳಗಾವಿ ಈತನು ತನ್ನ ಕಾರ ನಂ KA-22/Z4109ನೇದ್ದನ್ನು  ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಎಡಬಾಜು ನಡೆದುಕೊಂಡ ಹೊರಟ ರಜಬೀ ಈಕೆಗೆ ಟಕ್ಕರ್ ಮಾಡಿ ಕಾರನ್ನು ರಸ್ತೆ ಎಡಬಾಜು ಇರುವ ಕೆ..ಬಿ ಕಂಬಕ್ಕೆ ಟಕ್ಕರ್ ಮಾಡಿದ್ದರಿಂದ ಕಾರ ಪಲ್ಟಿಯಾಗಿದ್ದು, ರಜಬೀ ಈಕೆಗೆ ತಲೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು  ಇರುತ್ತದೆ. ಈ ಅಪಘಾತವು ಕಾರಚಾಲಕನ ನಿಲರ್ಕ್ಷತನದಿಂದ ಜರುಗಿದ್ದು  ಕಾರಣ ಕಾರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 268/2018 ಕಲಂ 279. 338 .ಪಿ,.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.