Thought for the day

One of the toughest things in life is to make things simple:

10 Oct 2018

Press Note



-:: ಪತ್ರಿಕಾ ಪ್ರಕಟಣೆ ::-

-:: ಯರಮರಸ್ ಕ್ಯಾಂಪಿನಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದಲ್ಲಿ ಆರೋಪಿತರ ಬಂಧನ ::-
    ದಿನಾಂಕ: 05.10.2018 ರಂದು ರಾಯಚೂರು ನಗರದ ಹೊರ ವಲಯದ ಯರಮರಸ್ ಕ್ಯಾಂಪಿನ ಪಾರಸ ವಾಟಿಕಾ ಕಾಲೋನಿಯ ಮಂಚಾಲಿ ಲೇಔಟ್ ನಲ್ಲಿ ಸಂಜೆ 5.30 ಗಂಟೆಗೆ ಸಂಶಯಾಸ್ಪದ ವಸ್ತು ಸ್ಪೋಟಗೊಂಡು ಶ್ರೀಮತಿ ಅನಂತಮ್ಮ ಗಂ: ಲಕ್ಷ್ಮಣ ಸಾ:ಮೈಲಾರ ನಗರ, ರಾಯಚೂರು ರವರು ಮೃತಪಟ್ಟಿದ್ದು,  ಶ್ರೀ ಲಕ್ಷ್ಮಣ ಇವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು ಹಾಗೂ ಆತನ ಮಗ ರಾಮು ||07 ವರ್ಷ ಇವರಿಗೂ ಸಹ ಗಾಯಗಳಾಗಿದ್ದು, ಶ್ರೀ ಲಕ್ಷ್ಮಣ ಇವರ ದೂರಿನ ಮೇರೆಗೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ: 210/2018 ಕಲಂ: 286, 304 ಐಪಿಸಿ ಮತ್ತು ಕಲಂ: 3 & 4 Explosive Substances Act ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
    ಸದರಿ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಸಿ ಎಸ್.ಪಿ.ರಾಯಚೂರು ಹಾಗೂ ಹೆಚ್ಚುವರಿ ಎಸ್.ಪಿ.ರಾಯಚೂರು ರವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ.ರಾಯಚೂರು, ದತ್ತಾತ್ರೇಯ ಕಾರ್ನಾಡ್ ಸಿ.ಪಿ.. ಯರಗೇರಾ ಮತ್ತು ಚಂದ್ರಶೇಖರ ಸಿಪಿಐ ಮಾನವಿ, ಸೋಮಶೇಖರ ಎಸ್. ಕೆಂಚರೆಡ್ಡಿ ಪಿಎಸ್ಐ ಶಕ್ತಿನಗರ ಹಾಗೂ ನಿಂಗಪ್ಪ ಎನ್.ಆರ್. ಪಿಎಸ್ಐ ರಾಯಚೂರು ಗ್ರಾಮೀಣ ಹಾಗೂ ಸಿಬ್ಬಂದಿಯವರನ್ನೊಳಗೊಂಡ 02 ತಂಡಗಳನ್ನು ರಚನೆ ಮಾಡಿ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿ ವಿಜ್ಞಾನ ತಜ್ಞರು ಹಾಗೂ ವಿಶೇಷ ತಂಡಗಳೊಂದಿಗೆ ತನಿಖೆ ಕೈಕೊಂಡು ಪ್ರಕರಣವನ್ನು ಬೇಧಿಸಲಾಗಿರುತ್ತದೆ. ಪ್ರಕರಣದ ತನಿಖೆ ಕಾಲಕ್ಕೆ ಗಜಾನನ ಡೆಕೋಟೇರರ್ಸ್ ಮಾಲೀಕರಾದ ಆರೋಪಿ 1] ಧೀರೇಂದ್ರ ಜೋಶಿ ತಂದೆ ಜಗದೀಶ ನಾರಾಯಣ ಜೋಶಿ ವಯ: 51 ವರ್ಷ, ಸಾ: ರಾಯಚೂರು ಮತ್ತು 2] ಅರುಣ ಜೋಷಿ ತಂದೆ ಜಗದೀಶ ನಾರಾಯಣ ಜೋಶಿ ವಯ: 48 ವರ್ಷ, ಸಾ: ರಾಯಚೂರು ರವರು ಹೈದ್ರಾಬಾದ್ ನಗರದ ಬಾಲಾಜಿ ಎಂಟರ್ ಪ್ರೈಸೆಸ್ ನಿಂದ ಡೆಕೋರೇಟಿಂಗ್ ಕೆಲಸಕ್ಕಾಗಿ ಕೆಲವು ರಾಸಾಯನಿಕ ವಸ್ತುಗಳನ್ನು ಖರೀದಿಸಿ ರಾಸಾಯನಿಕ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡದೆ ಮತ್ತು ಕಾರ್ಯಕ್ಕೆ ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳದೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ನಂತರ ಅಳಿದುಳಿದ ರಾಸಾಯನಿಕ ಮಿಶ್ರಣವನ್ನು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷತನದಿಂದ ಮಂಚಾಲಿ ಲೇ ಔಟ್ ನಲ್ಲಿ ಎಸೆದಿದ್ದು, ಪ್ಲಾಸ್ಟಿಕ್ ಆಯ್ದು ಜೀವ ಸಾಗಿಸುತ್ತಿದ್ದ ಶ್ರೀಮತಿ ಅನಂತಮ್ಮ ಹಾಗೂ ಶ್ರೀ ಲಕ್ಷ್ಮಣ ರವರು ರಾಸಾಯನಿಕ ಮಿಶ್ರಣ ಇರುವ ಪ್ಲಾಸ್ಟಿಕ್ ಕ್ಯಾನ್ ಅನ್ನು ಆರಿಸಿಕೊಂಡು ಅದರಲ್ಲಿರುವ ರಾಸಾಯನಿಕ ಮಿಶ್ರಣವನ್ನು ಖಾಲಿ ಮಾಡಲು ಹೋದಾಗ ಬಿಸಿಲಿನ ತಾಪಕ್ಕೆ ಘರ್ಷಣೆ ಉಂಟಾಗಿ ಸ್ಪೋಟ ಸಂಭವಿಸಿರುತ್ತದೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
    ಸ್ಪೋಟದ ಹಿಂದೆ ಯಾವುದೇ ಭಯೋತ್ಪಾದನಾ ಕೃತ್ಯವಾಗಲಿ ಅಥವಾ ವಿಧ್ವಂಸಕ ಕೃತ್ಯವಾಗಲಿ ಕಂಡು ಬಂದಿರುವುದಿಲ್ಲ. ಇದು ಅಳಿದುಳಿದ ರಾಸಾಯನಿಕ ವಸ್ತುವನ್ನು ಸುರಕ್ಷತಾ ರೀತಿಯಲ್ಲಿ ವಿಲೇವಾರಿ ಮಾಡದೆ ಪ್ಲಾಸ್ಟಿಕ್ ಕ್ಯಾನ್ ದಲ್ಲಿ ಅಳಿದುಳಿದಿದ್ದ ಅಪಾಯಕರ ರಾಸಾಯನಿಕ ವಸ್ತುವನ್ನು ಅನಾಮತ್ತಾಗಿ ಮಂಚಾಲಿ ಲೇ ಔಟ್ ನಲ್ಲಿ ಬಿಸಾಡಿದ್ದು ಹೆಚ್ಚಿನ ಬಿಸಿಲಿನ ತಾಪಮಾನಕ್ಕೆ ಸ್ಪೋಟ ಸಂಭವಿಸಿದೆ ಎಂಬುದಾಗಿ  ತನಿಖೆಯಿಂದ ಕಂಡು ಬಂದಿದ್ದು, ಆದ್ದಾಗ್ಯೂ ಕುರಿತು ಇನ್ನೂ ಹೆಚ್ಚಿನ ಮಟ್ಟದ ತನಿಖೆ ಮುಂದುವರೆದಿರುತ್ತದೆ. 
ಪೊಲೀಸ್ ದಾಳಿ ಪ್ರರಕಣದ ಮಾಹಿತಿ.
ದಿನಾಂಕ-08/10/2018 ರಂದು ರಾತ್ರಿ 21-00 ಗಂಟೆಗೆ ಮಹಾದೇವಯ್ಯ ಎ ಎಸ್ ಐ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿ ತಿಮ್ಮಣ್ಣ ತಂದೆ ಯಂಕಪ್ಪ ಭಜಂತ್ರಿ 54 ವರ್ಷ ಸಾ:-ಬಳಗಾನೂರ ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ.ದಿನಾಂಕ-08/10/2018 ರಂದು ಬಳಗಾನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ಪಿ.ಸಿ.550,35 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.-36 ಜಿ-211 ನೇದ್ದರಲ್ಲಿ  ಠಾಣೆಯಿಂದ ಹೊರಟು ಬಳಗಾನೂರು ಗ್ರಾಮದ ಪುಟ್ಟಿ ಖಾನಾವಳಿ  ಹತ್ತಿರ ಮರೆಯಾಗಿ ನಿಂತು  ನೋಡಲಾಗಿ  ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕೆ ಸ್ಥಳದಲ್ಲಿ  ಈ ಪ್ರಕರಣದಲ್ಲಿಯ ಆರೋಪಿತನು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 740/- 2).1-ಬಾಲ್ ಪೆನ್ನು  3).ಮಟಕಾ ನಂಬರ್ ಬರೆದ ಚೀಟಿ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ಮಲ್ಲಯ್ಯ ಸ್ವಾಮಿ ಸಾ:ಕಾರಟಗಿ ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.  ಇಂದು ದಿನಾಂಕ-09/10/2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 128/2018.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿದ ಪ್ರಕರಣದ ಮಾಹಿತಿ.
ದಿನಾಂಕ 9/10/18 ರಂದು 18.45 ಗಂಟೆಗೆ ಫಿರ್ಯಾದಿ ²æà ¯ÉÆÃPÉñÀ ¸ÀºÁAiÀÄPÀ PÁAiÀÄ𠤪ÁðºÀPÀ C©üAiÀÄAvÀgÀgÀÄ ¥Àæ¨sÁj PÀ£ÁðlPÀ ¤ÃgÁªÀj ¤UÀªÀÄ ¤AiÀÄ«ÄvÀ £ÀA 4 PÁ®ÄªÉ G¥À «¨ÁUÀ »gÉPÉÆmÉßPÀ¯ï vÁ: ªÀiÁ£À«  ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ , ದಿನಾಂಕ 27/09/18 ರಿಂದ 8/10/18 ರವರೆಗೆ ಹಿರೆಕೊಟ್ನೆಕಲ್ ಉಪ ವಿಭಾಗದ ವ್ಯಾಪ್ತಿಯ ವಿತರಣಾ ಕಾಲುವೆ 76 ರಲ್ಲಿ ದಿನಾಂಕ ಮೆಲಿನ ವಂತು ಪಧ್ಧತಿ ಸರಪಳಿ 0.00 ರಿಂದ 469 ರವರೆಗೆ ಇದ್ದು ದಿನಾಂಕ 8/10/18 ರಂದು ಸಾಯಂಕಾಲ 5.30 ಗಂಟೆಯಿಂದ 6.30 ಗಂಟೆ ಮಧ್ಯಧ  ಅವಧಿಯಲ್ಲಿ ರೋಪಿತರು   1. PÀÄzÀj d¯Á° vÀAzÉ §¸À¥Àà  2. eÁ®ºÀ½î ²ªÀPÀĪÀiÁgÀ ¹zÀÝ¥Àà  ºÁUÀÆ EvÀgÀgÀÄ  ವಿತರಣಾ ಕಾಲುವೆ 76 ರಲ್ಲಿಯ ಸರಕಾರಿ ಆಸ್ತಿಯಾದ ತೂಬಿನ ಶಟರ್ , ಸಾಫ್ಟಗೇರ ಬಾಕ್ಸ  ಕಿತ್ತಿ  ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ  ಕಟ್ಟಡಕ್ಕಡ ಹಾನಿಯುಂಟು  ಮಾಡಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ-298/2018  ಕಲಂ 353 ಸಹಿತ 34 .ಪಿ.ಸಿ. ಹಾಗೂ ಹಾಗೂ ಕಲಂ  3 ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಯಾಕ್ಟ 1984 ಹಾಗೂ 55 ನೀರಾವರಿ ಕಾಯ್ದೆ -1965 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:09.10.2018 ರಂದು ಸಂಜೆ 5.20 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಗಣಿಕಿಕೃತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿ, ಆಕೆಯ ಮಗಳಾದ ಮೃತ ನೂರುಜಹಾನ ಮತ್ತು ಅಕ್ಕ ಆಶಾಬೀ ಕೂಡಿಕೊಂಡು ಅಟೋ ನಂ. KA-26/A-5747 ನೇದ್ದರಲ್ಲಿ ಮುದಗಲ್ಲಿಗೆ ಎಂಗೇಜಮೆಂಟ ಕಾರ್ಯಕ್ರಮಕ್ಕೆ ಬಂದಿದ್ದು ಅಟೋವನ್ನು ರಹಿಮಾನಸಾಬ ಇವರ ಅಟೋದಲ್ಲಿ ಬಂದು ಎಂಗೇಜಮೇಂಟ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ: 09.10.2018 ರಂದು ಎಲ್ಲರೂ ವಾಪಾಸ  ತಮ್ಮೂರಿಗೆ ಅಟೋ ನಂ. KA-26/A-5747 ನೇದ್ದರಲ್ಲಿ ಹೋಗುವಾಗ ಅಟೋವನ್ನು ಆರೋಪಿ ರಹಿಮಾನಸಾಬ ಇತನು ನಡೆಸುತ್ತಿದ್ದು ಮುದಗಲ್ ತಾವರಗೇರಾ ರಸ್ತೆಯ ಉಳಿಮೇಶ್ವರ ದಾಟಿ ಸ್ವಲ್ಪ ದೂರದಲ್ಲಿ ಆರೋಪಿತನು ತನ್ನ ಅಟೋವನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದು ಆಗ ಅಟೋದಲ್ಲಿದ್ದವರು ನಿದಾನವಾಗಿ ನಡೆಸಿಕೊಂಡು ಹೋಗು ಅಂತಾ ಹೇಳಿದರೂ ಸಹ ಆರೋಪಿತನ ಸಂಜೆ 4.00 ಗಂಟೆಗೆ ತನ್ನ ಅಟೋ ನಂ. KA-26/A-5747 ನೇದ್ದನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಅಟೋವನ್ನು ಪಲ್ಟಿ ಮಾಡಿದ್ದರಿಂದ ಅಟೋದಲ್ಲಿದ್ದು ಪಿರ್ಯಾದಿ & ಆಕೆಯ ಅಕ್ಕ ಆಶಾಬೀ ಇವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಆದರೆ ಅಟೋದಲ್ಲಿದ್ದ ಇನ್ನುಳಿದ ಪಿರ್ಯಾದಿ ಮಗಳಾದ ನೂರುಜಹಾನ ಇವರಿಗೆ ತಲೆಗೆ ಬಾರಿ ಒಳಪೆಟ್ಟಾಗಿ ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತ ಬಂದಿದ್ದು ಮತ್ತು ಅಟೋ ಚಾಲಕನಿಗೆ ಎಡಗೈ ಮುಂಗೈ ಹತ್ತಿರ ಒಳಪೆಟ್ಟಾಗಿ ಮುರಿದಿದ್ದು ಇರುತ್ತದೆ. ನಂತರ ಯಾರೋ ಒಂದು ವಾಹನದಲ್ಲಿ ಎಲ್ಲರಿಗೂ ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಸಂಜೆ 4.30 ಗಂಟೆಗೆ ವೈದ್ಯಾಧಿಕಾರಿಗಳು ನೂರುಜಹಾನಳನ್ನು ನೋಡಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಇರುತ್ತದೆ. ಘಟನೆಗೆ ಕಾರಣನಾದ ಅಟೋ ಚಾಲಕ ರಹಿಮಾನಸಾಬ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 234/2018 PÀ®A 279, 338, 304 (J) L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.