Thought for the day

One of the toughest things in life is to make things simple:

9 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 07.06.2019 ರಂದು ರಾತ್ರಿ 7.00 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೈಬೂಬ ತಂದೆ ಮೌಲಾಸಾಬ ನಗನೂರು ವಯಾ: 59 ವರ್ಷ ಜಾ: ಮುಸ್ಲಿಂ ಉ: ಸೈಕಲ್ ಶಾಫ್ ಸಾ: ಹಳೆ ಪಂಚಾಯತಿ ಹತ್ತಿರ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 29/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  08.06.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 83/2019 PÀ®A 78(111) PÉ.¦. PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ:08/06/2019 ರಂದು 10-40 ಗಂಟೆಯಿಂದ 11-40 ಗಂಟೆಯ ಅವಧಿಯಲ್ಲಿ ಆರೋಪಿಯಾದ ರಾಮಣ್ಣ ಈತನು ಗೂಗೇಬಾಳ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ ಕವಿತಾಳ ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 1090/-,  2]01 ಮಟಕಾ ನಂಬರ್‌‌ ಬರೆದ ಪಟ್ಟಿ, 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-08/06/2019 ರಂದು ಪಡೆದುಕೊಂಡು 16-00 ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:55/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ :08-06-2019 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ನಿಂಗಪ್ಪ ಗಾಳಿ ವಯಾ 22 ವರ್ಷ ಜಾ;ಕುರುಬರು ಉ;ಆಟೋ ಚಾಲಕ ಸಾ;3 ನೇ ಮೈಲ್ ಕ್ಯಾಂಪ್ ತಾ;ಸಿಂಧನೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;08-06-2019 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರು-ಕುಷ್ಠಿಗಿ ರಸ್ತೆಯ ಕಾನಿಹಾಳ ಮಲ್ಲನಗೌಡ ಕೋಲ್ಡ ಸ್ಟೋರೇಜ್ ಗೋದಾಮಿನ ಹತ್ತಿರದ ಮುಂದಿನ ರಸ್ತೆಯಲ್ಲಿ ಎಡಗಡೆ ಸೈಡಿನಲ್ಲಿ ನಿಲ್ಲಿಸಿದ್ದ ಫಿರ್ಯಾಧಿ ಆಟೋ ನಂ-ಕೆಎ-36/ಬಿ-0095 ನೇದ್ದಕ್ಕೆ ಆರೋಪಿತನಾದ ಲಾರಿ ನಂ-ಎಪಿ-21/ಡಬ್ಲೂ-9901 ನೇದ್ದರ ಚಾಲಕನಾದ ನಾರಾಯಣ ಈತನು ತನ್ನ ಲಾರಿಯನ್ನು ಕುಷ್ಠಿಗಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದಿನ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ರಸ್ತೆ ಸೈಡಿನಲ್ಲಿ ನಿಲ್ಲಿಸಿದ ಫಿರ್ಯಾದಿ ಆಟೋನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ಪಲ್ಟಿಯಾಗಿ ಆಟೋದಲ್ಲಿ ಕುಳಿತಿದ್ದ ಹೊನ್ನಪ್ಪರವರಿಗೆ ಬಲಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ,ಬಲಗಾಲ ತೊಡೆಗೆ ಬಾರೀ ಒಳಪೆಟ್ಟಾಗಿ ಎಲುಬು ಮುರಿದಿದ್ದು, ಎಡಗಾಲ ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಇರುತ್ತದೆ. ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ: 42/2019 ಕಲಂ:279,338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
           
ದಿನಾಂಕ 08-06-2019 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿ ಹನುಮೇಶ ತಂದೆ ಚಿದಾನಂದಪ್ಪ ವಯಾಃ 36 ವರ್ಷ ಜಾತಿಃ ಮಾದಿಗ ಉಃ ಕಾರ್ ನಂ ಕೆ.ಎ 36 ಪಿ-0886 ನೇದ್ದರ ಚಾಲಕ ಸಾಃ ಅರೋಲಿ ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರನು ತನ್ನ ಸಂಬಂದಿಯಾದ ಪರಶುರಾಮ್ ಈತನೊಂದಿಗೆ ತನ್ನ ಕಾರ್ ನಂ ಕೆ.ಎ 36 ಪಿ-0886 ನೆದ್ದರಲ್ಲಿ ರಾಯಚೂರದಿಂದ ಮಾನವಿಗೆ ರಾಯಚೂರು - ಮಾನವಿ ಮುಖ್ಯ ರಸ್ತೆಯ ಮೇಲೆ ಇಂದು ದಿನಾಂಕ 08-06-2019 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ನಿದಾನವಾಗಿ ರಸ್ತೆಯ ತನ್ನ ಎಡಬಾಜು ನಡೆಸಿಕೊಂಡು ಬರುತ್ತಿರುವಾಗ ಕಪಗಲ್ ಇನ್ನೂ ಸ್ವಲ್ಪ ದೂರಿನಲ್ಲಿ ಇರುವಾಗ ಅಂದರೆ ಇಟ್ಟಿಂಗಿ ಬಟ್ಟೆ ಹತ್ತಿರ ಇರುವ ರಸ್ತೆಯ ಹಂಪ್ಸ ಮೇಲೆ ಫಿರ್ಯಾದಿದಾರನು ತನ್ನ ಕಾರನ್ನು ನಿದಾನವಾಗಿ ನಡೆಸಿಕೊಂಡು ಬರುತ್ತಿರವಾಗ ಅದೇ ವೇಳೆಗೆ ರಾಯಚೂರು ಕಡೆಯಿಂದ ಲಾರಿ ನಂ ಕೆ.ಎ 35 ಎ-7247 ನೇದ್ದರ ಚಾಲಕನು ತನ್ನ ಲಾರಿಯನ್ನು ನಮ್ಮ ಕಾರಿನ ಹಿಂದುಗಡೆ ನಿದನವಾಗಿ ನಡೆಸುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಆ ಲಾರಿಯ ಹಿಂದುಗಡೆ ಅಂದರೆ ರಾಯಚೂರು ಕಡೆಯಿಂದ ಇನ್ನೊಬ್ಬ ಲಾರಿ ನಂ ಎಪಿ 02- ಪಿ.ಎ/8288  ನೆದ್ದರ ಚಾಲಕ ಬಸಲಿಂಗಪ್ಪ ತಂದೆ ಯಮುನಪ್ಪ ಮಾದರ್ ಈತನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಹಿಂದುಗಡೆ ಬರುತ್ತಿದ್ದ ಲಾರಿ ನಂ ಕೆ.ಎ 35 ಎ-7247 ನೇದ್ದಕ್ಕೆ ಟಕ್ಕರ್ ಮಾಡಿದ್ದು ಪರಿಣಾಮ ಸದರಿ ಲಾರಿಯು ನಮ್ಮ ಕಾರಿಗೆ ಹಿಂದುಗಡೆಯಿಂದ ಜೋರಾಗಿ ಟಕ್ಕರ್ ಕೊಟ್ಟಿದ್ದರಿಂದ ನಮ್ಮ ಕಾರಿನ ಹಿಂಭಾಗ ಜಖಂಗೊಂಡಿದ್ದು ಅಲ್ಲದೇ ಕಾರಿನಲ್ಲಿದ್ದ ನನಗೆ ಮತ್ತು ನನ್ನ ಸಂಬಂದಿ ಪರಶುರಾಮ್ ಇಬ್ಬರಿಗೆ ಸಾದಾ ಸ್ವರೂಪದ ಒಳಪಟ್ಟಾಗಿದ್ದು ಇರುತ್ತದೆ ಕಾರಣ ಸದರಿ ಅಫಘಾತಕ್ಕ ಕಾರಣವಾದ ಲಾರಿ ನಂ ಎಪಿ 02- ಪಿ.ಎ/8288 ನೆದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 125/2019 ಕಲಂ 279.337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.