Thought for the day

One of the toughest things in life is to make things simple:

10 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ದಾಳಿ ಪ್ರಕರಣ ಮಾಹಿತಿ.
ದಿನಾಂಕ: 09-08-2019 ರಂದು 1500 ಗಂಟೆಗೆ ತಾವು ಠಾಣೆಯಲ್ಲಿರುವಾಗ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ 1] ಬಲರಾಮಸಿಂಗ್ ಪಿಸಿ 589 ರವರೊಂದಿಗೆ 1515 ಗಂಟೆಗೆ ಇಲಾಖಾ ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಕರೆದುಕೊಂಡು ಹೋಗಿ 1530 ಗಂಟೆಗೆ ಘಟನಾ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರದ ಎದುರಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ [ಕಲ್ಯಾಣಿ] ಮಟಾಕಾ ಜೂಜಾಟದಲ್ಲಿ ತೊಡಗಿದ ಮಾರೆಪ್ಪ ತಂದೆ ಲಕ್ಷ್ಮಯ್ಯ ಇತನ ಮೇಲೆ ,1600 ಗಂಟೆಗೆ ದಾಳಿ ಮಾಡಿ ಸದರಿಯವರ ವಶದಿಂದ ಒಟ್ಟು ನಗದು ಹಣ 930/ ರೂ ಮತ್ತು ಒಂದು ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಸದರಿ ಚೀಟಿಯನ್ನು ತನ್ನ ಹತ್ತಿರ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ನಂತರ  ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 1600 ಗಂಟೆಯಿಂದ 1700 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 1730 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ ಪೊಲೀಸ್ ಠಾಣಾ ಎನ್.ಸಿ.ನಂ.24/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ದಿನಾಂಕ: 09.08.2019 ರಂದು 1830 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಕ.ರಾ.ಪೊ.ವತಿಯಿಂದ ಠಾಣಾ ಗುನ್ನೆನಂ.55/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.