Thought for the day

One of the toughest things in life is to make things simple:

20 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ 19.01.2020 ರಂದು 17:00 ಗಂಟೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮೊಂದಿಗೆ ಶಿವುಕುಮಾರ ತಂದೆ ನಾಗಪ್ಪ, ವಯಸ್ಸು: 28 ವರ್ಷ, ಜಾತಿ: ಕುರುಬರ, ಉ: ಕೂಲಿಕೆಲಸ, ಸಾ: ನಂದೀಶ್ವರ ಗುಡಿಯ ಹತ್ತಿರ ಇಂದಿರಾನಗರ, ರಾಯಚೂರು, ಹಾಗೂ ಇತರೆ 04 ಜನ ಆರೋಪಿತರನ್ನು ಮತ್ತು ಇಸ್ಪೇಟ್ ಜೂಜಾಟದ ಹಣ 7200/- ರೂ, 52 ಇಸ್ಪೇಟ್ ಎಲೆಗಳು ಮತ್ತು ವಿವರವಾದ ಪಂಚನಾಮೆ ಮತ್ತು ದೂರನ್ನು ಹಾಜರು ಪಡಿಸಿದ್ದು ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17:30 ಗಂಟೆಗೆ ದೂರಿನ ಆಧಾರದ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 09/2020 ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗಾಯದ ಪ್ರಕರಣದ ಮಾಹಿತಿ.
ದಿನಾಂಕ: 17.01.2020 ರಂದು ಸಂಜೆ ಗಂಟೆಯ ಸುಮಾರಿಗೆ ರಾಜಿಯಾಗೋಣ ಅಂತಾ ತಿಳಿಸಿದ್ದಕ್ಕೆ ಫಿರ್ಯಾದಿ ಸೈದಪ್ಪ ತಂ: ಗಂಗಪ್ಪ ವಯ: 24ವರ್ಷ, ಜಾ: ಕಬ್ಬೇರ್, ಉ: ಮೀನುಗಾರಿಕೆ, ಸಾ: ಅರಿಶಿಣಗಿ  ಅರಿಶಿಣಗಿ ಗ್ರಾಮದ ಕೇಮ್ಮಣ ಮಸೂ ಹೊಲದ ನಿಂತುಕೊಂಡಿದ್ದಾಗ, ಸಂಜೆ 7.30 ಗಂಟೆಯ ಸುಮಾರಿಗೆ ಬನ್ನಯ್ಯ ತಂ: ಹುಸೇನಪ್ಪ ವಯ: 27 ವರ್ಷ, ಜಾ: ಕಬ್ಬೇರ, :ಒಕ್ಕಲುತನ, ಸಾ: ಅರಷಿಣಿಗಿ. ತಾ:ಜಿ: ರಾಯಚೂರು ಹಾಗೂ ಇತರೆ 5 ಜನ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದವರೇ, “ಏನಲೇ ಸೂಳೆ ಮಗನೇ ನಿಂದು ಊರಲ್ಲಿ ಜಾಸ್ತಿ ಅಗೈತೆ” ಎಂದು ಅವಾಚ್ಯವಾಗಿ ಬೈದು, ಎ-1ಬನ್ನಯ್ಯ ಈತನು ಅಲ್ಲಿಯೇ ಬಿದ್ದಿದ್ದ ಜಾಲಿ ಕಟ್ಟಿಗೆಯಿಂದ ತನ್ನ ಮುಂಗೈಗೆ ಬಲವಾಗಿ ಹೊಡೆದನು, ಆಗ ದಾರಿ ಹಿಡಿದು ಬರುತ್ತಿದ್ದ ತನ್ನ ತಮ್ಮ ಶಿವು ತಂ: ಮಲ್ಲಪ್ಪ 22ವರ್ಷ, ಈತನು ಕೂಗುತ್ತಾ ಹತ್ತಿರ ಬಂದನು ಆಗ ಎ-2ನಾಗೇಶ ಮತ್ತು ಎ-3ದೇವಪ್ಪ ಅವನಿಗೆ ಹಿಂದಕ್ಕೆ ದಬ್ಬಿ ಕೈಗಳಿಂದ ಅವನಿಗೆ ಹೊಡೆದು, ಆಗ ಎ-4ರೆಡ್ಡಿ ಮತ್ತು ಎ-5ಬಸವರಾಜ ರವರು ತನಗೆ ಕೈಗಳಿಂದ ಮನಬಂದಂತೆ ಬೆನ್ನಿಗೆ ತಲೆಗೆ ಮೈಗೆ ತೊಡೆಗೆ ಹೊಡೆದರು, ಆಗ ಅಲ್ಲಿಯೇ ಇದ್ದು ಜಗಳವನ್ನು ನೋಡಿದ ಅಂಬಣ್ಣ, ಆಂಜನೇಯ, ನರಸಿಂಗಪ್ಪ ಹಾಗೂ ಇತರರು ಬಿಡಿಸಿದ್ದು, ಆದಾಗ್ಯೂ ಎ-6ಬಸವರಾಜ ಈತನು “ ಈ ಸೂಳೆ ಮಕ್ಕಳಿಗೆ ಇವತ್ತಲ್ಲಾ ನಾಳೆ ಜೀವ ಸಹಿತ ಬಿಡೋದಿಲ್ಲ” ಅಂತಾ ಕೂಗಿ ಜೀವದ ಬೆದರಿಕೆ ಹಾಕಿ ಎಲ್ಲರೂ ಹೊರಟು ಹೋಗಿದ್ದು, ನಂತರ ತಾನು ರಿಮ್ಸ ಆಸ್ಪತ್ರೆಯಲ್ಲಿ ಇಲಾಜು ಪಡೆದು ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 18/2020 ಕಲಂ: 323, 324, 504, 506, ಸಹಾ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.