Thought for the day

One of the toughest things in life is to make things simple:

6 Apr 2019

Reported Crimes


    
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ
ದಿನಾಂಕ 05/04/2019 ರಂದು 20-00 ಗಂಟೆಯಿಂದ 21-00 ಗಂಟೆಯ ಅವಧಿಯಲ್ಲಿ ಆರೋಫಿ ದೇವರೆಡ್ಡಿ ತಂದೆ ಸಾಬಣ್ಣ ಮಾನವಿ  45 ವರ್ಷ ಜಾ: ಕುರುಬರು : ವ್ಯಾಪಾರ ಸಾ: ಹಿರೇಬಾದರದಿನ್ನಿ  ತಾ:ಮಾನವಿ ತನು ಹಿರೇಬಾದರದಿನ್ನಿ ಗ್ರಾಮದ ತನ್ನ ಡಬ್ಬಿ ಅಂಗಡಿಯ ಮುಂದೆ ಸಾರ್ವಜನಿಕವಾಗಿ ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಪಿಎಸ್ಐ ಕವಿತಾಳ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಧಾಳಿ ಮಾಡಲು ಆರೋಪಿತನೊಂದಿಗೆ 1) 90 ML ORIGINAL CHOICE DELUXE WHISKY  40 ಪೌಚ್ ಗಳು, ಒಂದು ಪೌಚ್ ಬೆಲೆ ಬೆಲೆ 30.32 ರೂ ( 3600 ML )ಒಟ್ಟು .ಕಿ 1212.8 ರೂ/-2) 90 ML  MC DOWELLS NO -01 CELEBRATION 20 ಪೋಚ್ ಗಳು, ಒಂದು ಪೋಚ್ ಬೆಲೆ 45.10 ರೂ ( 1800 ML ) ಒಟ್ಟು .ಕಿ 902 ರೂ/- .3) 180 BAGPIPER  DELUXE WHISKY 10 ಪೋಚ್ ಗಳು, ಒಂದು ಪೋಚ್ ಬೆಲೆ 90.21 ರೂ ( 1800 ML ) ಒಟ್ಟು .ಕಿ 902 ರೂ/-  ಹೀಗ್ಗೆ ಒಟ್ಟು 7.200 LITER ML ಒಟ್ಟು .ಕಿ. 3016.1/- ರೂಪಾಯಿ ಬೆಲೆಬಾಳುವ ಮದ್ಯದ ಬಾಟಲಿಗಳು ಮುದ್ದೆಮಾಲನ್ನು ಜಪ್ತಿ ಮಾಡಿದ್ದು ಅಂತಾ ಇದ್ದ ಪಂಚನಾಮೆಯನ್ನು ತಂದು ಹಾಜರು ಪಡಿಸಿದ ಪಂಚನಾಮೆಯ ಮತ್ತು ವರದಿಯ ಸಾರಾಂಶದ ಮೇಲಿನಿಂದ ,ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 42/2019 ಕಲಂ- 32, 34  ಕೆ ಕಾಯಿದೆ.  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕಣದ ಮಾಹಿತಿ.
ದಿನಾಂಕ: 05/04/2019 ರಂದು 20-40 ಗಂಟೆಗೆ ಠಾಣೆಗೆ ಬಂದ ಪಿರ್ಯಾದಿದಾರರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿದಾರರು ದಿನಾಂಕ- 05/04/2019 ರಂದು 14-15 ಗಂಟೆಗೆ ಸರಕಾರಿ ಬಸ್ಸ್ ನಂಬರು  ಕೆಎ 33 ಎಪ್ 0329 ನೇದ್ದನ್ನು ನಡೆಸಿಕೊಂಡು ಲಿಂಗಸ್ಗೂರುನಿಂದ ಕವಿತಾಳ ಮಾರ್ಗವಾಗಿ ರಾಯಚೂರಿಗೆ ಹೋಗುವಾಗ 15-20 ಗಂಟೆಗೆ ಬಂದು ಕವಿತಾಳ ಹಳೆಯ ಬಸ್ಸ್ ನಿಲ್ದಾಣ ದಾಡಿ ಮುಂದೆ ಹೋಗುವಾಗ ಪಿರ್ಯಾದಿಯು  ನಡೆಸುವ ಬಸ್ಸಿಗೆ ಎದುರುಗಡೆ ಇಬ್ಬರು ಬಂದು ಪಿರ್ಯಾದಯನ್ನು ಉದ್ದೇಶಿಸಿ ಎಲೇ ಸೂಳೇ ಮಗನೇ ಸೈಡ್ ನಿಂದ ಹೋಗಲೇ ಎಂದಾಗ ಪಿರ್ಯಾದಿಯು ಬಸ್ಸನ್ನು ನಿಲ್ಲಿಸಲು  ಲಿಂಗರಾಜನು ಪಿರ್ಯಾದಿಯ ಅಂಗಿಯನ್ನು ಹಿಡಿದು ಎಳೆದಾಡಿದಾಗ ಪಿರ್ಯಾದಿಯು ನಿನಗೆ ಹೋಗಲು ಇನ್ನು ಸಾಕಷ್ಟು ದಾರಿ ಇದೆ ಅಲ್ಲ ಅಂತಾ ಹೇಳಿದಾಗ ಸುರೇಶನು ಪಿರ್ಯಾದಿಗೆ ಎಲೇ ಸೂಳ್ಯೆ ಮಗನೇ ನಿನ್ನಗಾ ಸರಕಾರಿ ಪಗರು ಕೊಡುತ್ತೇ ನೀನ್ನ ದಿಮ್ಮಾಕು ಲೇ  ಅಂತಾ ಅಂದವನೇ ಏಕಾಏಕಿ ನನಗೆ ಕಲ್ಲಿನಿಂದ ಹೊಡೆದು ಎಡ ಕಣ್ಣಿನ ಹುಬ್ಬಿಗೆ ರಕ್ತಗಾಯವಾಗಿ ಇರುತ್ತದೆ. ಇದರಿಂದಾಗಿ ಪಿರ್ಯಾದಿದಾರರು ಸಾರಿಗೆ ಸಂಸ್ಥೆಯ ಸಮವಸ್ತ್ರಾದಲ್ಲಿ ಸಾರ್ವಜನಿಕ ಕರ್ತವ್ಯದಲ್ಲಿದ್ದಾಗ ಅಪಾದಿತರು ಹಲ್ಲೆಯನ್ನು ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿ ಸಂಸ್ಥೆಗೆ ಬರುವ ಅದಾಯಕ್ಕೆ ನಷ್ಟಕ್ಕೆ ಕಾರಣರಾಗಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು  ದೂರು ನೀಡಿದ್ದು. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2019 ಕಲಂ: 353.332.504. ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ ;-05-04-2019 ರಂದು 1730 ಗಂಟೆಗೆ ಫಿರ್ಯಾದಿ ಪಿ. ಅನಿಲ್ ಕುಮಾರ್ ತಂದೆ ದಿ: ಪಿ. ರಾಜುವಯ 43 ವರ್ಷ ,ಕ್ರಿಶ್ಚಿಯನ್, ಚರ್ಚ ಫಾದರ್ಸಾ|| ಆಜಾದ್ ನಗರ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದೆನೇಂದರೆ, ಫಿರ್ಯಾದಿದಾರರ ಭಾವನಾದ ರಾಜು ಈತನು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ;-05-04-2019 ರಂದು ಬೆಳಿಗ್ಗೆ 0930 ಗಂಟೆ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ನಡೆದುಕೊಂಡು ಹೋಗುವಾಗ, ಆಶಾಪೂರು ರಸ್ತೆಯ ರಾಗಮಾನಗಡ್ಡ ಕ್ರಾಸ್ ನಲ್ಲಿ ಆಶಾಪೂರ ಕ್ರಾಸ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿತನು ಆಶಾಪೂರ ಕ್ರಾಸ್ ಕಡೆಯಿಂದ ಆಶಾಪೂರ ಕಡೆಗೆ ಹೋಗುವಾಗ M/C NO.KA36/Y6806 ನೇದ್ದನ್ನು  ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ರಾಜು ಈತನಿಗೆ ಎದುರಗಡೆಯಿಂದ ಟಕ್ಕರ್ ಕೊಟ್ಟಿದ್ದರಿಂದ ರಾಜು ಈತನು ಕೆಳಗಡೆ ಬಿದ್ದು, ತಲೆಯ ಹಿಂದೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಮನೆಯಲ್ಲಿ ವಿಚಾರಿಸಿಕೊಂಡು ಬಂದು ಈಗ ತಡವಾಗಿ ದೂರು ನೀಡಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 23/2019 ಕಲಂ 279, 338 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ದಿನಾಂಕ 05/04/2019 ರಂದು ಮದ್ಯಾಹ್ನ 12-15 ಗಂಟೆ ಸುಮಾರಿಗೆ ರಾಯಚೂರು- ಮಂತ್ರಾಲಯ ಮುಖ್ಯೆ ರಸ್ತೆಯ ಮೇಲೆ ಗುಂಜಳ್ಳಿ ಪ್ರೌಡಶಾಲೆಯ ಹತ್ತಿರ ಫಿರ್ಯಾದಿ ಶ್ರೀ ಹನುಮಂತ ತಂದೆ ಭೀಮಣ್ಣ ಬಲ್ಲಯ್ಯನವರು 34 ವರ್ಷ ಜಾ:ನಾಯಕ :ಒಕ್ಕಲತನ ಸಾ:ಗುಂಜಳ್ಳಿ  ತಾ:ಜಿರಾಯಚೂರು ಇವರ ಮಗನಾದ ಪವನಕುಮಾರ 8 ವರ್ಷ ಈತನು ರಸ್ತೆಯ  ಎಡಬದಿಯಲ್ಲಿ ನಡೆದುಕೊಂಡು ಹೊಗುವಾಗ ಆರೋಪಿ ಕೆ.ಪರವೇಶ ಸಾ:ಸೂಗೂರ ಈತನು ತನ್ನ ಕಾರ ನಂ AP-27 BC-5128 ನೇದ್ದನ್ನು ರಾಯಚೂರು ಕಡೆಯಿಂದ ಜೋರಾಗಿ ನಿರ್ಲಕ್ಷತನದಿಂದ ನಡಸಿಕೊಂಡು ಬಂದು ಪವನಕುಮಾರ ಈತನಿಗೆ ಟಕ್ಕರ ಕೊಟ್ಟಿದ್ದರಿಂದ ಪವನ ಕುಮಾರ ಈತನಿಗೆ ತಲೆಗೆ ಹಾಗೂ ಮುಖಕ್ಕೆ ಕೈಕಾಲಿಗೆ ಬಾರಿ ಸ್ವರೂಪದ  ಗಾಯಗಳಾಗಿದ್ದು, ಇಲಾಜು ಕುರಿತು  ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೊಗುತ್ತಿರುವಾಗ ಆಸ್ಪತ್ರೆಯ ಆವರಣದಲ್ಲಿ ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದಾ ಯರಗೇರಾ ಠಾಣಾ ಗುನ್ನೆ ನಂ.48/2019 ಕಲಂ.279.304() ಐಪಿಸಿ ಅಡಿಯಲ್ಲಿ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.