Thought for the day

One of the toughest things in life is to make things simple:

7 Dec 2015

Reported Crimes

ದಿನಾಂಕ : 07/12/15 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಪಿರ್ಯಾದಿ ನರಸಪ್ಪ ತಂದೆ ಸಿದ್ರಾಮಪ್ಪ ಸಜ್ಜಲ್ ವ-50 ವರ್ಷ ಜಾ-ನಾಯಕ ಉ-ಕುರಿ ಕಾಯುವ ಕೆಲಸ ಸಾ-ಬೈಲಮರ್ಚಡ್ ತಾ-ಮಾನವಿ gÀªÀರು ದಿ: 04/12/15 ರಂದು ಹಗಲಿನಲ್ಲಿ ಬೆಟ್ಟದೂರು ಸೀಮಾದ ಗುಡ್ಡದ ಕಡೆ ಹಾಗೂ ಬೈಲಮರ್ಚಡ್ ಗ್ರಾಮದ ಸೀಮೆಯಲ್ಲಿ ಕುರಿಗಳನ್ನು ಮೇಯಿಸಿಕೊಂಡು ಸಾಯಂಕಾಲ 6-00 ಗಂಟೆ ಸುಮಾರಿಗೆ ಮದರಸಾಬ ಇವರ ಹೊಲದಲ್ಲಿ ಹೊಡೆದುಕೊಂಡು ಬಂದು ತಬ್ಬಿದ್ದು, ತಾನು, ಮತ್ತು ನರಸಪ್ಪ ಹಾಗೂ ಸುನಂದಮ್ಮ ಮೂವರು ರಾತ್ರಿ ಕುರಿಗಳನ್ನು ಕಾಯುತ್ತಿದ್ದು, ಮತ್ತು ನರಸಪ್ಪ ಹಾಗೂ ಸುನಂದಮ್ಮ ಇವರು ರಾತ್ರಿ 11-00 ಗಂಟೆ ಸುಮಾರಿಗೆ ಮಲಗಿದ್ದು, ನಂತರ ತಾನು ದಿ:05/12/15 ರಂದು ಮದ್ಯರಾತ್ರಿ 1-00 ಗಂಟೆ ಸುಮಾರಿಗೆ ಮಲಗಿದ್ದು, ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಎದ್ದು, ಕುರಿಗಳನ್ನು ನೋಡಲಾಗಿ ಅದರಲ್ಲಿ ಸುಮಾರು 24 ಕುರಿಗಳು ಇರಲಿಲ್ಲಾ. ಸದ್ರಿ ಕುರಿಗಳನ್ನು ಯಾರೋ ಕಳ್ಳರು ನಾವು ಮಲಗಿಕೊಂಡಾಗ ದಿ: 05/12/15 ರಂದು ರಾತ್ರಿ 1-00 ಗಂಟೆಯಿಂದ ಬೆಳಗ್ಗೆ 08-00 ಗಂಟೆಯನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. sdfriಸದ್ರಿ ಕುರಿಗಳು ಕಂದುಬಣ್ಣದ ಕುರಿಗಳಿದ್ದು, ಒಟ್ಟು 24 ಕುರಿಗಳು ಕಳ್ಳತನವಾಗಿದ್ದು, ಒಂದೊಂದು ಕುರಿಗೆ 2,000/- ರೂ ನಂತೆ ಒಟ್ಟು ಕುರಿಗಳ ಬೆಲೆ 48,000/- ರೂಗಳಾಗುತ್ತದೆ. ಸದ್ರಿ ಕುರಿಗಳನ್ನು ತಾನು ಮತ್ತು ನರಸಪ್ಪ ಹಾಗೂ ಸುನಂದಮ್ಮ ಮೂವರು ಕೂಡಿ ಅಲ್ಲಲ್ಲಿ ಹುಡುಕಾಡಿ ಕುರಿಗಳನ್ನು ನೋಡಲಾಗಿ ಸಿಕ್ಕಿರುವುದಿಲ್ಲಾ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ಕಾರಣ ಸದ್ರಿ ಕುರಿಗಳನ್ನು ಪತ್ತೆ ಹೆಚ್ಚಿ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.330/15 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 06-12-2015 ರಂದು ಮುಂಜಾನೆ 07-30 ಗಂಟೆಯ ಸುಮಾರಿಗೆ ಮಾರಲದಿನ್ನಿ-ಸಂತೆಕೆಲ್ಲೂರು ರಸ್ತೆಯಲ್ಲಿ ಸಿದ್ರಾಮಪ್ಪ ಸಾಹುಕಾರ ಇವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಲಕ್ಷ್ಮಣ ತಾಯಿ ದುರುಗಮ್ಮ, 35 ವರ್ಷ, ಹರಿಜನ ಟ್ರ್ಯಾಕ್ಟರ ಚಾಲಕ ಸಾ: ಬೊಮ್ಮನಾಳ ತಾ: ಲಿಂಗಸುಗೂರ FvÀನು ಟ್ರ್ಯಾಕ್ಟರ ನಂ ಕೆಎ-36/ಟಿಸಿ-2195 ಹಾಗೂ ನಂಬರಿಲ್ಲದ ಟ್ರ್ಯಾಲಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮುತ್ತಪ್ಪ ತಂ: ಹುಲಪ್ಪ ಸಾ:ಸಂತೆಕೆಲ್ಲೂರು ಈತನಿಗೆ ಟಕ್ಕರ ಕೊಟಡ್ಟಿದ್ದರಿಂದ ªÀÄÈvÀ ಮುತ್ತಪ್ಪ ತಂ: ಹುಲಗಪ್ಪ, 28 ವರ್ಷ, ನಾಯಕ, ಕೂಲಿಕೆಲಸ ಸಾ: ಸಂತೆಕೆಲ್ಲೂರು ಟ್ರ್ಯಾಕ್ಟರನ ಮದ್ಯದ ದೊಡ್ಡ ಗಾಲಿಗೆ ಸಿಗಾಕಿಕೊಂಡು ಎದೆಯ ಪಕ್ಕಡಿ ಎಲುಬು ಮುರಿದು, ಬಾಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ, ಅಪಘಾತದ ನಂತರ ಆರೋಪಿತನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂ 178/15 ಕಲಂ 279,304(ಎ) ಐಪಿಸಿ & 187 .ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು.


ದಿನಾಂಕ 06-12-2015 ರಂದು 4.45 ಪಿ.ಎಂ ಕ್ಕೆ ಶ್ರೀಪುರಂ ಜಂಕ್ಷನ್ ರಾಮದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಮೌನೇಶ ತಂದೆ ಹನುಮಂತ, ವಯಾ: 36 ವರ್ಷ, ಜಾ:ಕಬ್ಬೇರ, ಉ:ಟ್ರ್ಯಾಕ್ಟರ್ ಚಾಲಕ, ಸಾ:ಶ್ರೀಪುರಂ ಜಂಕ್ಷನ್ ತಾ:ಸಿಂಧನೂರು2) ಬಸವರಾಜ ತಂದೆ ವೀರಪ್ಪ, ವಯಾ: 30 ವರ್ಷ, ಜಾ:ಲಿಂಗಾಯತ, ಸಾ:ಎಂ.ಬಿ.ಕಾಲೋನಿ ಸಿಂಧನೂರುEªÀgÀÄUÀ¼ÀÄ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ನಗದು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದಾಗ ಕೆಲವು ಜನರು ಓಡಿಹೋಗಿದ್ದು ಇಬ್ಬರು ಆರೋಪಿತರು ಸಿಕ್ಕಿಬಿದ್ದಿದ್ದು ಸದರಿಯವರಿಂದ ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 1700 /-ಮತ್ತು 52 ಇಸ್ಪೀಟು ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 335/2015 ಕಲಂ 87 ಕೆ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.