Thought for the day

One of the toughest things in life is to make things simple:

10 Aug 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 09-08-2018 ರಂದು ರಾತ್ರಿ 8-00 ಗಂಟೆಗೆ ಮಂಜುನಾಥ, ಎಸ್,  ಪಿ.ಎಸ್. (ಕಾ.ಸು) ಮಾನವಿ ಠಾಣೆ ರವರು ಮಟ್ಕಾ  ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮ ವರದಿಯೊಂದನ್ನು ತಯಾರಿಸಿ, ವರದಿ, ಮಟ್ಕಾ  ದಾಳಿ ಪಂಚನಾಮೆ ಜಪ್ತಿ ಮಾಡಿಕೊಂಡ ಮುದ್ದೆಮಾಲು. ಒಬ್ಬ ಆರೋಪಿತನನ್ನು  ರಾತ್ರಿ 8-15 ಗಂಟೆಗೆ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶವೆನೆಂದರೆ ಪೋತ್ನಾಳ ಗ್ರಾಮದ ಜ್ಞಾನ ಭಾರತಿ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ  ಅಂತಾ ಠಾಣಾ ಸಿಬ್ಬಂದಿಯಾದ ಚಂದ್ರಕಾಂತ್ ಪಿ.ಸಿ 61 ರವರು ತಿಳಿಸಿದ್ದು   ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ  ಸಂಜೆ 6-00 ಗಂಟೆಗೆ ದಾಳಿ ಮಾಡಿದಾಗ ಮಟ್ಕಾ ಜೂಜಾಟ ನಡೆಸುತಿದ್ದವನು ಸಿಕ್ಕಿ ಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಅಮರೇಶ ತಂದೆ ಈರಪ್ಪ ವಯಾಃ 60 ವರ್ಷ ಜಾತಿಃ ಲಿಂಗಾಯತ ಉಃ ಹೊಟೇಲ್ ಕೆಲಸ ಸಾಃ ಜನತಾ ಕಾಲೋನಿ ಪೋತ್ನಾಳ ಅಂತಾ ತಿಳಿಸಿದ್ದು  ಸದರಿಯವರಿಂದ  ಒಟ್ಟು1] ನಗದು ಹಣ ರೂ 5310/-  2] ಮಟಕಾ ನಂಬರ್ ಬರೆದ 1 ಚೀಟಿ 3] ಒಂದು ಬಾಲ್ ಪೆನ್ನು  ಸಿಕ್ಕಿದ್ದು  ಸದರಿ ಹಣ ಮತ್ತು ಮಟ್ಕಾ ಚೀಟಿಯ ಬಗ್ಗೆ ವಿಚಾರ ಮಾಡಲಾಗಿ ಈಗ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಮತ್ತು ಅವರು ಬರೆಯಿಸಿದ ಮಟ್ಕಾ ನಂಬರ ಚೀಟಿಗಳು ಅಂತಾ ತಿಳಿಸಿರುತ್ತಾನೆ. ಮಟ್ಕಾ ನಂಬರ್ ಬರೆಯಲು ಯಾವುದಾದರು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು ಸದ್ರಿ ಆರೋಪಿತನಿಗೆ  ತಾನು ಬರೆದ ಮಟಕಾ ಚೀಟಿಗಳನ್ನು ಯಾರಿಗೆ ಕೊಡುವುದಾಗಿ ಅಂತಾ ವಿಚಾರಿಸಲಾಗಿ ಅವನು ತಾನು ಬರದ ಮಟ್ಕಾ ಚೀಟಿಗಳನ್ನು  ವೀರುಪಾಕ್ಷಿ ಗೌಡ ಸಾಃ ಪೋತ್ನಾಳ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಆರೋಪಿತನನ್ನು ನಮ್ಮ ವಶಕ್ಕೆ ತೆಗೆದುಕೊಂಡು  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ  ಆರೋಪಿತನು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು  ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ  ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 251/2018 ಕಲಂ 78 (3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 09/08/2018 ರಂದು  17.00 ಗಂಟೆಗೆ ಸರಕಾರಿ ಆಸ್ಪತ್ರೆ ಮಾನವಿಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ,  ಮಲಭದ್ರಗೌಡ, ಮಂಜುನಾಥ ಹಾಗೂ ವೀರೇಂಧ್ರ ಎನ್ನುವವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಕೂಡಲೇ ಮಾನವಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಲಭದ್ರಗೌಡ ಎನ್ನುವವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಶಂವೇನೆಂದರೆ, ಫಿರ್ಯಾದಿಯ ಹೊಲ ದಾಟಿ ಆರೋಪಿ ಶಿವರಾಮನ ಮನೆ ಇದ್ದು  ತನ್ನ ಮನೆಗೆ ಹೋಗುವ ಸಲುವಾಗಿ ದಾರಿ ಇಲ್ಲದ ಕಾರಣ ಫಿರ್ಯಾದಿಯ ಹೊಲದಲ್ಲಿಯೇ ದಾರಿ ಕೊಡಬೇಕು ಅಂತಾ ಆಗಾಗ ಜಗಳ ಮಾಡುತ್ತಾ ಬಂದು ಇಂದು ದಿನಾಂಕ 9/08/18 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ  ಆರೋಪಿತರು ಫಿರ್ಯಾದಿ ಹೊಲದಲ್ಲಿ ದಾರಿ ಮಾಡುವ  ಉದ್ದಶದಿಂದ ಮೂರು ಟ್ರ್ಯಾಕ್ಟರ ಹಾಗೂ ಒಂದು ಜೆ.ಸಿ.ಬಿ ಯೊಂದಿಗೆ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ದಾರಿ ಮಾಡುವ ಸಲುವಾಗಿ ಮಣ್ಣನ್ನು ಹಾಕುವಾಗ ಫಿರ್ಯಾದಿ ಹಾಗೂ ಆತನ ಮನೆಯವರು ಕೂಡಿ ನಮ್ಮ ಹೊಲದಲ್ಲಿ ಬಂದು ಯಾಕೆ ಮಣ್ಣು ಹಾಕುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ನಾವು ದಾರಿ ಮಾಡುತ್ತೇವೆಲೆ ಸೂಳೆಮಕ್ಕಳಗೇ ಏನು ಸೆಂಟಾ ಹರ್ಕೊಳ್ಳಿತ್ರೀರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಚಪ್ಪಲಿ ಹಾಗೂ ಕೈಗಳಿಂದ ಹೊಡೆ ಬಡೆ  ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 250/18 ಕಲಂ .143,147,447,323,355,504,506 ಸಹಿತ 149 .ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಫಿರ್ಯಾದಿಯ ²æà ªÀÄw CªÀÄÈvÀ ಈಕೆಯ ಗಂಡ ಇಂದು ದಿನಾಂಕ 09-08-218 ರಂದು ಸಾಯಂಕಾಲ  ಗಬ್ಬೂರಿಗೆ ಹೋಗಿ ಸಾಯಂಕಾಲ 7-15 ಗಂಟೆಗೆ ತನ್ನ ಮೋಟಾರು ಸೈಕಲ್ ನಂ ಕೆ ಎ 36 ಇ ಡಿ 6978 ನೇದ್ದನ್ನು  ತೆಗೆದು ಕೊಂಡು ಗಬ್ಬೂರ ದಿಂದ ಮಲದಕಲ್ ಗೆ ಬರುತ್ತಿರುವಾಗ ದೇವದುರ್ಗ ರಾಯಚೂರು ಮುಖ್ಯ ರಸ್ತೆಯ ಮಲದಕಲ್ ಕ್ರಾಸ್ ಹತ್ತಿರ ಕೊಂಡಯ್ಯ ಇವರ ಜೋಪಡಿಯ ಹತ್ತಿರ ದೇವದುರ್ಗ ಕಡೆಹಿಂದ ಒಂದು ಅಪೇ  ಅಟೋನಂ ಕೆ ಎ 36 –ಎ3705 ನೇದ್ದರ  ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರು ಸೈಕಲ್ ಮೇಲೆ ಹೋಗುತ್ತಿದ್ದ ಸೂಗುರೆಡ್ಡಿ ಈತಗನು ಕೆಳಗಡೆ ರೋಡಿಗೆ ಬಿದ್ದು ಆತನಿಗೆ ಎಡಕಪಾಳ ಸಂಪೂರ್ಣ ಜಜ್ಜಿ ಹೋಗಿದ್ದು ಎಡ ಹಣೆ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿ ಕಣ್ಣಿನ ಗುಡ್ಡೆ  ಹೊರಗೆ ಬಂದಂತಾಗಿದ್ದು  ಮೂಗು ಸಂಪೂರ್ಣ ಜಜ್ಜಿ ಹೋಗಿ  ಭಾರ ರಕ್ತಗಾಯದಿಂದ  ಸ್ಥಳದಲ್ಲಿಯೇ ಮೃತಪಟ್ಟಿದ್ದು,   ಇರುತ್ತದೆ ಅಪೇ ಅಟೋ  ಚಾಲಕನು  ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು  ಇರುತ್ತದೆ. ಅಂತಾ ಮುಂತಾಗಿ ನೀಡಿದ ಗಣಕೀಕೃತ ಪಿರ್ಯಧಿ ಸಾರಾಂಶದ ಮೇಲಿಂದ ಠಾಣಾ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂ 185/2018 ಕಲಂ- 279,304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:09.08.2018 ರಂದು ಸಂಜೆ 6.00 ಗಂಟೆಗೆ ಪಿರ್ಯಾದಿ zÀÄgÀUÀ¥Àà vÀAzÉ ¸ÀtÚ AiÀĪÀÄ£À¥Àà §Ar ªÀAiÀĸÀÄì:21 ªÀµÀð eÁ: ¨ÉÆë ªÀqÀØgÀ G: ZÁ®PÀ ¸Á:F±ÀégÀ UÀÄr »AzÀÄUÀqÉ °AUÀ¸ÀUÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:08.08.2018 ರಂದು ಗಾಯಾಳು ಹನುಮಂತನು ಟ್ರ್ಯಾಕ್ಟರ ನಂ. KA-36/TC-6181 ನೇದ್ದರಲ್ಲಿ ಕಲ್ಲು ಬಂಡು ಏರಿಕೊಂಡು ಬರಲು ಕೂಲಿ ಕೆಲಸಕ್ಕೆ  ಮುದಗಲ್ಲಿಗೆ ಬಂದು ಟ್ರ್ಯಾಕ್ಟರಿಯಲ್ಲಿ ಕಲ್ಲು ಬಂಡು ಹೇರಿಕೊಂಡು ಲಿಂಗಸಗೂರುಗೆ ಹೋಗುವಾಗ ಮುದಗಲ್ ಲಿಂಗಸಗೂರು ರಸ್ತೆಯ ಡೈಮಂಡ ಡಾಬಾ ದಾಟಿ ಕತ್ತಿ ಹಳ್ಳದ ಅಪ್ ಹತ್ತಿರ  ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ಟ್ರ್ಯಾಕ್ಟರ ಜಂಪ್ ಆಗಿದ್ದು ಟ್ರ್ಯಾಕ್ಟರ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಹನುಮಂತನು ಟ್ರ್ಯಾಕ್ಟರ ಜಂಪ್ ಗೆ ಪುಟಿದು ರಸ್ತೆ  ಕೆಳಗಡೆ ಬಿದ್ದಿದ್ದರಿಂದ ಟ್ರ್ಯಾಕ್ಟರ ಬಲಗಡೆಯ ದೊಡ್ಡ ಗಾಲಿ ಹನುಮಂತನ ಬಲ ಸೊಂಟದ ಮುಖಾಂತರ ತೊಡೆಯ ಮೇಲೆ ಹಾಯ್ದು ಹೋಗಿದ್ದರಿಂದ ಸೊಂಟಕ್ಕೆ ಬಾರಿ ರಕ್ತಗಾಯವಾಗಿದ್ದು, ಬಲಗಾಲು ತೊಡೆಯ ಹತ್ತಿರ ಕಾಲು ಮುರಿದು ತಿರುವಿ ಬಿದ್ದಿದ್ದು, ಎಡಗಡೆ ಸೊಂಟಕ್ಕೆ ತೊಡೆಗೆ ತೆರಚಿದ  ಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಟ್ರ್ಯಾಕ್ಟರ ಚಾಲಕನು ಯಾರು ಎಂಬುದು ಗೊತ್ತಾಗಿರುವುದಿಲ್ಲ ಆತನು ಅಪಘಾತವಾದ ನಂತರ ಓಡಿ ಹೋಗಿರುತ್ತಾನೆ ಅಂತಾ ತಿಳಿಯಿತು. ನಂತರ ಪಿರ್ಯಾದಿದಾರರು ತನ್ನ ಅಣ್ಣ ಹನುಮಂತನಿಗೆ ಒಂದು ವಾಹನದಲ್ಲಿ ಹಾಕಿಕೊಂಡು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಕೆರೂಡಿ ಆಸ್ಪತ್ರೆಗೆ ಹೋಗಿ ದಾಖಲ್ ಮಾಡಿ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಅಪಘಾತಕ್ಕೆ ಕಾರಣನಾದ ಟ್ರ್ಯಾಕ್ಟರ ನಂ. KA-36/TC-6181 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 199/2018 PÀ®A 279, 337, 338, L¦¹ & 187 L JA « PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.