Thought for the day

One of the toughest things in life is to make things simple:

25 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದೊಂಬಿ ಪ್ರಕರಣದ ಮಾಹಿತಿ.
ಪಿರ್ಯಾಧಿ ಫಾರೂಖ್ ಖತೀಬ್ ರವರು ಸಲ್ಲಿಸಿದ ದೂರಿನಲ್ಲಿ ದಿನಾಂಕ 24.06.2019 ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಅವರ ದೂರದ ಸಂಬಧಿಯಾದ ಮೈಬೂಬ ಅಲಿ ಖತೀಬ್ ನೊಂದಿಗೆ ತನ್ನ ಬಟ್ಟೆ ಅಂಗಡಿ ಮುಂದೆ ನಿಂತುಕೊಂಡಿದ್ದಾಗ ಇದೆ ಪಟ್ಟಣದ ಆರೋಪಿಗಳಾದ ಸಾಗರ್, ವೆಂಕೋಬ, ಅಮರೇಶ, ಪರಶುರಾಮ, ಹಾಗೂ ವರದರಾಜು ಹಾಗೂ ಇತರರು ಗುಂಪು ಕಟ್ಟಿಕೊಂಡು ಕೈಗಳ್ಲಲಿ ಕಬ್ಬಿಣದ ರಾಡ್ ಕಲ್ಲುಗಳು ಹಿಡಿದುಕೊಂಡು ಬಂದು ಏಕಾಏಕಿ ತನಗೆ ಮತ್ತು ಮೈಬೂಬ ಅಲಿ ಖತೀಬ್ ರವರಿಗೆ ಸಿಕ್ಕಪಟ್ಟೆ ನೀವು ಮುಸ್ಲಿಂ ಸೂಳೆ ಮಕ್ಕಳು ಇರಬಾರದು ಎಲ್ಲಿಂದಲೊ ಬಂದು ಇಲ್ಲಿ ಏನೆನೊ ಮಾಡುತ್ತಿರಿ ನಿಮ್ಮನ್ನು ಹೊಡೆದು ಕೊಲ್ಲುತ್ತೇವೆ ಅಂತಾ ಹೊಲಸು ಮಾತುಗಳಿಂದ ಬೈದು ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ಮನಬಂದಂತೆ ಓಡಿಸಿ ಓಡಿಸಿ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಜಾವೀದ್ ಅನ್ವರ್ ಮತ್ತು ಇತರರು ನಮಗೆ ಬಿಡಿಸಿರುತ್ತಾರೆ. ಜಾವೀದ್ ಅನ್ವರ್ ರವರಬೂಲೆರೊ ಪಿಕ್ ಆಪ್ ಗ್ಲಾಸನ್ನು ಸಹ ಕಲ್ಲುಗಳಿಂದ ಹಾಗೂ ಕಬ್ಬಿಣದ ರಾಡ್ ನಿಂದ ಹೊಡೆದು ಹಾಕಿರುತ್ತಾರೆ. ನನಗೆ ಎಡಗಡೆ ಪಕ್ಕಿಗೆ , ದವಡೆಗಳಿಗೆ ಹಾಗೂ ತಲೆಯ ಹಿಂಬಾಗ ಕೈ ಕಾಲುಗಳಿಗೆ ಒಳಪೆಟ್ಟು ಆಗಿರುತ್ತದೆ. ಮೈಬೂಬ ಅಲಿ ಖತೀಬ್ ರವರಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಕೈಕಾಲುಗಳಿಗೆ ಸಹ ಗಾಯಗಳಗಿರುತ್ತವೆ.
         ಈ ಹಿಂದೆ ನಮ್ಮ ಪಟ್ಟಣದ ಪದ್ಮಾವತಿ ಗಂಡ ವೆಂಕೋಬ ರವರನ್ನು ಇಬ್ರಾಹಿಂ ಬಾಬಾ ರವರು ಪ್ರೀತಿಸಿ ಇಬ್ಬರು ಊರ ಬಿಟ್ಟು ಹೋಗಿದ್ದು ಅವರು ವಾಪಸ್ಸು ಬಂದ ನಂತರ ಪದ್ಮಾವತಿರವರು ಇಬ್ರಾಹಿಂ ಅವರ ಜೊತೆಗೆ ವಾಸಿಸುತ್ತಾ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಅವಳಿಗೆ ಕೊಲೆ ಮಾಡಿದ್ದರೆಂದು ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸು ಆಗಿರುತ್ತದೆ ಈ ವಿಷಯದಲ್ಲಿ ಇಬ್ರಾಹಿಂ ಬಾಬಾರವರಿಗೆ ಅವರ ಜಾತಿಯವರಾದ ನಾವು ಸಪೋರ್ಟ್ ಮಾಡಿದಿವಿ ಅಂತಾ ಈ ರೀತಿ ಆರೋಪಿತರು ಗುಂಪು ಸೇರಿ ನಮಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಹಾಗೂ ಜಾವೀದ್ ಅನ್ವರ್ ರವರಬೂಲೆರೊ ಪಿಕ್ ಆಪ್ ಗ್ಲಾಸ್ಸು ಗಳನ್ನು ಹೊಡೆದು ಆಕ್ರಮ ನಷ್ಟ ಮಾಡಿರುತ್ತಾರೆ. ಮೈಬೂಬ ಅಲಿ ಖತೀಬ್ ಅವರಿಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆ ಕುರಿತು ಬೇರೆ ದೊಡ್ಡ ಆಸ್ಪತ್ರೆಗೆ ಕಳಿಸಿ ತಾನು ಈಗ ಪೊಲೀಸ್ ಠಾಣೆಗೆ ಬಂದು ದೂರನ್ನು ಕೊಟ್ಟಿರುತ್ತೇನೆಂದು ಇದ್ದ ಮೇರೆಗೆ ಹಟ್ಟಿ ಪೊಲೀಸ್ ಗುನ್ನೆ ನಂಬರ 91/2019 PÀ®A 143, 147, 148, 307, 427, 504, 506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 24-06-2019 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿ ಈರಮ್ಮ ಗಂಡ ಲಚುಮಪ್ಪ ವಯಾಃ 38 ವರ್ಷ ಜಾತಿಃ ಕಬ್ಬೆರ ಉಃ ಮನೆ ಕೆಲಸ ಸಾಃ ಬೇವಿನಮಂಚು ತಾಃ ಜಿಃ ರಾಯಚೂರು ಹಾಃವ ಥೈರೋಡ್ ಕೃಷ್ಣ ಮಂಡಲಂ ಜಿಃ ಮೈಹಿಬೂಬ್ ನಗರ ತೆಲಂಗಾಣ ರಾಜ್ಯ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು  ನೀಡಿದ್ದು ಸಾರಾಂಶವೆನೆಂದರೆ ಮೃತನಾದ ಲಚುಮಪ್ಪ ಈತನು ಫಿರ್ಯಾದಿದಾರಳ ಗಂಡನಿದ್ದು ಈತನು ಇಂದು ದಿನಾಂಕ 24-06-2019 ರಂದು  ತನ್ನ ಅಣ್ಣ ತಮ್ಮಂದಿರ  ನಡುವೆ ಜಮೀನು ಭಾಗವಾಗಿದ್ದರಿಂದ ತನ್ನ ಪಾಲಿಗೆ ಬಂದ ಜಮೀನನ್ನು ನೊಂದಣಿ ಮಾಡಿಸಿಕೊಳ್ಳಲು ಹಣದ ಅಡಚಣೆ ಇದ್ದುದ್ದರಿಂದ ತನ್ನ ಹೆಂಡತಿಯ ತವರು ಮನೆಯದಾದ ಗಾಂದಿನಗರ ಸಿಂದನೂರಿಗೆ  ಹೋಗಿ ಹಣವನ್ನು ತೆಗೆದುಕೊಂಡು ಬರಲು ಅಂತಾ ತನ್ನ ಮೋಟರ್ ಸೈಕಲ್ ನಂ ಕೆ.ಎ 36 ಕ್ಯೂ 4441 ನೆದ್ದನ್ನು ನಡೆಸಿಕೊಂಡು ಮಾನವಿ- ಸಿಂದನೂರು ಮುಖ್ಯ  ರಸ್ತೆಯ ಮೇಲೆ ಮಾನವಿ ಪಟ್ಟಣದ ಗಣೇಶ ಗುಡಿ ಹತ್ತಿರ ಇಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಹೊರಟಾಗ ಅದೇ ವೇಳೆಗೆ ಸಿಂದನೂರು ಕಡೆಯಿಂದ ಮಾನವಿ ಕಡೆಗೆ ಆರೋಪಿತನಾದ ಸೈಯಾದ್ ಅಫ್ರೋಜ್ ತಂದೆ ಸೈಯಾದ್ ಚಾಂದಪಾಷ  ಸಾಃ ಸಿಂದನೂರು ಈತನು ತನ್ನ ಮೋಟರ್ ಸೈಕಲ್ ನಂ ಕೆ.ಎ 36 ಯು-0779  ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ತನ್ನ ಎಡಬಾಜು ಹೊಗದೇ ಬಲ ಬಾಜು ರಾಂಗ್ ಸೈಡಿನಲ್ಲಿ ಬಂದು ಲಚುಮಣ್ಣ ಈತನ ಮೋಟರ್ ಸೈಕಲಿಗೆ ಟಕ್ಕರ್ ಮಾಡಿದ್ದರಿಂದ ಇಬ್ಬರು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಲಚುಮಣ್ಣ ಈತನ ತಲೆಗೆ ಭಾರಿ ರಕ್ತಗಾಯಗಳಾಗಿದ್ದು ಆರೋಪಿ ಸೈಯಾದ್ ಅಫ್ರೋಜ್ ಈತನಿಗೆ ಕೂಡ ಎಡ ಬಲಕಿನ ಹತ್ತಿರ ಭಾರಿ ರಕ್ತಗಾಯಗಳಾಗಿದ್ದು ಇಲಾಜು ಕುರಿತು ಇಬ್ಬರನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ 108 ಅಂಬುಲೇನ್ಸ ವಾಹನದಲ್ಲಿ ತರುವಾಗ ಆಸ್ಪತ್ರೆಯ ಸಮೀಪ ಲಚುಮಣ್ಣ ಈತನು ಇಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣವಾದ ಮೋಟರ್ ಸೈಕಲ್ ನಂ ಕೆ.ಎ 36 ಯು-0779 ನೇದ್ದರ ಚಾಲಕ ಸೈಯಾದ್ ಅಫ್ರೋಜ್ ಈತನ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 135/2019 ಕಲಂ 279.338.304 (ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.