Thought for the day

One of the toughest things in life is to make things simple:

8 Jun 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ :08-06-2019 ರಂದು ಬೆಳಿಗ್ಗೆ 4-00 ಗಂಟೆಗೆ ಫಿರ್ಯಾದಿ ಹಸೇನಮ್ಮ ಗಂಡ ಹುಸೇನಪ್ಪ 30 ವರ್ಷ ಜಾ;ಚಲುವಾದಿ ಉ;ಮನೆಕೆಲಸ ಸಾ;ಹಾಗಲದಾಳ ತಾ;ಕುಷ್ಠಗಿ ಜಿ;ಕೊಪ್ಪಳ ಈಕೆಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:07/06/2019 ರಂದು ರಾತ್ರಿ 7-45 ಗಂಟೆ ಸುಮಾರಿಗೆ ಸಿಂಧನೂರು – ಗಂಗಾವತಿ ಮುಖ್ಯ ರಸ್ತೆಯ ನ್ಯೂ ಪಂಜಾಬಿ ದಾಬಾದ ಹತ್ತಿರ ವೀರರಾಜು ರವರ ಹೊಲದ ಮುಂದಿನ ರಸ್ತೆಯಲ್ಲಿ ಗಂಗಾವತಿ ಕಡೆಯಿಂದ ಸಿಂಧನೂರು ಕಡೆಗೆ ಕೆಎಸ್ ಆರ್ ಟಿ ಸಿ ಬಸ್ ನಂ: ಕೆಎ-42 ಎಫ್-2220 ನೇದ್ದ ಚಾಲಕ ಸಂಗನಗೌಡ ಮಾಲಿಪಾಟೀಲ್ ರಾಮನಗರ ಡಿಪೋ ಈತನು ತನ್ನ ಬಸ್ಸನ್ನು ಗಂಗಾವತಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಬರುವ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಬಲಗಡೆಗೆ ನಡೆಸಿಕೊಂಡು ಬಂದವನೇ ಶ್ರೀಪುರಂಜಂಕ್ಷನ್ ಕಡೆಗೆ ಯಮನೂರು ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-29 ಕ್ಯೂ -6030 ನೇದ್ದರ ಹಿಂದುಗಡೆ ಹುಸೇನಪ್ಪ ನನ್ನು ಕೂಡಿಸಿಕೊಂಡು ಹೋಗುತ್ತಿರುವಾಗ ಎದುರುನಿಂದ ಟಕ್ಕರ್ ಕೊಟ್ಟಿದ್ದರಿಂದ ಟಕ್ಕರ್ ಕೊಟ್ಟ ರಭಸಕ್ಕೆ ಇಬ್ಬರೂ ಪುಟಿದು ಕೆಳಗಡೆ ಬಿದ್ದಿದ್ದು ಯಮನೂರು ಈತನಿಗೆ ಹಿಂದೆಲೆಗೆ ಭಾರಿ ರಕ್ತಗಾಯವಾಗಿ ಎಡ ಮತ್ತು ಬಲಗಡೆಯ ಹಣೆಗೆ ಭಾರಿ ರಕ್ತಗಾಯವಾಗಿದ್ದು ಮೂಗು ಹಾಗೂ ಕಿವಿಯಲ್ಲಿ ರಕ್ತಸ್ರಾವವಾಗಿ ಎಡಗೈ ಮುಂಗೈ ಮುರಿದು , ಬಲಗಾಲು ತೊಡೆ ಒಳಪೆಟ್ಟಾಗಿ ಮುರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಂತರ ಹುಸೇನಪ್ಪ ನನ್ನು ನೋಡಲಾಗಿ ತಲೆಯ ಹಿಂದುಗಡೆ ಮತ್ತು ಎಡಕಪಾಳಕ್ಕೆ ಭಾರಿ ರಕ್ತಗಾಯವಾಗಿ , ಕಿವಿಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಎಡಗೈ ಮುಂಗೈ ಮುರಿದಿದ್ದು, ಬಲ ಮತ್ತು ಎಡಪಾದಗಳಿಗೆ ತೆರಚಿದ ಗಾಯಗಳಾಗಿದ್ದವು. ಹುಸೇನಪ್ಪನನ್ನು ಚಿಕಿತ್ಸೆ ಕುರಿತು 108 ಅಂಬ್ಯೂಲೆನ್ಸ್ ನಲ್ಲಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಿನಾಂಕ:07-06-2019 ರಂದು ರಾತ್ರಿ 8-00 ಗಂಟೆಗೆ ದಾರಿಯ ಮದ್ಯದಲ್ಲಿ ಎಂಜಿ ವೃತ್ತದ ಹತ್ತಿರ ಮೃತಪಟ್ಟಿದ್ದು ಇರುತ್ತದೆ. ಸದರಿ ಅಪಘಾತವು  ಕೆಎಸ್ ಆರ್ ಟಿ ಸಿ ಬಸ್ ನಂ: ಕೆಎ-42 ಎಫ್-2220 ನೇದ್ದ ಚಾಲಕ ಸಂಗನಗೌಡ ಮಾಲಿಪಾಟೀಲ್ ರಾಮನಗರ ಡಿಪೋ ಈತನ ನಿರ್ಲಕ್ಷತನದಿಂದ ಜರುಗಿದ್ದು ಕಾರಣ ಸದರಿ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ: 41/2019 ಕಲಂ:279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ
ದಿನಾಂಕ:08-06-2019 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಾದ ಬಸನಗೌಡ ತಂದೆ ಮಂಜುನಾಥ ಗೌಡ, ಲಿಂಗಾಯತ, 26 ವರ್ಷ, ಬಿಕಾಂ ವಿಧ್ಯಾರ್ಥಿ, ಸಾ:ತಲಮಾರಿ ಗ್ರಾಮ, ಹಾ.: ಎನ್.ಜಿ. ಕಾಲೋನಿ, ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು, ಸದರಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 07.06.2019 ರಂದು ಸಂಜೆ 4.45 ಗಂಟೆಗೆ ಪಿರ್ಯಾದಿದಾರನು ತನ್ನ ಊರಿಗೆ ಹೋಗುವ ಸಲುವಾಗಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ನಂ. 2 ಹತ್ತಿರ ತಮ್ಮೂರಿನ ಸ್ನೇಹಿತರ ಜೊತೆಗೆ ಮಾತಾಡುತ್ತಾ ನಿಂತುಕೊಂಡಾಗ, ಸಂಜೆ 5.00 ಗಂಟೆಗೆ ತಲಮಾರಿಗೆ ಹೋಗುವ ಸ್ ನಂ. ಕೆ.-36, ಎಫ್-1079 ಬಂದಿದ್ದು, ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣ, ತಾನು ಮತ್ತು ನ್ನ ಸ್ನೇಹಿತರು ಡ್ರೈವರಿನ ಬಾಗಿಲಿನಿಂದ ಬಸ್ಸ್ ಹತ್ತಲು ಹೋದಾಗ, ಡ್ರೈವರನು ಒಮ್ಮೇಲೆ ಸಿಟ್ಟಿಗೆ ಬಂದು ‘’ ಸೂಳೇ ಮಕ್ಕಳೇ ಹಿಂದೆ ಹೋಗಿ ಹತ್ರಿಅಂತಾ ಅಂದಿದ್ದು, ಆಗ ಪಿರ್ಯಾದಿದಾರನು ಸರಿಯಾಗಿ ಮಾತಾಡು ಅಂತಾ ಅಂದಿದಕ್ಕೆ ‘’ಏನು ಮಾತಾಡಬೇಕಲೇ’’ ಅಂತಾ ಅಂದವನೇ ಬಸ್ಸಿನಿಂದ ಕೆಳಗೆ ಇಳಿದು, ಮಾತಿಗೆ ಮಾತು ಬೆಳೆಸಿ, ಬಾಯಿ ಮಾಡುತ್ತಿರುವಾಗ, ಅಲ್ಲಿದ್ದ ಬೇರೆ ಬಸ್ಸಿನ ಚಾಲಕ ಗಿರಿಯಪ್ಪ ಮತ್ತು ಕಂಡಕ್ಟರ್ ಮೋಹಿನುದ್ದೀನ್ ಮತ್ತು ಕಂಟ್ರೋಲರ್ ಅಣ್ಣಪ್ಪ ರವರು ಅಲ್ಲಿಗೆ ಬಂದು, ಎಲ್ಲಾರೂ ಸೇರಿ ಪಿರ್ಯಾದಿದಾರನಿಗೆ‘’ ಏನಲೇ ಮಗನೇ ಕುಂಡಿತುಂಬಿದೆ ಏನು ಚಾಲಕ ಸಿದ್ದಪ್ಪನೊಂದಿಗೆ ಯಾಕೇ ಜಗಳ ಮಾಡುತ್ತಿರಿ ಎಂದು ಬೈದಿದ್ದು, ಆಗ ತಾವುಗಳು ಜಗಳ ಮಾಡಿಲ್ಲ ಸರ್ ಸರಿಯಾಗಿ ಮಾತಾಡಿ ಅಂತಾ ಹೇಳಿ ಬಸ್ಸಿನ ಹಿಂದುಗಡೆ ಹೋಗುವಾಗ, 4 ಜನರು ಅಡ್ಡ ಬಂದು, ನಿಲ್ಲಲೇ ಸೂಳೇ ಮಗನೇ ಅಂತಾ ತಡೆದುನಿಲ್ಲಿಸಿ ಸಿದ್ದಪ್ಪ, ಮೊಹಿನುದ್ದೀನ್, ಗಿರಿಯಪ್ಪ ರವರು ಪಿರ್ಯಾದಿದಾರನನ್ನು ಹಿಡಿದುಕೊಂಡು, ಕೈಗಳಿಂದ ಮನಬಂದಂತೆ ಹೊಡೆದಿದ್ದು, ಅಣ್ಣಪ್ಪ ಕಂಟ್ರೋಲರ್ ಇವರು ತಮ್ಮ ಎಡಗಾಲಿನ ಬೂಟು ತೆಗೆದು ಪಿರ್ಯಾದಿದಾರನ ಎಡ ಕಪ್ಪಾಳಕ್ಕೆ ಹೊಡೆದಿರುತ್ತಾನೆ. ಇನ್ನೊಮ್ಮೆ ನೀನು ಒಬ್ಬನೇ ಸಿಗು ಮಗನೇ ಇಲ್ಲಿಯೇ ಹೂತು ಹಾಕಿಬಿಡುತ್ತೇವೆ ಎಂದು ಹೆದರಿಸಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾಧಿಯ ಆಧಾರದ ಮೇಲಿಂದ ಆರೋಪಿತರ ವಿರುದ್ದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂ:34/2019 ಕಲಂ: 341, 504, 323, 355, 506 ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ07/06/2019 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಅಶೋಕ,ಆತನ ಮಗಳಾದ ಚಾಮುಂಡಿ-14 ವರ್ಷ, ಹೆಂಡತಿ ಆಂಜಿನಮ್ಮ-38 ವರ್ಷ  ಇವರು ಊಟಮಾಡಿ ಮನೆಯ ಮುಂದೆ ಕುಳಿತಿದ್ದಾಗ ಆರೋಪಿ 1ಬಸವರಾಜ ಊಟ ಮಾಡಿದ ನಂತರ ಮುಸೂರಿ ನೀರನ್ನು ಅಶೋಕನ ಮನೆಯ ಅಂಗಳದಲ್ಲಿ ಚೆಲ್ಲಿದಿದ್ದರಿಂದ ಅಶೋಕನು ಸ್ನಾನ ಮಾಡಿದ ನೀರು ಮತ್ತು ಮುಸೂರಿ ನೀರನ್ನು ಹೋಗಲು ಇಬ್ಬರ ಮದ್ಯ  ಒಂದು ಸಣ್ಣ ಕಾಲುವೆ ಮಾಡಿದ್ದು, ಅದರಲ್ಲಿ  ನೀರನ್ನು ಹಾಕದೇ ಅಂಗಳದಲ್ಲಿ ನೀರನ್ನು ಚೆಲ್ಲುತ್ತೀಯ ಎಂದು ಬಸವರಾಜನಿಗೆ ಕೇಳಿದ್ದಕ್ಕೆ ಆರೋಪಿ 1 ಬಸವರಾಜ ಈತನು ಒಮ್ಮೇಲೆ ನಾನು ಎಲ್ಲಿಯಾದರೂ ಚೆಲ್ಲುತ್ತೇನೆ ಅದನ್ನು ಕೇಳಲು ನೀವು ಯಾವನಲೇ ಸೂಳೆ ಮಗನೆ ನಾನು ಇಲ್ಲಿಯೇ ಚೆಲ್ಲುತ್ತೇನೆ ಎನ್ ಸೆಂಟಾ ಹರಿದುಕೊಳ್ಳುತ್ತೀಯ ಅಂತಾ ಅಂದಿದ್ದಕ್ಕೆ ಅಶೋಕನು ಸರಿಯಾಗಿ ಮಾತನಾಡು ಅಂತಾ ಬಸವರಾಜನಿಗೆ ಹೇಳಿದ್ದಕ್ಕೆ ಉಳಿದ  ಆರೋಪಿ 2 ರಿಂದ 12 ಇವರು ಒಟ್ಟಾಗಿ ಬಂದು ಅಶೋಕನಿಗೆ ಮತ್ತು ಆತನ ಹೆಂಡತಿ ಆಂಜಿನಮ್ಮಳಿಗೆ ಹೊಡೆಯಲು ಪ್ರಾಂರಂಬಿಸಿದರು. ಆಗ ಅಲ್ಲಿಯೇ ಇದ್ದ ನಾನು ಮತ್ತು ನಮ್ಮಅಣ್ಣ ನರಸಿಂಹಲು, ಸಣ್ಣಪ್ಪ ದೊಡ್ಡ ತಿಕ್ಕಯ್ಯ ತಂದೆ ಹನುಮಂತಯ್ಯ, ನಾಗರಾಜ ತಂದೆ ಹನುಮಂತ ಎಲ್ಲಾರೂ ಸೇರಿ ಬಸವರಾಜ ಮತ್ತು ಆತನ ಕಡೆಯವರಿಗೆ ಬುದ್ದಿ ಹೇಳಿ ಜಗಳ  ಬಿಡಿಸುತ್ತಿದ್ದೇವು, ಸಂದರ್ಬದಲ್ಲಿ ಬಸವರಾಜ, ಸುಕ್ಕಪ್ಪ, ಬಸ್ಸಪ್ಪ, ಭೀಮೇಶ, ನರಸಿಂಹಲು ಇವರು ನಮ್ಮ ಅಣ್ಣ  ಗಟ್ಟು ನರಸಿಂಹಲು ಈತನಿಗೆ  ನಿನ್ನದೇನಲೇ ನಡುವೆ ಸೂಳೆ ಮಗನೆ ಅಂತಾ ಎದೆ ಹಿಡಿದು ನೂಕಿದರು ಆಗ ನಮ್ಮ ಅಣ್ಣ ಗಟ್ಟು  ನರಸಿಂಹಲು ಕೇಳಗಡೆ ಬಿದ್ದನು, ಮತ್ತು ಪ್ರಾಜ್ಞಾಹೀನ ಸ್ಥಿತಿ ತಲುಪಿದನು. ಆಗ ಬಸವರಾಜ ಮತ್ತು ಉಳಿದವರು ಹೊಡೆಯುವದನ್ನು ನಿಲ್ಲಿಸಿ ಮಗ ನಾಟಕ ಮಾಡುತ್ತಾನೆ ಇನ್ನೋಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಹೇಳುತ್ತ ಜೀವದ ಬೇದರಿಕೆ ಹಾಕಿ ಹೊದರು.ನಂತರ ನಮ್ಮ ಅಣ್ಣನನ್ನು ನಮ್ಮೂರಿನ  ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ಅಲ್ಲಿ ಉಪಚಾರ ಮಾಡಿಸಿ ಅಲ್ಲಿಂದ 108 ಅಂಬುಲೇನ್ಸ ನಲ್ಲಿ ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು ರಾತ್ರಿ 11-15 ಗಂಟೆಗೆ ವೈದ್ಯರು ಮೃತಪಟ್ಟಿರುವದಾಗಿ ತಿಳಿಸಿದರು. ನಮ್ಮ ಅಣ್ಣ ನರಸಿಂಹಲು ಈತನ ಶವ ಸದ್ಯ ರಿಮ್ಸ್ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ಹಾಕಿರುತ್ತೇವೆ. ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂಬರ ಗುನ್ನೆ ನಂ 71/2019 ಕಲಂ 143.147.504.323.304.506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.