Thought for the day

One of the toughest things in life is to make things simple:

11 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ  10/04/19 ರಂದು 20.30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಸಂಗಾಪೂರ ಗ್ರಾಮದಲ್ಲಿ ಹಲ್ಲೆಗೊಳಗಾಗಿ ಕೆಲವು ಜನರು ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ  ತಿಳಿಸಿದ್ದು ಕಾರಣ ಕೂಡಲೇ  .ಎಸ್.ಐ ವೀರನಗೌಡ ರವರಿಗೆ  ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು  ಸದರಿ ಎ.ಎಸ್.ಐ ರವರು ಮಾನವಿ ಸರಕಾರಿ ಆಸ್ಪತ್ರೆಗೆ ಹೋಗಿ  ಗಾಯಗೊಂಡವರಿಗೆ ನೋಡಿ ವಿಚಾರಿಸಿಕೊಂಡು  ನಂತರ  ಅಲ್ಲಿಯೇ ಇದ್ದ ಗಾಯಾಳು ತಿಮ್ಮಾರೆಡ್ಡಿ ಈತನು  ಆಸ್ಪತ್ರೆಯಲ್ಲಿಯೇ ತಾನು ಒಂದು  ದೂರನ್ನು ಬರೆದುಕೊಟ್ಟಿದ್ದನ್ನು ತೆಗೆದುಕೊಂಡು ರಾತ್ರಿ 22.15 ಗಂಟೆಗೆ ವಾಪಾಸ ಠಾಣೆಗೆ ಬಂದು ತಿಮ್ಮಾರೆಡ್ಡಿ ಈತನು ನೀಡಿದ ಸದರಿ ಲಿಖಿತ ದೂರನ್ನು  ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆಇಂದು ದಿನಾಂಕ 10/04/19 ರಂದು ಸಾಯಂಕಾಲ ಫಿರ್ಯಾದಿ ಅತ್ತೆಯಾದ ಕಮಲಮ್ಮ ಹಾಗೂ ಹೆಂಢತಿ ಸುಮಲತಾ ಇವರುಗಳು  ಬಯಲು ಕಡೆಗೆ  ಅಂತಾ ಸಾಯಂಕಾಲ ತಮ್ಮ ಮನೆಯಿಂದ ನಾಯಕ ಮನೆಗಳ ಮುಖಾಂತರ ಹೋಗಬೇಕಾಗಿದ್ದು  ಕಾರಣ ವೀರೇಶ ಮಾದಿಗ  ಇವರ ಮನೆಯ ಮುಂದೆ ಹೊರಟಾಗ  ಅಲ್ಲಿಯೇ ಇರುವ ನಾಯಕ ಜನಾಂಗದ ಮನೆಗಳ ಮುಂದೆ ಮೇಲ್ಕಂಡ ಆರೋಪಿ ನಂ 1 ರಿಂದ 6 ರವರು (ಹೆಣ್ಣು ಮಕ್ಕಳು) ಕುಳಿತಿದ್ದು ಅವುರಗಳು ಕಮಲಮ್ಮ ಹಾಗೂ ಸುಮಲತಾ ಇವರಿಗೆ ನೋಡಿ  ‘’ ಈ ಮಾದಿಗ ಸೂಳೇರು ಇಲ್ಲೇ ನಮ್ಮ ಓಣಿಯಲ್ಲಿಯೇ ತಿರುಗಾಡುತ್ತಾರ, ಈ ಸೂಳೇರು ಸೊಕ್ಕ ಜಾಸ್ತಿಯಾಗಿದೆ ‘’ ಅಂತಾ ಅಂದಿದ್ದು ಕಾರಣ ಕಮಲ್ಲಮ ಈಕೆಯು ಅವರಿಗೆ ‘’ಯಾಕೆ ಬೈಯ್ಯುತ್ತೀರಿ’’ ಅಂತಾ  ಕೇಳಿದ್ದಕ್ಕೆ  ಅವರೆಲ್ಲರೂ ಕೂಡಿ ಓಡಿ ಬಂದು ಕಮಲಮ್ಮಳಿಗೆ ಎಳೆದಾಡುತ್ತಾ ಕೈಗಳಿಂಧ ಹೊಡೆ ಬಡೆ ಮಾಡ ಹತ್ತಿದ್ದು ಕಾರಣ ಸುಮಲಾತಾ ಈಕೆಯು ಅಲ್ಲಿಂದ  ಮನೆಗೆ  ಹೋಗಿ ತನ್ನ ಗಂಡ ತಿಮ್ಮಾರೆಡ್ಡಿ (ಫಿರ್ಯಾದಿ) ಗೆ ತಿಳಿಸದ್ದಕ್ಕೆ ತಿಮ್ಮಾರೆಡ್ಡಿ ಈತನು ತಮ್ಮ ಜನಾಂಗದ ಮೇಲ್ಕಂಡ ಗಾಯಾಳು ನಂ 2 ರಿಂದ 6 ರವರಿಗೆ ಕರೆದುಕೊಂಡು  ಸ್ಥಳಕ್ಕೆ ಹೋಗಿದ್ದು ಕಮಲ್ಲಮ್ಮಳಿಗೆ  ಹೊಡೆ ಬಡೆ ಮಾಡುವದನ್ನು ಕಂಡು ಬಿಡಿಸಲು ಹೋದಾಗ ಅಲ್ಲಿಗೆ ಅವರ ಕಡೆಯವರು ಬಹಳ ಜನರು ಬಂದಿದ್ದು ಅವರಲ್ಲಿ ಲಿಂಗಾಯತ ಜನಾಂಗದ ಾರೋಪಿ ನಂ 7 ರಿಂದ 9 ರವರು ಹಾಜರಿದ್ದು  ಅವರು ಈ ಮಾದಿಗ ಸೂಳೆ ಮಕ್ಕಳದು ಜಾಸ್ತಿ ಆಗಿದೆ ಇವತ್ತು ಇವರಿಗೆ ಮುಗಿಸಿಬಿಡ್ರಲೇ ಅಂತಾ ಜಾತಿ ನಿಂದನೆ ಮಾಡಿ ಪ್ರಚೋದನೆ ಮಾಡಿದ್ದರಿಂದ ಆರೋಪಿನಂ 10 ರಿಂಧ 22 ಮತ್ತು ಆರೋಪಿ ನಂ 1 ಹನುಮಂತಿ ಗಂಡ ಹಂಪಯ್ಯ ನಾಯಕ ಸಾ: ಸಂಗಾಪೂರ ಹಾಗೂ ಇತರೆ 21 ಸೇರಿ  ಅಕ್ರಮಕೂಟ ರಚಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿ ಹಾಗೂ ಮೇಲ್ಕಂಡ ಗಾಯಾಳು ನಂಬರ 2 ರಿಂಧ 6 ರವರಿಗೆ ಕೊಡ್ಲಿ, ಕಟ್ಟಿಗೆ ಹಾಗೂ ಕೈಗಳಿಂಧ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಒಳಪೆಟ್ಟುಗೊಳಿಸಿ ದ್ದು ಅಲ್ಲದೇ  ಇನ್ನು ಮುಂದೆ ಊರಲ್ಲಿ ಇದ್ದು ಹೇಗೆ ಬಾಳ್ವೆ ಮಾಡುತ್ತೀರಿ ಅಂತಾ ಜೀವದ ಬೆದರಿಕೆಯನ್ನು  ಹಾಕಿದ್ದು ಇರುತ್ತದೆ ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ  ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 84/2019  ಕಲಂ 143,147,148,114,307,323,324,354,504,506  ಸಹಿತ 149  .ಪಿ.ಸಿ. ಮತ್ತು ಕಲಂ 3(1) (r) (s) (w) (i), 3(2) (Va)  ಎಸ್.ಸಿ. / ಎಸ್ ಟಿ . ತಿದ್ದುಪಡಿ ಕಾಯ್ದೆ- 2015  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ದಿನಾಂಕ 10-04-2019 ರಂದು 21-30 ಗಂಟೆಗೆ ಮಾನವಿ ಸರ್ಕಾರಿ ಆಸ್ಪತ್ರೆಯಿಂದ ಫೋನ್ ಮುಖಾಂತರ  ತಿಳಿಸಿದ್ದೇನೆಂದೆರೆ, ಸಂಗಾಪುರ ಗ್ರಾಮದಲ್ಲಿ ಜಗಳದಲ್ಲಿ ಗಾಯಗೊಂಡು ಕೆಲವರು ಆಸ್ಪತ್ರೆಗೆ ಚಿಕಿತ್ಸೆ ಕುರಿತು  ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಕೂಡಲೇ  ನಾನು ಇಸ್ಮಾಯಿಲ್ ಹೆಚ್,ಸಿ 309 ರವರಿಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಹೆಚ್,ಸಿ  309 ರವರು ಮಾನವಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಗಾಯಗೊಂಡವರಿಗೆ ನೋಡಿ ವಿಚಾರಿಸಿದ್ದು ನಂತರ ಗಾಯಾಳು ಬಸವರಾಜನು ಆಸ್ಪತ್ರೆಯಲ್ಲಿಯೇ ತನ್ನ ಕಡೆಯವರಿಂದ ಒಂದು ದೂರನ್ನು ಬರೆಯಿಸಿ ಹಾಜರುಪಡಿಸಿದ್ದನ್ನು ತೆಗೆದುಕೊಂಡು ರಾತ್ರಿ 23-30 ಗಂಟೆಗೆ ವಾಪಸ್ ಠಾಣೆಗೆ ಬಂದು ಬಸವರಾಜನ ದೂರನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ಇಂದು ದಿನಾಂಕ 10-04-2019 ರಂದು ಸಾಯಾಂಕಾಲ 6-00 ಗಂಟೆಯಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ ಮಾದಿಗ ಜನಾಂಗದ ಮೇಲ್ಕಂಡ ಆರೋಪಿ ನಂ 1 ರಿಂದ 6 ರವರು ಫಿರ್ಯಾದಿ ಮನೆಯ ಮುಂದಿನ ಅಂಗಳದಲ್ಲಿ ಬಂದು ಬಯರ್ದೆಸೆಗೆ ಕುಳಿತಾಗ ಫಿರ್ಯಾದಿಯು ಅವರಿಗೆ '' ಏನಮ್ಮ ಇಲ್ಲಿ ಒಲಸು ಹಾಗುತ್ತದೆ ಆ ಕಡೆ ಹೋಗಿರಿ ಅಂತಾ ಹೇಳಿದ್ದಕ್ಕೆ ಅವರೆಲ್ಲರೂ ಬಂದು ಫಿರ್ಯಾದಿಗೆ ತಡೆದು ನಿಲ್ಲಿಸಿ '' ಏನಲೇ ಬ್ಯಾಡ ಸೂಳೇ ಮಗನೇ ನಿಮ್ಮದು ಬಹಳ ಆಗ್ಯಾದ '' ಅಂತಾ  ಕೈಗಳಿಂದ ಹೊಡೆಬಡೆ ಮಾಡುತ್ತಾ ಹತ್ತಿದಾಗ ಆರೋಪಿ ನಂ  7 ತಿಮ್ಮಾರೆಡ್ಡಿ ಈತನು ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ಫಿರ್ಯಾದಿಗೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತು ಆರೋಪಿ ನಂ 8 ಸತೀಶರೆಡ್ಡಿ ಈತನು ಗುಂಪು ಕಟ್ಟಿಕೊಂಡು ಕೊಡಲಿ, ಕುಡಗೋಲು ಹಿಡಿದುಕೊಂಡು ಬಂದು ಬೆನ್ನಿಗೆ ಹೊಡೆದು '' ಈ ಬ್ಯಾಡ ಸೂಳೇ ಮಕ್ಕಳದು ಬಹಳ ಆಗ್ಯಾದ ನಿಮ್ಮ ಜನಾಂಗದ ಯಾರ ಯಾರ ಇದಾರೇ ಕರಿ '' ಅಂತಾ ಅಂದಾಗ ಫಿರ್ಯಾದಿಯ ತಂದೆ ಅಯ್ಯಪ್ಪ ಹಾಗೂ ಮೇಲ್ಕಂಡ ಗಾಯಾಳುಗಳುಗಳೆಲ್ಲರೂ ಬಂದಾಗ ಅವರೆಲ್ಲರಿಗೂ ಆರೋಪಿತರೆಲ್ಲರೂ ಕೂಡಿ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ರಕ್ತಗಾಯಗೊಳಿಸಿದ್ದು ಅಲ್ಲದೇ ಜೀವದ ಬೇದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 85/2019  ಕಲಂ 143,147,148, 341, 307,323, 324, 504, 506 ಸಹಿತ 149 .ಪಿ.ಸಿ ಹಾಗೂ ಕಲಂ 3 (1)(r) (s) (w) (i) 3(2) ( Va) ಎಸ್.ಸಿ/ಎಸ್.ಟಿ ತಿದ್ದುಪಡಿ ಕಾಯ್ದೆ 2015 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.