Thought for the day

One of the toughest things in life is to make things simple:

12 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣ ಮಾಹಿತಿ.
ದಿ.11-11--2019 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಮೃತ ಕೊಟ್ರಯ್ಯ ಸ್ವಾಮಿ ತಂದೆ ಸಂಗನ ಬಸ್ಸಯ್ಯಸ್ವಾಮಿ ಹಿರೇಮಠ ವಯ-60ವರ್ಷ ,ಜಾತಿ-ಜಂಗಮ,ಉ-ಒಕ್ಕಲುತನ ಮತ್ತು ಮೋಟಾರ ಸೈಕಲ್ ನಂಬರ ಕೆ.ಎ-36/ಇ.ಆರ್-0122ರ ಸವಾರ ಸಾ:ಬಳಗಾನೂರು ಈತನು ತಾನು ನಡೆಸಿಕೊಂಡು ಹೊರಟಿದ್ದ ಮೋಟಾರ ಸೈಕಲನ್ನು ಮಾನವಿ-ರಾಯಚೂರು ಮುಖ್ಯ ರಸ್ತೆಯಲ್ಲಿ ಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಮಸೀದಿ ಹತ್ತಿರ ರಸ್ತೆಯ ಮೇಲೆ ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಈಗಾಗಲೇ ಸತ್ತುಬಿದ್ದಿದ್ದ ಕೋಣಕ್ಕೆ ಟಕ್ಕರ ಕೊಟ್ಟು ಆಯ ತಪ್ಪಿ ಸ್ಕಿಡ್ಡಾಗಿ ಬಿದ್ದಿದ್ದರಿಂದ ತಲೆಗೆ ಮೈಕೈಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಪಿರ್ಯಾದಿದಾರನು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 153/2019 ಕಲಂ 279,304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 11-11-2019 ರಂದು 11-15 .ಎಂ ಕ್ಕೆ  ಪಿರ್ಯಾದಿಯು ಠಾಣೆಗೆ ಹಾಜರಾಗಿ ಸಲ್ಲಿಸಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 10-11-2019 ರಂದು ರಾತ್ರಿ 8-30 ಗಂಟೆ ಸುಮಾರು ಗಾಯಾಳು ಸದ್ದಾಂಹುಸೇನ ಈತನು  ಹಿರೋ ಡಾನ ಮೋಟಾರ್ ಸೈಕಲ್  ನಂ. ಕೆಎ-19 ಎಕ್ಸ- 6613 ನೇದ್ದನ್ನು ಉಮಲೂಟಿಯಿಂದ ತಾವರಗೇರಿ ಕಡೆಗೆ ಸಿಂಧನೂರು-ಕುಷ್ಟಗಿ ಮುಖ್ಯ ರಸ್ತೆಯಲ್ಲಿ  ನಡೆಸಿಕೊಂಡು ಹೋಗುತ್ತಿದ್ದಾಗ, ಉಮಲೂಟಿ ಪುರರಸ್ತೆ ಕ್ರಾಸ್  ಸಮೀಪದಲ್ಲಿ ರಸ್ತೆಯಲ್ಲಿ ಹಿಂದಿನಿಂದ ಆರೋಪಿತನು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್  ಚಾಸ್ಸೀಸ್  ನಂ. MBLHAW886K5G16689 ನೇದ್ದರ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಗಾಯಾಳು ಸದ್ದಾಂಹುಸೇನನ ಮೋಟಾರ್ ಸೈಕಲನ ಹಿಂಬದಿಗೆ ಟಕ್ಕರ್  ಕೊಟ್ಟು ರಸ್ತೆ ಅಪಘಾತಡಿಸಿದ್ದರ ಪರಿಣಾಮವಾಗಿ ಇಬ್ಬರು ಮೋಟಾರ್  ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದಿದ್ದರಿಂದಸದ್ದಾಂ ಹುಸೇನನಿಗೆ ಬಲಗಾಲು ಮೊಣಕಾಲು ಮತ್ತು ಬಲಮೊಣಕೈಗೆ ಹಾಗೂ ಎದೆಗೆ ತೆರಚಿದ ರಕ್ತಗಾಯವಾಗಿ, ಹಿಂದೆಲೆಗೆ ಬಾರೀ ಒಳಪೆಟ್ಟಾಗಿ ಭಾವು ಬಂದಿದ್ದು ಹಾಗೂ ಆರೋಪಿತನ ಹಣೆಗೆ ಭಾರೀ ಒಳಪೆಟ್ಟಾಗಿ ಮೂಗಿನಲ್ಲಿ ರಕ್ತಸೋರಿದ್ದು, ಬಲಗಾಲು ಹೆಬ್ಬರಳಿಗೆ ತೆರಚಿದ ರಕ್ತಗಾಯವಾಗಿದ್ದು , ಗಾಯಾಳುಗಳಿಗೆ 108 ಆಂಬುಲೆನ್ಸನಲ್ಲಿ ತಾವರಗೇರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸದ್ದಾಂಹುಸೇನನಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿತನಿಗೆ  ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದ್ದು, ಆರೋಪಿತನು ತನಗೆ ಅಪಘಾತದಲ್ಲಿ ಆದ ಗಾಯಗಳಿಂದ ಚೇತರಿಸಿಕೊಳ್ಳದೇ ಇಂದು ದಿನಾಂಕ: 11-11-2019 ರಂದು ಬೆಳಗಿನ ಜಾವ 3-35 ಗಂಟೆಗೆ ವಿಮ್ಸ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ತತನದಿಂದ ನಡೆಸಿದ್ದರಿಂದ ರಸ್ತೆ ಅಪಘಾತ ಜರುಗಿದ್ದು, ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು, ಪಿರ್ಯಾದಿಯು ತನ್ನ ತಮ್ಮ ಸದ್ದಾಂನ ಆರೈಕೆ ಕುರಿತು ಆಸ್ಪತ್ರೆಯಲ್ಲಿಯೇ ಇದ್ದು , ಇಂದು  ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಠಾಣಾ ಗುನ್ನೆ ನಂಬರ 194/2019 U/s-  279, 337, 338, 304 (A) IPC  ಪ್ರಕ5 ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ:11.11.2019 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ತನ್ನ ಮನೆಯ ಮುಂದೆ ಇರುವಾಗ ಹಾಗೂ ಹೊಲಕ್ಕೆ ಹೋಗುವಾಗ ಆರೋಪಿತನು ಈಗ್ಗೆ ಒಂದು ವರ್ಷದಿಂದ ಹಿಂದೆ ಹೋಗಿ ಸತಾಯಿಸುತ್ತಾ ಹಾಗೂ ಚೂಡಾಯಿಸುತ್ತಾ ಲೈಂಗಿಕವಾಗಿ  ಕಿರುಕುಳ ನೀಡುತ್ತಾ ಬಂದು ಇಬ್ಬರೂ ಮಲಗಿಕೊಳ್ಳೊಣ ಬಾ ಅಂತಾ ಕರೆಯುವುದು ಮಾಡುತ್ತಿದ್ದು ಇರುತ್ತದೆ. ಇದರಿಂದ ಫಿರ್ಯಾದಿದಾರಳು ತನ್ನ ಮರ್ಯಾದೆಗೆ ಅಂಜಿ ಸುಮ್ಮನೆ ಇದ್ದಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ:11.11.2019 ರಂದು ಬೆಳಿಗ್ಗೆಯಿಂದ  ಆರೋಪಿತನು ಫಿರ್ಯಾದಿದಾರಳ ಮನೆಯ ಮುಂದೆ ಹೋಗಿ ಫಿರ್ಯಾದಿದಾರಳಿಗೆ ಕೈ ಸನ್ನೆ ಮಾಡಿ ಕರೆಯುವುದು ಮಾಡುತ್ತಿದ್ದು ಇಷ್ಟಾದರೂ ಸಹ ಫಿರ್ಯಾದಿದಾರಳು ಸುಮ್ಮನೆ ಇದ್ದಿದ್ದು ಇರುತ್ತದೆ.  ಇಂದು ದಿ:11.11.2019 ರಂದು ರಾತ್ರಿ 7.00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಮನೆಯ ಮುಂದೆ ಇರುವಾಗ ಆರೋಪಿತನು ಅಲ್ಲಿಗೆ ಹೋಗಿ ಫಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ಲೇ ಸೂಳೆ ಬಾರಲೇ ನಾನು ನೀನಗೆ ಎಷ್ಟು ಸಲ ಅಂತಾ ಕರೆಯಬೇಕು ಎಂದು ಫಿರ್ಯಾದಿದಾರಳ ಮೈ ಕೈ ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ್ದು ಆಗ ಫಿರ್ಯಾದಿದಾರಳು ನನ್ನ ಗಂಡ ಇಲ್ಲೆ ಇದ್ದಾನೆ ಆತನು ಬಂದರೆ ನೀನ್ನನ್ನು ಬೀಡುವುದಿಲ್ಲ ನೋಡು ಅಂತಾ ಅಂದಾಗ ಅದನ್ನು ಎನು ಕೇಳುತ್ತೀಯಲೇ ಎಂದು ಕೈ ಹಿಡಿದು ಎಳದಾಡಿದಾಗ ಫಿರ್ಯಾದಿದಾರಳು ಚೀರಾಡಿಕೊಂಡಾಗ ಫಿರ್ಯಾದಿದಾರಳ ಗಂಡ ಬಂದಾಗ ಆರೋಪಿತನು ಇವತ್ತು ಉಳಿದುಕೊಂಡಲೇ ಸೂಳೆ ಎಲ್ಲಿಯಾದರೂ ಸೀಗು ನೋಡು ನಿನ್ನನ್ನು ಬೀಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋದನು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ಲ ಪೊಲೀಸ್ ಠಾಣಾ ಗುನ್ನೆ ನಂಬರ 129/2019 PÀ®A: 341, 354, 354(J), 354 (r), 504, 506 L ¦ ¹ ಅಡಿಯಲ್ಲಿ  ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ತಾರೀಕು 11/11/2019 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಶವೆನೆಂದರೆಸುರೇಶ ಆರೋಪಿ ಸುರೇಶ @ ಗುಂಡು ತಂದೆ ಕೇಶಪ್ಪ ರಾಥೋಡ ಈತನು ನಗೆ ಸುಮಾರು ದಿನಗಳಿಂದ ಕೆಟ್ಟ ದೃಷ್ಠಿಯಿಂದ ನೋಡುತ್ತಿದ್ದು ಒಂದು ದಿನ ತಾನು ಮನೆಯಲ್ಲಿದ್ದಾಗ ನೇರವಾಗಿ ಮನೆಗೆ ಬಂದು ನಗೆ   ಹಲ್ಲೆ ಮಾಡಲು ಸಂದರ್ಭದಲ್ಲಿ ತಾನು ಕಿರುಚಾಡುತ್ತಿರವದನ್ನು ಗಮನಿಸಿ ನ್ನ ಮಾವನಾದ ತಿಪ್ಪಣ್ಣ ರಾಥೋಡ ಈತನು ಬಿಡಿಸಿಕೊಂಡನು. ಆಗ ಫಿರ್ಯಾದಿದಾರಳ ಮಾವನು ಸುರೇಶನಿಗೆ ಈ ರೀತಿಯಾಗಿ ಹೆಣ್ಣು ಮಕ್ಕಳ ಜೊತೆಗೆ ದೌರ್ಜನ್ಯ ನಡೆಸುವುದು ಸರಿ ಅಲ್ಲವೆಂದು ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದನು.  ನಂತರ ದಿನಾಂಕ 06/11/2019 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತಿಪ್ಪವ್ವ ಗಂಡ ವಸನಪ್ಪ ಅವರ ಹೊಲದ ಬದುವಿನಲ್ಲಿ ದನ ಮೇಯಿಸುತ್ತಿದ್ದಾಗ ಆರೋಪಿ ಸುರೇಶ @ ಗುಂಡು  ಈತನು ತನ್ನ ಹತ್ತಿರ ನೇರವಾಗಿ ಬಂದು ಲೈಂಗಿಕಕ್ಕೆ ಸಹಕರಿಸುವಂತೆ ಕೇಳಿದಾಗ ಫಿರ್ಯಾದಿದಾರಳು ನಿರಾಕರಿಸಿದಾಗ ಅದಕ್ಕೆ ಆರೋಪಿತು ಆಕೆಗೆ ಎಲೇ ಸೂಳೆ ಎಷ್ಟು ಸೊಕ್ಕು ನಿನಗೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ತನ್ನ ಮೇಲೆ ಹಲ್ಲೆ ಮಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು ಸದರಿ ಪಿರ್ಯಾದಿಯ ಸಾರಾಂಶದಿಂದ ಆರೋಪಿತನ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 270/2019 PÀ®A: 504,323,354 L.¦.¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.