Thought for the day

One of the toughest things in life is to make things simple:

2 Aug 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w  
                            
ಮಟಕಾ ಜೂಜಾಟ ಪ್ರಕರಣದ ಮಾಹಿತಿ
          1) ದಿನಾಂಕ : 31-07-2020 ರಂದು ಸಾಯಂಕಾಲ 3-30  ಗಂಟೆಯ ಸುಮಾರು  ಯು.ಬೊಮ್ಮನಾಳ ಗ್ರಾಮದ ಅಗಸಿ ಕಟ್ಟೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಬ್ರಹ್ಮಾನಂದ ತಂದೆ ಹನುಮಂತ ಕ್ಯಾಡೇದರ . 21, ಜಾ:ನಾಯಕ, : ಮಟಕಾ ಬರೆದುಕೊಳ್ಳುವುದು, ಸಾ: ಯು.ಬೊಮ್ಮನಾಳ  ಬಸವರಾಜ ತಂದೆ ಕನಕರಾಯಪ್ಪ ಆಡೀನ್, -25 ವರ್ಷ ಜಾತಿ-ನಾಯಕ : ಮಟಕಾ ಬರೆದುಕೊಳ್ಳುವುದು, ಸಾ: ಯು.ಬೊಮ್ಮನಾಳ  ರವರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಪಿ.ಎಸ್. ರವರು ಮಾನ್ಯ ಡಿ ಎಸ್ ಪಿ/ ಸಿಪಿಐ  ಸಿಂಧನೂರು  ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ  HC-233, PC-679, PC-472 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  4-00 ಪಿ.ಎಂ ಕ್ಕೆ  ದಾಳಿ ಮಾಡಲು ಆರೋಪಿತರಿಬ್ಬರೂ ಸಿಕ್ಕಿಬಿದ್ದಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು, ಅವರ  ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 1,120/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, 6-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 28/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು ಇಂದು ದಿನಾಂಕ-01-08-2020 ರಂದು 5-30 ಪಿ.ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆಗುನ್ನೆನಂ. 107/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.    
          2) ದಿನಾಂಕ:31-07-2020 ರಂದು ಸಾಯಂಕಾಲ 6-40  ಗಂಟೆಯ ಸುಮಾರು ಯು.ಬೊಮ್ಮನಾಳ ಗ್ರಾಮದ ಸರ್ಕಾರಿ ಶಾಲೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ ನಂ 01 ಹನುಮನಗೌಡ ತಂದೆ ಹನುಮನಗೌಡ ಮಾಲಿಪಾಟೀಲ, 32ವರ್ಷ, ನಾಯಕ,  ಒಕ್ಕಲುತನ ಸಾ:ಯು. ಬೊಮ್ಮನಾಳ  ತಾ: ಮಸ್ಕಿ .  ಈತನು ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು  ಕಂಬದ ಲೈಟಿನ ಬೆಳಕಿನಲ್ಲಿ ನಿಂತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಪಿ ಎಸ್   ತುರುವಿಹಾಳ ರವರು  ಖಚಿತ ಭಾತ್ಮಿ ಪಡೆದು  ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ PC-662, PC-188 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  7-15 ಪಿ.ಎಂ ಕ್ಕೆ  ದಾಳಿ ಮಾಡಿ ಆರೋಪಿ . 01  ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ  ನಗದು ಹಣ ರೂ. 2,330 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ಬಸವರಾಜ ಕುರಿ, ಮಟ್ಕಾ ಬುಕ್ಕಿ, ಸಾ:ಜಂಬುನಾಥನಹಳ್ಳಿ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ  9-10  ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 29/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  01-08-2020 ರಂದು   7-00 ಪಿ ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆ ಗುನ್ನೆ ನಂ. 108/2020 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
                3)ಈಗಾಗಲೇ ದೇಶದಾದ್ಯಂತ ಕೊರೋನ ವೈರಸ್ ಹರಡುತ್ತಿರುವುದರಿಂದ, ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಿಗೆ ಸರಕಾರವು ಸೂಚಿಸಿದಾಗ್ಯೂ ಆರೋಪಿತರು ನಾಸೀರ್ ತಂ: ಖಾಸಿಂಸಾಬ್ 40 ವರ್ಷ, ಮುಸ್ಲಿಂ, ಕಿರಾಣಿ ವ್ಯಾಪಾರ, ಸಾ: LIG-II-86 KHB ಕಾಲೋನಿ, ಯರಮರಸ್ ಕ್ಯಾಂಪ್, ರಾಯಚೂರು ಮತ್ತು ಇತರೆ 10 ಜನ  ಇಂದು ದಿನಾಂಕ: 01.08.2020 ರಂದು 17.30 ಗಂಟೆಗೆ ಅಕ್ರಮಕೂಟ ರಚಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗುಂಪಾಗಿ ಕುಳಿತರೆ ಕೊರೋನಾ ಕೋವಿಡ್-19 ಹರಡುತ್ತದೆ ಎಂದು ಗೊತ್ತಿದ್ದು, ಆರೋಪಿತರು ದುಂಡಗೆ ಕುಳಿತು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ್ಗೆ ಫಿರ್ಯಾದಿದಾರರು ತಮ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರ ವಶದಲ್ಲಿದ್ದ ಜೂಜಾಟದ ಹಣ 13000/- ರೂ.ಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಜಪ್ತಿಪಡಿಸಿಕೊಂಡು, ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ ಕರೆತಂದು ಹಾಜರ ಪಡಿಸಿ ನೀಡಿದ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 118/2020 ಕಲಂ; 87 ಕೆ.ಪಿ. ಆಕ್ಟ. ಹಾಗೂ ಕಲಂ: 143, 147, 188, 269, 270 ಸಹಾ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.