Thought for the day

One of the toughest things in life is to make things simple:

13 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 13.03.2019 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇರ್ಫಾನ್ ಅಹಮದ್ ತಂದೆ ಬಷೀರ್ ಅಹಮದ್, ವ:47, ಮುಸ್ಲಿಂ, ವೆಲ್ಡಿಂಗ್ ಕೆಲಸ, ಸಾ: ಮನೆ ನಂ 1-7-65 ಗೋಲ್ ಮಾರ್ಕೆಟ್ ರಾಯಚೂರು ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಾಂಶ ‘’ ದಿನಾಂಕ 12.03.2019 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 13.03.2019 ರಂದು ಬೆಳಿಗ್ಗೆ 04.00 ಗಂಟೆಯ  ನಡುವಿನ ಅವಧಿಯಲ್ಲಿ ಯಾರೋ ಕಳ್ಳರು  ಫಿರ್ಯಾದಿದಾರರ ಮನೆಯ ಹಿಂದಿನ ಬಾಗಿಲು ತೆರೆದಿದ್ದನ್ನು ನೋಡಿ ಒಳಗೆ ಪ್ರವೇಶ ಮಾಡಿ ನಡುವಿನ ಮನೆಯ ಅಲ್ಮಾರವನ್ನು ತೆಗೆದು ಬಂಗಾರ ಆಭರಣ, ನಗದು ಹಣ, ಮತ್ತು ಮೊಬೈಲ್ ಫೋನ್ ಸೇರಿ ಒಟ್ಟು ರೂ: 68,000/-  ನಷ್ಟು ಬೆಲೆಬಾಳುವಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದುಕಳ್ಳತನ ಮಾಡಿದವರ   ವಿರುದ್ಧ ಕಾನೂನು ಕ್ರಮ ಜರುಗಿಸಿಕಳ್ಳತನವಾದ  ಬಂಗಾರ ಆಭರಣ, ನಗದು ಹಣ, ಮತ್ತು ಮೊಬೈಲ್ ಫೋನ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 23/2019 ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.