Thought for the day

One of the toughest things in life is to make things simple:

13 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:12-07-2019 ರಂದು 5-30 ಪಿ.ಎಮ್ ಸಮಯದಲ್ಲಿ ಹಟ್ಟಿ ಗ್ರಾಮದಲ್ಲಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ರಾಘವೇಂದ್ರ ತಂ.ರಾಮಪ್ಪ ಚಳ್ಳೂರು, 32ವ, ಜಾ:ವಡ್ಡರು, ಸಾ: ಮಲ್ಲದಗುಡ್ಡ, ತಾ:ಸಿಂಧನೂರು ನೇದ್ದವನು ಜನರನ್ನು 01 ರೂ. ಗೆ 80 ರೂ ಕೊಡುತ್ತೇವೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೇದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 880/-, 2) ಮಟಕಾ ಪಟ್ಟಿ 3) ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಪಟ್ಟಿ ಆರೋಪಿ 02 ಮೌನೇಶ ಹೊಸ ಜೂರಟಗಿ, ಸಾ:ಕಾರಟಗಿ, ಜಿ:ಕೊಪ್ಪಳ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 108/2019 ಕಲಂ 78 (3) ಕ.ಪೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:12-07-2019 ರಂದು ಸಂಜೆ 6.00 ಗಂಟೆಗೆ ಪಿ.ಎಸ್.ಐ.(ಕಾ.ಸು) ಸದರ ಬಜಾರ ಪೊಲೀಸ್ ಠಾಣೆ  ರವರು ಮತ್ತು ಸಿಬ್ಬಂದಿ ಯವರ ಸಹಾಯದಿಂದ ಮಟಕಾ ದಾಳಿಮಾಡಿ ಗಣಕೀಕೃತ ದೂರನ್ನು, ಮಟಕಾ ಜೂಜಾಟಾದ ಮೂಲ ದಾಳಿ ಪಂಚನಾಮೆಯನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲಿನ ಸಹೀತ ಮೇಲೆ ನಮೂದಿಸಿದ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿ ಶೇಖ್ ಜಾಕೀರ್ ತಂದೆ ಶೇಖ್ ಯೂಸೂಫ್, 24 ವರ್ಷ, ಆಟೋಚಾಲಕ, ಸಾ:ಉರುಕುಂದಿ ಈರಣ್ಣ ನಗರ, ರಾಯಚೂರು ಈತನು ಸಂಜೆ 4-45 ಗಂಟೆಗೆ ರಾಯಚೂರುನ ನಗರದ ಮಂಗಳವಾರಪೇಟೆಯ ಕಮೇಲಿ ಹತ್ತರದಲ್ಲಿನ ಮನೆಯ ಗೋಡೆಯ ಪಕ್ಕದಲ್ಲಿರುವ ಸಾರ್ವಜನಿಕ ಓಣಿ ರಸ್ತೆಯಲ್ಲಿ, ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ ಪೂರ್ವವೃತ್ತರ ರವರ ನೇತೃತ್ವದಲ್ಲಿ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಸೇರಿ, ಪಂಚರೊಂದಿಗೆ ದಾಳಿ ಮಾಡಿ, ಆರೋಪಿತನನ್ನು ಹಿಡಿದುಕೊಂಡು, ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡಿರುವುದಾಗಿ ಪಿರ್ಯಾದಿ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ.ನಂಬರ್ 14/19 ಕಲಂ; 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ನೋಂದಾಯಿಸಿಕೊಂಡಿದ್ದು ಇರುತ್ತದೆ. ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಆರೋಪಿತನ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಅನುಮತಿ  ಪಡೆದುಕೊಂಡು, ರಾತ್ರಿ 7-15 ಗಂಟೆಗೆ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 38/2019 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ  12-07-2019  ರಂದು ಮಾನವಿ ಠಾಣಾ ವ್ಯಾಪ್ತಿಯ ಕಪಗಲ್ ಗ್ರಾಮದ ಆಂಜಿನೇಯಾ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಪಿ.ಎಸ್. (ಕಾ.ಸು) ಮಾನವಿ ಠಾಣೆ  ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ  ಜನರ ಮೇಲೆ  ಮಧ್ಯಾಹ್ನ 4-20  ಗಂಟೆಗೆ ದಾಳಿ ಮಾಡಿ 10 ಜನರನ್ನು ಹಿಡಿದಿದ್ದು ಸೆರೆಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 5530/-- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ  ಆರೋಪಿ ಬಂದೇನವಾಜ್ ತಂದೆ ಮದರಸಾಬ್ ವಯಾಃ 60 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾಃ ಕಪಗಲ್ ಹಾಗೂ ಇತರೆ 9 ಜನ ಅರೋಪಿತರೊಂದಿಗೆ ಸಂಜೆ  6-00 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರನ್ನು  ಸಂಜೆ 6-30 ಗಂಟೆಗೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಇಂದು ದಿನಾಂಕ: 12/07/2019 ರಂದು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 145/2019 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 12-07-2019 ರಂದು  2030 ಗಂಟೆಗೆ ಫಿರ್ಯಾದಿ ಶಿವರಾಜ್ ತಂದೆ ಹನುಮಂತ, ವಯ 43 ವರ್ಷ, ಗೊಲ್ಲರು, ವ್ಯಾಪಾರ, ಸಾ|| ಹೋಸರು ತಾ|| ಜಿ|| ರಾಯಚೂರು ರವರು ಠಾಣೆಗೆ ಹಾಜರಾಗಿ,  ಲಿಖಿತ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-03-07-2019 ರಂದು 1430  ಗಂಟೆಗೆ ರಾಯಚೂರು ನಗರದ ಮಾಣಿಕ ನಗರ ಕ್ರಾಸ್ ನ ಅಂಜಿನೇಯ್ಯ ಗುಡಿ ಮುಂದಿನ ರಸ್ತೆಯಲ್ಲಿ ವೆಂಕಟೇಶ್ ಇವರು ತಮ್ಮ ನಂಬರ್ ಇಲ್ಲದ ಟಿವಿಎಸ್ ಎಕ್ಸ ಎಲ್ ಸೂಪರ್ ಗಾಡಿಯನ್ನು ಬಿ.ಆರ್.ಬಿ. ವೃತ್ತದ ಕಡೆಯಿಂದ ಮಾಣಿಕ ನಗರದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುವಾಗ ಆರೋಪಿತನು ಟ್ರ್ಯಾಕ್ಟರ್ & ಟ್ರ್ಯಾಲಿಯನ್ನು ಐ.ಟಿ.ಐ ಕಾಲೇಜು ಕಡೆಯಿಂದ ಆರ್.ಟಿ.ಓ ವೃತ್ತದ ಕಡೆಗೆ ಹೋಗುವಾಗ ಟ್ರ್ಯಾಕ್ಟರ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಯಾವುದೇ ಸೂಚನೆ ಇಲ್ಲದೇ ಟ್ರ್ಯಾಕ್ಟರನ್ನು ಏಕಾ ಏಕೀಯಾಗಿ ಆರ್.ಟಿ.ಓ ವೃತ್ತದ ಕಡೆಗೆ ತಿರುಸಿದ್ದರಿಂದ ಟ್ರ್ಯಾಲಿಯ ಬಲಗಡೆಯ ಹಿಂದಿನ ಗಾಲಿ ವೆಂಕಟೇಶನಿಗೆ ಟಕ್ಕರ್ ಕೊಟ್ಟಿದ್ದರಿಂದ ವೆಂಕಟೇಶನು ಕೆಳಗಡೆ ಬಿದ್ದು, ತಲೆಗೆ ಭಾರೀ ರಕ್ತಗಾಯಗಳಾಗಿ ಇಲಾಜು ಕುರಿತು ನವೋದಯ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಹೈದರಾಬಾದನ ಗಾಂಧಿ ಆಸ್ಪತ್ರಗೆ ಸೇರಿಕೆ ಮಾಡಿದಾಗ ವೆಂಕಟೇಶನಿಗೆ ವಾಹನಅಪಘಾತದಲ್ಲಿ ಆದ ಗಾಯಗಳ ಭಾದೆಯಿಂದ ಗುಣಮುಖನಾಗದೇ ದಿನಾಂಕ;-12-07-2019 ರಂದು ಬೆಳಗಿನ ಜಾವ 0530 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿದಾರರು ತಮ್ಮಅಣ್ಣನಿಗೆ ಬದುಕಿಸಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರಿಂದ ಈ ದೂರನ್ನು ಕೊಡಲು ತಡವಾಗಿರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 42/2019  ಕಲಂ. 279, 304(A) IPC 187 IMV ACT  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.