Thought for the day

One of the toughest things in life is to make things simple:

14 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 13.07.2019 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಆರೋಪಿ ನರೇಂದ್ರ ತಂ; ವೀರನಗೌಡ ವಯ: 27 ವರ್ಷ, ಜಾ: ಈಳಿಗೇರ್, ಉ: ಖಾಸಗಿ ಕೆಲಸ, ಸಾ: ಕಟ್ಲಟ್ಕೂರು, ತಾ: ರಾಯಚೂರು ಈತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ್ ನಂ: KA36EL1514 ನೇದ್ದನ್ನು ರಾಯಚೂರು - ಚಂದ್ರಬಂಡಾ ರಸ್ತೆಯ ಹೊಸ ಆಶ್ರಯ ಕಾಲೋನಿಯಲ್ಲಿಯ ಮುರಾರ್ಜಿ ದೇಸಾಯಿ ಶಾಲೆಯ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಕಂಟ್ರೋಲ್ ಮಾಡದೇ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೊರಟಿದ್ದ ಫಿರ್ಯಾದಿದಾರರ ದೂರದ ಸಂಬಂಧಿ ಎಂ.ಡಿ.ಹನೀಫ್ ತಂ: ಎಂ.ಡಿ.ಖಾಜಾಹುಸೇನ್ ವಯ: 38 ವರ್ಷ, ಜಾ: ಮುಸ್ಲಿಂ, ಉ:ಜಡ್.ಪಿ. ಆಫೀಸನಲ್ಲಿ ಕೆಲಸ, ಸಾ: ಹೊಸ ಆಶ್ರಯ ಕಾಲೋನಿ ರವರಿಗೆ ಹಿಂಬದಿಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಹನೀಫ್ ರವರಿಗೆ ಹಣೆಗೆ ಹಾಗೂ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಎಡಗಾಲು ಮೊಣಕಾಲಿನಲ್ಲಿ ರಕ್ತ ಬರುತ್ತಿದ್ದು, ಬಾಯಿಯಿಂದ ಹಾಗೂ ಮೂಗಿನಿಂದ ರಕ್ತಸ್ರಾವವಾಗಿದ್ದು, ಆರೋಪಿತನಿಗೆ ಸಹಾ ಹಣೆಯಲ್ಲಿ ರಕ್ತ ಗಾಯವಾಗಿದ್ದು, ಕೂಡಲೇ ಫಿರ್ಯಾದಿಯು ತನ್ನ ಗೆಳೆಯ ಶಬ್ಬೀರ್ ರವರ ಸಹಾಯದಿಂದ ಗಾಯಗೊಂಡ ಇಬ್ಬರಿಗೂ ಕೂಡಿ ಒಂದು ಖಾಸಗಿ ವಾಹನದಲ್ಲಿ ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಲಾಗಿ ವೈದ್ಯರು ಹನೀಫ್ ರವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರೆಫರ್ ಮಾಡಿದ್ದು ಆ ಪ್ರಕಾರ ಅವರಿಗೆ ಆವರ  ಹೆಂಡತಿಯೊಂದಿಗೆ ಬೆಂಗಳೂರಿಗೆ ಕಳುಹಿಸಿ ಈಗ ತಡವಾಗಿ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 103/2019 PÀ®A. 279, 337, 338 IPC  ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ 14-07-2019 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿ ಮಲ್ಲನಗೌಡ ತಂದೆ ದೊಡ್ಡಪ್ಪ ಪೊಲೀಸ್ ಪಾಟೀಲ್ ವಯಾಃ 35 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ಜೀನೂರು ತಾಃ ಮಾನವಿ ಈತನು ಠಾಣೆಗೆ ಹಾಜರಾಗಿ ತನ್ನ  ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 14-07-2019 ರಂದು ಫಿರ್ಯಾದಿದಾರನು ತಮ್ಮೂರಿನ ಶಂಕ್ರಪ್ಪ ತಂದೆ ಹಂಪಣ್ಣ ಈತನ ಸಂಗಡ ಪೋತ್ನಾಳ ಬಸ್ ಸ್ಟಾಂಡ್ ಹತ್ತಿರ ಇರುವಾಗ ಬೆಳಗಿನ ಜಾವ 2-15 ಗಂಟೆಯ ಸುಮಾರಿಗೆ ಖರಾಬದಿನ್ನಿ ಗ್ರಾಮದ  ಕಡೆಯಿಂದ ಟ್ರ್ಯಾಕ್ಟರ ನಂ ಕೆಎ 36/ಟಿಡಿ-2576 ಮತ್ತು ಟ್ರಾಲಿ ನಂ ಕೆ, 36/ಟಿಎ-1561 ನೇದ್ದರ ಚಾಲಕ ಬಸವರಾಜ ತಂದೆ ರಂಗಪ್ಪ ಮೇಲ್ಗಡೆ ಈತನು ತನ್ನ ಟ್ರ್ಯಾಕ್ಟರ ಟ್ರಾಲಿಯಲ್ಲಿ ತಮ್ಮ ಮಾಲಕನು ಹೇಳಿದಂತೆ ಸರ್ಕಾರಕ್ಕೆ ರಾಜಧನ ತುಂಬದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ  ನಡೆಸಿಕೊಂಡು ಜೀನೂರು  ಗ್ರಾಮದ ಕಡೆಗೆ ಹೋಗಲು ಸಿಂದನೂರು- ಪೋತ್ನಾಳ ಮುಖ್ಯ ರಸ್ತೆಯನ್ನು  ವೇಗವಾಗಿ ದಾಟುತ್ತಿದ್ದಾಗ ಅದೇ ವೇಳೆಗೆ ಸಿಂದನೂರು- ಕಡೆಯಿಂದ ಮಾನವಿ ಕಡೆಗೆ ಎಸ್.ಆರ್.ಬಸ್ ನಂ ಕೆ. 16/ಡಿ-2307 ನೇದ್ದರ ಚಾಲಕ ಗೌರೀಶ ತಂದೆ ಓಬಯ್ಯ ಮಾದಿಗ ಸಾಃ ಚಿತ್ರದುರ್ಗ ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ವಾಹಗಳ ಚಾಲಕರು ಪರಸ್ಪರ ಟಕ್ಕರ್ ಮಾಡಿಕೊಂಡಿದ್ದು ಪರಿಣಾಮ ಎರಡು ವಾಹನಗಳು ಜಖಂಗೊಂಡಿದ್ದು ಅಲ್ಲದೇ ಟ್ರ್ಯಾಕ್ಟರ್ ಚಾಲಕ ಬಸವರಾಜ ಈತನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದು ಆತನ ಬಲಮಲಕಿಗೆ, ಬಲತಲೆಗೆ, ಬಲಗಾಲ ಹಿಮ್ಮಡಿಗೆ ರಕ್ತಗಾಯಗಳಾಗಿದ್ದು ಅಲ್ಲದೇ ಬಲಬುಜದ ಹತ್ತಿರ, ಎಡ ಪಕ್ಕೆಲುಬುಗಳ ಹತ್ತಿರ ಒಳಪೆಟ್ಟಾಗಿದ್ದು ಚಿಕಿತ್ಸೆ ಕುರಿತು ಆತನನ್ನು ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಮಾನವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ರಾಯಚೂರಿಂದ ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ  ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 147/2019 ಕಲಂ 279.337.379 ಐ.ಪಿ.ಸಿ ಮತ್ತು ಕಲಂ 3.42.43 ಕೆ.ಎಮ್.ಎಮ್.ಸಿ ರೂಲ್ಸ 1994 ಮತ್ತು 4, 4(1-ಎ) ಎಮ್.ಎಮ್.ಡಿ.ಆರ್ ಕಾಯ್ದೆ 1957 ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈ ಕೊಂಡಿರುತ್ತಾರೆ.