Thought for the day

One of the toughest things in life is to make things simple:

2 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ಜೂಜಾಟ ದಾಳಿ ಪ್ರಕರಣ ಮಾಹಿತಿ.
          ಪ್ರಸ್ತುತ ಹಂತದಲ್ಲಿ ಮಹಾಮಾರಿ ಕೊರೋನಾ ಎಂಬ ವೈರಸ್ ದೇಶಾಧ್ಯಂತ ಹರಡುತ್ತಿದ್ದರಿಂದ ಸರಕಾರವು ಮುನ್ನೆಚ್ಚಿರಕೆ ಕ್ರಮವಾಗಿ ನಿಷೇದಾಜ್ಞೇಯನ್ನು ಹೇರಿ ಯಾರು ಮನೆಯಿಂದ ಹೊರಬರಬಾರದು ಎಂದು ಆದೇಶ ಹೊರಡಿಸಿದ್ದು ಇತುತ್ತದೆ. ಇಸ್ಟಾದರು ಸಹ ಆರೋಪಿತರು ಸದರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ ನಿರ್ಲಕ್ಷ ಕೃತ್ಯವೆಸಗಿ ದಿನಾಂಕ:-01-04-2020 ರಂದು ಮುಂಜಾನೆ 07-45 ಗಂಟೆ ಸುಮಾರು ಸಿರವಾರ ಪಟ್ಟಣದ ಇಂದಿರಾನಗರದ ದರ್ಗಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಆರೋಪಿತರಾದ ಉಮೇಶ ತಂದೆ ವಿಜಯಕುಮಾರ ವಯ-20ವರ್ಷ,ಜಾತಿ-ವಿಶ್ವಕರ್ಮ ಸಾ:ಸಿರವಾರ ಹಾಗೂ ಇತರೆ 7 ಜನರು, ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ನಸಿಬಿನ ಆಟವಾದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟವನ್ನು ಇಸ್ಪೇಟ ಎಲೆಗಳ ಸಹಾಯ ಆಡುತ್ತಿದ್ದಾಗ ಪಿ.ಎಸ್.ಐ ಸಿರವಾರ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ದಾಳಿಕಾಲಕ್ಕೆ ಸಿಕ್ಕಿಬಿದ್ದ 7 ಜನರೊಂದಿಗೆ ಹಾಗು ರೂ. 2100/- 2] 52 ಇಸ್ಪೇಟ್ ಎಲೆಗಳು ಅಂ.ಕಿ.ಇಲ್ಲ ಮುದ್ದೆಮಾಲು ದೊಂದಿಗೆ ವಾಪಸ್ ಮುಂಜಾನೆ  09-15 ಗಂಟೆಗೆ ಠಾಣೆಗೆ ಬಂದು ಸರಕಾರ ವತಿಯಿಂದ ದೂರನ್ನು ಕೊಟ್ಟದ್ದು ಅದನ್ನು ಸ್ವೀಖರಿಸಿ ಅದರ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣೆಯ ಗುನ್ನೆ ನಂಬರ 37/2020 ಕಲಂ: 147,188, 269, R/W 149 IPC.& 87 .ಪೋ.ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.