Thought for the day

One of the toughest things in life is to make things simple:

31 Mar 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

            ದಿನಾಂಕ.30-03-2020 ರಂದು ಮಧ್ಯಾಹ್ನ 1-30 ಗಂಟೆಗೆ ಶ್ರೀ ವಿರುಪಾಕ್ಷಪ್ಪ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ ರವರು ಹಾಜರಾಗಿ ಫಿರ್ಯಾದಿ ಮತ್ತು ಅಕ್ರಮ ಮದ್ಯ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದ ಸಾರಾಂಶವೇನೆಂದರೆ, ದಿನಾಂಕ.30.03.2020 ರಂದು ಬೆಳಿಗ್ಗೆ 11-30  ಗಂಟೆ ಸುಮಾರಿಗೆ ಆರೋಪಿ Mahesh S/o. Rangayya Contractor, 34 Years, Caste: Ileger R/o. Jalahalli ಈತನು ಜಾಲಹಳ್ಳಿಯ ತನ್ನ ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದ ಮೇಲೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು  ನಂತರ ಅಲ್ಲಿದ್ದ ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಲಾಗಿ 1) 180 ML BAGPIPER DELIXE WHISKY ಒಟ್ಟು 25 ಮಧ್ಯದ ಪೌಚ್ ಗಳು ಪ್ರತಿಯೊಂದಕ್ಕೆ ಕಿಮ್ಮತ್ತು ರೂ. 90.21 ಪೈಸೆ. ಎಲ್ಲಾ ಒಟ್ಟು ರೂ.2,255.25/-.ರೂ 2). 650 ML KINGFISHER STRONG PREMIUM BEER ಒಟ್ಟು 10 ಮಧ್ಯದ ಬಾಟಲ್ ಗಳು ಪ್ರತಿಯೊಂದಕ್ಕೆ ಕಿಮ್ಮತ್ತು ರೂ.145 ರೂ. ಒಟ್ಟು 1450 ರೂ. ಕಿಮ್ಮತ್ತಿನವುಗಳನ್ನು ವಶಕ್ಕೆ ಪಡೆದುಕೊಂಡು ದಾಳಿ ಪಂಚನಾಮೆಯ ವರದಿ ಮತ್ತು ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬೆರ 41/2020 PÀ®A.32,34 K.E.ACT ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ
            ಫಿರ್ಯಾದಿದಾರನು ಯರಗುಂಟಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದು, ಫಿರ್ಯಾದಿದಾರನು ದಿನಾಂಕ: 27.03.2020 ರಂದು ಬೆಳಿಗ್ಗೆ 06.00 ಗಂಟೆ ಗ್ರಾಮಸ್ಥರಿಗೆ ನೀರು ಬಿಟ್ಟು ಗೋಪಿ ಕೀರಾಣಿ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಆರೋಪಿ ±ÀgÀt¥Àà vÀAzÉ UÀAUÀ¥Àà ಹಾಗೂ ಇತರೆ 3 ಜನರೆಲ್ಲಾರೂ ಬಂದು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ " ಲೇ ಸೂಳೆ ಮಗನೇ ನಮ್ಮ ಓಣಿ ಕಡೆ ಏಕೆ ನೀರು ಬಿಡುತ್ತಿಲ್ಲ ನಿನ್ನದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು, ಕೈಯಿಂದ, ಕಾಲಿನಿಂದ ಹಾಗೂ ಕಟ್ಟಿಗೆಯಿಂದ ಹೊಡೆದು ಒಳಪೆಟ್ಟುಗೊಳಿಸಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನೀಡದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಬಂರ 20/2020 PÀ®A: 341, 323, 324, 504, 506 ¸À»vÀ 34 L¦¹ ಅಡಿಯಲ್ಲಿ ಆರೋಪಿತ ವಿರುದ್ಧ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ತಪ್ಪು ಸಂದೇಶ ರವಾನಿಸಿ ಪ್ರಕರಣದ ಮಾಹಿತಿ.

            ದಿನಾಂಕ:30-03-2020 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರವಿರಾಜ್ ಹೆಚ್.ಜಿ. ತಂದೆ ಹೆಚ್.ಕೆ. ಗೋಪಾಲ, :41, ಹಿರಿಯ ಸಹಾಯಕ ನಿದೇರ್ಶಕರು,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಯಚೂರು ಇವರು ದೂರು ನೀಡಿದ್ದು ಸಾರಾಂಶವೇನೆಂದರೆ. ಯಾರೋ ಅಪಚರಿಚಿತರು ದೇವದುರ್ಗ ತಾಲೂಕಿಗೆ ಕೊರೊನಾ ವೈರಾಣು ರೋಗ ಬಂದೇ ಬಿಟ್ಟಿದೆ ಬೆಂಗಳೂರಿನಿಂದ ಬಂದ 16 ಜನರಲ್ಲಿ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಎಲ್ಲರನ್ನು ಸೀಲ್ ಹಾಕಿ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕಳುಹಿಸಿ ಕೊಟ್ಟಿದೆ ಎಂಬ ಸಂದೇಶವುಳ್ಳ 5.37 ನಿಮಿಷದ ಧ್ವನಿ ಸುರುಳಿ ಹರಿದಾಡುತ್ತಿದ್ದು, ಇದು ದೇವದುರ್ಗ ತಾಲೂಕು ಮತ್ತು ರಾಯಚೂರು ಜಿಲ್ಲೆಯ ಜನರಿಗೆ ತಪ್ಪು ಸಂದೇಶ ರವಾನಿಸಿ ಜನರಲ್ಲಿ ಭಯ ಸೃಷ್ಟಿಸುವ ಯತ್ನ ವಾಟ್ಸ್ ಅಪ್ ಮುಖಾಂತರ ನಡೆದಿರುತ್ತದೆ. ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಆದೇಶದಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿ..ಎನ್. ಅಪರಾಧ ಪೊಲೀಸ್ ಠಾಣೆ ರಾಯಚೂರು ಗುನ್ನೆ ನಂ.08/2020 ಕಲಂ.505(1)(ಬಿ).188.507 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.