Thought for the day

One of the toughest things in life is to make things simple:

15 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ.
            ದಿನಾಂಕ:13/06/2020 ರಂದು 17-40 ರಿಂದ 18-40 ಗಂಟೆಯ ಕೊಟೇಕಲ್ ಗ್ರಾಮದ ಪಕ್ಕದಲ್ಲಿರುವ ಊರು ಗುಡ್ಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿರ್ಯಾದಿ ವೆಂಕಟೇಶ ಎಂ . ಪಿ ಎಸ್ ಕವಿತಾಳ ಪೊಲೀಸ್ ಠಾಣೆ ರವರಿ ಹಾಗೂ ಸಿಬ್ಬಂದಿಯವರು, ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿ ನಾಗರಾಜ ತಂದೆ ಆದಪ್ಪ ಕಲಂಗೇರಿ ವಯಸ್ಸು 23 ವರ್ಷ ಜಾ:ಲಿಂಗಾಯತ :ಒಕ್ಕಲತನ ಸಾ: ಆನಂದಗಲ್ ಹಾಗೂ ಇತರೆ 06 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 4050 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ನಂತರ ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಮಾನ್ಯ 02 ನೇಯ ಹೆಚ್ಚುವರಿ ಹಾಗೂ ಸಿವಿಲ್ ನ್ಯಾಯಾಲಯ  ಸಿಂಧನೂರು ಪ್ರಭಾರ ಮಾನವಿ ರವರ ಪರವಾನಿಗೆಯನ್ನು ದಿನಾಂಕ-14/06/2020 ರಂದು 10-05 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 11-20 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ- 55/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

ªÀÄlPÁzÁ½ ¥ÀæPÀgÀtzÀ ªÀiÁ»w.
           ದಿನಾಂಕ.13-06-2020 ರಂದು ಮದ್ಯಾಹ್ನ 2-15 ಗಂಟೆ ಸುಮಾರು ಕಲ್ಲೂರು ಗ್ರಾಮದ ಬಸ್ ನಿಲ್ದಾಣದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಾಲಂಸಾಬ ತಂದೆ ಅಬ್ದುಲಖಾದರಸಾಬ,ಸಾ:ಕಲ್ಲೂರು ತನ್ನ ಕೈಯ್ಯಲ್ಲಿ ಪೇಪರ ಮತ್ತು ಪೆನ್ನು ಹಿಡಿದುಕೊಂಡು ಹೋಗಿ ಬರುವ ಜನರನ್ನು ಕಂಡು ಬನ್ನಿರಿ ನಂಬರ ಬರೆಯಿಸಿರಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆಂದು ಹೇಳುತ್ತ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಡುತ್ತಿರುವದನ್ನು ಖಚಿತಪಡಿಸಿಕೊಂಡ. ಸುಜಾತ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ  ರವರು ಮತ್ತು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಮಟಕಾ ನಂಬರ ಬರೆಸಲು ಬಂದವರು ಓಡಿಹೋಗಿದ್ದು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಶಾಲಂಸಾಬ ತಂದೆ ಅಬ್ದುಲಖಾದರಸಾಬ ಸಾ:ಕಲ್ಲೂರು ಈತನು ಸಿಕ್ಕು ಬಿದ್ದಿದ್ದು ಸಿಕ್ಕು ಬಿದ್ದವನ ತಾಬಾದಿಂದ ಮಟಕಾ ಜೂಜಾಟದ ಹಣ ರೂ.830/-ರೂಪಾಯಿ,ಮಟಕಾ ನಂಬರ ಬರೆದ ಚೀಟಿ,ಬಾಲಪೆನ್ನುದೊರೆತಿದ್ದು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡಿದ್ದು ಆರೋಪಿತನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ಗೌಡ @ ಮಾಸ್ತಾರ ಸಾ: ಜಾಲಹಳ್ಳಿ, ತಾ: ದೇವದುರ್ಗ  [ಬುಕ್ಕಿ] ರವರಿಗೆ ಕೊಡುತ್ತಿರುವುದಾಗಿ ಹೇಳಿದ್ದರಿಂದ ದಾಳಿ ಪಂಚನಾಮೆಯೊಂದಿಗೆ ಸಿಕ್ಕುಬಿದ್ದಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯ ದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆಯ ಗುನ್ನೆ ನಂಬರ 71/2020 ಕಲಂ:78[iii] ಕ.ಪೋಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.