Thought for the day

One of the toughest things in life is to make things simple:

6 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದೊಂಬಿ ಪ್ರಕರಣದ ಮಾಹಿತಿ.
            ಫಿರ್ಯಾದಿದಾರರಿಗೂ ಹಾಗೂ ಆರೋಪಿತರಿಗೂ ನಳದ ನೀರಿನ ಸಂಬಂಧ ಆಗಾಗ ಜಗಳವಾಗುತ್ತಿದ್ದು, ಇಂದು ದಿನಾಂಕ: 05.06.2020 ರಂದು ಸಂಜೆ 4.30 ಗಂಟೆಯ ಸುಮಾರಿಗೆ ಕಲಮಲ ಗ್ರಾಮದ ಬೇವಿನ ಬೂದೆಪ್ಪನ ಹಳೇ ಮನೆಯ ಮುಂದೆ ನಳದ ಹತ್ತಿರ ಫಿರ್ಯಾದಿದಾರರು ನಳದ ನೀರು ತುಂಬುವಾಗ್ಗೆ ಅದೇ ವೇಳೆಗೆ ಅಲ್ಲಿಗೆ ಎ-1 ಈತನು ಅಲ್ಲಿಗೆ ಬಂದು ತನ್ನೊಂದಿಗೆ ಜಗಳ ತೆಗೆದು “ಏನ್ರಲೇ ನೀವೇ ಎಷ್ಟೊತ್ತು ನೀರು ತುಂಬುತ್ತೀರಿ, ನಮಗೂ ನೀರು ಬಿಡಿ” ಅಂತಾ ಏರುದ್ವನಿಯಲ್ಲಿ ಕೂಗುತ್ತ ಹತ್ತಿರ ಬಂದನು, ಆಗ ತಾನು ಆತನಿಗೆ “ನೋಡಿ ಮಾತಾಡು ನಾವು ಈಗ ತಾನೆ ನೀರು ತುಂಬುತ್ತಿದ್ದೀವೆ ನಾವು ತುಂಬಿ ಪಕ್ಕಕ್ಕೆ ಸರಿಯುತ್ತೇವೆ ನೀವು ನೀರು ತುಂಬಿಕೊಳ್ಳಿರಿ” ಎಂದನು, ಅಷ್ಟಕ್ಕೆ ಆತನು ತನ್ನ ಅಂಗಿಯ ಕಾಲರ್ ಪಟ್ಟಿ ಹಿಡಿದು ತನ್ನ ಕಪಾಳಕ್ಕೆ ಹೊಡೆದನು, ಆಗ ಅಲ್ಲಿಯೇ ನೀರು ತುಂಬಲು ಬಂದಿದ್ದ ತನ್ನ ತಂಗಿ ಜಮುನಾಬಾಯಿ ಗಂ: ಕೃಷ್ಣ ವಯ: 38ವರ್ಷ ರವರು ಬಿಡಿಸಲು ಹತ್ತಿರ ಬರಲಾಗಿ ಎ-2 ದೇವಪ್ಪನು ಅಲ್ಲಿಯೇ ಬಿದ್ದಿದ್ದ ಒಂದು ಜಾಲಿ ಕಟ್ಟಿಗೆಯಿಂದ ತನ್ನ ತಂಗಿ ಜಮುನಾಬಾಯಿಯ ಬಲಗೈಗೆ ಹೊಡೆದನು, ಆಗ ತನ್ನ ತಮ್ಮ ಅಶೋಕ್ ಬಿಡಿಸಲು ಹತ್ತಿರ ಬರಲಾಗಿ ಎ-3 ಚನ್ನಬಸವ ಹಾಗೂ ಎ-4 ತಾಯಪ್ಪ ತನಗೆ ಹಾಗೂ ತನ್ನ ತಮ್ಮ ಅಶೋಕನಿಗೆ ಮೈ ಕೈಗೆ ಕೈಗಳಿಂದ ಹೊಡೆ ಬಡೆ ಮಾಡಿದರು.  ಆಗ ಅಲ್ಲಿಯೇ ಇದ್ದ ತನ್ನ ಅತ್ತಿಗೆ ತಾರಾಬಾಯಿ, ತನ್ನಣ್ಣ ಹೀರಾಲಾಲ್ ಹಾಗೂ ತಮ್ಮ ಗ್ರಾಮದ ಓಣಿಯ ಜನರು ಜಗಳ ನೋಡಿ ಬಿಡಿಸಿಕೊಂಡಿದ್ದು, ಆದಾಗ್ಯೂ ತಾಯಪ್ಪನು “ಏಲೇ ಸೂಳೆ ಮಕ್ಕಳೆ ಊರಲ್ಲಿ ನಿಮ್ಮದು ಜಾಸ್ತಿ ಆಗೈತೆ, ಮಕ್ಕಳ ನಿಮ್ಮನ್ನು ಇಂದಲ್ಲಾ ನಾಳೆ ಖಲ್ಲಾಸ್ ಮಾಡಿ ಬಿಡ್ತೀನಿ” ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು ಇದರಿಂದಾಗಿ ತನ್ನ ತಂಗಿ ಜಮುನಾಬಾಯಿ ರವರ ಬಲಗೈ ಮೊಣಕೈ ಹತ್ತಿರ ಬಾವು ಬಂದು ನೋವಾಗಿದ್ದು ಕೂಡಲೇ ತಾನು ಹಾಗೂ ತನ್ನ ಅಣ್ಣ ಹೀರಾಲಾಲ್ ಇಬ್ಬರು ಕೂಡಿ ಜಮುನಾಬಾಯಿಗೆ ರಿಮ್ಸ ಆಸ್ಪತ್ರೆಗೆ ಕರೆತಂದು ಇಲಾಜಿ ಮಾಡಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಇದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು EgÀÄvÀÛzÉ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ :
            ಇಂದು ದಿನಾಂಕ 05.06.2020  ರಂದು ಬೆಳಿಗ್ಗೆ 11-50 ಗಂಟೆಗೆ  ಫಿರ್ಯಾದಿದಾರರು  ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು  ಸಾರಾಂಶವೇನೆಂದರೆ  ಫಿರ್ಯಾದಿಯ ಮಗದಳಾದ  ಶಮೀನಾ ಬೇಗಂ ವ:26 ಈಕೆಯು ದಿನಾಂಕ 03-06-2020 ರಂದು ಬೆಳಿಗ್ಗೆ 10.30  ಗಂಟೆ ಸುಮಾರಿಗೆ  ಮನೆಯಿಂದ  ಬಜಾರಕ್ಕೆ ಹೋಗಿ ಮನೆಗೆ ಬೇಕಾಗುವ ಸಾಮಗ್ರಿಗಳನ್ನು  ತರುತ್ತೇನೆಂದು ಮನೆಯಿಂದ ಹೋದವಳು ಸಾಯಂಕಾಲವಾದರೂ ಮನೆಗೆ ಬರಲಿಲ್ಲ ನಂತರ ಅವರ ಸ್ನೇಹಿತರ ಹತ್ತಿರ ಹೋಗಿರಬಹುದು ಅಂತಾ ನನ್ನ ಮಗಳ ಸ್ನೇಹಿತರಿಗೂ, ಮತ್ತು ಸಂಬಂಧಿಕರಿಗೂ   ಪೋನ್ ಮುಖಾಂತರ ವಿಚಾರಿಸಲು  ನನ್ನ ಮಗಳು ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ.  . ಕಾರಣ ಇಲ್ಲಿಯವರೆಗೂ ಮನೆಗೆ ಬರುತ್ತಾಳೆ ಕಾದು ನೋಡಿದ್ದು ಇದುವರೆಗೂ  ಮನೆಗೆ ಬಾರದೆ ಇರುವುದರಿಂದ  ನಮ್ಮ ಮಗಳು ಶಮೀನಾ ಬೇಗಂ ಈಕೆಯು ಕಾಣೆಯಾಗಿದ್ದು ಇರುತ್ತದೆ. ಆದ್ದರಿಂದ ನನ್ನ ಮಗಳು  ಕಾಣೆಯಾದ ಬಗ್ಗೆ  ಈ ದಿನ ತಡವಾಗಿ ಬಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ  ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ 40/2020 ಕಲಂ ಮಹಿಳಾ  ಕಾಣೆ ನೇದ್ದರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಡಿರುತ್ತಾರೆ.

        ದಿನಾಂಕ 05/06/2020 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತಮ್ಮ  ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಗೆ ದಿನಾಂಕ 01/06/2020  ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ  ಆತನ ಹೆಂಡತಿ ಜ್ಯೋತಿಯು  ಮಾನವಿಗೆ ಹೋಗಿ  ಬ್ಯೂಟಿ ಪಾರ್ಲರ್ ಗೆ  ಹೋಗಬೇಕು ಹಾಗೆಯೇ ಸ್ವಲ್ಪ ಕಿರಾಣಿ ತರಬೇಕು ಹೋಗೋಣ  ಅಂತಾ ಅಂದಿದ್ದಕ್ಕೆ ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ಮೇಲೆ  ತನ್ನ ಹೆಂಡತಿ ಜ್ಯೋತಿಯನ್ನು ಕರೆದುಕೊಂಡು ಮಾನವಿಯಲ್ಲಿ ಪಂಪಾ ಗಾರ್ಡನ್ ಹತ್ತಿರ  ಇರುವ ಹರ್ಬಲ್ಸ ಬ್ಯೂಟಿ ಪಾರ್ಲರ್ ಕರೆದುಕೊಂಡು ಬಂದು ಬೆಳಿಗ್ಗೆ 11.45 ಗಂಟೆಗೆ ಅಲ್ಲಿ ಬಿಟ್ಟು ಕಿರಾಣಿ  ಅಂಗಡಿಗೆ ಹೋಗಿ ಕಿರಾಣಿ ತೆಗೆದುಕೊಂಡು  ವಾಪಾಸ ಮದ್ಯಾಹ್ನ 12.15 ಗಂಟೆಗೆ  ಬ್ಯೂಟಿ ಪಾರ್ಲರ್ ಹತ್ತಿರ ಬಂದಾಗ ಅಲ್ಲಿ ತನ್ನ ಹೆಂಡತಿ ಇರಲಿಲ್ಲಬ್ಯೂಟಿ ಪಾರ್ಲರ್ ನಲ್ಲಿ  ಕೇಳಲಾಗಿ  ಅವರು ಬಂದಿರುವದಿಲ್ಲ  ಅಂತಾ ತಿಳಿಸಿದ್ದು ಆಗ ಫಿರ್ಯಾದಿಯು ತನ್ನ ಹೆಂಡತಿ  ಫೋನ್ ನಂಬರ್ 6363850350 ಗೆ ಫೋನ್ ಮಾಡಲಾಗಿ ಸ್ವಿಚ್ ಆಫ್  ಅಂತಾ ಬಂದ ಕಾರಣ ಮಾನವಿಯಲ್ಲಿ ಅಲ್ಲಲ್ಲಿ  ಹುಡುಕಾಡಿದ್ದು  ಎಲ್ಲಿಯೂ ಸಿಗದ ಕಾರಣ ತಮ್ಮೂರಿಗೆ ಮತ್ತು ತನ್ನ ಹೆಂಡತಿ ತವರು ಮನೆಗೆ  ಫೋನ್ ಮಾಡಿ  ಕೇಳಿದ್ದು ಅಲ್ಲಿಗೆ ಬಂದಿರುವದಿಲ್ಲ  ಅಂತಾ  ತಿಳಿದು ನಂತರ  ಅಲ್ಲಿಂದ  ಇಂದಿನವರೆಗೆ ಹುಡಕಾಡಿದ್ದು ಮತ್ತು ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಿದ್ದು ಎಲ್ಲಿಯೂ ತನ್ನ ಹೆಂಡತಿ ಸುಳಿವು ಸಿಕ್ಕಿರುವದಿಲ್ಲ ಕಾರಣ ಪತ್ತೆ ಮಾಡಿಕೊಡುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 82/2020  ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.