Thought for the day

One of the toughest things in life is to make things simple:

4 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄlPÁzÁ½ ¥ÀæPÀgÀtzÀ ªÀiÁ»w.
            ದಿನಾಂಕ- 02/06/2020 ರಂದು 20-15 ಗಂಟೆಯಿಂದ 21-15 ಗಂಟೆಯ ಅವಧಿಯಲ್ಲಿ ಆರೋಪಿಯಾದ ನವಾಬ್ ಸಾಬು ಈತನು ಅಮೀನಗಡ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಎಎಸ್‌‌ ಈರಣ್ಣ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 1230/- , 2]01 ಮಟಕಾ ನಂಬರ್‌‌ ಬರೆದ ಪಟ್ಟಿ, 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಪ್ರಕಾಶ ಗಾಣಿಗ ಸಾ: ಅಮ್ಮಿನಗಡ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು 22-00 ಗಂಟೆಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಕೊಳ್ಳಲು ದಿನಾಂಕ:03/06/2020 ರಂದು 12-15 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 13-40 ಗಂಟೆಗೆ ಬಂದಿದ್ದರಿಂದ ಕವಿತಾಳ ಠಾಣೆ ಗುನ್ನೆ ನಂ -52/2020 ಕಲಂ- 78 ( 3 ) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
                ದಿನಾಂಕ :  02-06-2020 ರಂದು ಸಾಯಂಕಾಲ 4-30  ಗಂಟೆಯ ಸುಮಾರು  ಸತ್ಯವತಿ ಕ್ಯಾಂಪಿನಲ್ಲಿ ಆರೋಪಿ gÀªÉÄñÀ vÀAzÉ ªÀÄ®è¥Àà vÀ½î ªÀ.28 eÁw.G¥ÁàgÀ G.©.J.CawªÀÄ ªÀµÀðzÀ «zÁåyð ¸Á.¸ÀvÀåªÀwPÁåA¥ï vÁ ¹AzsÀ£ÀÆgÀ ತನು ಗಣೇಶ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಶ್ರೀ ಎರಿಯಪ್ಪ ಪಿ ಎಸ್ ತುರುವಿಹಾಳ ರವರು ಖಚಿತ ಭಾತ್ಮಿಯನ್ನು ಬೀಟ್ ಹೆಚ್.ಸಿ-346 ರವರಿಂದ ಪಡೆದು ಮಾನ್ಯ ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ  ASI(H), HC-346, PC-269 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  ಸಾಯಂಕಾಲ 5-15 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು, ಅತನ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 880/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ಶರಣೇಗೌಡ ಗೊರೇಬಾಳ ಇವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, ಸಾಯಂಕಾಲ 7-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 21/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು ಇಂದು ದಿನಾಂಕ-03-06-2020 ರಂದು ಸಂಜೆ 6-00 ಪಿ.ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 71/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
          ದಿನಾಂಕ : 02-06-2020 ರಂದು ಸಾಯಂಕಾಲ 7-10  ಪಿ.ಎಂ ಗಂಟೆಯ ಸುಮಾರು  ಸಿ.ಪಿ. ಸಿಂಧನೂರು ರವರಿಗೆ ತುರ್ವಿಹಾಳ ಠಾಣೆಗೆ ಬೇಟಿ ಕೊಟ್ಟಾಗ ಕೆ.ಹಂಚಿನಾಳ ಗ್ರಾಮದಿಂದ ಪೋನ್ ಕಾಲ್ ಮೂಲಕ ಕೆ.ಹಂಚಿನಾಳ ಗ್ರಾಮದ ಬಸ್-ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಲಿಂಗರಾಜ ತಂದೆ  ನಿಂಗಪ್ಪ  ಮಾಲಿಪಾಟೀಲ್, ವಯ-32, ಜಾ: ಲಿಂಗಾಯತ, : ಒಕ್ಕಲುತನ, ಸಾ: ಕೆ.ಹಂಚಿನಾ  ಈತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿ.ಪಿ. ಸಿಂಧನೂರು ಮತ್ತು ಪಿ.ಎಸ್. ರವರು ಮಾನ್ಯ ಡಿ ಎಸ್ ಪಿ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ  HC-233, PC-679, PC-472 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  7-45 ಪಿ.ಎಂ ಕ್ಕೆ  ದಾಳಿ ಮಾಡಿ ಆರೋಪಿ ನಂ.01 ನೆದ್ದನವನನ್ನು ವಶಕ್ಕೆ ತಗೆದುಕೊಂಡು ಸದರಿಯವನ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 540/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ಶರಣಪ್ಪ ತಂದೆ ವಿರುಪಣ್ಣ ವ-40ವರ್ಷ ಸಾ: ಗಂಗಾವತಿ ಡಂಕನಕಲ್   ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, 9-30 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿ ಮತ್ತು ಜ್ಞಾಪನ ಪತ್ರವನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು ಠಾಣಾ NCR ನಂ. 22/2020 ರಲ್ಲಿ ಧಾಖಲಿಸಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು ಇಂದು ದಿನಾಂಕ-03-06-2020 ರಂದು ಸಂಜೆ 7-15 ಪಿ.ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.72/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ.
            ದಿನಾಂಕ: 03.06.2020 ರಂದು 4-45 ಪಿ.ಎಮ್ ಸಮಯದಲ್ಲಿ ಕೋಟೆ ಏರಿಯಾದ ಶಾದಿಮಹಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಾರುಫ್ ತಂದೆ ಆಸಾದ್ ಖಾನ್, ವಯಾ: 27 ವರ್ಷ, ಜಾ: ಮುಸ್ಲಿಂ, : ಸೌದಗರ ಬುಕ್ ಹೌಸ, ಸಾ: ಸೌದಗರ ಶಾಲೆ ಹತ್ತಿರ, ಕೋಟೆ ಏರಿಯಾ, ಸಿಂಧನೂರು ಹಾಗೂ ಇತರೆ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ 01 ರಿಂದ 03 ಜನ ಸಿಕ್ಕಿ ಬಿದ್ದಿದ್ದು, ಆರೋಪಿ ನಂ 04 ಮತ್ತು 05 ರವರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 6380/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 48/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕಸ್ಮಿಕ ಬೆಂಕಿ ಅಪಘಾತ ಪ್ರಕಕಣದ ಮಾಹಿತಿ.
            ದಿನಾಂಕ: 03.06.2020 ರಂದು ಬೆಳಿಗ್ಗೆ 11.30 ಗಂಟೆಗೆ ಮಹ್ಮದ್ ಅಯಾಜ್ ಈತನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಹೇಳಿ ಬೆರಳಚ್ಚು ಮಾಡಿದ ವರದಿ ಸಾರಾಂಶ ದಿನಾಂಕ 25-06-2020 ರಂದು ರಾತ್ರಿ 10.30 ಗಂಟೆಗೆ ಅಯ್ಯಬೌಡಿ ಬಾಗ್ದಾದಿಯ ಮಸೀದಿ ನಾಗು ಮನೆ ಹತ್ತಿರ ನಿಲ್ಲಿಸಿದ್ದ ತನ್ನ ಮಾಲೀಕತ್ವದ ಕಪ್ಪು ಬಣ್ಣದ ಆಟೋ ನಂ. KA.36/B-9378 ಆಕಸ್ಮಿಕ ಬೆಂಕಿ ಹತ್ತಿ ಸುಟ್ಟು ಕರಕಲಾಗಿ ನಿರುಪಯುಕ್ತಗೊಂಡು ಅಂದಾಜು 36,000/- ರೂ ಗಳಷ್ಟು ಲುಕ್ಷಾನಗಿದ್ದು ಯಾರ ಮೇಲೆ ಯಾವೂದೆ ತರಹ ದೂರು ಇರುವುದಿಲ್ಲ. ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಲುಕ್ಷಾನು ಪಂಚನಾಮೆ ಬರೆಯಿಸಿಕೊಡಲು ವಿನಂತಿ ಅಂತಾ ಮುಂತಾಗಿದ್ದ ವರದಿ ಮೇಲಿಂದ ಮೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ : 02.2020 ಆಕಸ್ಮಿಕ ಬೆಂಕಿ ಅಪಘಾತ ಅಡಿಯಲ್ಲಿ ವರದಿ ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ನಕಲಿ ಬೀಜ ಮಾರಟದ ಪ್ರಕರಣದ ಮಾಹಿತಿ
            ಆರೋಪಿ ನಂ.01 ರಾಮರಾವ್  ತಂದೆ ಆಂಜಿನೇಯ್ಯ, ವಯ-50,ಜಾ:ಕಮ್ಮಾ, :ಒಕ್ಕಲುತನ, ಸಾ: ತಿಪ್ಪನಾಳ ತಾ:ಕನಕಗಿರಿ ಈತನು ಸರ್ಕಾರದ ಯಾವುದೇ ಪರವಾನಿಗೆ ಲೈಸೆನ್ಸ  ಇಲ್ಲದೇ  ತನ್ನದೇ ಹೊಲದಲ್ಲಿ ಬೆಳೆದ ಬೀಜಗಳನ್ನು  ನಖಲಿ ಹತ್ತಿ ಸೀಡ್ಸ ಬೀಜಗಳನ್ನಾಗಿ ತಯಾರಿಸಿಕೊಂಡು ಅವುಗಳನ್ನು BILLA 999 BG II ನಖಲಿ ಕಂಪನಿ ಹೆಸರಿನ  ಲೇಬಲ್ ವುಳ್ಳ  ಒಟ್ಟು    2489 ಪ್ಯಾಕೇಟಗಳನ್ನು 25 ಪ್ಲಾಸ್ಟಿಕ್  ಚೀಲಗಳಲ್ಲಿ  ಮತ್ತು New RAGHU-39, Double guard II  ಎಂಬ ನಖಲಿ ಕಂಪನಿ ಹೆಸರಿನ ಲೇಬಲವುಳ್ಳಿ  95 ಪ್ಯಾಕೇಟಗಳನ್ನು ಒಂದು  ಪ್ಲಾಸ್ಟಿಕ್  ಚೀಲದಲ್ಲಿ  ಒಟ್ಟು 26 ಪ್ಲಾಸ್ಟಿಕ್ ಚೀಲಗಳಲ್ಲಿ 450 ಗ್ರಾಂನ 2584 ನಖಲಿ ಹತ್ತಿ ಬೀಜದ ಪಾಕೇಟುಗಳು ಅಕಿರೂ. 10,33,600 ನೇದ್ದವುಗಳನ್ನು  ರಾಯಚೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾರಾಟ ಮಾಡಲು  ಆರೋಪಿ ನಂ.02 ರಾಮಾಂಜಿನೇಯ್ಯ ರೆಡ್ಡಿ ತಂದೆ ಭೀಮರೆಡ್ಡಿ, ವಯ-38, ಜಾ:ರೆಡ್ಡಿ, : ಕ್ಯೂಸರ್  ಜೀಪ  ನಂ. ಕೆಎ-29 ಬಿ-1679 ಚಾಲಕ, ಸಾ: ರಡ್ಡೇರ ಓಣಿ, ಕನಕಗಿರಿ  &  03 ರಂಗಾರೆಡ್ಡಿ ತಂದೆ ಕನಕರೆಡ್ಡಿ ವಯ-36, ಜಾ: ರೆಡ್ಡಿ, : ಅಶೋಕ ಲೈಲ್ಯಾಂಡ್ ಗೂಡ್ಸ ವಾಹನ ನಂ ಕೆಎ-37 -7560 ಚಾಲಕ, ಸಾ:  ರಡ್ಡೇರ ಓಣಿ, ಕನಕಗಿರಿ  ರವರ  ಕ್ರಮವಾಗಿ ಕ್ರೂಸರ ಜೀಪ್ ಸಂ. ಕೆಎ-29 ಬಿ-1679  ಮತ್ತು  ಅಶೋಕ ಲೈಲ್ಯಾಂಡ್  ಮಿನಿ ಗೂಡ್ಸ ವಾಹನ ಸಂ. ಕೆಎ-37 -7560 ನೇದ್ದರಲ್ಲಿ ಕನಕಗಿರಿಯಿಂದ ಉಮಲೂಟಿ , ಸಿಂಧನೂರು ಮಾರ್ಗವಾಗಿ ರಾಯಚೂರಿಗೆ ಸಾಗಾಟ ಮಾಡುತ್ತಿದ್ದಾಗ ಪಿ.ಎಸ್. ತುರುವಿಹಾಳ ರವರು ಖಚಿತ ಭಾತ್ಮಿ ಪಡೆದು ಮಾನ್ಯ ಡಿಎಸ್  ಪಿ , ಸಿಪಿಐ ಸಿಂಧನೂರು ಸಾಹೇಬರವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯವರಾದ ASI (H), HC-233, PC 679, 165, 472 ರವರೊಂದಿಗೆ 7-00 .ಎಂ ಕ್ಕೆ  ತುರುವಿಹಾಳ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹತ್ತಿರ ಸಿಂಧನೂರು-ಕುಷ್ಟಗಿ ಮುಖ್ಯ ರಸ್ತೆಯಲ್ಲಿ  ದಾಳಿ ನಡೆಯಿಸಿ ನಖಲಿ ಹತ್ತಿ ಬೀಜ ಮಾರಾಟದಲ್ಲಿ ತೊಡಗಿದ ಆರೋಪಿತರಿಗೆ ಹಾಗೂ ಮೇಲ್ಕಂಡ ಮುದ್ದೆಮಾಲನ್ನು  ವಶಕ್ಕೆ ತೆಗೆದುಕೊಂಡು 10-30 .ಎಂ ಕ್ಕೆ  ಠಾಣೆಗೆ ಬಂದು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲು & ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾಪನವನ್ನು ಸ್ವೀಕೃತ ಮಾಡಿಕೊಂಡು ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ  70/2020 PÀ®A. 420 R/w 34 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣ ಮಾಹಿತಿ.
            ದಿನಾಂಕ 04.06.2020 ರಂದು 00-30 ಗಂಟೆಗೆ ಫಿರ್ಯಾದಿ ಶ್ರೀ ಬೇವಿನಾಳ ಗಂಗಾಧರ ತಂದೆ ಲಚುಮಣ್ಣ, ವಯಾ: 28 ವರ್ಷ, ಕುರಬರು, ಡ್ರೈವಿಂಗ್, ಸಾ: ಜಾಗೀರ್ ವೆಂಕಟಾಪುರ ರವರು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದೆನೆಂದರೆ, ಕಾಣೆಯಾದ ತನ್ನ ಹೆಂಡತಿ ಶಿವಲೀಲಾಳು 2 ನೇ ಮಗುವಿನ ಗರ್ಭಿಣಿ ಇದ್ದು ಚಿಕಿತ್ಸೆ ಕುರಿತು ದಿನಾಂಕ 03.06.2020 ರಂದು ಮಧ್ಯಾಹ್ನ 12-00 ಗಂಟೆಗೆ ಜಾಗೀರ್ ವೆಂಕಟಾಪುರ ಗ್ರಾಮದಿಂದ ಫಿರ್ಯಾದಿದಾರನ ತಾಯಿ ಮತ್ತು ತಮ್ಮ ಹಾಗೂ ಶಿವಲೀಲಾಳ ಮಗಳಾದ ತನುಶ್ರೀ ಯೊಂದಿಗೆ ರಾಯಚೂರು ನಗರದ ಹರ್ಷವರ್ಧನ ಆಸ್ಪತ್ರೆಗೆ ಮಧ್ಯಾಹ್ನ 2-00 ಗಂಟೆಗೆ ಬಂದು ಚೀಟಿ ಮಾಡಿಸಿಕೊಂಡ ನಂತರ ಶಿವಾಲೀಲಾಳು ತನ್ನ ಮಗಳು ತನುಶ್ರೀಯೊಂದಿಗೆ ಆಸ್ಪತ್ರೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾಳೆ ಈಕೆಯು ಕಾಣೆಯಾದ ಬಗ್ಗೆ ರಾಯಚೂರು ಕಡೆ ಎಲ್ಲಾ ಕಡೆಗೆ ಹುಡುಕಾಡಿದರೂ ಮತ್ತು ಈಕೆಯ ತವರು ಮನೆ ಕವಿತಾಳಕ್ಕೆ ಹೋಗಿ ವಿಚಾರ ಮಾಡಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲಾ ಕಾಣೆಯಾದ ತನ್ನ ಹೆಂಡತಿ ಮತ್ತು 04 ವರ್ಷದ ಮಗಳು ತನುಶ್ರೀ ಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 64/2020 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.