Thought for the day

One of the toughest things in life is to make things simple:

11 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಪ್ರಕರಣದ ಮಾಹಿತಿ
                ಇಂದು ದಿನಾಂಕ: 10.06.2020 ರಂದು ಮಧ್ಯಾಹ್ನ 12-00 ಗಂಟೆಗೆ  ಠಾಣೆಯಲ್ಲಿರುವಾಗ ಗದ್ವಾಲ್ ರೋಡನ ಚೆನ್ನಪ್ಪ ಪೆಟ್ರೋಲ್ ಬಂಕನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಗಂಗಪ್ಪ ಹೆಚ್.ಸಿ-58, ಶ್ರೀಧರರೆಡ್ಡಿ ಪಿಸಿ 645, ಭೀಮರಾಯ ಪಿಸಿ-480  ಎಂ.ಡಿ.ಜಮೀರುದ್ದೀನ್ ಹೆಚ್.ಸಿ-126 ರವರನ್ನು ಪರಿಚಯಿಸಿ ನಮ್ಮನ್ನು ಮತ್ತು ಸಿಬ್ಬಂದಿಯವರನ್ನು ಮಧ್ಯಾಹ್ನ 12-20  ಗಂಟೆಗೆ ಇಲಾಖಾ ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಕರೆದುಕೊಂಡು ಹೋಗಿ 12-40 ಗಂಟೆಗೆ ಗದ್ವಾಲ್ ರೋಡನ ಚೆನ್ನಪ್ಪ ಪೆಟ್ರೋಲ್ ಬಂಕದ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ಗದ್ವಾಲ್ ರೋಡನ ಮೇಲೆ ಒಬ್ಬನು  ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡುವ ಜನರಿಗೆ ಮಟಕಾ ನಂಬರ್ ಬರೆಯಿಸಿರಿ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆದು ಜನರಿಂದ ಹಣವನ್ನು ಪಡೆದು ನಂಬರ್ ಬರೆದು ಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಎಲ್ಲಾರು ಸೇರಿ 13.00 ಗಂಟೆಗೆ ದಾಳಿ ಮಾಡಿ ಸದರಿಯವನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಖಮ್ರೂದ್ದೀನ್ ತಂದೆ ಜಾಫರ ಹುಸೇನ್, 54 ವರ್ಷ, ಜಾ: ಮುಸ್ಲೀಂ, : ಖಾಲಿ ಚೀಲ ವ್ಯಾಪರ, ಸಾ: ಮನೆನಂ 8-5-1/36 ನವಾಬಗಡ್ಡ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 690/-ರೂ, 2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು ಇರುತ್ತದೆ. ಸದರಿ ಮಟಕಾ ಚೀಟಿಯನ್ನು ಸದರಿಯವನು ಮಟಕಾ ಚೀಟಿಯನ್ನು ನಾಗರಾಜ ತಂದೆ ತಿಮ್ಮಪ್ಪ, ವಯಾ|| 38 ವರ್ಷ, ಜಾತಿ|| ಹರಿಜನ, || ಬೇಲ್ದಾರ ಕೆಲಸ, ಸಾ|| ಮನೆ ನಂ 8-6-74 ಹರಿಜನವಾಡ ರಾಯಚೂರು ಇತನಿಗೆ ಕೊಡುವದಾಗಿ ತಿಳಿಸಿದನು, ನಮ್ಮ ಸಮಕ್ಷಮದಲ್ಲಿ ಪೊಲೀಸರು ನಗದು ಹಣವನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ನಮ್ಮ ಮತ್ತು ಪಿ.ಎಸ್. ರವರ ಸಹಿ ಚೀಟಿಯನ್ನು ಅಂಟಿಸಿ, ಉಳಿದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕಾನೂನು  ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು ಮಧ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು  ಆರೋಪಿತರ 1] ಖರ್ಮೂದ್ದೀನ್ ತಂದೆ ಜಾಫರ ಹುಸೇನ್, 53 ವರ್ಷ, ಜಾ: ಮುಸ್ಲೀಂ, : ಖಾಲಿ ಚೀಲ ವ್ಯಾಪರ, ಸಾ: ಮನೆನಂ 8-5-1/36 ನವಾಬಗಡ್ಡ ರಾಯಚೂರು 2] ನಾಗರಾಜ ತಂದೆ ತಿಮ್ಮಪ್ಪ, ವಯಾ|| 38 ವರ್ಷ, ಜಾತಿ|| ಹರಿಜನ, || ಬೇಲ್ದಾರ ಕೆಲಸ, ಸಾ|| ಮನೆ ನಂ 8-6-74 ಹರಿಜನವಾಡ ರಾಯಚೂರು ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಠಾಣಾ ಎನ್.ಸಿ. ನಂ.11/2020  ಪ್ರಕಾರ  ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ದಿನಾಂಕ: 10.06.2020 ರಂದು ಮಧ್ಯಾಹ್ನ 15-05 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ನನ್ನ ಸ್ವವರದಿಯ ಮೇಲಿಂದ ಠಾಣಾ ಗುನ್ನೆ ನಂ.56/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಮಾರ್ಕೆಟಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


          ದಿನಾಂಕ : 09-06-2020 ರಂದು ಸಾಯಂಕಾಲ 6-30  ಪಿ.ಎಂ ಗಂಟೆಯ ಸುಮಾರು ಜಾಲಿಹಾಳ ಗ್ರಾಮದ ಬಸ್-ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಈತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಬೀಟ್ ಹೆಚ್.ಸಿ 358 ರವರಿಂದ ಖಚಿತ ಭಾತ್ಮಿ ಬಂದ ಮೇರೆಗೆ, ಮಾನ್ಯ ಡಿಎಸ್ ಪಿ ಹಾಗೂ ಸಿಪಿಐ ಸಿಂಧನೂರುರವರ ಮಾರ್ಗದರ್ಶನದಲ್ಲಿ , ಪಿ.ಎಸ್. ಹಾಗೂ ಸಿಬ್ಬಂದಿಯವರಾದ  HC-358, PC-472 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ಭಾತ್ಮಿ ಸ್ಥಳಕ್ಕೆ ಹೋಗಿ 7-30 ಪಿ.ಎಂ ಕ್ಕೆ  ಭಾತ್ಮಿ ಸ್ಥಳದಲ್ಲಿ ದಾಳಿ  ಮಾಡಿ ಆರೋಪಿ ಮಲ್ಲಯ್ಯಸ್ವಾಮಿ ತಂದೆ ಗುರುಸಿದ್ದಯ್ಯಸ್ವಾಮಿ, ವಯ-32, ಜಾ: ಜಂಗಮ, : ಒಕ್ಕಲುತನ, ಸಾ: ಜಾಲಿಹಾಳ, ತಾ:ಸಿಂಧನೂರು ತನಿಗೆ ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಆರೋಪಿ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 1050/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ  ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, 9-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 23/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು ಇಂದು ದಿನಾಂಕ-10-06-2020 ರಂದು ಸಂಜೆ 6-30 ಪಿ.ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ vÀÄgÀÄ«ºÁ¼À ಪೊಲೀಸ್ oÁuÉ ಗುನ್ನೆನಂ. 78/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.