Thought for the day

One of the toughest things in life is to make things simple:

5 Apr 2020

Reported Crimes


ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ 04-04-2020 ರಂದು ಬೆಳಿಗ್ಗೆ 10.00 ಗಂಟೆಗೆ ಶೀಲಾ ಮೂಗನಗೌಡರ ಪಿ.ಎಸ್. (ಕಾ,ಸು) ನೇತಾಜಿ ನಗರ ಪೊಲಿಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ್ದು ಸಾರಾಂಶ ಮಡ್ಡಿಪೇಟೆ ಕೊರವರ ಓಣಿ ಸಾರ್ವಜನಿಕ ರಸ್ತೆಯ ಮೇಲೆ ತಿಮ್ಮಯ್ಯ ಕೊರವರ ಈತನು ಯಾವದೇ ಲೈಸನ್ಸ ಇಲ್ಲದೆ ಮತ್ತು ಮತ್ತು ರಾಜ್ಯದಲ್ಲಿ ಕೊರನಾ ವೈರಸ್ ಇದ್ದ ಪ್ರಯುಕ್ತ ಮಧ್ಯ ಮಾರಾಟ ನಿಷೇದವಿದ್ದರು ಸಹ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿ ಆರೋಪಿತನು ದಾಳಿ ವೇಳೆಯಲ್ಲಿ ಓಡಿ ಹೊಗಿದ್ದು ಸ್ಥಳದಲ್ಲಿ ಮದ್ಯದ ಡ್ಯಾಟರ್ ಪ್ಯಾಕ್ ಗಳು (ಪಾಕೇಟಗಳು) ಬಿಟ್ಟು ಹೊಗಿದ್ದನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲು ಮದ್ಯ ಮಾರಾಟ ಮಾಡುತ್ತಿ ರುವ ಬಗ್ಗೆ ಯಾವುದಾದರು ದಾಖಲೆಗಳು ಇಟ್ಟಿರುವ ಬಗ್ಗೆ ಪರಿಶೀಲಿಸಲು ಯಾವುದೇ ದಾಖಲೇಗಳು ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅಲ್ಲಿ 1) BAGPIPER DELUXE WHISKY 180 ML ಡ್ಯಾಟರ್ ಪ್ಯಾಕ್ 69 ಪಾಕೇಟಗಳು ಇದ್ದು ಒಂದಕ್ಕೆ ರೂ 90.21 ಪೈ ಅಂತೆ ಒಟ್ಟು 6224.49/- ರೂಗಳು ಆಗುತ್ತಿದ್ದು ಇದನ್ನು ಲೀಟರನಲ್ಲಿ ಪರಿಶೀಲಿಸಲು 12 ಲೀಟರ್ 470 ML. ಮತ್ತು 2) Original Choice 90 ML. ಡ್ಯಾಟರ್ ಪ್ಯಾಕ್ 24 ಪಾಕೇಟಗಳು ಇದ್ದು, ಒಂದಕ್ಕೆ ರೂ 30.32 ಪೈ ಅಂತೆ ಒಟ್ಟು ರೂ 727.68 ಪೈ ಆಗುತ್ತಿದ್ದು ಇದನ್ನು ಲೀಟರನಲ್ಲಿ ಪರಿಶೀಲಿಸಲು 2 ಲೀಟರ್ 160 ML. ಇವುಗಳ ಒಟ್ಟು ಮೊತ್ತ ರೂ 6952.17 ಪೈ ಗಳು ಇರುತ್ತದೆ. ಮತ್ತು ಮದ್ಯವನ್ನು ಲೀಟರನಂತೆ ಒಟ್ಟು ಪರಿಶೀಲಿಸಲು ಒಟ್ಟು 14 ಲೀಟರ್ 630 ML. ಆಗುತ್ತಿದ್ದು. ಇವುಗಳನ್ನು ಬೆಳಿಗ್ಗೆ 08-45 ರಿಂದ 09-45  ಗಂಟೆಯವರಿಗೆ ಪಂಚರ ಸಮಕ್ಷಮದಲ್ಲಿ ಕೇಸಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮತ್ತು ಮುದ್ದೆ ಮಾಲಿನೊಂದಿಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಅಂತಾ ಇದ್ದುದನ್ನು ಸ್ವೀಕರಿಸಿಕೊಂಡು ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 25/2020 ಕಲಂ.32.34 ಕೆ.ಇ. ಯ್ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
            ದಿನಾಂಕ 03-04-2020 ರಂದು ಸಂಜೆ 4.00 ಗಂಟೆಗೆ ಶೀಲಾ ಮೂಗನಗೌಡರ ಪಿ,ಎಸ್,ಐ (ಕಾ,ಸು) ನೇತಾಜಿ ನಗರ ಪೊಲಿಸ್ ಠಾಣೆ ರವರು ಠಾಣೆಗೆ ಬಂದು ಜ್ಷಾಪನ ಪತ್ರ ನೀಡಿದ್ದು ಅದರ ಸಾರಾಂಶವೇನೆಂದರೆ, ಮಡ್ಡಿಪೇಟೆ ಕೊರವರ ಓಣಿ ಸಾರ್ವಜನಿಕ ರಸ್ತೆಯ ಮೇಲೆ   ಆಂಜೀನಯ್ಯ ಕೊರವರ ಈತನು ಯಾವದೇ ಲೈಸನ್ಸ ಇಲ್ಲದೆ ಮತ್ತು ಮತ್ತು ರಾಜ್ಯದಲ್ಲಿ ಕೊರನಾ ವೈರಸ್ ಇದ್ದ ಪ್ರಯುಕ್ತ ಮಧ್ಯ ಮಾರಾಟ ನಿಷೇದವಿದ್ದರು ಸಹ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿ ಆರೋಪಿತನು ದಾಳಿ ವೇಳೆಯಲ್ಲಿ ಓಡಿಹೊಗಿದ್ದು ಸ್ಥಳದಲ್ಲಿ ಮದ್ಯದ ಬಾಟಲಿಗಳು ಬಿಟ್ಟು ಹೊಗಿದ್ದನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರು ದಾಖಲೆಗಳು ಇಟ್ಟಿರುವ ಬಗ್ಗೆ ಪರಿಶೀಲಿಸಲು ಯಾವುದೇ ದಾಖಲೇಗಳು ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅಲ್ಲಿ ಮ್ಯಾಕಡೋಲ್ ಕಂಪನಿಯ xxx RAM 90 M L ಡ್ಯಾಟರ್ ಪ್ಯಾಕ್ 123 ಇದ್ದು, ಒಂದಕ್ಕೆ 45 ರೂ ಅಂತೆ ಒಟ್ಟು 5535/- ರೂಗಳು ಆಗುತ್ತಿದ್ದು ಇದನ್ನು ಲೀಟರ ನಲ್ಲಿ ಪರಿಶೀಲಿಸಲು 11 ಲೀಟರ್ 70 ಎಮ್.ಎಲ್. ಮತ್ತು U.S.Whisky 90 ಎಮ್.ಎಲ್.ನ 53 ಬಾಟಲಿಗಳು ಇದ್ದು, ಒಂದಕ್ಕೆ 30 ರೂ. ಅಂತೆ 1590/- ಆಗುತ್ತಿದ್ದು ಇವುಗಳ ಒಟ್ಟು 7125/- ರೂಗಳು  ಇರುತ್ತದೆ. ಇದನ್ನು ಲೀಟರ ನಲ್ಲಿ ಪರಿಶೀಲಿಸಲು 4 ಲೀಟರ್ 770 ಎಮ್.ಎಲ್. ಮತ್ತು ಸದರಿ ಮದ್ಯವನ್ನು ಲೀಟರ ನಂತೆ ಒಟ್ಟು ಪರಿಶೀಲಿಸಲು ಒಟ್ಟು 15 ಲೀಟರ್ 840 ಎಮ್.ಎಲ್. ಆಗುತ್ತಿದ್ದು. ಇವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಕೇಸಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು  ಕಾನೂನು ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡಿದ್ದನು ಸ್ವೀಕರಿಸಿಕೊಂಡು ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ:24/2020 ಕಲಂ.32.34 ಕೆ.ಇ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ
          ದಿನಾಂಕ-04/04/2020 ರಂದು ಸಾಯಂಕಾಲ 05-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಬಸವರಾಜಗೌಡ ಈತನು  ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಚಾರಣೆ  ಕುರಿತು ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಲಿಖಿತ ದೂರು ಹಾಜರುಪಡಿಸಿದ್ದು  ಸಾರಂಶವೆನೇಂದರೆ,  ದಿನಾಂಕ-04/04/2020 ರಂದು ಬೆಳಗ್ಗೆ 09-30 ಗಂಟೆಗೆ ಪಿರ್ಯಾಧಿದಾರನು ತಮ್ಮ ಜಮೀನು ಸರ್ವೆ ನಂ-10 ರಲ್ಲಿ ಕೆಲಸ ಮಾಡಲು ಟ್ರಾಕ್ಟರ್ ನಿಂದ ಹೊಲದಲ್ಲಿ ಟ್ರೀಲರ್ ಹೋಡೆಯುತ್ತಿರುವಾಗ ಆರೋಪಿತರು ಏಕಾಏಕಿ ಪಿರ್ಯಾಧಿ ಜಮೀನಿನಲ್ಲಿ  ಅಕ್ರಮವಾಗಿ  ಬಂದು ತಡೆದು ನಿಲ್ಲಿಸಿ ಎಲೇ ಬ್ಯಾಡರ್ ಸೂಳೇ ಮಗನೇ ನಿನಗೆ ಎಷ್ಟು ಸೊಕ್ಕಲೇ ಇಲ್ಲಿ ನಮ್ಮ ಜಾಗ ಇರುತ್ತದೆ ಎಂದು ಜಾತಿ ಎತ್ತಿ ಬೈದು  ಅವಮಾನಗೊಳಿಸಿದ್ದು ಅಲ್ಲದೆ ಟ್ರಾಕ್ಟರ್ ನಿಂದ ಕೆಳಗೆ ಇಳಿಯಲೇ ಸೂಳೇ ಮಗನೇ ಎಂದು ಎದೆಯ ಮೇಲಿನ ಅಂಗಿ ಹಿಡಿದು ಕೆಳಗೆ ಎಳೆದು ಕಟ್ಟಿಗೆಯಿಂದ  ಹೋಡೆದಿದ್ದು, ಅಲ್ಲದೆ ಕಬ್ಬಿಣದ ರಾಡಿನಿಂದ ಎಡಗಾಲು ಮೊಣಕಾಲಿಗೆ ಹೋಡೆದಿದ್ದು ಅಲ್ಲದೆ ತೆಲೆಗೆ ಬೆನ್ನಿಗೆ ಹೋಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ನಂತರ ಆರೋಪಿ ಜಮೀಲ್ ಈತನು ಈ ಬ್ಯಾಡರ್ ಸೂಳೇ  ಮಕ್ಕಳದು ಈ ಊರಲ್ಲಿ ಬಹಳ ಆಗಿದೆ ಅಂತಾ ಜಾತಿ ನಿಂದನೆಮಾಡಿ ಇವನನ್ನು ಇಲ್ಲಿಯೇ ಮುಗಿಯಿಸಿ ಬಿಡರಲೆ ಈ ಸೂಳೇ  ಮಗನದು ಬಹಳ ಆಗಿದೆ ಎಂದು ನಂತರ ಆರೋಪಿತರೆಲ್ಲರೂ ಇನ್ನೊಂದು ಸಲ ಸಿಕ್ಕರೆ ನಿನ್ನನ್ನು  ಜೀವ  ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಇದ್ದು ಲಿಖಿತ ದೂರಿನ  ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-29/2020 ಕಲಂ-447,341,504,324,506 ಸಹಿತ 34 ಐ.ಪಿ.ಸಿ 3(1) (r) (s)  ಮತ್ತು 3(2) (v-a)  SC/ST PA AMENDMENT ACT 2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿರುತ್ತಾರೆ.