Thought for the day

One of the toughest things in life is to make things simple:

24 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w :-
   
       ದಿನಾಂಕ 21.11.2018 ರಂದು ರಾತ್ರಿ 11.15 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಶಿವಶಕ್ತಿ ಪೆಟ್ರೋಲ್ ಬಂಕಿಗೆ ಆರೋಪಿ ನಂ: 1 ಪಾಂಡುರಂಗನಾಯಕ ವಕೀಲರ ಮಗ ಆತನ ಹೆಸರು ಗೊತ್ತಿಲ್ಲ ಈತನು ತನ್ನ ಮೊಟಾರ ಸೈಕಲ್ ಮೇಲೆ ಇನ್ನೂ ಇಬ್ಬರನ್ನು ಕೂರಿಸಿಕೊಂಡು ಬಂದು ಲೇ ಸೂಳೆ ಮಗನೇ ನನ್ನ ಗಾಡಿಗೆ ಪೆಟ್ರೋಲ್ ಹಾಕಲೇ ಅಂದನು ಅದಕ್ಕೆ ಫಿರ್ಯಾದಿಯು ಈಗ ರಾತ್ರಿಯಾಗಿದೆ 11.00 ಗಂಟೆಯ ನಂತರ ನಾವು ಡೀಜಲ್ ಮಾತ್ರ ಹಾಕ್ತೀವಿ, ಪೆಟ್ರೋಲ್ ಬಂದ್ ಮಾಡಿದ್ದೀವಿ ಅಂತಾ ಹೇಳಿದ್ದು ಅಷ್ಟಕ್ಕೆ ಅವನು ತನ್ನ ಕಪಾಳಕ್ಕೆ ಹೊಡೆದು ಮೂಗಿಗೆ ಗುದ್ದಿ, ಇನ್ನೂ ಯಾರಿಗೋ ಫೋನ್ ಮಾಡಿ ಇಲ್ಲಿ ಸೂಳೆ ಮಗಂದು ಜಾಸ್ತಿ ಆಗೈತೆ ಬರಲೇ ಅಂತಾ ತಿಳಿಸಿದನು. ಆಗ ತಾನು ಕೂಡಲೇ ತಮ್ಮ ತಂದೆ ಭೀಮಣ್ಣ ನಾಯಕ್ ರವರಿಗೆ ಫೋನ್ ಮಾಡಿ ವಿಷಯ ತಿಳಿಸಿ ತನ್ನ ತಂದೆಯನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದು, ಅಷ್ಟರಲ್ಲಿ -1 ಈತನು ವಾಪಸ್ ಹೋಗಿ, ದಿನಾಂಕ: 22.11.2018 ರಂದು ರಾತ್ರಿ 12.30 ಗಂಟೆಯ ಸುಮಾರಿಗೆ -1 ಈತನು -2 ಹಾಗೂ ಇನ್ನೂ ಸುಮಾರು 6-7 ಜನರು ಕೂಡಿ ತಮ್ಮ ತಮ್ಮ ಕೈಗಳಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದವರೇ, ಯಾಕಲೇ ಸೂಳೆ ಮಗನೇ ಸೊಕ್ಕೇನಲೇ ನಮ್ಮವರಿಗೆ ಪೆಟ್ರೋಲ್ ಹಾಕೋದಿಲ್ಲೇನಲೇ ಅಂತಾ ಬೈದನು ಅದಕ್ಕೆ ಫಿರ್ಯಾದಿಯ ತಂದೆ ಅಡ್ಡ ಬಂದು ತಡೀರಪ್ಪ ನಾವು ರಾತ್ರಿ ಪೆಟ್ರೋಲ್ ಹಾಕಲ್ಲ, ಆದರೇನಾಯ್ತು ನಿಮಗೆ ಹಾಕ್ತೀವಿ  ಅಂತಾ ಹೇಳಿದ್ದು ಅದಕ್ಕೆ -1 ಈತನು ತನ್ನ ಕೈಯಲ್ಲಿದ್ದ ರಾಡಿನಿಂದ ತಮ್ಮ ತಂದೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯಗೊಳಿಸಿದ್ದಲ್ಲದೇ, ತಮ್ಮ ತಂದೆಯ ಕೈ ಕಾಲುಗಳಿಗೆ ಹೊಡೆದು ಗಾಯಗಳಿಸಿದ್ದು, ಆಗ ತಾನು ತಡೆಯಲು ಮುಂದೆ ಬರಲಾಗಿ ಅವರೊಂದಿಗೆ ಬಂದಿದ್ದ -2 ಮಹೇಂದ್ರನಾಯಕ ಈತನು ತನ್ನ ಕೈಯಲ್ಲಿದ್ದ ಜಾಲಿ ಕಟ್ಟಿಗೆಯಿಂದ ತನಗೆ ಮೈಕೈಗೆ ಹೊಡೆದನು, ಉಳಿದವರೆಲ್ಲರೂ ಕೈಗಳಿಂದ ತನಗೆ ಮನಬಂದಂತೆ ಹೊಡೆ ಬಡೆ ಮಾಡಿದರು.  ಆಗ ತಮ್ಮ ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುವವರು ಸಹಾ ಬಿಡಿಸಲು ಅಡ್ಡ ಬರಲಾಗಿ ಅವರಿಗೂ ಸಹಾ ಉಳಿದವರು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆದರು, ಅಷ್ಟರಲ್ಲಿ ಅಲ್ಲಿಯೇ ಇದ್ದ ನರೇಂದ್ರ, ನಾಗರಾಜ, ಬಸವರಾಜ, ಅನೀಲ್ ಹಾಗೂ ಇತರರು ಬಂದು ಜಗಳ ಬಿಡಿಸಿಕೊಂಡಿದ್ದು,  ಆದರೂ -1 ಮತ್ತು -2 ರವರು ಸೂಳೆ ಮಕ್ಕಳದು ಜಾಸ್ತಿ ಆಗೈತೆ ಸೂಳೆ ಮಕ್ಕಳನ ಇಂದಲ್ಲಾ ನಾಳೆ ಕಲ್ಲಾಸ್ ಮಾಡ್ತೀವಿ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು ಘಟನೆಯಿಂದ ತಮ್ಮ ತಂದೆಯ ತಲೆಯ ಹಿಂಬದಿಯಲ್ಲಿ ಒಂದು ವರೆ ಇಂಚಿನಷ್ಟು ಕೊರೆದ ಭಾರಿ ರಕ್ತಗಾಯ, ಬಲಮೊಣಕಾಲಿಗೆ, ಬಲಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯವಾಗಿದ್ದು, ತನಗೆ ಮುಖಕ್ಕೆ ಎಡಹಣೆಗೆ, ಎಡಸೊಂಟಕ್ಕೆ ಒಳಪೆಟ್ಟಾಗಿದ್ದು ನಂತರ ತಾನು ತನ್ನ ತಂದೆಯವರನ್ನು ಹಾಜರಿದ್ದವರ ಸಹಾಯದಿಂದ ರಿಮ್ಸ್ ಆಸ್ಪತ್ರೆಗೆ ಒಂದು ಖಾಸಗಿ ವಾಹನದಲ್ಲಿ ತಂದು ಇಲಾಜಿಗೆ ಸೇರಿಕೆಯಾಗಿ, ತಮ್ಮ ತಂದೆಗೆ ಒಳರೋಗಿಯಾಗಿ ತಾನು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
       ತನಿಖೆಯ ಕಾಲಕ್ಕೆ ಪ್ರಕರಣದ ತನಿಖೆಯನ್ನು ನಾನು ಮುಂದುವರೆಸಿದ್ದು, ಇಂದು ದಿನಾಂಕ.22.11.2018 ರಂದು ಮುಂಜಾನೆ 11-00 ಗಂಟೆಗೆ ಪ್ರಕರಣದ ಫಿರ್ಯಾದಿ ಠಾಣೆಗೆ ಹಾಜರಾತಿ ತನ್ನ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಯ ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA: 241/2018 PÀ®A  143,147,148,324,323,504,506,307,353, ಸಹಿತ 149 ಐಪಿಸಿ ಮತ್ತು ಕಲಂ.3(1)(r)(s), 3(2)(V) ಎಸ್.ಸಿ/ಎಸ್.ಟಿ (ಪಿಎ) ಯಾಕ್ಟ್ 1989 ತಿದ್ದುಪಡಿ ಬಿಲ್ 2015 ಪ್ರಕಾರ  
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

      ದಿನಾಂಕ: 22.11.2018 ರಂದು 13.30 ಗಂಟೆಗೆ ರಾಜಾ ದೇವರಾಜ ನಾಯಕ ತಂ: ರಾಜಾ ಪಾಂಡುರಂಗ ನಾಯಕ ವಯ: 30 ವರ್ಷ, ಜಾ: ನಾಯಕರು, : ವ್ಯಾಸಂಗ ಸಾ: ಡ್ಯಾಡಿ ಕಾಲೋನಿ, ರಾಯಚೂರು ಫಿರ್ಯಾದಿದಾರರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 21.11.2018 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ತನ್ನ ಸ್ನೇಹಿತನ ಜೊತೆಗೆ ದ್ವೀಚಕ್ರವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಶಿವಶಕ್ತಿ ಪೆಟ್ರೋಲ್ ಬಂಕಿನ ಮಾಲಕ, 2] ಶಿವಶಕ್ತಿ ಪೆಟ್ರೋಲ್ ಬಂಕಿನ ಮಾಲಕನ ಮಗ  3] ಶಿವಶಕ್ತಿ ಪೆಟ್ರೋಲ್ ಬಂಕಿನ ಕೆಲಸಗಾರರು ಸುಮಾರು 10-15 ಜನರು ಹೆಸರು ವಿಳಾಸ ಗೊತ್ತಿಲ್ಲ. ಆರೋಪಿತರು ತನಗೆ ಪೆಟ್ರೋಲ್ ಹಾಕುವುದಿಲ್ಲ ಎಂದಿದ್ದು, ಆದರೆ ಬೇರೆ ಒಂದು ಕಾರಿಗೆ ಡೀಸಲ್ ಹಾಕಲು ಓದರು ಅದನ್ನು ತಾನು ಹಾಗೂ ತನ್ನ ಸ್ನೇಹಿತ ಪ್ರಶ್ನಿಸಿದ್ದು, ಆರೋಪಿತರು ಎಲ್ಲರೂ ಕೂಡಿ ತನಗೆ ಸೂಳೆ ಮಗನೇ ನಮ್ಮನೇನು ಕೇಳುತ್ತೀಯ ನಮ್ಮ ಮನಸ್ಸು ಬಂದವರಿಗೆ ಹಾಕುತ್ತೇವೆ, ನೀನು ಯಾರು ಕೇಳೋಕೆ ನಿಮ್ಮನ್ನು ಇಲ್ಲಿಯೇ ಹೊಡೆದು ಕೊಲೆ ಮಾಡಿ ಮುಗಿಸಿದರೆ ಏನು ಮಾಡುತ್ತೀರಿ ಅಂತಾ ಹೇಳಿ 10-15 ಜನ ಸೇರಿ ತಮ್ಮ ಕೈಗಳಲ್ಲಿ ಕಡಗ, ಪಂಚ್ ಮತ್ತು ಕಟ್ಟಿಗೆಗಳಿಂದ ಹೊಡೆದು ಕಾಲಿನಲ್ಲಿ ಒದ್ದಿದ್ದು ಮಾರಣಾಂತಿಕ ಹಲ್ಲೆಗೊಳಿಸಿದ್ದು ಇದರಿಂದ ತನಗೆ ಬಾಯಿಗೆ ಮುಖಕ್ಕೆ, ಬೆನ್ನಿಗೆ, ತಲೆಗೆ, ಎದೆಗೆ ಹೊಡೆದು ದುಃಖಾಪಾತಗೊಳಿಸಿದ್ದು, ಅದೇ ರೀತಿ ತನ್ನ ಗೆಳೆಯ ಚಂದ್ರಶೇಖರ ಪಾಟೀಲ ಇವನಿಗೂ ಸಹಾ ಮೈಯೆಲ್ಲಾ ಹೊಡೆದು ಕೆಳಗೆ ಹಾಕಿ ತುಳಿದರು. ಹಾಗೂ ಮೊಬೈಲ್ ಫೋನ್ ಕಳಗೆ ಎಸೆದು, ತಮಗೆ ತಾವೇ ಹೊಡೆದುಕೊಂಡು ಪೊಲೀಸ್ ಠಾಣೆಗೆ ಹೋದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಜೀವದ ಬೆದರಿಕೆ ಹಾಕಿದರು ಕಾರಣ ತಾವು ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ಕನ್ನಡ ಕೈ ಬರಹದ ಫಿರ್ಯಾದು ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA  £ÀA: 242/2018 PÀ®A. 143, 147, 148, 323, 324, 307, 504, 506 ಸಹಾ 149 ಐಪಿಸಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ªÀgÀzÀPÀëuÉÉ ¥ÀæPÀgÀtzÀ ªÀiÁ»w:-


     ದಿನಾಂಕ-22/11/2018 ರಂದು 13-20 ಗಂಟೆಗೆ ಶ್ರೀ ಮತಿ  ವಾಹೀದಾ ಬೇಗಂ  ಗಂಡ ಸೈಯಾದ್ ಜಮೀರ್ ಪಾಷಾ ವಯಸ್ಸು 26  ವರ್ಷ ಜಾ:ಮುಸ್ಲಿಂ :ಮನೆಕೆಲಸ ಸಾ: HRS ಕಾಲೋನಿ ಗಂಗಾವತಿ  ಜಿ: ಕೊಪ್ಪಳ  ಹಾ.. ಕವಿತಾಳ ಪಿರ್ಯಾದಿದಾರಳು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ ಪಿರ್ಯಾದಿದಾರಳಿಗೆ ಈಗ್ಗೆ ಸುಮಾರು 13 ತಿಂಗಳ ಹಿಂದೆ   ಸೈಯಾದ್ ಜಮೀರ್ ಪಾಷಾ ನೊಂದಿಗೆ ಹಿರಿಯ  ಸಮಕ್ಷಮದಲ್ಲಿ ಮದುವೆಯಾಗಿರುತ್ತದೆ. ಪಿರ್ಯಾದಿಗೆ ಈಗ ಮುಸ್ಕಾನ್  ಅಂತಾ  06 ತಿಂಗಳಿನ ಒಬ್ಬಳೇ ಹೆಣ್ಣು ಮಗು ಇರುತ್ತಾಳೆ. ಪಿರ್ಯಾದಿಯ ಗಂಡನು ಕಳೆದ 09 ತಿಂಗಳಿಂದಲೂ ಪಿರ್ಯಾದಿದಾರಳಿಗೆ ಮದುವೆ ಕಾಲಕ್ಕೆ ಯಾವುದೇ ರೀತಿಯ ವರದಕ್ಷಿಣೆಯನ್ನು ತಂದಿರುವದಿಲ್ಲ ಹೀಗಾಗಿ ನಿಮ್ಮ ತವರು ಮನೆಯಿಂದ 01 ಲಕ್ಷ ಗಳನ್ನು ತೆಗೆದುಕೊಂಡು ಬರಬೇಕು ಇಲ್ಲಂದರೆ ನಿನಗೆ ಇದೇ ರೀತಿಯಾಗಿ ದಿನಾಲು ಹಿಂಸೆಯನ್ನು ಕೊಡುತ್ತಾ  ನಿನ್ನ ಸಾಯಿಹಿಸಿ ಬಿಡುತ್ತೇನೆ. ನಿನ್ನಗೆ ಅಡಿಗೆ ಮಾಡಲು ಬರುವದಿಲ್ಲ, ಅಲ್ಲದೆ ನೀನು ಗಂಡು ಮಗನಿಗೆ ಜನ್ಮ ನೀಡದೇ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಿ ಅಂತಾ ದಿನಾಲೂ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿದಾಗ ಪಿರ್ಯಾದಿದಾರಳು ತನ್ನ ಗಂಡನ ತಂದೆ ತಾಯಿಗೆ  .1) ಸೈಯಾದ್ ಜಮೀರ್ ಪಾಷಾ ತಂದೆ  ಸೈಯಾದ್ ಸಾದೀಕ್ ಪಾಷಾ 28 ವರ್ಷ 2)  ಸೈಯಾದ್ ಸಾದೀಕ್ ಪಾಷಾ 58 ವರ್ಷ   3) ಪೈಮುದಾ ಬೇಗಂ  ಗಂಡ ಸೈಯಾದ್ ಸಾದೀಕ್ ಪಾಷಾ,  55 ವರ್ಷ ಮೂರು ಜನ  ಜಾ:ಮುಸ್ಲಿಂ :ಮನೆಕೆಲಸ ಸಾ:HSR ಕಾಲೋನಿ ಗಂಗಾವತಿ  ಜಿ: ಕೊಪ್ಪಳ  ವಿಷಯವನ್ನು ತಿಳಿಸಿದಾಗ ಅವರು ಸಹ ಅವಾಚ್ಯಾವಾಗಿ ಬೈದು ನಿನ್ನ ಗಂಡನು ಕೇಳಿದಂತೆ ವರದಕ್ಷಣೆಯನ್ನು ತೆಗೆದುಕೊಂಡು ಬರುವಂತೆ ಪಿರ್ಯಾದಿಯ ಗಂಡನಿಗೆ ಕುಮ್ಮಕ್ಕು ನೀಡಿದ್ದರಿಂದ ಕಳೆದ ಕೆಲವು ದಿನಗಳ ಹಿಂದೆ ಪಿರ್ಯಾದಿದಾರಳು ತನ್ನ ತವರು ಮನೆಯಾದ ಕವಿತಾಳಕ್ಕೆ ಬಂದು ಇದ್ದಾಗ ದಿನಾಂಕ 17/11/2018 ಮದ್ಯಾಹ್ನ 13-00 ಗಂಟೆಗೆ ಪಿರ್ಯಾದಿಯ ಗಂಡನು ಕವಿತಾಳಕ್ಕೆ ಬಂದು  ಪಿರ್ಯಾದಿಗೆ ನಿನ್ನಗೆ 01 ಲಕ್ಷ ರೂ ತೆಗೆದುಕೊಂಡು ಬರುವಂತೆ ಕಳುಹಿಸಿದರೆ ನೀನು  ತವರು ಮನೆಗೆ ಬಂದು ಇದ್ದೀಯಾ ಅಂತಾ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಹಿಂಸೆಯನ್ನು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್  ಠಾಣೆಯ ಅಪರಾಧ ಸಂಖ್ಯೆ 176/2018 ಕಲಂ-498(A).323.504.506 R/W 34 IPC & ಕಲಂ 03 & 04 DP ACT ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.