Thought for the day

One of the toughest things in life is to make things simple:

16 Nov 2018

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಎಸ್.ಸಿ/ಎಸ್.ಟಿ. ಪರಕರಣದ ಮಾಹಿತಿ.
ದಿನಾಂಕ 15.11.2018 ರಂದು ಬೆಳಿಗ್ಗೆ 10-30 ಗಂಟೆಗೆ ರೀಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಫಿರ್ಯಾದಿದಾರನ ಹತ್ತಿರ ಹೋದಾಗ ಲಿಖಿತ ದೂರನ್ನು ಹಾಜರು ಪಡಿಸಿದ್ದು ಅದರಲ್ಲಿ ಈಗ್ಗೆ ಸುಮಾರು 6 ತಿಂಗಳ ಹಿಂದೆ ಫಿರ್ಯಾದಿದಾರನ ಗೆಳಯ ವಿರಾಟ್ ಇವರ ಮೊಬೈಲನ್ನು ಆರೋಪಿ ಸೈಯದ್ ಬಾಬರ್ ಇವನು ಕಳ್ಳತನ ಮಾಡಿ ವಾಪಸ್ ಕೊಟ್ಟಿದ್ದು ದಿನಾಂಕ 14.11.2018 ರಂದು ರಾತ್ರಿ 10-00 ಗಂಟೆಯ ಸುಮಾರು ಫಿರ್ಯಾದಿದಾರನು ಕುಲುಸುಂಬಿ ಕಾಲೋನಿಯಲ್ಲಿ ಇರುವ ಬೇಕರಿ ಹತ್ತಿರ ತನ್ನ ಗೆಳೆಯರೊಂದಿಗೆ ನಿಂತುಕೊಂಡಾಗ ಆರೋಪಿ ಸೈಯದ್ ಬಾಬರ್ ಅಲ್ಲಿಗೆ ಹೋಗಿ ಫಿರ್ಯಾದಿಗೆ ಮಾತನಾಡಿಸಿದ್ದು ಅದಕ್ಕೆ ಫಿರ್ಯಾದಿದಾರನು ಮತ್ತೆ ಯಾಕೆ ಬಂದೀ ಕಳ್ಳತನ ಮಾಡಲು ಬಂದಿ ಏನು ಅಂತಾ ಕೇಳಿದ್ದಕ್ಕೆ ಫಿರ್ಯಾದಿದಾರನ ಸಂಗಡ ಜಗಳ ತೆಗೆದು ಏನಲೇ ನಿಂದು ಬಹಳ ಆಗ್ಯಾದಾ ನಿನ್ನ ನೋಡಿ ಬಿಡುತ್ತಿನೀ ನಮ್ಮವರನ್ನು ಕರೆದುಕೊಂಡು ಬರತ್ತೀನಿ ಅಂತಾ ಹೇಳಿ ಹೋಗಿದ್ದು ನಂತರ ಫಿರ್ಯಾದಿದಾರನು ರಾತ್ರಿ 10-30 ಗಂಟೆಯ ಸುಮಾರು ರಾಯಚೂರು ಮಹಾರಾಜ ಬಾರ್ & ರೆಸ್ಟೋರೆಂಟ್ ದಲ್ಲಿ ತನ್ನ ಗೆಳೆಯ ವಿರೇಶ ಇವರೊಂದಿಗೆ ಊಟಕ್ಕೆ ಹೋದಾಗ ಆರೋಪಿತರೆಲ್ಲಾರೂ ಅಲ್ಲಿಗೆ ಹೋಗಿ ಫಿರ್ಯಾದಿಯ ಸಂಗಡ ಜಗಳ ತೆಗೆದು ಆರೋಪಿ ನಂ-01 ಇವನು ಏನಲೇ ಬ್ಯಾಡರ್ ಸೂಳೆ ಮಗನೆ ನಿಂದು ಬಹಳ ಆಗ್ಯಾದಾ ಇವತ್ತು ನಿನ್ನನ್ನು ಮುಗಿಸಿ ಬಿಡುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕುತ್ತಿಗೆಗೆ ಹೊಡೆಯಲು ಹೋದಾಗ ಫಿರ್ಯಾದಿದಾರನು ಅವನನ್ನು ಹಿಂದಕ್ಕೆ ತಳ್ಳಿ ಚಾಕುವಿನ ಏಟನ್ನು ತಪ್ಪಿಸಿಕೊಂಡಾಗ ಆರೋಪಿ ನಂ 02 ಇವನು ಬ್ಯಾಡರ ಸೂಳೆ ಮಗನೇ ನಿನ್ನನ್ನು ಮುಗಿಸಿ ಬಿಡುತ್ತೇನೆ ಅಂತಾ ಚಾಕುವಿನಿಂದ ಬಲಗಡೆಯ ಕುಂಡಿಗೆ ತಿವಿದು ರಕ್ತಗಾಯಗೊಳಿಸಿದನು. ಜಗಳ ಬಿಡಿಸಿಕೊಳ್ಳಲು ಹೋದ ವಿರೇಶನಿಗೆ ನಿಂದಏನಲೇ ಸೂಳೆ ಮಗನೇ ಸುಮ್ಮನೇ ಹೋಗು ಇಲ್ಲದಿದ್ದರೇ ನಿನಗೂ ಚಾಕು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇನ್ನುಳಿದ ಆರೋಪಿ ನಂ 03 ಮತ್ತು 04 ಇವರು ಫಿರ್ಯಾದಿದಾರನಿಗೆ ಬ್ಯಾಡರ ಸೂಳೆ ಮಗನನ್ನು ಬಿಡುವುದು ಬೇಡ ಅಂತಾ ಹೇಳಿ ಕೈಗಳಿಂದ ಬೆನ್ನಿಗೆ ಹೊಡೆದು ದುಖಃಪಾತಗೊಳಿಸಿದ್ದು, ಆರೋಪಿತರೆಲ್ಲಾರೂ ಫಿರ್ಯಾದಿದಾರನಿಗೆ ಜಾತಿನಿಂದನೆ ಮಾಡಿ ಚಾಕುವಿನಿಂದ ತಿವಿದು ರಕ್ತಗಾಯಗೊಳಿಸಿದ್ದು ಅಲ್ಲದೇ ಕೈಗಳಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 141/2018 ಕಲಂ 504, 324, 323, 506, 307, ಸಹಿತ 34 ಐಪಿಸಿ ಕಲಂ 3(1) (r) (s), 3 (2) (v) SC/ST (PA) Act 1989 Amendment ordinance 2014 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.