Thought for the day

One of the toughest things in life is to make things simple:

21 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.

            1) ದಿನಾಂಕ:20.10.2020 ರಂದು 15-00 ಗಂಟೆಯ ಅವಧಿಯಲ್ಲಿ ಆರೋಪಿತನು1) ಮಲ್ಲಯ್ಯ ತಂದೆ ಭೀಮಣ್ಣ ವಯ: 66 ವರ್ಷ, ಜಾತಿ: ಯಾದವ, :ಕೂಲಿಕೆಲಸ, ಸಾ:ಏಗನೂರು,  ತಾ: ರಾಯಚೂರು 2) ಈರಪ್ಪ ತಂದೆ ಬಾಬಣ್ಣ ಜಾತಿ:ಕುರುಬರು, ಸಾ: ಏಗನೂರು   ಏಗನೂರು ಗ್ರಾಮದಲ್ಲಿ ಭೀರಪ್ಪ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿದಾರರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ 15-30 ಗಂಟೆಗೆ ಹೋಗಿ ನೋಡಿ  ಆರೋಪಿ ಮಲ್ಲಯ್ಯನು  ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ  ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿ ಮಲ್ಲಯ್ಯನ ವಶದಿಂದ ಪಂಚರ ಸಮಕ್ಷಮ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 2050/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಸದರಿ ಅಪಾದಿತನ ಮತ್ತು ಮಟಕಾದ ಹಣವನ್ನು ಪಡೆಯುತ್ತಿದ್ದ  ಅರೋಪಿ ಈರಪ್ಪ ರವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನ ಪತ್ರದ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು 156/2020 ಕಲಂ 78(3) ಕೆ ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      2) ದಿನಾಂಕ 20.10.2020 ರಂದು 01-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಆದರ್ಶ ಕಾಲೋನಿಯ ವೆಂಕಟೇಶ್ವರ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳು ರಾಮಲಕ್ಷ್ಮಿ ಗಂಡ ಸುಬ್ಬರಾವ್, ವಯ: 60 ವರ್ಷ, ಜಾ: ರೆಡ್ಡಿ, : ಹೋಟಲ್ ವ್ಯಾಪರ, ಸಾ: ವೆಂಕಟೇಶ್ವರ ಶಾಲೆ ಹತ್ತಿರ, ಆದರ್ಶ ಕಾಲೋನಿ, ಸಿಂಧನೂರು.ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತಳಿಂದ ಮಟಕಾ ಜೂಜಾಟದ ನಗದು ಹಣ ರೂ 580/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತಳು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತಳನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ   ಸಿಂಧನೂರು ನಗರ ಠಾಣೆ. ಗುನ್ನೆ ನಂ: 90/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            3) ದಿನಾಂಕ 20.10.2020 ರಂದು 02-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಇಂದಿರಾ ನಗರದ ಇಲಾಹಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಲಿಂಗಪ್ಪ ತಂದೆ ಫಕೀರಪ್ಪ ಕತ್ತಿಗಾರು, ವಯ: 52 ವರ್ಷ, ಜಾ: ಕುರುಬರು, : ಕೂಲಿಕೆಲಸ, ಸಾ: ಮಸ್ತಾನ್ ಅಲಿ ದರ್ಗಾ ಹಿಂದುಗಡೆ, ಇಂದಿರಾ ನಗರ, ಸಿಂಧನೂರು. ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 630/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ನಗರ  ಠಾಣಾ ಗುನ್ನೆ ನಂ: 91/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಪ್ರಕೃತಿ ವಿಕೋಪದಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ: 

      ದಿನಾಂಕ 20-10-2020 ರಂದು  ಸಾಯಂಕಾಲ 4-15 ಗಂಟೆಗೆ ಫಿರ್ಯಾಧಿದಾರನು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ  ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ  ಇಂದು ದಿನಾಂಕ  20-10-2020 ರಂದು ಬೆಳಗ್ಗೆ 08-00 ಗಂಟೆಯ ಸುಮಾರು ಪ್ರತಿ ದಿನದಂತೆ  ಫಿರ್ಯಾಧಿದಾರನ ಹೆಂಡತಿಯಾದ ನಿಂಗಮ್ಮ . 26 ಮತ್ತು ಫಿರ್ಯಾಧಿದಾರನ ತಮ್ಮನಾದ ನಾಗಪ್ಪ . 21 ಇಬ್ಬರೂ ಕೂಡಿಕೊಂಡು ಚಿಕ್ಕಬೇರಗಿ ಸೀಮಾಂತರದಲ್ಲಿರುವ ಈರಪ್ಪ ಇವರ ಸೀಮಾಂತರದಲ್ಲಿರುವ ಜಮೀನು ಸರ್ವೆ ನಂಬರ 153 ನೇದ್ದರಲ್ಲಿ ತಮಗೆ ಸಂಬಂಧಿಸಿದ 06 ದೊಡ್ಡ ಕುರಿ ಅಂದಾಜು 84000/ ಬೆಲೆಬಾಳುವ ಮತ್ತು 01 ದೊಡ್ಡ ಮೇಕೆ 10 ,000/ ಬೆಲೆ ಬಾಳುವವನ್ನು ಹೊಡೆದುಕೊಂಡು ಮೇಯಿಸಲೆಂದು ಹೋಗಿ ಹೊಲದಲ್ಲಿ ಬಿಟ್ಟು ಮೇಯಿಸುತ್ತಿರುವಾಗ ಮದ್ಯಾಹ್ನ 3.30 ಗಂಟೆ ಸುಮಾರು  ಗುಡುಗು ಮಿಂಚಿ ನಿಂದ ಕೂಡಿದ ಮಳೆ ಪ್ರಾರಂಭವಾಗಿ  ಏಕಾ ಏಕಾ ಸಿಡಲು ಎಲ್ಲೊ ಬಿದ್ದಿದ್ದರಿಂದ ಅದರ ರವೆ  ಹೊಲದಲ್ಲಿ ಮೇಯಿತಿದ್ದ ಆರು ಕುರಿ & ಒಂದು ಮೇಕೆಗೆ ಹಾಗೂ ಹೊಲದಲ್ಲಿದ್ದ ಫಿರ್ಯಾಧಿದಾರನ ಹೆಂಡತಿ ನಾಗಮ್ಮ  ಈಕೆಗೆ ಸಿಡಿಲಿನ ರವೆ ತಾಕಿದ್ದರಿಂದ ಸ್ಥಳದಲ್ಲಿ ಮೇಕೆ ಮತ್ತು ಕುರಿ ಸತ್ತಿದ್ದು , ನಾಗಮ್ಮಳಿಗೆ ಬಲಗಡೆ ಬೆನ್ನಿಗೆ   ತೆರಚಿದ ಗಾಯವಾಗಿದ್ದು ಇರುತ್ತದೆ, ಕಾರಣ ಪ್ರಕೃತಿ ವಿಕೋಪದಿಂದ ಘಟನೆ  ಜರಿಗಿದ್ದು ಸ್ಥಳಕ್ಕೆ ಬಂದು ಪರೀಶಿಲನೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ ಠಾಣಾ ಪ್ರಕೃತಿ ವಿಕೋಪ ಸಂಖ್ಯೆ 01/2020 ನೇದ್ದರ ಪ್ರಕಾರ ಪ್ರಕರಣ ದಾಖಲಿಕೊಂಡು ತನೀಖೆ ಕೈಕೋಂಡಿರುತ್ತಾರೆ.   

ಮನುಷ್ಯ ಕಾಣೆ ಪ್ರಕರಣದ ಮಾಹಿತಿ:   

         ದಿನಾಂಕ:20-10-2020 ರಂದು ಫಿರ್ಯಾಧಿದಾರನಾದ ಶ್ರೀ ಗೋಬರನಾಥ ತಂದೆ ಪುನ್ಯಾ ವಯಾ||53, ಜಾ||ಲಮಾಣಿ, ||ಆರ್.ಟಿ.ಪಿ.ಎಸ್.ಕಂಪನಿಯಲ್ಲಿ ಹೆಲ್ಪರ್, ಸಾ||ವಿಶ್ವಾಸಪುರ ಗ್ರಾಮ ತಾ||ಜಿ||ಯಾದಗಿರಿ ಹಾ||||ಮನೆ ನಂ ಟೈಪ್-7-275 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ  ಇವರು ಠಾಣೆಗೆ ಹಾಜರಾಗಿ ಗಣಕೀಕೃ  ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರ ಮಗನಾದ ತೇಜುನಾಯಕ್ ತಂದೆ ಗೋಬರನಾಥ್ ||23ವರ್ಷ, ಜಾ||ಲಮಾಣಿ, ||ಬಿ..ಇಂಜಿನಿಯರಿಂಗ್ ವಿದ್ಯಾರ್ಥಿ, ಸಾ|| ಮನೆ ನಂ ಟೈಪ್-7-275 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ  ಪೋ ನಂ 8073172187 / 8296370875ಈತನು  ಇವನು ದಿನಾಂಕ 19-10-2020 ರಂದು ಸಂಜೆ 5-30 ಗಂಟೆಗೆ ದೇವಸೂಗೂರಿನ ಪಾರ್ವತಿ ಕಾಲೋನಿಯ ಸಾಯಿಬಾಬಾ ಗುಡಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಅಲ್ಲಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ  ಕಾರಣ ತಡವಾಗಿ ಠಾಣೆಗೆ ಬಂದು  ದೂರು ನೀಡಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                                                        

ಚಹರೆ ಪಟ್ಟಿ

ಕನ್ನಡ, ಹಿಂದಿ, ಇಂಗ್ಲೀಷ್, ಲಮಾಣಿ  ಭಾಷೆ ಮಾತನಾಡುತ್ತಿದ್ದನು, ಉದ್ದನೇಯ ಮುಖ, ಎತ್ತರ  5.6 ಫೀಟ್, ಇರುತ್ತಾನೆ, ಸಾದಾರಣ ಕೂದಲು , ಕಪ್ಪು ಬಣ್ಣದ ಜರ್ಸಿ, ಶಾಟ್ಸ್ (ತ್ರೀ ಫ್ರೋರ್) , ಸಾದಾರಣ ತೆಳ್ಳನೆಯ ಮೈಕಟ್ಟು, ಗೋದಿ ಬಣ್ಣದ ಮೈಬಣ್ಣ ಹೊಂದಿರುತ್ತಾನೆ.