Thought for the day

One of the toughest things in life is to make things simple:

7 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ವರದಕ್ಷಿಣ ಕಿರುಕುಳ ಪ್ರಕರಣ ಮಾಹಿತಿ.
            ದಿನಾಂಕ 07-07-2020 ರಂದು ಮಧ್ಯಾಹ್ನ 14-30 ಗಂಟೆಗೆ ಪಿರ್ಯಾಧಿ ರೇಣುಕಮ್ಮ ಗಂಡ ದುರುಗಪ್ಪ 24 ವರ್ಷ ಜಾ-ಕುರುಬರು ಉ-ಮನೆ ಕೆಲಸ ಸಾ-ಕಾಳಪೂರು ತಾ-ಲಿಂಗಸ್ಗೂರು ಹಾ.ವ- ಗೌಡನಭಾವಿ ಕ್ಯಾಂಪ್ ತಾ-ಮಸ್ಕಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ, ಪಿರ್ಯಾಧಿದಾರಳ ತವರುರೂ ಗೌಡಭಾವಿ ಕ್ಯಾಂಪಿದ್ದು. ಈಕೆಯನ್ನು ಕಳೆದ 04-05 ವರ್ಷದ ಹಿಂದೆ ಲಿಂಗಸ್ಗೂರು ತಾಲ್ಲೂಕಿನ ಕಾಳಪೂರು ಗ್ರಾಮದ ದುರುಗಪ್ಪ ಈತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಪಿರ್ಯಾಧಿದಾರಳ ಗಂಡನಿಗೆ ವರದಕ್ಷಿಣೆ ಹಣವೆಂದು 100000/- ರೂಪಾಯಿ ಮತ್ತು 05 ತೊಲೆ ಬಂಗಾರದ ಆಭಾರಣ ಹಾಗೂ ಗೃಹ ಉಪಯೋಗಿ ಸಾಮಾನು ನೀಡಿದ್ದು ಇರುತ್ತದೆ. ಪಿರ್ಯಾಧಿದಾರಳ ಗಂಡನಾದ ದುರುಗಪ್ಪ ಈತನು ಕುಡಿತ ಮತ್ತು ಇಸ್ಪೇಟ್ ಚಟಗಳಿಗೆ ಬಲಿಯಾಗಿ ಪಿರ್ಯಾಧಿದಾರಳಿಗೆ ಹೊಡೆ ಬಡೆಮಾಡಿ ತವರು ಮನೆಯಿಂದ 05 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಾ ಬಂದಿರುತ್ತಾನೆ. ಉಳಿದ ಆರೋಪಿತರು ದುರುಗಪ್ಪನಿಗೆ ವರದಕ್ಷಿಣೆ ಹಣ ತರಿಸುವಂತೆ ಪ್ರಚೋದನೆ ನೀಡಿರುತ್ತಾರೆ. ಅಲ್ಲದೆ ಪಿರ್ಯಾಧಿದಾರಳಿಗೆ ಊಟ,ಬಟ್ಟೆ ಕೊಡದೆ ಮಾನಸಿಕವಾಗಿ,ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು ಇರುತ್ತದೆ. ಈಗ್ಗೆ 04 ತಿಂಗಳ ಹಿಂದೆ ಗಂಡ ಆರೋಪಿತರೆಲ್ಲರೂ ಪಿರ್ಯಾಧಿದಾರಳಿಗೆ ವರದಕ್ಷಿಣೆ ಹಣ ತರುವಂತೆ ಎಲ್ಲಾರೂ ಸೇರಿಕೊಂಡು ಹೊಡೆ ಬಡೆಮಾಡಿ ಮನೆಯಿಂದ ಹೊರಗೆ ಹಾಕಿ ವರದಕ್ಷಿಣೆ ಹಣ ತೆಗೆದುಕೊಂಡು ಮನೆಯೊಳಗೆ ಬರಬೇಕು ಇಲ್ಲದಿದ್ದರೆ ಮನೆಗೆ ಬರಬಾರದು ಒಂದು ವೇಳೆ ಬಂದರೆ ಜೀವಂತ ಉಳಿಸುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿದ್ದರಿಂದ ಪಿರ್ಯಾಧಿದಾರಳಿಗೆ ಬೇರೆ ದಾರಿ ಇಲ್ಲದೆ ತನ್ನ ತವರೂರಾದ ಗೌಡನಭಾವಿ ಕ್ಯಾಂಪಿಗೆ ಬಂದು ತನ್ನ ತಂದೆ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು ಇರುತ್ತದೆ.
          ದಿನಾಂಕ-30/06/2020 ರಂದು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ಪಿರ್ಯಾಧಿದಾರಳು ತನ್ನ ತವರು ಮನೆಯ ಮುಂದೆ ಇರುವಾಗ ಆರೋಪಿ ದುರುಗಪ್ಪ ತಂದೆ ಗದ್ದೆಪ್ಪ 35 ವರ್ಷ ಜಾ-ಕುರುಬರು ಹಾಗೂ ಇತರೆ 5 ಜನರೆಲ್ಲರೂ ಮೋಟರ್ ಸೈಕಲ್ ಗಳ ಮೇಲೆ ಕೂಡಿಕೊಂಡು ಬಂದವರೇ ಪಿರ್ಯಾಧಿದಾರಳಿಗೆ ಆರೋಪಿ ದುರುಗಪ್ಪನು ಜಗಳ ತೆಗೆದು 05 ಲಕ್ಷ ವರದಕ್ಷಿಣೆ ಹಣ ತರುವಂತೆ ಮನೆಯಿಂದ ಹೊರಗೆ ಹಾಕಿದ್ದರೂ ಸಹ ಇಲ್ಲಿಂದ ಮರಳಿ ಬಾರದೆ ಇಲ್ಲಿಯೇ ಇದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆಮಾಡಿ ಪಿರ್ಯಾಧಿದಾರಳ ಗಂಡನ ಅಣ್ಣಂದಿರು ಪಿರ್ಯಾಧಿದಾರಳಿಗೆ ಸೀರೆ ಸೆರಗು ಹಿಡಿದು ಎಳೆದಾಡಿ ಮಾನಹಾನಿ ಮಾಡಲು ಪ್ರಯತ್ನಿಸಿದ್ದು ಆಗಾ ಪಿರ್ಯಾಧಿ ತಂದೆ ತಾಯಿ ಮತ್ತು ಪಕ್ಕದ ಮನೆಯವರು ಜಗಳವನ್ನು ಬಿಡಿಸಿಕೊಂಡಿದ್ದು ನಂತರ ಆರೋಪಿತರೆಲ್ಲರೂ ವರದಕ್ಷಿಣೆ ಹಣ ತರುವಂತೆ ಹೊಡೆ ಬಡೆಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಇದ್ದ ಗಣಕೀಕೃತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-56/2020 ಕಲಂ-143, 147, 498 (ಎ), 354, 323, 504, 506, 109 ಸಹಿತ 149 ಐಪಿಸಿ ಮತ್ತು ಕಲಂ-3, 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇತೆರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
            ದಿನಾಂಕ-05-07-2020 ರದು ಬೆಳಿಗ್ಗೆ 08-30 ಗಂಟೆಯ ಸುಮಾರು ಪಿರ್ಯಾದಿಯು ತನ್ನ ಅಣ್ಣನಾದ ಶೇಖರಗೌಡ ತಂದೆ ಶಿವರೆಡ್ಡೆಪ್ಪ ಎಲೆಕೂಡ್ಲಗಿ ರವರಿಗೆ ಸಂಬಂಧಿಸಿದ ಪಾಂಡುರಂಗ ಕ್ಯಾಂಪಿನ  ಮುದ್ದಾಪೂರು ಸೀಮಾ ಜಮೀನು ಸರ್ವೆ ನಂಬರ್ 8/1/* ನೆದ್ದರಲ್ಲಿ ಪಿರ್ಯಾದಿ ಮತ್ತು ಶೇಖರಗೌಡ ಹಾಗೂ ಮಲ್ಲಮ್ಮ ಗಂಡ ಮಲ್ಲನಗೌಡ ರವರೊಂದಿಗೆ ಹೊಲದಲ್ಲಿದ್ದಾಗ, ಮೇಲ್ಕಂಡ ಆರೋಪಿತರು ಉಳಿದ 50 ಜನ ಆರೋಪಿತರೊಂದಿಗೆ ಅಕ್ರಮ ಕೂಟ ರಚಿಸಿಕೊಂಡು  ಒಂದು ಜೆ.ಸಿ.ಬಿ, 5 ಟ್ರ್ಯಾಕ್ಟರ್‌, ಒಂದುಮಾರುತಿ ಓಮಿನಿ ವ್ಯಾನ ಸಂ: ಕೆ.ಎ-36/ಎನ್-7015 ಮತ್ತು ಸುಮಾರು 30 ಮೋಟಾರ ಸೈಕಲನಲ್ಲಿ ಶೇಖರಗೌಡ ಇವರ ಹೊಲಕ್ಕೆ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿ ಸದರಿ ರಾಮಬಾಬು ಈತನು ಶೇಖರಗೌಡನ ಎದೆಯ ಮೇಲಿನ ಅಂಗಿ ಹಿಡಿದು “ಲೇ ಸೂಳೆ ಮಗನೇ , ಈ ಹೊಲದಲ್ಲಿ ನಿಂದೇನಿದೆ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು ಆತನ ಮೈಕೈಗೆ ಜೋರಾಗಿ ಕೈಯಿಂದ  ಗುದ್ದಿ ನೆಲಕ್ಕೆ ದಬ್ಬಿ ಕಾಲಿನಿಂದ ಒದ್ದು ನಂತರ ಶೇಖರಗೌಡನಿಗೆ ಸಂಬಂಧಿಸಿದ ಗುಡಿಸನಲ್ಲಿದ್ದ 100 ಭತ್ತದ ಚೀಲಗಳನ್ನು ತಾವು ತಂದಿದ್ದ ಟ್ರಾಕ್ಟರಗಲ್ಲಿ  ಹೇರಿಕೊಳ್ಳಲು ಹೋದಾಗ ಇದನ್ನು ತಡೆಯಲು ಹೋದ ಶೇಖರಗೌಡನಿಗೆ, ಪಿರ್ಯಾದಿಗೆ ಮತ್ತು ಮಲ್ಲಮ್ಮಳಿಗೆ ಆರೋಪಿತರೆಲ್ಲರೂ ಸೇರಿಕೊಂಡು ಹೊಡೆಬಡೆ ಮಾಡಿ ಎ-2, ಎ-5, ಎ-7, ಎ-8 ರವರು ಮಲ್ಲಮ್ಮಳ ಕೊರಳಲ್ಲಿದ್ದ  6 ತೊಲೆ ಮಾಂಗಲ್ಯ ಸರವನ್ನು ಮತ್ತು ಎ-4 ರವರು ಶೇಖರಗೌಡನ ಜೇಬಿನಿಂದ ರೂ,30,000 ಗಳ ಹಣವನ್ನು,  ಎ-3 ಈತನು ಪಿರ್ಯಾದಿಯ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಸರವನ್ನು  ಹಾಡು ಹಗಲೇ ದೌರ್ಜನ್ಯದಿಂದ ದೋಚಿ ದರೋಡೆ ಮಾಡಿ ಕಿತ್ತುಕೊಂಡಿದ್ದಲ್ಲದೇ, ಆರೋಪಿತರೆಲ್ಲರೂ ಸೇರಿ 100 ಭತ್ತದ ಚೀಲಗಳನ್ನು  ಟ್ರಾಕ್ಟರಗಳಲ್ಲಿ ತುಂಬಿಸಿಕೊಂಡು ನಂತರ ಜೆಸಿಬಿ ಯಂತ್ರದ ಸಹಾಯದಿಂದ ಸದ್ರಿ ಗುಡಿಸಲನ್ನು ಧ್ವಂಸ ಮಾಡಿ ಲುಕ್ಸಾನುಗೊಳಿಸಿರುತ್ತಾರೆ. ಆರೋಪಿತರು ಕರೋನಾ ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಕರ್ಪ್ಯೂ ಲಾಕ್-ಡೌನ್ ಆದೇಶ ಇದ್ದಾಗ್ಯೂ  ಗುಂಪುಕಟ್ಟಿಕೊಂಡು ಬಂದು ಇಂತಹ ಘನಗೋರ ಗುಂಡಾಗಿರಿ ಮಾಡಿದ್ದಲ್ಲದೇ ಮೈಮೇಲಿದ್ದ ಒಟ್ಟು 07 ತೊಲೆ ಬಂಗಾರವನ್ನು , 100 ಭತ್ತದ ಚೀಲಗಳನ್ನು ದೋಚಿ ದರೋಡೆ ಮಾಡಿದ್ದು ಅಲ್ಲದೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೇ ಅಥವಾ ಈ ಕುರಿತು ಪೊಲೀಸ್  ಠಾಣೆಗೆ ದೂರು ಸಲ್ಲಿಸಿದರೇ ನಿಮ್ಮನ್ನು ಇದೇ ಹೊಲದಲ್ಲಿ ಜೆಸಿಬಿಯಿಂದ ಮಣ್ಣು ಅಗೆದು ಇದರಲ್ಲಿ ಜೀವಂತ ಹೂತು ಹಾಕುತ್ತೇವೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ನಾವು  ಆರೋಪಿತರ ಭಯದಿಂದಾಗಿ ಇಂದು ತಡವಾಗಿ ಠಾಣೆಗೆ ಬಂದು ಮೇಲ್ಕಾಣಿಸಿದ ಆರೋಪಿತರ ವಿರುದ್ದ ದೂರು ಸಲ್ಲಿಸಿದ್ದು ಇದೆ ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ  ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 96/2020  U/s  143, 147, 447, 504, 323, 354, 395, 427, 506, 269 R/w 149  IPC ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಂಡಿರುತ್ತಾರೆ.