Thought for the day

One of the toughest things in life is to make things simple:

2 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಹಿಳೆ ಕಾಣೆ ಪ್ರಕರಣದ ಮಾಹಿತಿ:
ಇಂದು ದಿನಾಂಕ 10.07.2020 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿ  ಹನುಮಂತಮ್ಮ ಗಂಡ ನರಸಿಂಹಲು ವ: 58, ಜಾ: ನಾಯಕ  ಉ : ಮನೆಕೆಲಸ  ಸಾ: ಮನೆ ನಂ. 6-6-142 ತಿಮ್ಮಾಪೂರು ಪೇಟ್ ಸೆಂಟ್ರಿಂಗ್ ಮಾರೆಪ್ಪನ ಮನೆ ಹತ್ತಿರ ರಾಯಚೂರು ಠಾಣೆಗೆ ಬಂದು ಹೇಳಿಕೆ  ನೀಡಿದ್ದರ ಸಾರಾಂಶವೇನೆಂದರೆ  ಫಿರ್ಯಾದಿಯ ಮಗಳಾದ  ದೇವಮ್ಮ  ವಯ: 32 ವರ್ಷ ಈಕೆಯು ದಿನಾಂಕ 11-06-2020 ರಂದು ಸಾಯಂಕಾಲ 6-00  ಗಂಟೆ ಸುಮಾರಿಗೆ  ಮನೆಯಿಂದ  ಮೆಡಿಕಲ್ ಸ್ಟೋರಿಗೆ ಹೋಗಿ ಮಾತ್ರೆಗಳನ್ನು ತರುತ್ತೇನೆಂದು ಜೊತೆಗೆ ತನ್ನ ಮಗ ಭರತಕುಮಾರ ವ : 10 ವರ್ಷ ಈತನನ್ನು ಕರೆದುಕೊಂಡು ಮನೆಯಿಂದ ಹೋದವಳು ರಾತ್ರಿಯಾದರೂ ಮನೆಗೆ ಬರಲಿಲ್ಲ ನಂತರ ಅವರ ಸಂಬಂಧಿಕರ ಮತ್ತು ಪರಿಚಯಸ್ಥರ ಹತ್ತಿರ ಹೋಗಿರಬಹುದು ಅಂತಾ ಸಂಬಂಧಿಕರಿಗೂ  ಮತ್ತು ಪರಿಚಯಯಸ್ಥರಿಗೆ ಪೋನ್ ಮುಖಾಂತರ ವಿಚಾರಿಸಲು  ನನ್ನ ಮಗಳು ಮತ್ತು ಮೊಮ್ಮಗ ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ಇಲ್ಲಿಯವರೆಗೂ ಮನೆಗೆ ಬರುತ್ತಾರೆ ಅಂತಾ ಕಾದು ನೋಡಿದ್ದು ಇದುವರೆಗೂ ಮನೆಗೆ ಬಾರದೆ ಇರುವುದರಿಂದ  ನಮ್ಮ ಮಗಳು ದೇವಮ್ಮ ಮತ್ತು ಮೊಮ್ಮಗ  ಭರತಕುಮಾರ  ಇವರು ಕಾಣೆಯಾಗಿದ್ದು ಇರುತ್ತದೆ. ಆದ್ದರಿಂದ ನನ್ನ ಮಗಳು & ಮೊಮ್ಮಗ  ಕಾಣೆಯಾದ ಬಗ್ಗೆ  ಈ ದಿನ ತಡವಾಗಿ ಬಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣಾ ಗುನ್ನೆ ನಂ 50/2020 ಕಲಂ ಮಹಿಳಾ & ಹುಡುಗ  ಕಾಣೆ ನೇದ್ದರ ಪ್ರಕಾರ ನೇತಾಜಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
 ಕಾಣೆಯಾದ ಮಹಿಳೆಯ ಚಹರೆ ಪಟ್ಟಿ:
ಹೆಸರು :  ದೇವಮ್ಮ  ವಯ: 32 ವರ್ಷಗಳು. ಜಾ: ನಾಯಕ
ಎತ್ತರಃ       5 ಫೀಟ್ 2 ಇಂಚು.
ಚಹರೆಃ     ದುಂಡುಮುಖ, ಗೋದಿ ಬಣ್ಣ, ಅಗಲವಾದ ಹಣೆ, ಸಾದಾರಣ ಮೈಕಟ್ಟು.
               ತಲೆಯಲ್ಲಿ ಕಪ್ಪು ಕೂದಲು, ಇರುತ್ತವೆ.  
ಉಡುಪುಃ  ನೀಲಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಕುಪ್ಪಸ   
ಭಾಷೆಃ      ಕನ್ನಡ.  ತೆಲಗು ಮಾತನಾಡುತ್ತಾಳೆ. 

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ:
  ಇಂದು ದಿನಾಂಕ 01.07.2020  ರಂದು ಸಾಯಂಕಾಲ 5-45 ಗಂಟೆಗೆ ಪಿ.ಎಸ್..(ಕಾ.ಸು) ರವರು, ಆರೋಪಿತರು 1 ) ನರಸಿಂಹಲು ತಂದೆ ಶಿವಪ್ಪ ವ:30, ಜಾ: ಕೊರವರ  : ಲೇಬರ್ ಆಪೀಸದಲ್ಲಿ ಕೆಲಸ ಸಾ: ಮನೆ ನಂ. 4-4-118 ಅಶೋಕ  ನಗರ ರಾಯಚೂರು  2) ಬಜಾರಪ್ಪ ತಂದೆ ಈರಣ್ಣ :30, ಜಾ: ಕೊರವರ ಉ: ಕೂಲಿ ಸಾ: ತಿಮ್ಮಾಪೂರು ಪೇಟ್  ರಾಯಚೂರು 3) ಶ್ರೀನಿವಾಸ ತಂದೆ ರಾಮಣ್ಣ ವ:45, ಜಾ: ಕಬ್ಬೇರ ಉ: ಬಾರ್ ನಲ್ಲಿ ಕೆಲಸ ಸಾ: ತಿಮ್ಮಾಪೂರು ಪೇಟ್ 4) ಈರಣ್ಣ ತಂದೆ ಮುಕ್ಕಣ್ಣ ವ:56, ಜಾ: ಕೊರವರ ಉ: ಶಿಕ್ಷಕ ಸಾ: ಮನೆ ನಂ. 6-2-45  ತಿಮ್ಮಾಪೂರು ಪೇಟೆ ರಾಯಚೂರು  5) ಈರೇಶ ತಂದೆ ಮಾರೆಪ್ಪ :35, ಜಾ ಕೊರವರ :ಹಂದಿಸಾಕಣಿಕೆ ಸಾ:ಮನೆ ನಂ.4-4-196/55 ಸಾ: ಅಶೋಕ ನಗರ ರಾಯಚೂರು  6) ಶ್ರೀಕಾಂತ ತಂದೆ ಸುರೇಶ :32, ಜಾ: ಮಾದಿಗ : ವರ್ಮಾ ಜ್ಯೂವಲರಿ  ಬಂಗಾರ ಅಂಗಡಿಯಲ್ಲಿ ಕೆಲಸ ಸಾ: ಮನೆ ನಂ.  6-2-39 ತಿಮ್ಮಾಪೂರ ಪೇಟ್ ರಾಯಚುರ  7)ತಿಮ್ಮಪ್ಪ ತಂದೆ ಮಾರೆಪ್ಪ : 50 ಜಾ: ಅಗಸರ : ಇಸ್ತ್ರಿ ಮಾಡುವದು ಸಾ : ಮನೆ ನಂ.6-2-138/13 ಬಿ.ಆರ್. ಬಿ ಸರ್ಕಲ್ ಮಾಣಿಕ ನಗರ ರಾಯಚೂರು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ   ನೀಡಿದ್ದು ಅದರ ಸಾರಾಂಶವೆನೆಂದರೆ , ಇಂದು ದಿನಾಂಕ 01.07.2020 ರಂದು ಸಾಯಂಕಾಲ 4-45  ಗಂಟೆಗೆ ಬಿ.ಆರ್.ಬಿ ಸರ್ಕಲದಿಂದ ಆರ್.ಟಿ.ಒ ಸರ್ಕಲ್ ಕಡೆ ಹೋಗುವ ದಾರಿಯಲ್ಲಿ ಅಶೋಕ ನಗರದ ಶಂಕರ ಪೋಟೋ ಸ್ಟೂಡಿಯೋ ಬಲಭಾಗದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ 227, ಪಿ.ಸಿ.355, 257, 307  ಹಾಗೂ ಪಂಚರೊಂದಿಗೆ ಸಾಯಂಕಾಲ 5-15 ಗಂಟೆಗೆ ಠಾಣೆಯಿಂದ ಸರಕಾರಿ ಜೀಪ ನಂ ಕೆಎ-36/ಜಿ-193 ನೇದ್ದರಲ್ಲಿ ಹೊರಟು ಮಾಣಿಕ ನಗರದ ಆಂಜನೇಯ ದೇವಸ್ಥಾನದ  ಹತ್ತಿರ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಜೀಪಿನಿಂದ ಎಲ್ಲರೂ ಇಳಿದು ನೋಡಲು ಅಶೋಕ ನಗರದ ಶಂಕರ ಪೋಟೋ ಸ್ಟೂಡಿಯೋ ಬಲಭಾಗದ ಸಾರ್ವಜನಿಕ ಸ್ಧಳದಲ್ಲಿ ಗುಂಪಾಗಿ ಕುಳಿತು ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಒಬ್ಬನ ಕೈಯಲ್ಲಿ ಇಸ್ಪೇಟ್ ಎಲೆಗಳಿದ್ದು ಆತನು ತನ್ನ ಮುಂದೆ ಇಸ್ಪೇಟ ಎಲೆಗಳನ್ನು ಅಂಗಾತವಾಗಿ ಎರಡೂ ಕಡೆ ಹಾಕುತ್ತಿದ್ದು ಒಂದು ಕಡೆ ಹಾಕಿದಾಗ ಅಂದರ್ ಅಂತಾ ಮತ್ತು ಇನ್ನೊಂದು ಕಡೆ ಹಾಕಿದಾಗ ಬಾಹರ್ ಅಂತಾ ಅನ್ನುತ್ತಿದ್ದನು.ಉಳಿದವರು ಸಹ ಜೂಜಾಟಕ್ಕೆ ಹಣ ಕಟ್ಟುತ್ತಿದ್ದು ಆಗ ಸದರಿಯವರು ಅಂದರ್ ಬಾಹರ್ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೇಟ ಆಡುತ್ತಿದ್ದ ಮೇಲ್ಕಂಡ 7 ಜನರು ಸಿಕ್ಕಿ ಬಿದ್ದಿದ್ದು ಮತ್ತು  ಅಂದರ್ ಬಾಹರ್ ಜೂಜಾಟದಲ್ಲಿ ದೊರೆತ ಹಣ ಒಟ್ಟು 2560/- ರೂ||ಗಳು ಹಾಗೂ 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಅಪರಾಧ ಸಂಖ್ಯೆ 52/2020 ಕಲಂ.87 ಕೆ.ಪಿ ಕಾಯ್ದೆ ಪ್ರಕಾರ ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.